ಸಾಮಾನ್ಯವಾಗಿ ರೈಲಿನಲ್ಲಿ ಶೌಚಾಲಯಗಳು ಕೊಳಕಾಗಿರುತ್ತವೆ. ಇದನ್ನೇ ನೆಪವಾಗಿಟ್ಟುಕೊಂಡ ಅಮೆರಿಕಾದ ಪ್ರವಾಸಿ ಮಹಿಳೆಯೊಬ್ಬರು ಭಾರತೀಯ ರೈಲಿನೊಳಗಿನ ಶೌಚಾಲಯದ ವಿಡಿಯೊ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ (Viral Video)ಆಗಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಐರಿನಾ ಮೊರೆನೊ ಎಂಬ ಅಮೆರಿಕದ ದ ಮಹಿಳೆ ಭಾರತದಾದ್ಯಂತ ಪ್ರಯಾಣ ಕೈಗೊಂಡಿದ್ದು, ಇತ್ತೀಚೆಗೆ ಅವರು ಉದಯಪುರದಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದಾಗ ರೈಲಿನೊಳಗಿನ ಶೌಚಾಲಯದ ವಿಡಿಯೊ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ” ಭಾರತದ ಸೆಕಂಡ್ ಕ್ಲಾಸ್‍ನ ರೈಲಿನಲ್ಲಿ ವೆಸ್ಟರ್ನ್ ಟಾಯ್ಲೆಟ್ ” ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೊದಲ್ಲಿ, ಅವರು ರೈಲಿನಲ್ಲಿರುವ ಶೌಚಾಲಯದ ಇಡೀ ನೋಟವನ್ನು ಶೂಟ್ ಮಾಡಿದ್ದು, ಪೇಂಟ್ ಕಿತ್ತು ಹೋದ ಗೋಡೆ, ತುಕ್ಕು ಹಿಡಿದ ನಲ್ಲಿಗಳು ಮತ್ತು ಮುರಿದ ಶೌಚಾಲಯದ ಕವರ್‌ಗಳನ್ನು ತೋರಿಸಿದ್ದಾರೆ.
ಈ ವಿಡಿಯೊವನ್ನು ಪೋಸ್ಟ್ ಮಾಡಿದಾಗಿನಿಂದ, ಇದು 5.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಆದರೆ ಹೆಚ್ಚಿನ ಬಳಕೆದಾರರು ಇದನ್ನು ಕಂಡು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.”ನೀವು ಸೆಕೆಂಡ್ ಕ್ಲಾಸ್ ಟಿಕೆಟ್‍ನಲ್ಲಿ ಪ್ರಯಾಣಿಸುತ್ತಿದ್ದೀರಿ, ಅಗ್ಗದ ಬೆಲೆಗಳಲ್ಲಿ ಸಿಗುವ ಸೌಲಭ್ಯಗಳಲ್ಲಿ ಒಂದಾಗಿದೆ. ಇದಕ್ಕಿಂತ ಉತ್ತಮವಾದ ಶೌಚಾಲಯ ಬೇಕಾದಲ್ಲಿ ಫಸ್ಟ್ ಕ್ಲಾಸ್ ಟಿಕೆಟ್‍ನಲ್ಲಿ ಪ್ರಯಾಣಿಸಲು ನಾನು ನಿಮಗೆ ಸಲಹೆ ನೀಡಲು ಬಯಸುತ್ತೇನೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
70 ರೂ.ಗಳಲ್ಲಿ ಅವರು ಒಬೆರಾಯ್ ಹೊಟೆಲ್‌ನ ಸೌಲಭ್ಯಗಳನ್ನು ಬಯಸುತ್ತಾರೆ” ಎಂದು ಇನ್ನೊಬ್ಬ ಬಳಕೆದಾರರು ಗೇಲಿ ಮಾಡಿದ್ದಾರೆ. ಕೆಲವರು ಅವರ ವಿಡಿಯೊದಲ್ಲಿನ ಶೌಚಾಲಯವು ಅವರು ನಿರೀಕ್ಷಿಸಿದ್ದಕ್ಕಿಂತ ಸ್ವಚ್ಛವಾಗಿದೆ ಎಂದು ಹೇಳಿದ್ದಾರೆ.” ನಿಮಗೆ 5 ಸ್ಟಾರ್ ಸೇವೆ ಬೇಕಾದರೆ ಸ್ವಲ್ಪ ಹಣ ಜಾಸ್ತಿ ಖರ್ಚು ಮಾಡಿ ಎಂದು ಮೂರನೇಯವರು ಬರೆದಿದ್ದಾರೆ.
ಇದನ್ನೂ ಓದಿ: 10 ಸೆಕೆಂಡ್ ರೀಲ್ಸ್‌ಗಾಗಿ ಅಮೂಲ್ಯ ಜೀವ ಕಳೆದುಕೊಂಡ ಬಾಲಕ; ವಿಡಿಯೊ ನೋಡಿ
“ಇದು ಸೆಕೆಂಡ್ ಕ್ಲಾಸ್ ಟಿಕೆಟ್ ಆಗಿದ್ದು, ಉದಯಪುರದಿಂದ ಜೈಪುರಕ್ಕೆ ಪ್ರಯಾಣಿಸಲು ಕೇವಲ 100-120 ರೂಪಾಯಿಗಳು. ಅಂದರೆ ಸುಮಾರು 2 ಯುಎಸ್ಡಿ. ಆ ಬೆಲೆಗೆ ನಿಮಗೆ ಪಿಜ್ಜಾ ಸಹ ಸಿಗುವುದಿಲ್ಲ. ಭಾರತೀಯ ಮಧ್ಯಮ ವರ್ಗದ ಜನರು ಸಹ ಇದರಲ್ಲಿ ಪ್ರಯಾಣಿಸುವುದಿಲ್ಲ. ನಿಮ್ಮ ಬಜೆಟ್ ಅನ್ನು ಹೆಚ್ಚಿಸಿ ಮತ್ತು ಅಚ್ಚುಕಟ್ಟಾದ ಮತ್ತು ಸ್ವಚ್ಛ ವಾತಾವರಣದಲ್ಲಿ ಸುರಕ್ಷಿತವಾಗಿ ಪ್ರಯಾಣಿಸಿ! ಎಂದು ಮತ್ತೊಂದು ಕಾಮೆಂಟ್‍ನಲ್ಲಿ ಬರೆಯಲಾಗಿದೆ. ಕೆಲವು ಬಳಕೆದಾರರು ಆರಾಮದಾಯಕವಾಗಿ ಪ್ರಯಾಣಿಸಲು ವಂದೇ ಭಾರತ್ ಅಥವಾ ಮೆಟ್ರೋ ರೈಲುಗಳಂತಹ ಸೂಪರ್‌ಪಾಸ್ಟ್ ಎಕ್ಸ್‌ಪ್ರೆಸ್ ರೈಲುಗಳನ್ನು ಆಯ್ಕೆ ಮಾಡಲು ಸಲಹೆ ನೀಡಿದ್ದಾರೆ.