Thursday, 19th September 2024

Viral Video: ಮೊಮೋಸ್ ಪ್ರಿಯರೇ ನೀವು.. ಹಾಗಿದ್ದರೆ ಈ ವಿಡಿಯೋ ನೋಡಿ..

Viral Video

ಸ್ಟ್ರೀಟ್ ಬದಿ ಸಿಗುವ ತಿಂಡಿಗಳು ರುಚಿಯಾಗಿರುತ್ತದೆ. ಹೀಗಾಗಿ ಹೆಚ್ಚಿನವರು ವಾರಕ್ಕೊಮ್ಮೆಯಾದರೂ ಸ್ಟ್ರೀಟ್ ತಿನಿಸುಗಳನ್ನು (street food) ಸವಿಯಲು ಇಷ್ಟ ಪಡುತ್ತಾರೆ. ಆದರೆ ಈ ತಿನಿಸುಗಳನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ನಾವು ಒಮ್ಮೆ ನೋಡಿದರೆ ಮತ್ತೆ ಈ ಜನ್ಮದಲ್ಲಿ ಆ ತಿನಿಸುಗಳತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಮೊಮೋಸ್ ಪ್ರಿಯರು (Momos lovers) ಒಂದು ವೇಳೆ ನೀವಾಗಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿರುವ ಈ ವಿಡಿಯೋವನ್ನೊಮ್ಮೆ ನೋಡಲೇಬೇಕು.

ಆಹಾರ ನೈರ್ಮಲ್ಯ ಉಲ್ಲಂಘನೆಯ ಆಘಾತಕಾರಿ ಪ್ರಕರಣ ಇದಾಗಿದೆ. ಮಧ್ಯಪ್ರದೇಶದ ಜಬಲ್ಪುರದ ಇಬ್ಬರು ಮೊಮೋಸ್ ಅಂಗಡಿ ಮಾಲೀಕರು ಹಿಟ್ಟನ್ನು ಬೆರೆಸುವ ಕ್ರಮ ಖಂಡಿತಾ ಶಾಕ್ ಉಂಟು ಮಾಡುತ್ತದೆ. ಪಾತ್ರೆಯಲ್ಲಿ ಹಾಕಿರುವ ಹಿಟ್ಟನ್ನು ಕಾಲಿನಿಂದ ತುಳಿದು ತಯಾರಿಸುತ್ತಿರುವ ಈ ವಿಡಿಯೋ ಆಹಾರದ ಗುಣಮಟ್ಟದ ಬಗ್ಗೆ ಆತಂಕ ಉಂಟು ಮಾಡುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ರಾಜ್‌ ಕುಮಾರ್ ಮತ್ತು ಸಚಿನ್ ಗೋಸ್ವಾಮಿ ಎಂಬವರನ್ನು ಬರ್ಗಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಹಿಟ್ಟು ತುಂಬಿದ ಪಾತ್ರೆಯ ಮೇಲೆ ನಿಂತಿರುವುದನ್ನು ಕಾಣಬಹುದು. ಇದನ್ನು ಮೊಮೋಸ್ ತಯಾರಿಸಲು ಮಾಡಲಾಗುತ್ತಿದೆ ಎನ್ನಲಾಗಿದೆ.

ವಿಡಿಯೋದಲ್ಲಿ ವ್ಯಕ್ತಿಯು ಹಿಟ್ಟನ್ನು ತನ್ನ ಪಾದಗಳಿಂದ ಒತ್ತುವ ಮೂಲಕ ಹಿಟ್ಟನ್ನು ಬೆರೆಸುವುದು ಕಂಡು ಬಂದಿದೆ. ಸಾಂದರ್ಭಿಕವಾಗಿ ಹಿಟ್ಟನ್ನು ತಿರುಗಿಸಲು ಕೈಗಳನ್ನು ಬಳಸಿ ಮತ್ತೆ ಅದರ ಮೇಲೆ ಕಾಲಿನಿಂದ ಒತ್ತುವ ಪ್ರಕ್ರಿಯೆಯನ್ನು ಮುಂದುವರಿಸುವುದನ್ನು ಕಾಣಬಹುದು. ಈತನ ಈ ಕೃತ್ಯವನ್ನು ಸೆರೆಹಿಡಿದಿರುವ ವಿಡಿಯೋ ವನ್ನು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಈ ಬಗ್ಗೆ ಜಬಲ್‌ಪುರದ ನಿವಾಸಿಗಳು ಔಪಚಾರಿಕ ಲಿಖಿತ ದೂರನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ ಮೊಮೋಸ್ ತಯಾರಿ ಮಾಡುವವನ ಅನೈರ್ಮಲ್ಯ ಅಭ್ಯಾಸವನ್ನು ಖಂಡಿಸಿರುವ ಅವರು ತನಿಖೆಗೆ ಕರೆ ನೀಡಿದರು. ಪ್ರತಿಯಾಗಿ, ಆರೋಪಿಗಳ ವಿರುದ್ಧ ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಅನೇಕರು ಇದಕ್ಕೆ ಖಂಡನೆ ಯನ್ನು ವ್ಯಕ್ತ ಪಡಿಸಿದ್ದಾರೆ. ಸ್ವಚ್ಛತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕರೆ ನೀಡಿದ್ದಾರೆ. ಒಬ್ಬ ಬಳಕೆದಾರರು, ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾಚಿಕೆಯಿಲ್ಲದ ಜನರು ಎಲ್ಲಿಂದ ಬರುತ್ತಾರೋ ಎಂದು ಹೇಳಿದ್ದಾರೆ.

ಇನ್ನೊಬ್ಬರು ಇದು ತುಂಬಾ ತಪ್ಪು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದು ಪ್ರತಿಯೊಬ್ಬ ಮೊಮೋಸ್ ಮಾರಾಟಗಾರರ ಕಥೆ, ನಾನ್ ವೆಜ್ ಮೊಮೋಸ್ ಕಥೆ ಇನ್ನೂ ಕೊಳಕು ಎಂದು ಇನ್ನೊಬ್ಬರು ಹೇಳಿದ್ದಾರೆ.

ಮತ್ತೊಬ್ಬರು ಮೊಮೋಸ್ ಮತ್ತು ಪಾನಿ ಪುರಿ ಗಾಗಿ ಹಿಟ್ಟನ್ನು ಕೈ, ಯಂತ್ರ ಅಥವಾ ಕಾಲಿನ ಮೂಲಕ ಬೆರೆಸುತ್ತಾರೆ. ಕೆಲವೇ ಜನರು ಯಂತ್ರಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡುವ ಬೀದಿ ಆಹಾರದ ಗುಣಮಟ್ಟ ಮತ್ತು ಹಾನಿಕಾರಕ ಅಭ್ಯಾಸಗಳ ಬಗ್ಗೆ ಈ ವಿಡಿಯೋ ಕಳವಳವನ್ನು ವ್ಯಕ್ತಪಡಿಸುವಂತೆ ಮಾಡಿದೆ. ಆಗಸ್ಟ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ ಸೋಯಾ ಚಾಪ್‌ನ ಅನೈರ್ಮಲ್ಯ ತಯಾರಿಕೆಯನ್ನು ಪ್ರದರ್ಶಿಸುವ ಮತ್ತೊಂದು ವಿಡಿಯೋ ವೈರಲ್ ಆಗಿತ್ತು.

Missing Boys: ಮಿಸ್ಸಿಂಗ್‌ ಹುಡುಗರ ಪತ್ತೆಗೆ ನೆರವಾಯ್ತು 500 ಸಿಸಿಟಿವಿ ಕ್ಯಾಮೆರಾ, ಏಳು ಪೊಲೀಸ್‌ ಟೀಂ

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆದ ವಿಡಿಯೋವು ಕಾರ್ಖಾನೆಯ ಕೆಲಸಗಾರರು ಕೈಗವಸುಗಳನ್ನು ಧರಿಸದೆ ತಮ್ಮ ಕೈ, ಮೊಣಕೈಗಳನ್ನು ಮಿಶ್ರಣದಲ್ಲಿ ಹಾಕುವುದನ್ನು ತೋರಿಸಿದೆ.

Leave a Reply

Your email address will not be published. Required fields are marked *