ನವದೆಹಲಿ: ಭಾರತೀಯರು ಪುರಾತನ ಕಾಲದಿಂದಲೂ ಆಹಾರಪ್ರಿಯರು. ಹೀಗಾಗಿಯೇ ವೆರೈಟಿ ವೆರೈಟಿ ಫುಡ್ (Food) ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಏನನ್ನಾದರೂ ಎಕ್ಸ್‌ಪರಿಮೆಂಟ್ (Experiment) ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್ ಅನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂತಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತವೆ. ಆದರೆ ಇನ್ನು ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟಾಗ್ರಾಂ (Instagram), ಫುಡ್ ಬ್ಲಾಗರ್ಸ್ (Food Bloggers) ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ.
ಹೌದು, ವಿಚಿತ್ರ ಕಾಂಬಿನೇಷನ್‌ನ ಖಾದ್ಯಗಳು ಹೊಸದೇನೂ ಅಲ್ಲ. ಆಗೊಮ್ಮೆ ಈಗೊಮ್ಮೆ ಇಂತಹ ಖಾದ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಲೇ ಇರುತ್ತವೆ ಮತ್ತು ಪರ ವಿರೋಧದ ಚರ್ಚೆಗೂ ಕಾರಣವಾಗುತ್ತವೆ. ಸದ್ಯ ಅಂತಹದ್ದೇ ವಿಶಿಷ್ಟ ದೂದ್ ಕೋಲಾ' ಎಲ್ಲರ ಗಮನ ಸೆಳೆದಿದೆ. ನೀವು ಮೊಟ್ಟೆ ತಿನ್ನುವವರಾದರೆ ಖಂಡಿತಾ ನಿಮಗೆ
‘ಫ್ರೈಡ್ ಎಗ್’ ಬಗ್ಗೆ ಗೊತ್ತಿರಬಹುದು. ಆದರೆ, ಎಂದಾದರೂ ಪ್ರತಿಷ್ಠಿತ ಬ್ರಾಂಡ್‌ನ ತಂಪು ಪಾನೀಯವನ್ನು ಬೆರೆಸಿ ಹಾಲು ಕುಡಿಯುವುದನ್ನು ನೋಡಿದ್ದೀರಾ…? ಬಹುಶಃ ಇರಲಿಕ್ಕಿಲ್ಲ. ಸದ್ಯ ಅಂತಹದ್ದೊಂದು ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜತೆಗೆ, ಬಗೆಬಗೆ ಚರ್ಚೆಯನ್ನೂ ಹುಟ್ಟು ಹಾಕಿದೆ.
ಕಂಟೆಂಟ್ ಕ್ರಿಯೇಟ್ ರಾಧಾ ಅರಾಧನ್ ಚಟರ್ಜಿ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು,ಸದ್ಯ ಈ ವಿಡಿಯೋ ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿಸುವಂತೆ ಮಾಡಿದೆ. ಯಾಕೆಂದರೆ, ಇಲ್ಲೊಂದು ಆಹಾರ ಮಳಿಗೆಯಲ್ಲಿ ತಂಪು ಪಾನೀಯ ಬೆರೆಸಿ ತಯಾರಿಸಿದ `ದೂದ್ ಕೋಲಾ’ ವನ್ನು ನೀಡಲಾಗುತ್ತಿದೆ. ಇದು ಕೋಲ್ಕತ್ತಾದ ಡಾಬಾವೊಂದರಲ್ಲಿ ಈ ವಿಚಿತ್ರ ಕಾಂಬಿನೇಷನ್‌ನ ಪಾನೀಯ ಲಭ್ಯವಿದ್ದು, ಹಾಲಿನೊಂದಿಗೆ ಪ್ರಸಿದ್ಧ ಬ್ರಾಂಡ್‌ನ ಈ ಪೇಯವನ್ನೂ ಸೇರಿಸಿ ಇಲ್ಲಿ `ದೂದ್ ಕೋಲಾ’ ವನ್ನು ಮಾಡಲಾಗುತ್ತದೆ.
ಇದನ್ನೂ ಓದಿ: Viral Video: ಲೆಹಂಗ ಮತ್ತು ಸ್ಕರ್ಟ್ ಧರಿಸಿ ʼಸಾರಿ ಕೆ ಫಾಲ್ ಸಾ..ʼ ಹಾಡಿಗೆ ʼಡ್ಯಾನ್ಸಿಂಗ್ ದಾದಿʼಯ ನೃತ್ಯ; ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು..!
ಹೌದು ಇಲ್ಲಿನ ಸ್ಥಳೀಯ ವ್ಯಕ್ತಿಯಾದ ಬಲ್ವಂತ್ ಸಿಂಗ್ ಎಂಬುವರು ಇದನ್ನು ಮೊದಲು ಅನ್ವೇಷಿಸಿದ್ದು, ಇಂಥ ವಿಚಿತ್ರ ಕೋಲಾಗೆ ಇತಿಹಾಸ ಕೂಡ ಇದೆ ಎಂದು ಬಲ್ವಂತ್ ಸಿಂಗ್ ಹೇಳಿದ್ದಾರೆ. ಮೊದಲಿಗೆ ಭಾರತದಲ್ಲಿ ತಯಾರಿಸಿದ್ದು ಇದೇ ವ್ಯಕ್ತಿಯಾಗಿದ್ದು, ತಮ್ಮ ಮಗನ ಜೊತೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಉರಿ ಬಿಸಿಲಿನ ತಾಪದ ದಣಿವನ್ನು ನೀಗಿಸಲು ಈ ಪಾನೀಯ ಕಂಡು ಹಿಡಿಯಲಾಯ್ತು ಎಂದು ಡಾಬಾ ಓನರ್ ಬಲ್ವಂತ್ ಸಿಂಗ್ ಹೇಳುತ್ತಾರೆ.
ಇನ್ನು ಬಿಸಿಲಿನ ಧಗೆಗೆ ಬರುವವರೆಗೆ ಈ ಪಾನೀಯ ತುಂಬಾನೇ ಹಿತವಂತೆ, ಈ ಡಾಬಾಗೆ ಬರುವವರು ಈ ಸ್ಪೆಷಲ್ ಪಾನೀಯ ಟೇಸ್ಟ್ ಮಾಡಲು ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಾರಂತೆ, ಈ ವಿಚಿತ್ರ ಪಾನೀಯ ಅಷ್ಟು ಫೇಮಸ್ ಆಗಿದೆ ಎಂದು ಬಲ್ವಂತ್ ಸಿಂಗ್ ತಿಳಿಸಿದ್ದಾರೆ.
ಈ ವಿಚಿತ್ರ ಪಾನೀಯದ ವೀಡಿಯೋಗೆ ನೆಟ್ಟಿಗರು ಭಿನ್ನ-ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅನಾರೋಗ್ಯದ ಮುಖದ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ ಅನೇಕ ಇನ್‌ಸ್ಟಾಗ್ರಾಮ್ ಬಳಕೆದಾರರು ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು ಈ ರೀತಿ ಗ್ಯಾಸ್ ಅಂಶವುಳ್ಳ ಪಾನೀಯವನ್ನು ಹಾಲಿನೊಂದಿಗೆ ಸೇವಿಸುವುದು ಅಪಾಯಕಾರಿ ಜೀವಕ್ಕೆ ಹಾನಿ ಉಂಟು ಮಾಡುವ ಕೆಲಸ, ಎಂದು ಹಲವರು ಕಮೆಂಟ್ ಮಾಡಿದ್ದರೆ ಇನ್ನೂ ಕೆಲವರು ಇದನ್ನು ಟೇಸ್ಟ್ ಮಾಡಲು ಕೋಲ್ಕತ್ತಾ ತೆರಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರ್ಲಿ, ಟ್ರೆಂಡ್ ಹೆಸರಲ್ಲಿ ಫುಡ್ ಟ್ರೆಂಡ್ ಎಲ್ಲರ ಆಕ್ರೋಶಕ್ಕೆ ಕಾರಣವಾಗ್ತಿರೋದಂತೂ ನಿಜ.