Thursday, 31st October 2024

Viral Video: ಹಂಪ್‌ ಮೇಲೆ ರಾಕೆಟ್ ರೀತಿ ಹಾರಿದ ಕಾರು; ವಿಡಿಯೊ ವೈರಲ್

Viral Video

ಗುರುಗ್ರಾಮ್: ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಹೊಸದಾಗಿ ಹಾಕಿರುವ ರೋಡ್ ಹಂಪ್‌ನಲ್ಲಿ ಮಾರ್ಕ್‌ ಮಾಡದ ಕಾರಣ ವಾಹನಗಳ ವೇಗ ನಿಧಾನವಾಗುವ ಬದಲು ರಸ್ತೆ ಬಿಟ್ಟು ಎತ್ತರಕ್ಕೆ ಹಾರುತ್ತಿವೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ (Viral Video)ಆಗಿವೆ. ಇದರಿಂದಾಗಿ ಈ ಬಗ್ಗೆ ಅಧಿಕಾರಿಗಳು ಶೀಘ್ರದಲ್ಲಿಯೇ ಕ್ರಮ ಕೈಗೊಂಡಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ  ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಹೊಸದಾಗಿ ಹಾಕಲಾದ ಸ್ಪೀಡ್ ಬ್ರೇಕರ್‌ಗೆ ಬಣ್ಣ ಬಳಿದು ಮಾರ್ಕ್‌ ಮಾಡದ ಕಾರಣ ವಾಹನ ಸವಾರರಿಗೆ ಗೊಂದಲವಾಗಿದೆ. ಈ ರಸ್ತೆಯಲ್ಲಿ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರೊಂದು ಅದಕ್ಕೆ  ಡಿಕ್ಕಿ ಹೊಡೆದು, ಬ್ರೇಕರ್‌ನಿಂದ ಕನಿಷ್ಠ ಮೂರು ಅಡಿ ಎತ್ತರಕ್ಕೆ ಹಾರಿ ನಂತರ 15 ಅಡಿ ದೂರದಲ್ಲಿ ಇಳಿದು ಮುಂದೆ ಸಾಗಿದೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.  ಆದರೆ ವಿಡಿಯೊ ವೈರಲ್ ಆದ ಕೆಲವೇ ದಿನಗಳಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡು ಸೈನ್ ಬೋರ್ಡ್ ಅಳವಡಿಸಿದ್ದಾರೆ.

ಈ ಘಟನೆಯ ನಂತರ ಗುರುಗ್ರಾಮ್ ಮೆಟ್ರೋಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿ (ಜಿಎಂಡಿಎ) ಸ್ಪೀಡ್ ಬ್ರೇಕರ್ ಇದೆ ಎಂಬ ಎಚ್ಚರಿಕೆಯ ಸೈನ್ ಬೋರ್ಡ್ ಅನ್ನು ಅಲ್ಲಿ ಹಾಕಿದೆ.

ಇದನ್ನೂ ಓದಿ:ಪೆಟ್ರೋಲ್‌ ಪಂಪ್‌ನಲ್ಲಿ ಪ್ರಿಯತಮೆಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಿಯಕರ; ವಿಡಿಯೊ ಇದೆ

ಹಾಗೇ ಈ ವಿಡಿಯೊಗೆ ಪ್ರತಿಕ್ರಿಯಿಸಿದ ಜಿಎಂಡಿಎ, “ರಾತ್ರಿಯ ವೇಳೆ ಸರಿಯಾಗಿ ಕಾಣುವ ಹಾಗೆ ವಾಹನ ಚಾಲಕರಿಗೆ ಸುರಕ್ಷಿತವಾಗಿ ನ್ಯಾವಿಗೇಟ್ ಮಾಡಲು ಸ್ಪೀಡ್ ಬ್ರೇಕರ್ ಅನ್ನು ಥರ್ಮೋಪ್ಲಾಸ್ಟಿಕ್ ಬಿಳಿ ಬಣ್ಣದಿಂದ ಗುರುತಿಸಲಾಗಿದೆ” ಎಂದು ತಿಳಿಸಿದ್ದಾರೆ.