Viral Video: ಪಂಜಾಬಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಕೆನಡಾ ಪ್ರೊಫೆಸರ್; ನೆಟ್ಟಿಗರು ಫುಲ್ ಫಿದಾ!
ಕೆನಡಾದ ಮಹಿಳಾ ಪ್ರೊಫೆಸರ್ ಲೋವಾ ಫ್ರಿಡ್ಫಿನ್ಸನ್ ತನ್ನ ವಿದ್ಯಾರ್ಥಿಯೊಂದಿಗೆ 'ವಂಜಲಿ ವಾಜಾ' ಪಂಜಾಬಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ಒಟ್ಟಾವಾ: ಸಂಗೀತಕ್ಕೆ ಯಾವುದೇ ದೇಶ, ಭಾಷೆಯ ಹಂಗಿಲ್ಲ ಎನ್ನುತ್ತಾರೆ. ಸಂಗೀತದ ಮಾಧುರ್ಯಕ್ಕೆ ಸೋಲದವರು ಯಾರಿದ್ದಾರೆ ಹೇಳಿ...? ಇತ್ತೀಚೆಗೆ ಜಪಾನಿನ ಹುಡುಗಿಯೊಬ್ಬಳು ಬಾಲಿವುಡ್ ಹಾಡಿಗೆ ಸಖತ್ ಆಗಿ ಕುಣಿದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಳು. ಇದೀಗ ಕೆನಡಾದ ಮಹಿಳಾ ಪ್ರೊಫೆಸರ್ ಒಬ್ಬರು ತಮ್ಮ ವಿದ್ಯಾರ್ಥಿಯೊಂದಿಗೆ 'ವಂಜಲಿ ವಾಜಾ' ಪಂಜಾಬಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಪ್ರೊಫೆಸರ್ ಲೋವಾ ಫ್ರಿಡ್ಫಿನ್ಸನ್ (Loa Fridfinnson) ಅಮರಿಂದರ್ ಗಿಲ್-ಹಾಡಿದ ಪಂಜಾಬಿ ಬೀಟ್‍ಗೆ ತನ್ನ ವಿದ್ಯಾರ್ಥಿಯೊಂದಿಗೆ ಸೇರಿಕೊಂಡು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ನೃತ್ಯ ವಿಡಿಯೊವನ್ನು ಹಂಚಿಕೊಂಡ ಈಕೆ, ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಲು ತಾನು ಸೂಕ್ತಳೇ? ಎಂದು ನೆಟ್ಟಿಗರನ್ನು ಕೇಳಿದ್ದಾಳೆ. ಹಾಗೇ ಪ್ರಬ್ನೂರ್ ಎಂಬ ವಿದ್ಯಾರ್ಥಿಯು ತನ್ನೊಂದಿಗೆ ಡ್ಯಾನ್ಸ್ ಮಾಡುವ ಸಮಯದಲ್ಲಿ ಕೆಲವು ದೇಸಿ ನೃತ್ಯದ ಹೆಜ್ಜೆಗಳನ್ನು ಕಲಿಸಿದ್ದಾನೆ ಎಂದು ಅವಳು ಖುಷಿಯಿಂದ ಹೇಳಿದ್ದಾಳೆ.
ವಿದ್ಯಾರ್ಥಿಯೊಂದಿಗೆ ಸಖತ್ ಆಗಿ ಹೆಜ್ಜೆ ಹಾಕಿದ ಪ್ರೊಫೆಸರ್ ವಿಡಿಯೊ ಇಲ್ಲಿದೆ ನೋಡಿ...
ವೈರಲ್ ವಿಡಿಯೊದಲ್ಲಿ ಲೋವಾ ತನ್ನ ವಿದ್ಯಾರ್ಥಿ ಪ್ರಬ್ನೂರ್ ಜೊತೆ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ್ದಾಳೆ.ಈ ನೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದೆ. ಮಾರ್ಚ್ 30 ರಂದು ಅಪ್ಲೋಡ್ ಮಾಡಲಾದ ಈ ಡ್ಯಾನ್ಸ್ ರೀಲ್ ಒಂದು ಮಿಲಿಯನ್ ವ್ಯೂವ್ಸ್ ಮತ್ತು 60,000 ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಗಳಿಸಿದೆ. ಇನ್ನು ಇದಕ್ಕೆ ಅನೇಕ ನೆಟ್ಟಿಗರು ಕಾಮೆಂಟ್‍ಗಳ ಮೂಲಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ."ವಿದ್ಯಾರ್ಥಿಯು ತನ್ನ ಗುರುವಿಗೆ ಭಾರತೀಯ ನೃತ್ಯವನ್ನು ಕಲಿಸಿದ ರೀತಿ ಎಲ್ಲರೂ ಮೆಚ್ಚುವಂತದ್ದು" ಎಂದು ಒಬ್ಬರು ಬರೆದಿದ್ದಾರೆ. "ಅದ್ಭುತ ಲೋವಾ, ನಾವು ಅದರ ಪಾರ್ಟ್ 2 ನೋಡಲು ಬಯಸುತ್ತೇವೆ" ಎಂದು ಇನ್ನೊಬ್ಬರು ಹೇಳಿದ್ದಾರೆ.
ವಿದೇಶಿಗರು ಪಂಜಾಬಿ ಹಾಡಿಗೆ ನೃತ್ಯ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೊವೊಂದರಲ್ಲಿ ಪಾರ್ಟಿಯಲ್ಲಿ ವಿದೇಶಿಯರ ಗುಂಪು ವರುಣ್ ಧವನ್, ಅನಿಲ್ ಕಪೂರ್, ಕಿಯಾರಾ ಅಡ್ವಾಣಿ ಮತ್ತು ನೀತು ಸಿಂಗ್ ಅಭಿನಯದ ಜುಗ್ ಜಗ್ಗ್ ಜೀಯೋ ಚಿತ್ರದ ಪಂಜಾಬಿ ಹಾಡಿಗೆ ಡ್ಯಾನ್ಸ್ ಮಾಡಿದ್ದರು.
ಈ ಸುದ್ದಿಯನ್ನೂ ಓದಿ:Viral News: ಹಬ್ಬಕ್ಕೆ ಸೀರೆಯುಟ್ಟು ಬಾರದ ಉದ್ಯೋಗಿಗೆ ಬಿತ್ತು ಭಾರೀ ಫೈನ್- ಏನಿದು ಘಟನೆ?
ವೈರಲ್ ವಿಡಿಯೊದಲ್ಲಿ ಡಿಜೆ ಹಾಡನ್ನು ನುಡಿಸುತ್ತಿದ್ದಂತೆ ಪಂಜಾಬಿ ಬೀಟ್‍ಗಳಿಗೆ ಪುರುಷರು ಜಿಗಿಯುತ್ತಾ ಹುಚ್ಚೆದ್ದು ಕುಣಿದಿದ್ದಾರೆ. ವೇದಿಕೆಯಲ್ಲಿರುವ ಇಬ್ಬರು ವಿದೇಶಿಯರು ಭಾಂಗ್ರಾ ಮಾಡಲು ಮತ್ತು ಬಾಲಿವುಡ್ ಹಾಡನ್ನು ತಮ್ಮದೇ ಆದ ರೀತಿಯಲ್ಲಿ ಆನಂದಿಸಿದ್ದಾರೆ. ಇದನ್ನು ನೋಡಿ ನೆಟ್ಟಿಗು ಫುಲ್ ಫಿದಾ ಆಗಿದ್ದಾರೆ.