Wednesday, 20th November 2024

Viral Video: ಲೆಹಂಗ ಮತ್ತು ಸ್ಕರ್ಟ್‌ ಧರಿಸಿ ʼಸಾರಿ ಕೆ ಫಾಲ್‌ ಸಾ..ʼ ಹಾಡಿಗೆ ʼಡ್ಯಾನ್ಸಿಂಗ್ ದಾದಿʼಯ ನೃತ್ಯ; ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು..!

ನವದೆಹಲಿ: ಕೆಲವು ಹಿರಿಯ ನಾಗರಿಕರಲ್ಲಿ ವಿಭಿನ್ನ ರೀತಿಯ ಜೀವನೋತ್ಸಾಹ ಇರುತ್ತದೆ. ಇಳಿ ವಯಸ್ಸಿನಲ್ಲೂ ಮನಸ್ಪೂರ್ತಿಯಾಗಿ ಹಾಡುವ, ಮನಸೋ ಇಚ್ಛೆ ನೃತ್ಯ ಮಾಡುವ , ಆಧುನಿಕ ಫ್ಯಾಶನ್‍ಗೆ ಒಗ್ಗಿಕೊಳ್ಳುವ, ಹೊಸದನ್ನು ಕಲಿಯುವ ತುಡಿತ ಹೊಂದಿರುವ ಅಥವಾ ಅಲಂಕಾರದಲ್ಲಿ ಆಸಕ್ತಿ ಇರುವ ಅನೇಕ ಹಿರಿ ಜೀವಗಳನ್ನು ನಾವು ಕಾಣಬಹುದು. ಹೌದು , ವಯಸ್ಸಿನ ಆಧಾರದ ಮೇಲೆ ಒಬ್ಬರ ಸಾಮರ್ಥ್ಯ ಅಥವಾ ಪ್ರತಿಭೆಯನ್ನು ಅಳೆಯುವಂತಿಲ್ಲ. ಅಂತದ್ದೇ ಹಿರಿಯ ವಯಸ್ಸಿನ ಮಹಿಳೆಯೊಬ್ಬರ ವಿಡಿಯೋವೊಂದು ಇನ್‍ಸ್ಟಾಗ್ರಾಂನಲ್ಲಿ ಜನಪ್ರಿಯ (Viral Video) ಆಗುತ್ತಿದೆ.

ಆ ವಿಡಿಯೋದಲ್ಲಿ 63 ವರ್ಷದ ಅಜ್ಜಿಯೊಬ್ಬರು ಅದ್ಭುತವಾಗಿ ನೃತ್ಯ ಮಾಡುವು ದೃಶ್ಯವಿದೆ. ಈ ಅಜ್ಜಿ ಬೇರೆ ಯಾರೂ ಅಲ್ಲ, ಇನ್‍ಸ್ಟಾಗ್ರಾಂನಲ್ಲಿ ತಮ್ಮ ಡ್ಯಾನ್ಸ್ ವಿಡಿಯೋಗಳ ಮೂಲಕ ಜನಪ್ರಿಯರಾಗಿರುವ ರವಿ ಬಾಲಾ ಶರ್ಮಾ(Ravi Bala Sharma) . ಇವರು ಡ್ಯಾನ್ಸಿಂಗ್ ದಾದಿ (Dancing Dadi) ಎಂದೇ ಫೇಮಸ್ ಆಗಿದ್ದು, ಈ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆ ಆಗಿರುವ ರವಿ ಬಾಲಾ ಶರ್ಮಾ ಅವರ ನೃತ್ಯವನ್ನು ಕಂಡವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ.

ಇದೀಗ ಈ ಡ್ಯಾನ್ಸಿಂಗ್ ದಾದಿಯ ಮತ್ತೊಂದು ವೀಡೀಯೋ ಇನ್‍ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ತಮ್ಮ ಹೊಸ ಡ್ಯಾನ್ಸ್ ವಿಡಿಯೋದಲ್ಲಿ ಶಾಹೀದ್ ಕಪೂರ್ ಹಾಗೂ ಸೋನಾಕ್ಷಿ ಸಿನ್ನಾ ಅಭಿನಯದ ‘ಸಾರಿ ಕೆ ಫಾಲ್ ಸಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕೆಲವೊಂದಿಷ್ಟು ಹಾಡುಗಳು ಅದ್ಯಾವಮಟ್ಟಿಗೆ ಹಿಟ್ ಆಗುತ್ತವೆ ಎಂದರೆ ಎಂದಿಗೂ ಆ ಹಾಡು ಚಾಲ್ತಿಯಲ್ಲಿರುತ್ತದೆ. ಡ್ಯಾನ್ಸ್ ಮಾಡುವವರಿಗೆ ಕೆಲ ಸಾಂಗ್ ಅಚ್ಚುಮೆಚ್ಚು. ಅದೇ ರೀತಿ ಡ್ಯಾನ್ಸಿಂಗ್ ದಾದಿ (Dancing Dadi) ರವಿ ಬಾಲಾ ಶರ್ಮಾ (Ravi Bala Sharma) ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಫೇಮಸ್​ ಆಗಿರುವ ಹಲವು ಹಾಡಿಗೆ ಅವರು ಡ್ಯಾನ್ಸ್ ಮಾಡಿದ್ದು, ಈಗ 2013ರ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ 63 ವರ್ಷದ ಅಜ್ಜಿಯ ಎನರ್ಜಿ ನೋಡಿ ನೆಟ್ಟಿಗರು ಸಖತ್ ಖುಷಿಪಟ್ಟಿದ್ದಾರೆ.

ರವಿ ಬಾಲಾ ಶರ್ಮಾ ಅವರು ಡ್ಯಾನ್ಸ್​ ಮಾಡುವುದರಲ್ಲಿ ತುಂಬಾನೇ ಫೇಮಸ್ ಆಗಿದ್ದು, ಅವರ ಎನರ್ಜಿಗೆ ವಯಸ್ಸು ಅಡ್ಡ ಬಂದಿಲ್ಲ. ಸಾಕಷ್ಟು ರೀಲ್ಸ್ ಮಾಡಿ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ. ಇದಕ್ಕೆ ಲಕ್ಷಾಂತರ ವೀವ್ಸ್ ಬರುತ್ತವೆ. ಫ್ಯಾನ್ಸ್ ಅವರನ್ನು ತುಂಬಾನೇ ಇಷ್ಟಪಡುತ್ತಾರೆ. ಈಗ ಅವರು ಮಾಡಿರುವ ಹೊಸ ವಿಡಿಯೋವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದು, ಕಳೆದ ಭಾನುವಾರ ಹಂಚಿಕೊಂಡಿರುವ ಈ ವಿಡೀಯೋ ಹತ್ತು ಸಾವಿರಕ್ಕೂ ಹೆಚ್ಚು ಲೈಕ್ ಬಂದಿದೆ. ಅಲ್ಲದೇ ನೆಟ್ಟಿಗರು ಕಮೆಂಟ್ ಗಳ ಸುರಿಮಳೆ ಗೈದಿದ್ದು, ಹಾರ್ಟ್ ಹಾಗೂ ಫೈರ್ ಇಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: AR Rahman Divorce: ಸಂಗೀತ ಮಾಂತ್ರಿಕನ ವೈವಾಹಿಕ ಬದುಕಿನಲ್ಲಿ ಬಿರುಕು, ವಿಚ್ಛೇದನದ ಬಗ್ಗೆ ಮಕ್ಕಳು ಹೇಳಿದ್ದೇನು?

ವಿಡಿಯೋ ನೋಡಿದ ನಿಮಗೂ ಅನ್ನಿಸಿರಬಹುದು, 63ರ ಆ ವಯಸ್ಸಿನಲ್ಲೂ ಎಷ್ಟು ಎನರ್ಜಿಯಿಂದ ಹಾಡಿಗೆ ಜೀವ ತುಂಬಿದ್ದಾರೆ ಎಂದು. ರವಿ ಬಾಲಾ ಶರ್ಮಾ ಅವರು ಇಂತಹ ಹಲವಾರು ವಿಡಿಯೋಗಳಿಗೆ ಹೆಜ್ಜೆ ಹಾಕಿದ್ದಾರೆ. ವಿಶೇಷವೆಂದರೆ ಅವರು ತಮ್ಮ ಕುಟುಂಬದೊಂದಿಗೆ ಹೆಜ್ಜೆ ಹಾಕುವ ದೃಶ್ಯಗಳೂ ಇವೆ. ಈ ಎಲ್ಲಾ ಮಸ್ತ್ ರೀಲ್ಸ್​​ಗಳಿಂದ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಇನ್ನು ಡ್ಯಾನ್ಸಿಂಗ್ ದಾದಿ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರಿಗೆ 1.87 ಲಕ್ಷ ಫಾಲೋವರ್ಸ್‌ ಇನ್​ಸ್ಟಾಗ್ರಾಮ್​ನಲ್ಲಿದ್ದಾರೆ. ಅವರ ವಯಸ್ಸಿಗೂ, ಎನರ್ಜಿಗೂ ನಿಜಕ್ಕೂ ಮ್ಯಾಚ್ ಆಗುವುದಿಲ್ಲ, ವಯಸ್ಸು ದೇಹಕ್ಕೆ ಮಾತ್ರ ಎನರ್ಜಿಗೆ ಅಲ್ಲ ಎಂಬುದು ಅನೇಕರ ಅಭಿಪ್ರಾಯ.