ಡ್ರೈವಿಂಗ್ ಮಾಡುವುದು ಒಂದು ಜವಾಬ್ದಾರಿಯುತ ಕೆಲಸವಾಗಿದೆ. ಗಾಡಿ ಓಡಿಸುವಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಅಂಥದ್ದರಲ್ಲಿ ಈಗ ಶಾಲಾ ಮಕ್ಕಳು ಕೂಡ ಈ ಗಾಡಿಯ ಕ್ರೇಜ್‌ಗೆ ಬಿದ್ದಿದ್ದಾರೆ. ಅಪ್ರಾಪ್ತ ಮಕ್ಕಳು ಗಾಡಿ ಓಡಿಸಿ ತಮ್ಮ ಜೀವ ಕಳೆದುಕೊಂಡಿದ್ದು ಅಲ್ಲದೇ, ಇನ್ನೊಬ್ಬರ ಜೀವಕ್ಕೂ ಸಂಚಕಾರ ತಂದ ಘಟನೆಗಳು ಸಾಕಷ್ಟು ನಡೆದಿವೆ. ಇತ್ತೀಚೆಗೆ ಶಾಲಾ ಬಾಲಕಿಯೊಬ್ಬಳು ತನ್ನ ತಂದೆಯನ್ನು ಕೂರಿಸಿಕೊಂಡು ಸ್ಕೂಟರ್‌ನಲ್ಲಿ ಹೋಗುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.ಈ ವಿಡಿಯೊ ನೋಡಿ ಜನ ಕಿಡಿಕಾರಿದ್ದಾರೆ.
ಈ ವಿಡಿಯೊವನ್ನು ಔರಂಗಬಾದ್ ಇನಸೈಡರ್ ಎಂಬ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ “ಛತ್ರಪತಿ ಸಂಭಾಜಿನಗರದಿಂದ ಆಘಾತಕಾರಿ ದೃಶ್ಯಗಳು” ಎಂಬ ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಿದ್ದಾರೆ. ಈ ವೈರಲ್ ವಿಡಿಯೊದಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯೊಬ್ಬಳು ತಂದೆಯನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ್ದಾಳೆ. ಅವರಿಬ್ಬರೂ ಹೆಲ್ಮೆಟ್ ಕೂಡ ಹಾಕಿರಲಿಲ್ಲ. ಈ ವಿಡಿಯೊ ಕಂಡು ಜನರು ಆಕ್ರೋಶಗೊಂಡಿದ್ದಾರೆ.
ಈ ವಿಡಿಯೊ ನೋಡಿದ ಅನೇಕರು ತಂದೆ ಮಗಳ ಬಗ್ಗೆ ನಿರ್ಲಕ್ಷ್ಯದ ಬಗ್ಗೆ ಕಾಮೆಂಟ್ ಹಾಕಿದ್ದಾರೆ. “ದಯವಿಟ್ಟು ಪೋಷಕರು ತಮ್ಮ ಮಗುವಿನ ಬಗ್ಗೆ ಜವಾಬ್ದಾರಿಯುತವಾಗಿರಬೇಕು” ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬರು “ಹೀಗಾಗಿಯೇ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಇವರು ಯಾವ ರೀತಿಯ ತಂದೆ ಎಂದು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ. ಮೂರನೆಯವರು “ಹೆಲ್ಮೆಟ್ ಎಲ್ಲಿದೆ ಸರ್? ನಾ ಖುದ್ ಪೆಹ್ನಾ ನಾ ಬೇಟಿ ಕೋ ಪೆಹನಾಯಾ ಹೈ.” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಖರ್ಜೂರ ಹಂಚುವ ವಿಚಾರಕ್ಕೆ ಮದುವೆ ಮನೆಯಲ್ಲಿ ನಡೆಯಿತು ಮಾರಾಮಾರಿ!
ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ, 17 ವರ್ಷದ ಹುಡುಗನೊಬ್ಬ ತನ್ನ ತಂದೆಯ ಪೋರ್ಷೆ ಕಾರನ್ನು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸಾವನ್ನಪ್ಪಿದ್ದಾರೆ.