Sunday, 15th December 2024

Viral Video: ಹಸಿವಿನಿಂದ ಸಾಯುವಂತೆ ಮಾಡಿದ ಅಪ್ಪನ ಬಳಿ ಕೊನೇ ಕ್ಷಣದಲ್ಲಿ ಮಗ ಬೇಡಿದ್ದೇನು? ಹೃದಯ ವಿದ್ರಾವಕ ವಿಡಿಯೊ ವೈರಲ್

Viral Video

ಟೆಕ್ಸಾಸ್: 4 ವರ್ಷದ ಬಾಲಕನನ್ನು ಹಸಿವಿನಿಂದ ಸಾಯಿಸಿದ ಆರೋಪ ಆತನ ತಂದೆಯ ಮೇಲೆ ಹೊರಿಸಲಾಗಿದೆ. ಕೊಲೆ ವಿಚಾರಣೆಯ ಸಮಯದಲ್ಲಿ ಟೆಕ್ಸಾಸ್ ನ್ಯಾಯಾಧೀಶರಿಗೆ ತೋರಿಸಲಾದ ವಿಡಿಯೊ ಒಂದರಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ಹಸಿವಿನಿಂದ ಸಾಯುವ ಕೆಲವೇ ದಿನಗಳ ಮೊದಲು ತನ್ನ ತಂದೆಯ ಬಳಿ ಬ್ರೆಡ್‍ಗಾಗಿ ಬೇಡಿಕೊಂಡ ದೃಶ್ಯವನ್ನು ತೋರಿಸಲಾಗಿದೆ. ಇದನ್ನು  ನೋಡಿದರೆ ಎಂತಹ ಕಲ್ಲು ಮನಸ್ಸಾದರೂ ಕರಗುವುದು ಖಂಡಿತ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ಹೃದಯ ವಿದ್ರಾವಕ ವಿಡಿಯೊವನ್ನು ಕಂಡು ಅನೇಕರು ದುಃಖಿತರಾಗಿದ್ದಾರೆ.

ಈ ವೈರಲ್ ವಿಡಿಯೊದಲ್ಲಿ 4 ವರ್ಷದ ಬಾಲಕ ಬೆಂಜಮಿನ್ ಸೆರ್ವೆರಾನನ್ನು ನೋಡಬಹುದು. ಈ ವಿಡಿಯೊದಲ್ಲಿ ಮಧ್ಯರಾತ್ರಿಯಲ್ಲಿ ಅಡುಗೆಮನೆ ಮತ್ತು ಫ್ರಿಜ್ ಅನ್ನು ಹುಡುಕುತ್ತಿರುವ ಬಾಲಕನ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ತೋರಿಸಲಾಗಿದೆ. ಅದರಲ್ಲಿ ಬಾಲಕ “ಅಪ್ಪ, ಅಪ್ಪ, ನನಗೆ ಸ್ವಲ್ಪ ಬ್ರೆಡ್ ಬೇಕು” ಎಂದು ಅಳುತ್ತಾ  ಬೇಡಿಕೊಂಡಿದ್ದಾನೆ. ಕೊನೆಗೆ ಈ ಬಾಲಕ  ಹಸಿವಿನಿಂದ ಮೃತಪಟ್ಟಿದ್ದಾನೆ .  ಬಾಲಕನ ಸಾವಿಗೆ ಬಾಲಕನ ತಂದೆ 31 ವರ್ಷದ ಬ್ರಾಂಡನ್ ಸೆರ್ವೆರಾ ಎಂಬಾತ ಕಾರಣ ಆರೋಪಿಸಲಾಗಿದೆ.  ಸೆರ್ವೆರಾ ಬಾಲಕನನ್ನು ಹಸಿವಿನಿಂದ ಸಾಯಿಸಿದ್ದಾನೆ ಮತ್ತು ಆತನಿಗೆ ಗಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ  ಆರೋಪ ಸಾಬೀತಾದರೆ ಆತನಿಗೆ ಜೀವಾವಧಿ ಶಿಕ್ಷೆ ಆಗುವುದು ಖಂಡಿತ ಎನ್ನಲಾಗಿದೆ.

ಒಂದು ವಿಡಿಯೊದಲ್ಲಿ, ಬಾಲಕ ತಿಂಡಿಗಳನ್ನು ಹುಡುಕುತ್ತಿದ್ದಾನೆ. ಆದರೆ ನಂತರ ಕ್ಯಾಬಿನೆಟ್‍ಗಳು ಮತ್ತು ಫ್ರಿಜ್‍ಗೆ ಬೀಗಗಳನ್ನು ಹಾಕಿರುವುದು ಈ ವಿಡಿಯೊದಲ್ಲಿ ಕಂಡುಬಂದಿದೆ.  ಈ ಬಗ್ಗೆ ಪರಿಶೀಲನೆ ಮಾಡಲು ಆತನ ಮನೆಗೆ ಭೇಟಿ ನೀಡಿದ ಅಧಿಕಾರಿಗೆ ಬಾಲಕ ಬೆಂಜಮಿನ್‍ನ ದೇಹದಲ್ಲಿ ಗಾಯಗಳಿರುವುದು ಕಂಡುಬಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.  ಅಲ್ಲದೇ ಅವನ ಕಣ್ಣುಗಳು ಮತ್ತು ದೇಹದ ಮೇಲೆ ಗಾಯಗಳಿದ್ದವು ಹಾಗೂ ಬಾಲಕ ತುಂಬಾ ತೆಳ್ಳಗಿದ್ದು ಇದರಿಂದ ಆತನ ದೇಹದಲ್ಲಿ ಮೂಳೆಗಳು ಕಾಣಿಸುತ್ತಿದ್ದವು ಎಂಬುದಾಗಿ ತಿಳಿಸಿದ್ದಾರೆ. ಈ ಬಗ್ಗೆ ವೈದ್ಯರು ಕೂಡ ಆತ ಹಸಿವಿನಿಂದ ಸಾವನಪ್ಪಿದ್ದು, ಈ ಸಾವು ನರಹತ್ಯೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:  ಇನ್‌ಕಮ್ ಸರ್ಟಿಫಿಕೇಟ್‌ನಲ್ಲಿ 2 ರೂ. ಮುದ್ರಣ; ಅಧಿಕಾರಿಯ ತಪ್ಪಿಗೆ ಬಡ ಕುಟುಂಬದ ವಿದ್ಯಾರ್ಥಿಗೆ ಸ್ಕಾಲರ್‌ಶಿಪ್‌ ನಷ್ಟ!

ಆದರೆ  ಬಾಲಕನ ನಡವಳಿಕೆ ಸರಿಯಾಗಿರಲಿಲ್ಲ. ಹಾಗಾಗಿ ಆತನೇ  ಸ್ವತಃ ಗಾಯಮಾಡಿಕೊಂಡಿದ್ದಾನೆ ಎಂದು ಸೆರ್ವೆರಾ ಈ ಹಿಂದೆ ಪೊಲೀಸರಿಗೆ ತಿಳಿಸಿದ್ದಾನೆ. ಪ್ರತಿವಾದಿಗಳ ಪ್ರಕರಣದೊಂದಿಗೆ ಈ ವಾರ ವಿಚಾರಣೆ ಪುನರಾರಂಭಗೊಳ್ಳುತ್ತದೆ ಎನ್ನಲಾಗಿದೆ.