ಇತ್ತೀಚಿನ ದಿನಗಳಲ್ಲಿ ಬೇಕರಿಗಳಲ್ಲಿ ಹಲವು ವಿಧದ ಕೇಕ್ಗಳು ಸಿಗುತ್ತವೆ. ಪ್ರಾಣಿಗಳ ಮುಖ, ಕಾರು, ಹಕ್ಕಿ, ಗೊಂಬೆ ಹೀಗೆ ನಾನಾ ವಿನ್ಯಾಸದ ಕೇಕ್ಗಳನ್ನು ತಯಾರಿಸುತ್ತಾರೆ. ಇಷ್ಟು ಸಾಲದಕ್ಕೆ ಇದೀಗ ಮನುಷ್ಯನ ರೀತಿ ಇರುವಂತಹ ಕೇಕ್ಗಳನ್ನು ಕೂಡ ತಯಾರಿಸಲಾಗುತ್ತಿದೆಯಂತೆ. ಇದೀಗ ಮನುಷ್ಯನ ಮುಖವನ್ನು ಹೋಲುವಂತಹ ಕೇಕ್ ಕಟ್ಟಿಂಗ್ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.
ಹಾಸಿಗೆಯ ಮೇಲೆ ತಲೆ ಇಟ್ಟುಕೊಂಡು ಮಲಗಿದ್ದ ಹುಡುಗಿಯ ಮುಖವನ್ನು ವ್ಯಕ್ತಿಯೊಬ್ಬ ಸೀಳಿರುವ ವಿಡಿಯೊವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದನ್ನು ನೋಡಿದವರು ಒಮ್ಮೆಲೆ ಶಾಕ್ ಆಗಿ ಬೆಚ್ಚಿಬೀಳುವುದಂತೂ ಗ್ಯಾರಂಟಿ! ಆದರೆ ಇದು ಕೇಕ್ ವಿಡಿಯೊವಂತೆ. ಹೌದು ಮನುಷ್ಯನ ಮುಖವನ್ನು ಹೋಲವಂತೆ ಕೇಕ್ ತಯಾರಿಸಿ ಅದನ್ನು ಕತ್ತರಿಸಲಾಗಿದೆ. ಇದು ನೋಡುವುದಕ್ಕೆ ನಿಜವಾದ ಮುಖದ ಹಾಗೇ ಕಾಣಿಸುತ್ತದೆ. ಇನ್ನು ವಿಡಿಯೊದಲ್ಲಿ ಕ್ಯಾಪ್ಸಿಕಂ, ಮಕ್ಕಳ ಶೂ ರೀತಿ ಇರುವ ಕೇಕ್ಗಳನ್ನು ಕೂಡ ಕತ್ತರಿಸಲಾಗಿತ್ತು.
ರಾಧಿಕಾ ಎಂಬುವವರು ಈ ವಿಡಿಯೊವನ್ನು ಹಂಚಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ತಯಾರಿಸಲಾಗುತ್ತಿರುವ ಕೇಕ್ಗಳ ವಿಭಿನ್ನ ಡಿಸೈನ್ ಬಗ್ಗೆ ಕಾಮೆಂಟ್ ಮಾಡಲು ಇದನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. “ಈ ದಿನಗಳಲ್ಲಿ ತಯಾರಿಸಲಾಗುತ್ತಿರುವ ಕೇಕ್ಗಳು ನಿಜವಾದ ವ್ಯಕ್ತಿಯನ್ನು ಕತ್ತರಿಸಿದಂತೆ ಕಾಣುತ್ತದೆ. ಅಂತಹ ವಿಡಿಯೊಗಳನ್ನು ನೋಡಿ ನಾವು ಹೆದರುತ್ತೇವೆ ಮತ್ತು ಕೇಕ್ ತಯಾರಕರು ಅಂತಹ ಹೆಚ್ಚಿನ ಕೇಕ್ಗಳನ್ನು ತಯಾರಿಸುತ್ತಲೇ ಇರುತ್ತಾರೆ” ಎಂದು ಅವರು ಈ ಕೇಕ್ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಗುಲಾಬಿ ಬಣ್ಣದಲ್ಲಿ ಮಿಂಚಿದ ಲೋಕಲ್ ರೈಲಿನ ಮಹಿಳಾ ಕಂಪಾರ್ಟ್ಮೆಂಟ್!
ರಾಧಿಕಾ ಅವರ ಪೋಸ್ಟ್ ಈಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಾಗೇ ಜನರು ಈ ಟ್ರೆಂಡಿಂಗ್ ಕೇಕ್ಗಳ ಹಾವಳಿ ಮಿತಿಮೀರಿ ಹೋಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.