Friday, 22nd November 2024

Viral Video: ವೈದ್ಯರು, ಲ್ಯಾಬ್‌ ಸಿಬ್ಬಂದಿಗಳೆಲ್ಲಾ ರಜೆ… ಯುಟ್ಯೂಬ್‌ ನೋಡಿ ಇಸಿಜಿ ಮಾಡಿದ ಅಟೆಂಡರ್‌! ಇಲ್ಲಿದೆ ವಿಡಿಯೋ

Viral Video

ಜೈಪುರ: ವೈದ್ಯಕೀಯ ಸೇವೆ ಯಾವಾಗ ಮೆಡಿಕಲ್‌ ಮಾಫಿಯಾವಾಗಿ ಬೆಳೆಯಲು ಪ್ರಾರಂಭಿಸಿತೋ ಅಂದಿನಿಂದ ಹಣಕ್ಕಿರುವ ಬೆಲೆ ಜನರ ಪ್ರಾಣಕ್ಕಿಲ್ಲ ಎಂಬುದು ಬಯಲಾಯಿತು. ಚಿಕಿತ್ಸೆಗಾಗಿ ಬರುವ ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡುವ ಅದೆಷ್ಟೋ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ. ಆಸ್ಪತ್ರೆಗೆ ಬಂದ ರೋಗಿಗೆ ಯುಟ್ಯೂಬ್‌ (You Tube) ನೋಡಿ ಇಸಿಜಿ (ECG) ಮಾಡಿ ಹೃದಯ ಪರೀಕ್ಷೆ ನಡೆಸಿದ ಘಟನೆ ರಾಜಸ್ಥಾನದ (Rajasthan) ಜೋಧ್‌ಪುರದಲ್ಲಿ ನಡೆದಿದೆ. ಈ ಶಾಕಿಂಗ್‌ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ(Viral Video).

ಏನಿದು ಘಟನೆ?

ಎದೆ ನೋವು ಎಂದು ತಪಾಸಣೆಗೆ ಬಂದ ವ್ಯಕ್ತಿಗೆ, ಲ್ಯಾಬ್ ಅಟೆಂಡರ್‌ ಒಬ್ಬ ತಪಾಸಣೆ ನಡೆಸಿ ಯೂಟ್ಯುಬ್‌ ನೋಡಿ ಇಸಿಜಿ ಮಾಡಿದ್ದಾನೆ. ಆಸ್ಪತ್ರೆಯ ವೈದ್ಯರು ಹಾಗೂ ಲಾಬ್‌ ಸಿಬ್ಬಂದಿಗಳು ದೀಪಾವಳಿಯ ರಜೆಯಲ್ಲಿದ್ದು, ವಾರ್ಡ್‌ ಬಾಯ್‌, ಆಸ್ಪತ್ರೆಗೆ ಬಂದವರಿಗೆ ಚಿಕಿತ್ಸೆ ನೀಡುತ್ತಿದ್ದ ಎಂದು ಬಯಲಾಗಿದೆ. ಸದ್ಯ ಆತ ಇಸಿಜಿ ಮಾಡಿದ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅಕ್ಟೋಬರ್ 31 ಗುರುವಾರ ಜೋಧ್‌ಪುರದ ಪೌಟಾ ಆಸ್ಪತ್ರೆಗೆ ರೋಗಿಯೊಬ್ಬರು ಎದೆ ನೋವು ಎಂದು ಬಂದಿದ್ದರು. ದೀಪಾವಳಿಯ ಕಾರಣದಿಂದ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಮತ್ತು ಸಿಬ್ಬಂದಿಗಳು ಲಭ್ಯರಿರಲಿಲ್ಲ. ಆಸ್ಪತ್ರೆಯ ಲ್ಯಾಬ್ ಅಟೆಂಡರ್‌ ಚಿಕಿತ್ಸೆ ನೀಡುವುದಾಗಿ ಹೇಳಿ ಇಸಿಜಿ ಮಾಡಿದ್ದಾರೆ. ಇಸಿಜಿ ಮಾಡಿರುವ ದೃಶ್ಯವಿದ್ದು, ಅದರಲ್ಲಿ ಆತ ಯುಟ್ಯೂಬ್‌ ನೋಡಿ ಇಸಿಜಿ ಮಾಡುತ್ತಿರುವುದು ತಿಳಿದು ಬಂದಿದೆ. ವೀಡಿಯೊದಲ್ಲಿ, ವಾರ್ಡ್ ಬಾಯ್ ಇಸಿಜಿ ಪರೀಕ್ಷೆಯನ್ನು ಹೇಗೆ ಮಾಡಬೇಕೆಂದು ತಿಳಿದಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾನೆ. ದೀಪಾವಳಿಯ ಕಾರಣ ತಂತ್ರಜ್ಞರು ಮತ್ತು ವೈದ್ಯಕೀಯ ಸಿಬ್ಬಂದಿ ರಜೆಯಲ್ಲಿದ್ದಾರೆ ಎಂದು ಆತ ಹೇಳಿದ್ದಾನೆ.

ರೋಗಿಯ ಜತೆಗೆ ಬಂದಿದ್ದ ಲ್ಯಾಬ್ ಅಟೆಂಡೆಂರ್‌ ಇಸಿಜಿ ಮಾಡಲು ನಿರಾಕರಿಸಿ ಇಸಿಜಿ ಪರೀಕ್ಷೆಯ ಬಗ್ಗೆ ನಿಮಗೆ ತಿಳಿದಿಲ್ಲ, ಇದು ಪ್ರಮುಖ ಪರೀಕ್ಷೆ. ನೀವು ರೋಗಿಯನ್ನು ಕೊಲ್ಲಬಹುದು. ದಯವಿಟ್ಟು ಅರ್ಥಮಾಡಿಕೊಳ್ಳಿ. ನೆಟ್‌ನಲ್ಲಿ ನೋಡಿ ಇಸಿಜಿ ಪರೀಕ್ಷೆಯನ್ನು ಹೇಗೆ ನಡೆಸುತ್ತೀರಿ?” ನೀವು ಅವರ ಪ್ರಾಣಕ್ಕೆ ಕುತ್ತು ತರಬಹುದು ಎಂದು ವಿನಂತಿಸಿಕೊಂಡಿದ್ದಾನೆ. ಆದರೆ ಅವರ ಮಾತನ್ನು ಕೇಳದ ವಾರ್ಡ್‌ ಬಾಯ್‌ ತನ್ನ ಕೆಲಸವನ್ನು ಮುಂದುವರಿಸಿದ್ದು, “ಹೌದು, ನಾನು ಇದನ್ನು ಮೊದಲ ಬಾರಿಗೆ ನಡೆಸುತ್ತಿದ್ದೇನೆ. ನಿಮಗೇನಾದರೂ ತೊಂದರೆಯೇ ಎಂದು ಪ್ರಶ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋ ವೈರಲ್‌ ಆದ ನಂತರ  ಜೋಧ್‌ಪುರ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಬಿಎಸ್‌ ಜೋಧಾ ಮಾತನಾಡಿ ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Yunus Chaudhary: ಮಹಿಳೆಗೆ ಖಾಸಗಿ ಅಂಗ ತೋರಿಸಿ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್‌ ನಾಯಕ; ವಿಡಿಯೊ ವೈರಲ್‌