Sunday, 24th November 2024

Viral Video: ಹೆಬ್ಬಾವಿನ ಬಾಯಲ್ಲಿರುವ ಆಹಾರವನ್ನೇ ಕಸಿದುಕೊಂಡ ಸ್ಥಳೀಯರು! ಇದು ಸರಿಯೇ?

ಶಿಮ್ಲಾ: ಇತ್ತೀಚೆಗೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಹೆಬ್ಬಾವೊಂದು ನೀಲ್‍ಗಾಯ್ ಮರಿಯನ್ನು ನುಂಗಿದೆ. ಕರುವನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದ್ದು, ಜನರ ವಿಫಲ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದವರು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ವೈರಲ್ ವಿಡಿಯೊದಲ್ಲಿ ಹೆಬ್ಬಾವಿನ ಬಾಯಿಯೊಳಗಿರುವ ನೀಲ್‍ಗಾಯ್ ಮರಿಯನ್ನು ಹೊರಗೆ ತೆಗೆಯಲು ಸ್ಥಳೀಯರು ಹಾವಿಗೆ ಹಿಂಸೆ ನೀಡಿದ್ದಾರೆ.  ಇದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಮಾನವ ಹಸ್ತಕ್ಷೇಪ ಮಾಡುವ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿಯೊಬ್ಬರು ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅಲ್ಲಿ ಅವರು ತಮ್ಮ ಫಾಲೋವರ್ಸ್‍ಗಳಿಗೆ ಪ್ರಶ್ನೆಯನ್ನು ಕೇಳಿದ್ದಾರೆ: “ಇತ್ತೀಚಿನ ವೈರಲ್ ವಿಡಿಯೊದಲ್ಲಿ, ಕೆಲವು ಸ್ಥಳೀಯರು ಹೆಬ್ಬಾವಿನ ಬಾಯಲ್ಲಿರುವ ನೀಲ್‍ಗಾಯ್ ಕರುವನ್ನು ಉಳಿಸಲು ಪ್ರಯತ್ನಿಸಿದ್ದಾರೆ.ಇದರ ಬಗ್ಗೆ ನೀವೇನು ಹೇಳುತ್ತೀರಿ? ಪ್ರಕೃತಿಯ ನಿಯಮದಲ್ಲಿ ಈ ರೀತಿ ಹಸ್ತಕ್ಷೇಪ ಮಾಡುವುದು ಸರಿಯೇ, ಅಥವಾ ಅವರು ಸರಿಯಾದ ಕೆಲಸ ಮಾಡಿದ್ದಾರೆಯೇ? ಎಂದು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸೋಶಿಯಲ್ ಮೀಡಿಯಾ ನೆಟ್ಟಿಗರು ಅಲ್ಲಿದ್ದ ಸ್ಥಳೀಯರನ್ನು ತೀವ್ರವಾಗಿ ಟೀಕಿಸಿದ್ದಾರೆ.  “ಆ ಕರುವು ಹೆಬ್ಬಾವಿನ ಗಂಟಲಿನೊಳಗೆ ಹೋಗಿ ಉಸಿರುಗಟ್ಟಿದ ಕ್ಷಣವೇ ಸತ್ತುಹೋಗಿದೆ. ಸತ್ತ ಕರುವನ್ನು ಬಿಡಿಸಲು ಹೆಬ್ಬಾವನ್ನು ಹೊಡೆಯುವುದರಲ್ಲಿ ಈಗ ಏನು ಅರ್ಥವಿದೆ?” ಎಂದು ಒಬ್ಬರು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಕಾರನ್ನು ಕದ್ದ ಕಳ್ಳ ʼಕ್ಷಮಿಸಿʼ ಎಂದು ಚೀಟಿ ಬರೆದು ಅಂಟಿಸಿದ್ಯಾಕೆ?

ಇನ್ನೊಬ್ಬ ಬಳಕೆದಾರರು “ಜನರು ಜೀವವಿರುವ ಹಾವಿಗಿಂತ ಸತ್ತ ಕರುವನ್ನು ಉಳಿಸಲು ಏಕೆ ಪ್ರಯತ್ನಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ” ಎಂದಿದ್ದಾರೆ. ಮೂರನೇ ಬಳಕೆದಾರರು, “ಇದು ಪ್ರಕೃತಿಗೆ ವಿರುದ್ಧವಾಗಿದೆ; ಪ್ರತಿಯೊಬ್ಬರಿಗೂ ತಮ್ಮ ಆಹಾರವನ್ನು ಸಂಪಾದಿಸುವ ಹಕ್ಕಿದೆ. ಆದ್ದರಿಂದ, ನೈಸರ್ಗಿಕ ಜಗತ್ತಿನಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ನೀಲ್‍ಗಾಯ್ ಕರು ಬದುಕಿರಲು ಸಾಧ್ಯತೆಯಿಲ್ಲ ಎಂದು ಕೆಲವರು ತಿಳಿಸಿದ್ದಾರೆ.