Friday, 8th November 2024

Viral Video: ಸಮಸ್ಯೆ ಇದೆ ಅಂತಾ ದೂರು ಕೊಡೋಕೆ ಹೋದ್ರೆ ಹೀಗಾ ಮಾಡೋದಾ? ಮಹಿಳೆ ಮೇಲೆ ಶಾಸಕನ ಸಹಚರರಿಂದ ಡೆಡ್ಲಿ ಅಟ್ಯಾಕ್‌! ವಿಡಿಯೋ ಇದೆ

Viral Video

ಮುಂಬೈ: ಮಹಾರಾಷ್ಟ್ರದ ಚುನಾವಣೆ (Maharashtra Election) ಹೊತ್ತಿನಲ್ಲೇ ಸಮಾಜವಾದಿ ಪಕ್ಷದ (Samajwadi Party) ನಾಯಕ ಅಬು ಅಜ್ಮಿ(Abu Azmi) ಅವರ ಸಹಚರರು ಮುಂಬೈನ ಶಿವಾಜಿ ನಗರದ ಗೋವಂಡಿಯಲ್ಲಿ ಮಹಿಳೆ ಮತ್ತು ಕೆಲ ಪುರುಷರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. (Viral Video) ಗೋವಂಡಿಯ ರಫೀಕ್ ನಗರ ಪ್ರದೇಶದಲ್ಲಿ ಅತಿಯಾಗಿ ಇರುವ ಕಸ ಮತ್ತು ತುಂಬಿ ಹರಿಯುತ್ತಿರುವ ಗಟಾರಗಳ ಸಮಸ್ಯೆಗಳ ಬಗ್ಗೆ ದೂರು ನೀಡಲು ಅಬು ಅಜ್ಮಿ ಅವರ ಕಚೇರಿಗೆ ಹೋಗಿದ್ದೆ ಎಂದು ವಿಡಿಯೋದಲ್ಲಿ ಮಹಿಳೆ ಹೇಳಿಕೊಂಡಿದ್ದಾರೆ.

ಕ್ಷೇತ್ರದಲ್ಲಿರುವ ಕುಂದುಕೊರತೆಗಳ ಬಗ್ಗೆ ಹೇಳಿದ ಬಳಿಕ, ಎಸ್‌ಪಿ ಶಾಸಕ ಫಹಾದ್ ಅಜ್ಮಿ ಮತ್ತು ಅವರ ಸಹಚರರು ನನ್ನ ಮೇಲೆ ಮತ್ತು ನನ್ನ ಜೊತೆ ಬಂದ ಜನರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವೀಡಿಯೊದಲ್ಲಿ, ಮಹಿಳೆ ತನ್ನ ಹರಿದ ಬಟ್ಟೆಗಳನ್ನು ತೋರಿಸುತ್ತಾಳೆ, ಹಲ್ಲೆಯ ಸಮಯದಲ್ಲಿ ನನ್ನ ಬಟ್ಟೆಯನ್ನು ಹರಿದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ಜೊತೆಗಿದ್ದ ನಾಲ್ಕು ಪುರುಷರ ಹರಿದ ಬಟ್ಟೆಗಳು ಮತ್ತು ಮೈ ಮೇಲೆ ಆದ ಗಾಯಗಳು ವಿಡಿಯೋದಲ್ಲಿ ತೋರಿಸಲಾಗಿದೆ. ಪುರುಷರಲ್ಲಿ ಒಬ್ಬರಿಗೆ ರಕ್ತಸ್ರಾವವಾಗಿದೆ. ವಿಡಿಯೋದ ಕೊನೆಯಲ್ಲಿ, ಘಟನೆಯ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸುವುದರ ಬಗ್ಗೆ ಅವರು ಮಾತನಾಡಿದ್ದಾರೆ.

ಈವರೆಗೆ ಸಮಾಜವಾದಿ ಪಕ್ಷ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.ಸ್ಥಳೀಯ ಪೊಲೀಸರು ಕೂಡ ವಿಷಯದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ನೋಡಿದ ನೆಟ್ಟಿಗರು ಸಮಾಜವಾದಿ ಪಕ್ಷದ ವಿರುದ್ದ ಕಿಡಿ ಕಾರಿದ್ದಾರೆ.

ಇದನ್ನೂ ಓದಿ :Maharashtra Assembly Election: ಮಹಿಳೆಯರಿಗೆ ಜ್ಯೂಸರ್‌ ಮಿಕ್ಸರ್‌ ಫ್ರೀ..ಫ್ರೀ.. ಆಮಿಷವೊಡ್ಡಿದ ಮಹಾರಾಷ್ಟ್ರ ಶಾಸಕನ ವಿರುದ್ಧ ECಗೆ ದೂರು

ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳು ಇನ್ನೇನು ಹತ್ತಿರದಲ್ಲಿರುವಾಗ ಈ ತರದ ಘಟನೆಗಳು ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಅರ್ಧಕ್ಕಿಂತ ಜಾಸ್ತಿ ಮುಸ್ಲಿಂ ಜನ ಇರುವ ಶಿವಾಜಿ ನಗರ ಕ್ಷೇತ್ರದ ಮೇಲೆ ರಾಜಕೀಯ ಪಕ್ಷಗಳು ಕಣ್ಣಿಟ್ಟಿದ್ದು ತೀವ್ರ ಪೈಪೋಟಿಯಾಗುವ ನಿರೀಕ್ಷೆಯಿದೆ. ಎಸ್‌ಪಿಯಿಂದ ಎಸ್‌ಪಿ ರಾಜ್ಯಾಧ್ಯಕ್ಷ ಮತ್ತು ಹಾಲಿ ಶಾಸಕ ಅಬು ಅಜ್ಮಿ ಸ್ಪರ್ಧೆ ಮಾಡಿದ್ದರೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ನವಾಬ್ ಮಲಿಕ್ ಕಣದಲ್ಲಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಿಂದ ಸುರೇಶ್ ಪಾಟೀಲ್ ಸ್ಪರ್ಧೆ ಮಾಡುತ್ತಿದ್ದಾರೆ.