Sunday, 15th December 2024

Viral Video: ಇಸ್ಲಾಂ ಧರ್ಮ ತ್ಯಜಿಸಿ ಸನಾತನ ಧರ್ಮಕ್ಕೆ ಮತಾಂತರಗೊಂಡ ಯುವತಿ!

Viral Video

ಅಸ್ಸಾಂನ ಮುಸ್ಲಿಂ ಯುವತಿಯೊಬ್ಬಳು ಇಸ್ಲಾಂ ಧರ್ಮವನ್ನು ತೊರೆದು ಸನಾತನ ಧರ್ಮವನ್ನು ಅನುಸರಿಸುತ್ತಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈ ಘಟನೆ ಇತ್ತೀಚೆಗೆ ನಡೆದಿದೆ. ಜುಗಲ್ ಚಂದ್ರ ದೇವ್ ಗೋಸ್ವಾಮಿ ಅವರ ಆಧ್ಯಾತ್ಮಿಕ ಮಾರ್ಗದರ್ಶನದೊಂದಿಗೆ ನಾಗಾವ್‍ನ ಪವಿತ್ರ ಶ್ರೀ ಶ್ರೀ ಜಖಲಬಧಿ ದೇವಸ್ಥಾನದಲ್ಲಿ ಈ ಕಾರ್ಯಕ್ರಮವನ್ನು ಸಾಂಪ್ರದಾಯಿಕ ಹಿಂದೂ ಆಚರಣೆಗಳನ್ನು ಅನುಸರಿಸಿ ನಡೆಸಲಾಗಿತ್ತು. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಮಹಾಪುರುಷ ಶ್ರೀ ಶ್ರೀ ದಾಮೋದರ್ ದೇವ್ ಗುರು ಅವರ ಬೋಧನೆಗಳ ಬಗ್ಗೆ ತಿಳಿದ ನಂತರ ಯುವತಿ ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎನ್ನಲಾಗಿದೆ.

ಯುವತಿಯನ್ನು ಅಸ್ಸಾಂನ ರಂಗಿಯಾ ಮೂಲದ ರೆಜಿನಾ ಬೇಗಂ ಎಂದು ಗುರುತಿಸಲಾಗಿದ್ದು, ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದಾಳೆ. ಆಕೆ  ಹಿಂದೂ ಆಗಬೇಕೆಂಬ ತನ್ನ ಉದ್ದೇಶವನ್ನು ಘೋಷಿಸಿದ್ದಾಳೆ.  ನಂತರ ಆಕೆ ಸ್ವಾಮೀಜಿಯನ್ನು ಭೇಟಿ ಮಾಡಿದ್ದಾಳೆ. ಆಗ ಮುಸ್ಲಿಂ ಸಮುದಾಯದವರಿಂದ ಬೆದರಿಕೆ ಇದ್ದ ಕಾರಣ  ಸ್ವಾಮೀಜಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವಂತೆ ಆಕೆಗೆ ಸಲಹೆ ನೀಡಿದ್ದಾರೆ. ಆಕೆ ಅಫಿಡವಿಟ್ ಸಲ್ಲಿಸಿದ ನಂತರವೇ ಆಕೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಪ್ರಕ್ರಿಯೆಯನ್ನು ಸತ್ರಾಧಿಕಾರಿ ಜುಗಲ್ ಚಂದ್ರ ದೇವ್ ಗೋಸ್ವಾಮಿ ಪ್ರಾರಂಭಿಸಿದ್ದಾರೆ. ಈಗ ಆಕೆಯ ಹೆಸರನ್ನು ಅನನ್ಯ ಡಿಯೋರಿ ಎಂದು ಬದಲಿಸಿಕೊಂಡಿದ್ದಾಳೆ.

ನಂದನ್‌ ಪ್ರತಿಮ್‌ ಶರ್ಮಾ ಎಂಬವರು ಎಕ್ಸ್‌ ಖಾತೆಯಲ್ಲಿ ಈ ವಿಡಿಯೊವನ್ನು ಸೆಪ್ಟೆಂಬರ್‌ 29ರಂದು ಹಂಚಿಕೊಂಡಿದ್ದಾರೆ. ಈ ವೈರಲ್  ವಿಡಿಯೊದಲ್ಲಿ ಮುಸ್ಲಿಂ ಯುವತಿಯೊಬ್ಬಳು ಪುರೋಹಿತರ ಮಾರ್ಗದರ್ಶನದಲ್ಲಿ ಸಾಂಪ್ರದಾಯಿಕ ಹಿಂದೂ ಆಚರಣೆಗಳ ಮೂಲಕ  ಹಿಂದೂ ಧರ್ಮವನ್ನು ಸ್ವೀಕಾರ ಮಾಡುತ್ತಿದ್ದಾಳೆ. ಈ ವಿಡಿಯೊ 3 ಲಕ್ಷಕ್ಕೂ ಅಧಿಕ ವೀವ್ಸ್ ಹಾಗೂ ಹಲವಾರು ಕಾಮೆಂಟ್‍ಗಳನ್ನು ಗಳಿಸಿದೆ. ಒಬ್ಬ ಬಳಕೆದಾರರು ʼಸನಾತನ ಧರ್ಮಕ್ಕೆ ಸ್ವಾಗತʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಒಳ್ಳೆಯ ನಡೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡ್ರೆಸ್ ಸರಿಮಾಡಿಕೊಳ್ಳಲು ಹೋಗಿ ಏನೇನೋ ಆಗಿ ಟ್ರೋಲ್‍ಗೆ ಒಳಗಾದ ಬಿಗ್‌ಬಾಸ್ ಹುಡುಗಿ!

ಸುಮಾರು 1100 ಹುಡುಗಿಯರು ಮತ್ತು ಹುಡುಗರು ತಮ್ಮ ಇಚ್ಛೆಯಂತೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಸತ್ರಾಧಿಕಾರಿ ಜುಗಲ್ ಚಂದ್ರ ದೇವ್ ಗೋಸ್ವಾಮಿ ಸಹಾಯ ಮಾಡಿರುವುದಾಗಿ ತಿಳಿದುಬಂದಿದೆ.