ನವದೆಹಲಿ: ನವರಾತ್ರಿ ಹಿನ್ನೆಲೆ ಆಯೋಜಿಸಲಾಗಿದ್ದ ರಾಮಲೀಲಾ(Ramleela) ಪ್ರದರ್ಶನದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ್ದ ವ್ಯಕ್ತಿಯೊಬ್ಬ ವೇದಿಕೆಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ದೆಹಲಿಯ ಶಹದಾರದ ವಿಶ್ವಕರ್ಮ ನಗರದಲ್ಲಿ ರಾಮಲೀಲಾದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುವಾಗ ವೇದಿಕೆಯಲ್ಲಿ ಹೃದಯಾಘಾತದಿಂದ 45 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ(Viral Video).
Sushil Kaushik, aged 45, a resident of East Delhi died due to heart attack while he was performing the role of Lord Rama. The event was organized by Jai Shri Ramleela Vishwakarma Nagar. pic.twitter.com/1seSVZyZ8a
— IANS (@ians_india) October 6, 2024
ಮೃತ ವ್ಯಕ್ತಿಯನ್ನು ಸುಶೀಲ್ ಕೌಶಿಕ್ ಎಂದು ಗುರುತಿಸಲಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮೃತ ಸುಶೀಲ್ ಕೌಶಿಕ್ ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್ ಆಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವೇದಿಕೆಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದ ಕೌಶಿಕ್‌ಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರು ವೇದಿಕೆಯಿಂದ ತೆರೆಮರೆಗೆ ತೆರಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ತಕ್ಷಣ ವೇದಿಕೆಯಲ್ಲಿರುವವರು ಗಾಬರಿಗೊಂಡು ಹಿಂದಕ್ಕೆ ಹೋಗಿ ನೋಡಿದಾಗ ಕೌಶಿಕ್ ಕುಸಿದು ಬಿದ್ದಿರುವುದು ಕಂಡುಬಂದಿದೆ.
A 45-year-old man suffered a massive heart attack on stage while performing the role of Lord Ram at #Ramleela in #Delhi after which he was taken to a hospital where doctors declared him dead. The deceased Sushil Kaushik worked as a property dealer.@NewIndianXpress pic.twitter.com/VRMyWNhF1H
— Ujwal Jalali (@ujwaljalali) October 6, 2024
ಈ ಸುದ್ದಿಯನ್ನೂ ಓದಿ:Viral Video: ಕಾರಿನಲ್ಲಿ ಹೋಗುತ್ತಿದ್ದ ದಂಪತಿಯನ್ನು ಮಾರಕಾಸ್ತ್ರ ಹಿಡಿದುಕೊಂಡು ಬೆನ್ನಟ್ಟಿದ ದರೋಡೆಕೋರರು; ವಿಡಿಯೊ ವೈರಲ್