Sunday, 24th November 2024

Viral Video: ‘ರಮ್ + ಜಾಮೂನ್ = ಸ್ವರ್ಗ’ – ಸೋಶಿಯಲ್ ಮೀಡಿಯಾದಲ್ಲಿ ‘ಕಿಕ್’ ಏರಿಸಿರೋ ಈ ರೆಸಿಪಿ ಎಲ್ಲಿ ಸಿಗುತ್ತೆ? ಈ ಸುದ್ದಿ ಓದಿ

ನವದೆಹಲಿ: ಮದ್ಯಪ್ರಿಯರಿಗೆ ಅದರಲ್ಲೂ ರಮ್‌ ಪ್ರಿಯರಿಗಾಗಿಯೇ ಹೊಸ ರೆಸಿಪಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗ್ತಿದೆ(Viral Video). ಸ್ವಲ್ಪ ಸ್ವಲ್ಪವೇ ಸೇವಿಸಿದಾಗ ನಿಧಾನಕ್ಕೆ ಕಿಕ್ ಏರಿಸುವ ಓಲ್ಡ್ ಮಾಂಕ್ ಅಥವಾ ಬಕಾರ್ಡಿ ರಮ್ ಇಷ್ಟಪಡುವವರಿಗೆ ಇಲ್ಲೊಂದು ಸ್ಪೆಷಲ್ ರೆಸಿಪಿ (Viral Recipe) ಇದೆ ಅದು ನಿಮ್ಮ ಕಿಕ್ ಅನ್ನು ಇನ್ನಷ್ಟು ಜಾಸ್ತಿ ಮಾಡುತ್ತದೆ.

ಇಲ್ಲಿ ಭಾರತೀಯರು ಅತೀ ಹೆಚ್ಚು ಇಷ್ಟಪಡುವ ಡೆಸೆರ್ಟ್ ಒಂದು ಮದ್ಯಪ್ರಿಯರ ನೆಚ್ಚಿನ ರಮ್ ಜೊತೆ ಮಿಕ್ಸಾಗಿ –ಬ್ಲೆಂಡಾಗಿ ಸಿಕ್ಕಾಗ ಅದರ ಸ್ವೀಟ್ ಕಿಕ್ಕೇ ಬೇರೆ ಎಂಬುದನ್ನು ನಾವಿಂದು ನಿಮಗೆ ಹೇಳಲಿದ್ದೇವೆ..! ಮತ್ತಿದು ನಮ್ಮ ಬೆಂಗಳೂರಿನಲ್ಲೇ ಈ ರೆಸಿಪಿ ಸಿಗ್ತಿದೆ ಅನ್ನೋದು ಇನ್ನೊಂದು ಇಂಟರೆಸ್ಟಿಂಗ್ ಮಾಹಿತಿ! ಯಾವುದು ಈ ರೆಸಿಪಿ? ಎಲ್ಲಿ ಇದು ಸಿಗುತ್ತೆ? ಎಂಬ ಮಾಹಿತಿ ಬೇಕಾದ್ರೆ ಈ ಸುದ್ದಿಯನ್ನೊಮ್ಮೆ ಕಂಪ್ಲೀಟ್ ಆಗಿ ಓದಿ..!

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದರಲ್ಲಿ ಕಾಣುವಂತೆ, ಗುಲಾಬ್ ಜಾಮೂನು ಒಂದಕ್ಕೆ ರಮ್ ಅನ್ನು ಸಿರಿಂಜ್ ಮೂಲಕ ಇಂಜೆಕ್ಟ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಇದಕ್ಕೆ ಹಲವರು “ವಾವ್ಹ್” ಎಂದು ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ಕಾಣುವಂತೆ ಎರಡು ಗುಲಾಬ್ ಜಾಮೂನುಗಳನ್ನು ಬೌಲ್ ಒಂದರಲ್ಲಿ ಇಡಲಾಗಿದ್ದು, ಸಕ್ಕರೆ ಪಾಕವೂ ಕಾಣುತ್ತದೆ. ಇದಕ್ಕೆ ರೆಸ್ಟೊರೆಂಟ್ ಸಿಬ್ಬಂದಿ ಒಂದು ದ್ರಾವಣವನ್ನು ಅದಕ್ಕೆ ಇಂಜೆಕ್ಟ್ ಮಾಡುತ್ತಿದ್ದರೆ, ಇದನ್ನು ರಮ್ ಎಂದು ಹೇಳಲಾಗುತ್ತಿದೆ.

ಈ ವಿಶಿಷ್ಟ ರೆಸಿಪಿಯ ವಿಡಿಯೋವನ್ನು ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ “ಸ್ವರ್ಗ” ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಫುಡ್ ಬ್ಲಾಗಿಂಗ್ ಪೇಜ್ ಒಂದು ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದಕ್ಕೆ “ರಮ್+ಜಾಮೂನ್ – ಸ್ವರ್ಗ” ಎಂದು ಕ್ಯಾಪ್ಷನ್ ನೀಡಲಾಗಿದೆ. ಇದೀಗ, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ರಮ್ ಪ್ರಿಯರು ಇದನ್ನು ಸಿಕ್ಕಾಪಟ್ಟೆ ಲೈಕ್ ಮಾಡುತ್ತಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರವೆಂದರೆ ಈ ರೆಸಿಪಿ ಬೆಂಗಳೂರಿನ ‘ಎಣ್ಣೆ’ ಪಬ್ ನಲ್ಲಿ ಲಭ್ಯವಿದೆ ಎಂದು ತಿಳಿದುಬಂದಿದೆ. ಈ ರೆಸಿಪಿ ಬಗ್ಗೆ ನೆಟ್ಟಿಗರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವುಳನ್ನೊಮ್ಮೆ ನೋಡ್ಕೊಂಡು ಬನ್ನಿ.

ಕೆಲವರು ಈ ಸ್ಪೆಷಲ್ ರೆಸಿಪಿಯನ್ನು ಟ್ರೈ ಮಾಡ್ಲೇಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ರೆಸಿಪಿಗೆ ‘ನೋ’ ಎಂದಿದ್ದಾರೆ. ಈ ರಮ್ ಇಂಜೆಕ್ಟ್ ಮಾಡಿದ ಗುಲಾಬ್ ಜಾಮೂನು ಬಗ್ಗೆ ಕೆಲವರು “ಯಮ್ಮಿ” ಎಂದಿದ್ದರೆ ಇನ್ನು ಕೆಲವರು ಇದನ್ನು ಟೇಸ್ಟ್ ಮಾಡಿ ‘ಚೆನ್ನಾಗಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. “ನಾನಿದನ್ನು ಸೇವಿಸಿದೆ.. ಕೆಟ್ಟದಾಗಿದೆ ಬ್ರೋ..” ಎಂದು ಅಬಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ರಮ್ ಮತ್ತು ಗುಲಾಬ್ ಜಾಮೂನ್ ಮಿಕ್ಸ್ ರೆಸಿಪಿ ನಮ್ಮ ಬೆಂಗಳೂರಿನಲ್ಲೇ ಇದೆ ಎಂಬುದು ಇನ್ನೊಂದು ವಿಶೇಷತೆಯಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ಗ್ರೌಂಡಲ್ಲಿ ಆಡೋದು ಬಿಟ್ಟು ಬ್ಯಾಟ್‌ ಹಿಡಿದು ಅಜ್ಜಿಯ ಮೇಲೆ ಮೊಮ್ಮಗನ ಪೌರುಷ: ಈ ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌