ಮಹಾರಾಷ್ಟ್ರ: ಮಹಾರಾಷ್ಟ್ರದ ಪುಣೆಯ 42 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಅವರ ಪತ್ನಿ ಕಾರಿನಲ್ಲಿ ಹೋಗುತ್ತಿದ್ದಾಗ ಬೈಕ್‍ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪು ಅವರ ಕಾರನ್ನು ಬೆನ್ನಟ್ಟಿ ಬಂದು ಕಬ್ಬಿಣದ ರಾಡ್‍ಗಳಿಂದ ಹಾನಿಗೊಳಿಸಿದ ಘಟನೆ ನಡೆದಿದೆ. ಈ ವಿಡಿಯೊ ವೈರಲ್ ಆಗಿದ್ದು ಕಾಳಜಿ ವ್ಯಕ್ತಗೊಂಡಿದೆ. ಪುಣೆ ಬಳಿಯ ದಂಪತಿ ಸೂಸ್‌ನಲ್ಲಿರುವ ತಮ್ಮ ಮನೆಯನ್ನು ತಲುಪುವವರೆಗೂ ದುಷ್ಕರ್ಮಿಗಳ ಗುಂಪು ಅವರನ್ನು ಬೆನ್ನಟ್ಟಿತ್ತು ಎನ್ನಲಾಗಿದೆ. ಈ ಘಟನೆಯ ನಂತರ, ಎಂಜಿನಿಯರ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
We were attacked !!!
— Ravi Karnani (@_ravi_karnani) September 30, 2024
There were total of 40 people in different pockets with Iron Rods, Stones and Sticks who were attacking our car, with 2 bikes and a car filled with Local goons chasing us at a speed of 80kmpl !!!
The local Police took their side stating they were patrolling pic.twitter.com/YVlUJlmdLY
ಲಾವಲೆ-ನಂದೆ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಐಟಿ ಎಂಜಿನಿಯರ್ ರವಿ ಕರ್ಣಾನಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ರವಿ ಕರ್ಣಾನಿ ಅವರ ಕಾರಿನ ಮೇಲೆ ದುಷ್ಕರ್ಮಿಗಳ ಗುಂಪು ದೊಣ್ಣೆಗಳು ಮತ್ತು ರಾಡ್‍ಗಳಿಂದ ದಾಳಿ ನಡೆಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಈ ವ್ಯಕ್ತಿಗಳು ಹೆಚ್ಚಾಗಿ ವಾಹನಗಳನ್ನು, ವಿಶೇಷವಾಗಿ ಹೊರರಾಜ್ಯ ಪರವಾನಗಿ ಫಲಕಗಳನ್ನು ಹೊಂದಿರುವ ವಾಹನಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಎರಡು ಬೈಕ್‍ಗಳು ಹಾಗೂ ಒಂದು ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ತಮ್ಮ ವಾಹನವನ್ನು ಗಂಟೆಗೆ 80 ಕಿ.ಮೀ ವೇಗದಲ್ಲಿ ಬೆನ್ನಟ್ಟಿ, ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ ಎಂದು ರವಿ ಕರ್ಣಾನಿ ಹೇಳಿದ್ದಾರೆ. ಪೊಲೀಸರು ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿದ್ದರೂ ಇಲ್ಲಿಯವರೆಗೆ ತನಿಖೆಯಲ್ಲಿ ಯಾವುದೇ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ ಎನ್ನಲಾಗಿದೆ. ಅಲ್ಲದೇ ರವಿ ಕರ್ಣಾನಿ ಅವರು ನಡೆದ ಈ ಘಟನೆಯ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಘಟನೆಯ ವಿಡಿಯೊದಲ್ಲಿ, ಕಾರು ಹೆಚ್ಚಿನ ವೇಗದಲ್ಲಿ ಚಲಿಸುತ್ತಿದ್ದಂತೆ ಮಹಿಳೆಯೊಬ್ಬರು ಭಯದಿಂದ ಅಳುತ್ತಿರುವುದು ಕಾಣಬಹುದು.
ಇದನ್ನೂ ಓದಿ:ನಿಲ್ಲಿಸಿದ್ದು ತಪಾಸಣೆಗೆ, ತೆಗೆದುಕೊಂಡಿದ್ದು ಸೆಲ್ಫಿ; ಲ್ಯಾಂಬೊರ್ಗಿನಿ ಕಂಡ ತಕ್ಷಣ ಪೊಲೀಸರ ವರಸೆಯೇ ಬದಲಾಯ್ತು!
ಕೆಲವು ವಾರಗಳ ಹಿಂದೆ ನಾಲ್ವರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮುಲ್ಶಿ ಪ್ರದೇಶದಲ್ಲಿ ಡ್ರೈವ್‍ಗೆ ಹೋದಾಗ ಇದೇ ರೀತಿಯ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕೆಲವು ಗ್ರಾಮಸ್ಥರು ಅವರನ್ನು ಥಳಿಸಿ ಕಾಮ್ಶೆಟ್‌ವರೆಗೆ ಬೆನ್ನಟ್ಟಿದರು. ಅವರ ಕಾರು ಕೂಡ ಜಖಂಗೊಂಡಿದೆ ಎನ್ನಲಾಗಿದೆ.