Thursday, 31st October 2024

Viral Video: ಮುಖದ ಮಸಾಜ್‍ ಮಾಡುವಾಗ ಮುದ್ದಾಗಿ ನಕ್ಕ ಕಂದಮ್ಮ; ನೆಟ್ಟಿಗರ ಹೃದಯಕ್ಕೆ ನಾಟಿದ ನಗು

Viral Video

ಎಳೆ ಕಂದಮ್ಮಗಳು ಏನು ಮಾಡಿದರೂ ನೋಡಲು ಖುಷಿಯಾಗುತ್ತದೆ. ಅವರ ಕೋಮಲ ತ್ವಚೆ, ಮುಗ್ಧ ನೋಟ, ಮುದ್ದಾದ ನಗು ಎಲ್ಲವೂ ಮನಸ್ಸಿನ ನೋವು ತಣಿಸಿ ಹೊಸ ಹುರುಪು ಮೂಡಿಸುತ್ತದೆ. ಅಂತದ್ದರಲ್ಲಿ ಇತ್ತೀಚೆಗೆ ಒಂದೂವರೆ ತಿಂಗಳ ಮುದ್ದಾದ ಮಗುವಿನ ಮೊದಲ ಫೇಸ್ ಮಸಾಜ್ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದ್ದು, ಮಗುವಿನ ಪ್ರತಿಕ್ರಿಯೆ ನೋಡಿದ ನೆಟ್ಟಿಗರು ಕೂಡ ಖುಷಿಪಟ್ಟಿದ್ದಾರೆ.

ಈ ವೈರಲ್ ವಿಡಿಯೊದಲ್ಲಿ ಒಂದೂವರೆ ತಿಂಗಳ ಪುಟ್ಟ ಮಗುವಿಗೆ ಮಹಿಳೆಯೊಬ್ಬರು ಮುಖಕ್ಕೆ ಮಸಾಜ್ ಮಾಡಿದ್ದಾರೆ. ಈ ಫೇಶಿಯಲ್‌ ಮಸಾಜ್‌ಗೆ ಮಗು ಕೂಡ ಖುಷಿಗೊಂಡು ಮುದ್ದಾಗಿ ನಕ್ಕಿದೆ. ಮಹಿಳೆಯ ಕೈ ಬೆರಳು ಮಗುವಿನ ಮುಖದ ತುಂಬೆಲ್ಲಾ ಹರಿದಾಡುತ್ತಿದ್ದಾಗ ಮಗುವಿನ ಮುಖದಲ್ಲೂ ಹೂ ನಗೆ ಚಿಮ್ಮಿದೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು ಆಂಟಿಯ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊ ನೋಡಿದವರು ಮಗಳನ್ನು ಹೊಗಳಿದ್ದಾರೆ. ಉಳಿದವರು ಪುಟ್ಟ ಮಗುವಿನ ಪ್ರತಿಕ್ರಿಯೆಯನ್ನು ಕಂಡು ತುಂಬಾ ಖುಷಿಪಟ್ಟಿದ್ದಾರೆ. ಅನೇಕರು ತಮ್ಮ ಮನೆಯಲ್ಲಿರುವ ಸಣ್ಣ ಮಕ್ಕಳಿಗೂ ಹೀಗೆ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.

ಮಗುವಿನ ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ ‘ಕೇಯಲ್‌ ‘ ಹ್ಯಾಂಡಲ್‍ನಲ್ಲಿ ಹಂಚಿಕೊಂಡಿದ್ದಾರೆ. ಹಾಗೇ “ಮಹಿಳೆಯ ಸ್ಪರ್ಶವು ಯಾವಾಗಲೂ ಸ್ವಲ್ಪ ವಿಶೇಷವಾಗಿರುತ್ತದೆ. ಜೊತೆಗೆ, ಆ ನಗುವನ್ನು ಯಾರಾದರೂ ಹೇಗೆ ತಡೆಯಬಹುದು” ಎಂದು ಈ ವಿಡಿಯೊಗೆ ಶೀರ್ಷಿಕೆ ನೀಡಲಾಗಿತ್ತು.

ಇದನ್ನೂ ಓದಿ:ತ್ವಚೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಕೇಸರಿ ಬಳಸಿ ನೋಡಿ

ಇದಕ್ಕೆ ಕಾಮೆಂಟ್‌ಗಳ ಹರಿದುಬಂದಿವೆ. “ಓಹ್, ಎಂತಹ ಸುಂದರಿ! ಮಹಿಳೆ ಮಗುವನ್ನು ಪ್ರೀತಿಸುತ್ತಿದ್ದಾಳೆ. ಆಕೆಯ ವಯಸ್ಸು ಎಷ್ಟು?” ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಓಹ್. ಇಂದು ಬೆಳಗ್ಗೆ ನನ್ನ ಫೀಡ್‍ನಲ್ಲಿ ನಾನು ನೋಡಿದ ಮೊದಲ ವಿಷಯ ಇದು. ಎಂತಹ ಸುಂದರಿ. ಅವಳು ಖಂಡಿತವಾಗಿಯೂ ಅದೃಷ್ಟಶಾಲಿ ಹುಡುಗಿ. ನನ್ನ ಕಾಫಿ ಸಮಯದಲ್ಲಿ ನನ್ನನ್ನು ನಗುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು” ಎಂದು ಎರಡನೇ ವ್ಯಕ್ತಿ ಹೇಳಿದ್ದಾರೆ. “ಓಹ್, ಇದು ನಾನು ನೋಡಿದ ಅತ್ಯಂತ ಸುಂದರವಾದ ವಿಡಿಯೊ ಆಗಿದೆ. ಆ ನಗು ಅದ್ಭುತ” ಎಂದು ಮೂರನೇ ವ್ಯಕ್ತಿ ಬರೆದಿದ್ದಾರೆ. “ಓಹ್, ಅವಳ ನಗು ಅದ್ಭುತ! ಎಂತಹ ಸುಂದರವಾದ ಹೆಣ್ಣು ಮಗು!” ಎಂದು ಇನ್ನೊಬ್ಬರು ಬರೆದಿದ್ದಾರೆ.