Saturday, 16th November 2024

Viral Video: ನೀರಿನಲ್ಲಿ ನಿಂತಿದ್ದ ಮಗುವನ್ನು ಮೀನು ಎಂದು ಭಾವಿಸಿ ಎತ್ತೊಯ್ಯಲು ಯತ್ನಿಸಿದ ಹದ್ದು; ಮುಂದೇನಾಯ್ತು ವಿಡಿಯೊ ನೋಡಿ

Viral Video

ಬೆಂಗಳೂರು : ಹದ್ದು ಅತ್ಯಂತ ಅಪಾಯಕಾರಿ ಮತ್ತು ಶಕ್ತಿಯುತ ಬೇಟೆಗಾರ ಪಕ್ಷಿಗಳಲ್ಲಿ  ಒಂದು. ಇದು ಬೇಟೆಯಾಡುವುದರಲ್ಲಿ ಹೆಸರುವಾಸಿಯಾಗಿದೆ. ತನಗಿಂತ ದೊಡ್ಡದಾದ ಪ್ರಾಣಿಗಳನ್ನು ಬೇಟೆಯಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಅದರ ಉಗುರುಗಳು ಮತ್ತು ರೆಕ್ಕೆಗಳು ಅಪಾರ ಶಕ್ತಿಯನ್ನು ಹೊಂದಿದ್ದು,  ಇದು ದೊಡ್ಡ ಬೇಟೆಯನ್ನು ಮತ್ತು ಸಣ್ಣ ಮಕ್ಕಳನ್ನು ಕೂಡ ಹಿಡಿದು ಸಾಗಿಸಲು ಸಹಾಯ ಮಾಡುತ್ತದೆ. ಇತ್ತೀಚೆಗೆ ಹದ್ದೊಂದು ಚಿಕ್ಕ ಮಗುವನ್ನು ಹಿಡಿಯಲು ಬಂದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral video) ಆಗಿದೆ. ಇದನ್ನು ಕಂಡು ಅನೇಕರು ಆಘಾತಗೊಂಡಿದ್ದಾರೆ.

ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ಹರಿದಾಡುತ್ತಿರುವ ಈ ವೈರಲ್ ವಿಡಿಯೊ ಎಲ್ಲರನ್ನು ದಿಗ್ಭ್ರಮೆಗೊಳಿಸುವಂತಿದೆ.  ಹದ್ದು ನದಿಯೊಂದರ ಬಳಿ ಆಟವಾಡುತ್ತಾ ನಿಂತಿದ್ದ ಮಗುವನ್ನು ಹಿಡಿಯಲು ಪ್ರಯತ್ನಿಸುವ ಆಘಾತಕಾರಿ ದೃಶ್ಯವೊಂದು ಸೆರೆಯಾಗಿದೆ.

ಈ ವೈರಲ್ ವಿಡಿಯೊದಲ್ಲಿ ಸಣ್ಣ ಮಗುವೊಂದು ನೀರಿನ ಬಳಿ ನಿಂತಿದೆ. ಮೇಲೆ ಹಾರಾಡುತ್ತಿರುವ ಹದ್ದು ಮಗುವನ್ನು ತಿನ್ನಲು ಹೊಂಚು ಹಾಕಿ ವೇಗವಾಗಿ ಕೆಳಗೆ ಬಂದು ಪ್ರಾಣಿಗಳು ಮತ್ತು  ಮೀನುಗಳಂತೆ ಅದು ಮಗುವನ್ನು ಹಿಡಿಯಲು ಪ್ರಯತ್ನಿಸಿದೆ. ಅದೃಷ್ಟವಶಾತ್, ಹತ್ತಿರದಲ್ಲಿದ್ದ ವ್ಯಕ್ತಿಯೊಬ್ಬರು ಮುಂಬರುವ ಅಪಾಯವನ್ನು ಗಮನಿಸಿ ಬಹಳ ವೇಗವಾಗಿ  ಸಮಯಕ್ಕೆ ಸರಿಯಾಗಿ ಮಗುವನ್ನು ಹಿಡಿದು ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ. ಇದರಿಂದ ದುರಂತ ಘಟನೆ ನಡೆಯುವುದು ತಪ್ಪಿದೆ.

ಇದನ್ನೂ ಓದಿ:ಗಲ್ಲ ಗಿಂಡಿದ ಗೆಳೆಯನಿಗೆ ಕಪಾಳಮೋಕ್ಷ ಮಾಡಿದ ಮದುಮಗ? ಗಂಡನ ಪ್ರತಾಪಕ್ಕೆ ಬೆಚ್ಚಿ ಬಿದ್ದ ವಧು; ವಿಡಿಯೊ ನೋಡಿ

ಈ ವಿಡಿಯೊಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲು ಇದನ್ನು ಎಡಿಟ್ ಮಾಡಲಾಗಿದೆ ಎಂದು ಕೆಲವು ವೀಕ್ಷಕರು ಊಹಿಸಿದ್ದಾರೆ. ಆದರೆ  ಇದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ತಮ್ಮ ಮಕ್ಕಳ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂಬುದನ್ನು ಈ ವಿಡಿಯೊ ತಿಳಿಸುತ್ತದೆ.