ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಂಗಡಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ ರಾಬರಿ! ಶಾಕಿಂಗ್‌ ವಿಡಿಯೊ ಇಲ್ಲಿದೆ

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಹಾಡಹಗಲೇ ಕಳ್ಳನೊಬ್ಬ ಗ್ರಾಹಕನ ವೇಷದಲ್ಲಿ ಮೊಬೈಲ್ ಅಂಗಡಿಗೆ ಬಂದು ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ 50,000 ರೂ.ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಅಂಗಡಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ ರಾಬರಿ!

Profile pavithra May 1, 2025 1:50 PM

ಲಖನೌ: ಗ್ರಾಹಕರ ಸೋಗಿನಲ್ಲಿ ಬಟ್ಟೆ ಅಂಗಡಿ, ಚಿನ್ನದಂಗಡಿ ಹಾಗೂ ಬ್ಯಾಂಕ್‌ಗಳಿಗೆ ನುಗ್ಗಿ ದರೋಡೆ ಮಾಡುವ ಪ್ರಕರಣ ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಇಂತಹದೊಂದು ಕಳ್ಳತನದ ಘಟನೆ ನಡೆದಿದೆ. ಹಾಡಹಗಲೇ ಕಳ್ಳನೊಬ್ಬ ಗ್ರಾಹಕನ ವೇಷದಲ್ಲಿ ಮೊಬೈಲ್ ಅಂಗಡಿಗೆ ಬಂದು ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ 50,000 ರೂ.ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಅಂಗಡಿ ಮಾಲೀಕ ಕ್ಯಾಶ್ ತೆಗೆಯುವಾಗ ದರೋಡೆಕೋರ ಅಂಗಡಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ ಹಣದೊಂದಿಗೆ ಓಡಿಹೋಗಿದ್ದಾನೆ. ಅಂಗಡಿಯ ಮಾಲೀಕ ಅವನನ್ನು ಬೆನ್ನಟ್ಟಿಕೊಂಡು ಹೋಗಿರುವುದು ಸೆರೆಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ವರದಿ ಪ್ರಕಾರ, ಬಿಜ್ನೋರ್‌ನ ಸುಹೇಲ್ ಎಂದು ಗುರುತಿಸಲಾದ ವ್ಯಕ್ತಿಯ ಮೊಬೈಲ್ ಅಂಗಡಿಯಲ್ಲಿ ದರೋಡೆ ನಡೆದಿದೆ. ಗ್ರಾಹಕನಂತೆ ನಟಿಸಿ ವ್ಯಕ್ತಿಯೊಬ್ಬ ಸುಹೇಲ್ ಮೊಬೈಲ್ ಅಂಗಡಿಗೆ ಬಂದಿದ್ದಾನೆ. ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಬಂದ ವ್ಯಕ್ತಿಯೊಬ್ಬ ತನ್ನ ಮೊಬೈಲ್‌ಗೆ ರೀಚಾರ್ಜ್ ಮಾಡುವಂತೆ ಸುಹೇಲ್‍ಗೆ ಹೇಳಿದ್ದಾನಂತೆ. ಸುಹೇಲ್ ರೀಚಾರ್ಜ್‌ ಮಾಡುತ್ತಿದ್ದಾಗ, ಗ್ರಾಹಕನ ಸೋಗಿನಲ್ಲಿದ್ದ ವ್ಯಕ್ತಿ ತನ್ನ ಜಾಕೆಟ್‍ನಲ್ಲಿ ಅಡಗಿಸಿಟ್ಟಿದ್ದ ಕೆಂಪು ಮೆಣಸಿನ ಪುಡಿಯನ್ನು ಹೊರತೆಗೆದು ಸುಹೇಲ್ ಕಣ್ಣುಗಳಿಗೆ ಎರೆಚಿದ್ದಾನೆ. ಕೊನೆಗೆ ಡ್ರಾಯರ್‌ನಿಂದ 50,000 ರೂ.ಗಳನ್ನು ತೆಗೆದುಕೊಂಡು ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದಾನೆ.ಸುಹೇಲ್ ಕಳ್ಳನನ್ನು ಬೆನ್ನಟ್ಟಲು ಪ್ರಯತ್ನಿಸಿದ್ದಾನೆ. ಆದರೆ, ಅವನಿಗೆ ಕಳ್ಳನನ್ನು ಹಿಡಿಯಲು ಸಾಧ್ಯವಾಗಲಿಲ್ಲವಂತೆ.

ಈ ಸುದ್ದಿಯನ್ನೂ ಓದಿ:Viral Video: ಪ್ರೀತಿಯ ತಾತನನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ಪೈಲಟ್‌- ಈ ಹೃದಯಸ್ಪರ್ಶಿ ವಿಡಿಯೊ ವೈರಲ್!

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಬಗ್ಗೆ ತನಿಖೆ ಶುರುಮಾಡಿದ್ದಾರೆ. ಈ ಘಟನೆಯು ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದರೋಡೆಕೋರನನ್ನು ಗುರುತಿಸಲು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರಂತೆ.