ಬೆಂಗಳೂರು : ಮದುವೆಯ ಬಂಧ ಪವಿತ್ರವಾದದ್ದು. ಎರಡೂ ಕಡೆಯ ನೆಂಟರಿಷ್ಟರೆಲ್ಲಾ ಸೇರಿ ಸಂತೋಷ ಪಡುವ ದಿನ. ಇನ್ನು ಹೆಣ್ಣು-ಗಂಡಿನ ಪಾಲಿಗೆ ಈ ದಿನ ಜೀವನಪರ್ಯಂತ ನೆನಪಿನಲ್ಲಿಟ್ಟುಕೊಳ್ಳುವಂಥ ಶುಭಗಳಿಗೆ. ಆದರೆ ಇಲ್ಲಿ ನಡೆದ ಮದುವೆ ವಿಡಿಯೊ ನೋಡಿದರೆ ವಧು ಹಾಗೂ ವರನ ಪಾಲಿಗೆ ಇದೊಂದು ಕಹಿ ದಿನವಾಗಿದೆ. ಇದು ಹಳೆಯ ವಿಡಿಯೊವಾದರೂ ಕೂಡ ಇದೂ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ವೈರಲ್ (Viral Video)ಆಗಿದೆ.
ಈ ವೈರಲ್ ಆಗಿರುವ ವಿಡಿಯೊದಲ್ಲಿ ವರನು ತನ್ನ ವಧುವಿನ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟಲು ಬಂದಾಗ ವಧು ಅದನ್ನು ತಡೆದು ಮದುವೆ ನಿಲ್ಲಿಸುವಂತೆ ಹೇಳಿದ್ದಾಳೆ. ಆಕೆಯ ಕುಟುಂಬದವರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಆಕೆ ಅವರ ಮಾತನ್ನು ಕೇಳದೆ ಮಂಗಳಸೂತ್ರವನ್ನು ಹಿಂದೆ ತಳ್ಳಿದ್ದಾಳೆ. ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ವಧುವಿನ ನಡವಳಿಕೆ ಕಂಡು ಅಲ್ಲಿದ್ದವರು ಆತಂಕಗೊಂಡಿದ್ದಾರೆ.
A bride called off her wedding just when the groom was about to tie the Mangalasutra around her neck, at a marriage hall at #Chikkabalyadakere village in #Hosadurga taluk #Chitradurga on Thursday. The girl claimed that she wanted to pursue her studies and hence, did not want to… pic.twitter.com/yVrAGTZ2zK
— Hate Detector 🔍 (@HateDetectors) December 11, 2023
ಈ ವಿಡಿಯೊವನ್ನು “ಹೇಟ್ ಡಿಟೆಕ್ಟರ್” ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸುಗಮವಾಗಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ವಧುವಿನ ವಿಚಿತ್ರ ವರ್ತನೆಯಿಂದ ಮದುವೆ ಮನೆಯ ವಾತಾವರಣವೇ ಹಾಳಾಗಿ ಬಿಟ್ಟಿತು. ಇನ್ನು ಈ ಮದುವೆ ಮುರಿದು ಬೀಳಲು ಕಾರಣ ವಧುವಿನ ಓದು. ಓದಿಗಾಗಿ ವಧು ಮದುವೆಯನ್ನು ನಿರಾಕರಿಸಿದ್ದಾಳೆ ಎನ್ನಲಾಗಿದೆ.
ವಧುವಿನ ಮನಸ್ಸನ್ನು ಬದಲಾಯಿಸಲು ಅವಳ ಕುಟುಂಬ ಮತ್ತು ವರನ ಕಡೆಯವರು ಎಷ್ಟೇ ಪ್ರಯತ್ನಿಸಿದರೂ, ವಧು ದೃಢವಾಗಿ ನಿರ್ಧಾರ ಮಾಡಿ ಮದುವೆ ಆಗುವುದಿಲ್ಲ ಎಂಬುದಾಗಿ ತಿಳಿಸಿದ್ದಾಳೆ. ಇದರಿಂದಾಗಿ ಕೊನೆಗೆ ಮದುವೆಯನ್ನು ನಿಲ್ಲಿಸಲಾಯಿತು. ಇದು ಎರಡು ಕುಟುಂಬಗಳ ನಡುವೆ ಜಗಳಕ್ಕೆ ಕೂಡ ಕಾರಣವಾಯಿತಂತೆ.
ಈ ವಿಡಿಯೊಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಅನೇಕ ಬಳಕೆದಾರರು ವಧುವನ್ನು ಹೊಗಳಿದರೆ, ಇನ್ನು ಕೆಲವರು ಅವಳ ಇಂತಹ ಕೊನೆಯ ಕ್ಷಣದಲ್ಲಿ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಕಿಡಿಕಾರಿದ್ದಾರೆ. ಒಬ್ಬ ಬಳಕೆದಾರರು, “ಆ ಹುಡುಗಿಗೆ ಅಭಿನಂದನೆಗಳು. ಪ್ರತಿಯೊಬ್ಬ ಹುಡುಗಿಯೂ ತನ್ನ ಹಕ್ಕುಗಳು ಮತ್ತು ಇಷ್ಟದಂತೆ ಬದುಕಬೇಕು” ಎಂದಿದ್ದಾರೆ. ಇನ್ನೊಬ್ಬರು , “ನಿಶ್ಚಿತಾರ್ಥ ಮಾಡಿಕೊಳ್ಳುವ ಮೊದಲು ಅವಳು ಈ ನಿರ್ಧಾರ ಮಾಡಿದ್ದರೆ ಸರಿಯಾಗುತ್ತಿತ್ತು. ಮದುವೆಯ ದಿನದಂದು ಆಕೆಯ ಕುಟುಂಬ ಮತ್ತು ವರನ ಕುಟುಂಬವು ಮದುವೆಯ ಸಿದ್ಧತೆಗಳಿಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿದ ನಂತರ ಈ ರೀತಿ ಮಾಡಬಾರದಾಗಿತ್ತು” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಸ್ಟರ್ ಆಗಿದ್ದರ ಹಿಂದಿದೆ ದುರಂತ ಪ್ರೇಮ ಕತೆ
ಈ ವಧು-ವರನ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಕೆಲವರು ವಧುವಿನ ಧೈರ್ಯವನ್ನು ಶ್ಲಾಘಿಸಿದರೆ, ಇತರರು ಪರಿಸ್ಥಿತಿಯನ್ನು ವಿಭಿನ್ನವಾಗಿ ನಿಭಾಯಿಸಬಹುದಿತ್ತು ಎಂದು ಹೇಳಿದ್ದಾರೆ.