Thursday, 31st October 2024

Viral Video: ವಡಾ ಪಾವ್‌ಗೆ ಕೊರಿಯಾ ಯುವತಿ ಕೊಟ್ಟ ಹೊಗಳಿಕೆ, ರೇಟಿಂಗ್ಸ್‌ ಫುಲ್ ವೈರಲ್‌!

Viral Video

ಕೆಲ್ಲಿ ಎಂಬ ಕೊರಿಯಾದ ಹುಡುಗಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿ ದೇಶದ ಹಲವು ಕಡೆ ಪ್ರಯಾಣ ಮಾಡಿದ ವಿಡಿಯೊಗಳನ್ನು ಹಂಚಿಕೊಂಡಿದ್ದಾಳೆ. ಅವಳ ಇತ್ತೀಚಿನ ವಿಡಿಯೊವೊಂದರಲ್ಲಿ, ಆಕೆಗೆ ತುಂಬಾ ಇಷ್ಟವಾದ ಮಹಾರಾಷ್ಟ್ರದ ಖಾದ್ಯ ‘ವಡಾ ಪಾವ್’ ಅನ್ನು ತಿಂದಿದ್ದಾಳೆ. ಹಾಗೇ  ಅದನ್ನು ಭಾರತದ ಬರ್ಗರ್ ಎಂದು ಕೂಡ ಕರೆದಿದ್ದಾಳೆ.  ಆಕೆ ಭಾರತದ ರಸ್ತೆಬದಿಯ ಅಂಗಡಿಯಲ್ಲಿ ಮೊದಲ ಬಾರಿಗೆ ಆಹಾರದ ರುಚಿ ನೋಡಿದ್ದು, ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೊ ಮೂಲಕ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾಳೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ವಿಡಿಯೊದ ಶುರುವಿನಲ್ಲಿ ಮೊದಲಿಗೆ, ಕೆಲ್ಲಿ ಬೀದಿಯ ಫುಡ್‌ ಕಾರ್ಟ್‌ಗೆ ಬಂದು ಅಲ್ಲಿ ಇಟ್ಟಿದ್ದ ವಸ್ತುಗಳನ್ನು ಗಮನಿಸಿದ್ದಾಳೆ. ನಂತರ ಅವಳು ಅಲ್ಲಿ ಇಟ್ಟಿದ್ದ ವಡಾ ಪಾವ್‌ ಅನ್ನು ನೋಡಿ ಅದೇನೆಂದು ಅಂಗಡಿಯವನ ಬಳಿ ಕೇಳಿದ್ದಾಳೆ. ನಂತರ ಆಕೆ  ಆ ಖಾದ್ಯದ ಹೆಸರನ್ನು ತನ್ನದೇ ಆದ  ಶೈಲಿಯಲ್ಲಿ “ವಡಾ ಪಾವ್” ಎಂದು ಹೇಳಿದ್ದಾಳೆ. ನಂತರ ವಡಾ ಪಾವ್‌ ರುಚಿಗೆ ಮನಸೋತು 10/10 ರೇಟಿಂಗ್ ನೀಡಿ ವಡಾಪಾವ್‌ ತನಗೆ ತುಂಬಾ ಇಷ್ಟ ಎಂದು ವಿಡಿಯೊದ ಮೂಲಕ ಹೇಳಿದ್ದಾಳೆ.

ಈ ವಿಡಿಯೊವನ್ನು ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ ಕೆಲ್ಲಿ ಇದಕ್ಕೆ  “ನಾನು ಭಾರತೀಯ ಬರ್ಗರ್ ಅನ್ನು ತುಂಬಾ ಇಷ್ಟಪಡುತ್ತೇನೆ” ಎಂಬ ಶೀರ್ಷಿಕೆ ನೀಡಿದ್ದಾಳೆ.  ಖಾದ್ಯದ ಬಗ್ಗೆ ಆಕೆಗಿರುವ ಉತ್ಸಾಹ ಮತ್ತು ಪ್ರೀತಿಯನ್ನು ನೋಡಿದ ವಡಾ ಪಾವ್ ಮಾರಾಟಗಾರ ಅದನ್ನು ಅವಳಿಗೆ ಉಚಿತವಾಗಿ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಅವಳು ಮತ್ತಷ್ಟು ಸಂತೋಷಪಟ್ಟಿದ್ದಾಳೆ.

ಇದನ್ನೂ ಓದಿ:ತಂದೆ-ಮಗಳ ಬೈಕ್‌ ರೈಡಿಂಗ್‌; ಆಕ್ರೋಶಗೊಂಡ ಜನ ವಿಡಿಯೊ ನೋಡಿ

ಈ ವಿಡಿಯೊವನ್ನು ಕೆಲ್ಲಿ  ಅಕ್ಟೋಬರ್ ಆರಂಭದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಇದು  ಒಂದು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಮತ್ತು ಅನೇಕರು ಈ ವಿಡಿಯೊವನ್ನು ಲೈಕ್‌ ಮಾಡಿದ್ದಾರೆ.