Saturday, 16th November 2024

Viral Video: ಮನದನ್ನೆಯ ಜತೆ ಕಾರಿನಲ್ಲಿದ್ದಾಗ ಮನೆಯಾಕೆಯ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸರ್‌ಪಂಚ್‌; ಫೈಟಿಂಗ್‌ ವಿಡಿಯೊ ನೋಡಿ

ಭೋಪಾಲ್: ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧದ ಪ್ರಕರಣ ಹೆಚ್ಚೆಚ್ಚು ವರದಿಯಾಗುತ್ತಿದೆ. ಜತೆಗೆ ಇದಕ್ಕೆ ಸಂಬಂಧಿಸಿದಂತೆ ಗಲಾಟೆ, ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಳ್ಳುವ ಪ್ರಸಂಗವೂ ನಡೆಯುತ್ತಿದೆ. ಇದಕ್ಕೊಂದು ಲೇಟೆಸ್ಟ್‌ ಉದಾಹರಣೆಯೆಂಬಂತೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಈ ʼಅಕ್ರಮ ಸಂಬಂಧʼಕ್ಕೆ ಸಂಬಂಧಿಸಿದ ಬೀದಿ ಜಗಳವೊಂದರ ವಿಡಿಯೊ ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ (Viral Video) ಆಗುತ್ತಿದೆ.

ವಿಷಯ ಏನಪ್ಪಾ ಅಂದ್ರೆ, ಆ ವಿವಾಹಿತ ಪಾರ್ಟ್‌ ಟೈಮಿಗೊಂದು ಇರ್ಲಿ ಎಂದು ಇನ್ನೊಬ್ಬಳ ಒತೆ ʼಫ್ರೆಂಡ್‌ ಶಿಪ್‌ʼ ಮೆಂಟೇನ್‌ ಮಾಡ್ಕೊಂಡಿದ್ದ. ಆದ್ರೆ ಅವರಿಬ್ರ ಬ್ಯಾಡ್‌ ಟೈಮೋ ಅಥವಾ ಆತನ ಪತ್ನಿಯ ಗುಡ್‌ ಟೈಮೋ ಗೊತ್ತಿಲ್ಲ! ಈ ಅಮರ ಪ್ರೇಮಿಗಳು ಒಟ್ಟಿಗೆ ಕಾರಲ್ಲಿ ಅದೆಲ್ಲಿಗೋ ಹೋಗ್ತಿದ್ದಾಗ, ನಡು ರಸ್ತೆಯಲ್ಲೇ ಪತ್ನಿ ಧುತ್ತನೆ ಪ್ರತ್ಯಕ್ಷಳಾಗಿದ್ದಾಳೆ.

ತನ್ನ ಗಂಡನ ಜತೆ ಅದ್ಯಾರೋ ಸುಬ್ನಾತಿ ಫ್ರಂಟ್‌ ಸೀಟಲ್ಲಿ ಕೂತ್ಕೊಂಡು ಹೋಗೋದನ್ನು ಕಂಡು ಕೆಂಡಾಮಂಡಲವಾಗಿದ್ದಾಳೆ. ಆಮೇಲೆ ನಡೆದದ್ದು ʼರುಬ್ಬೋ ವರ್ಕ್‌ʼ! ಎಲ್ರೂ ನೋಡ್ತಿದ್ದ ಹಾಗೆ ಕಾರನ್ನು ನಿಲ್ಲಿಸಿ ಡೋರನ್ನು ತೆಗೆದು ಪತಿಯ ಗರ್ಲ್‌ ಫ್ರೆಂಡ್‌ನ ಚಳಿ ಬಿಡಿಸಿದ್ದಾಳೆ. ಇಷ್ಟೆಲ್ಲ ನಡೀತಿದ್ರೆ ಪಾಪಾ ಪತಿರಾಯ ಡ್ರೈವರ್‌ ಸೀಟಲ್ಲಿ ಕೂತ್ಕೊಂಡು ಪೆಚ್ಚುಮೋರೆ ಹಾಕ್ಕೊಂಡು ನೋಡಿಯೇ ಬಾಕಿ.

ಸರಪಂಚನಾಗಿರುವ ಜಿತೇಂದ್ರ ಮಾಲಿ ಕಳೆದ ಕೆಲವು ದಿನಗಳಿಂದ ಪೂಜಾ ಎಂಬಾಕೆಯ ಜತೆ ಚಾಟ್‌ ಮಾಡ್ತಿದ್ದ. ಇದು ಆತನ ಪತ್ನಿ ಉಷಾ ಆರ್ಯಳ ಗಮನಕ್ಕೆ ಬಂದಿದೆ. ಆವಾಗಿಂದ್ಲೆ ತನ್ನ ಪತಿಯ ಚಲನವಲನಗಳ ಮೇಲೊಂದು ಕಣ್ಣಿಟ್ಟಿದ್ದಳು. ಈ ಹಿನ್ನೆಲೆಯಲಲಿ ಅದೊಂದು ದಿನ ತನ್ನ ಪತಿಯನ್ನು ಫಾಲೋ ಮಾಡ್ಕೊಂಡು ಹೋದಾಗ ಈ ಸರಪಂಚನ ʼಎಕ್ಸ್‌ ಟ್ರಾʼ ಟ್ಯಾಲೆಂಟ್‌ ಬೆಳಕಿಗೆ ಬಂದಿದೆ.

ʼಪತಿ-ಪತ್ನಿ ಹಾಗೂ ಆಕೆʼಯ ಈ ಬೀದಿಜಗಳದ ವಿಡಿಯೊವನ್ನು ನೀಟಾಗಿ ರೆಕಾರ್ಡ್‌ ಮಾಡ್ಕೊಂಡು ಇಂದೋರ್‌ ಹೈಲೈಟ್ಸ್‌ ಅನ್ನೋ ಚಾನೆಲ್‌ ತನ್ನ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಇದೀಗ ಸರಪಂಚನ ಎಕ್ಸ್‌ ಟ್ರಾ ಮೆರಿಟಲ್‌ ಅಫೇರ್‌ನ ಬೀದಿ ಜಗಳವನ್ನು ʼಪ್ರಪಂಚʼವೇ ಬಾಯಿ ಚಪ್ಪರಿಸಿಕೊಂಡು ನೋಡುತ್ತಿದೆ!

ಇದನ್ನೂ ಓದಿ: Dehradun Car Accident: ಡೆಹ್ರಾಡೂನ್‌ ಕಾರು ಅಪಘಾತ; ಸುಳ್ಳು ಸುದ್ದಿ ಹರಡಬೇಡಿ ಎಂದು ಬದುಕುಳಿದವನ ತಂದೆಯಿಂದ ವಿನಂತಿ

ಕಾರಿನಲ್ಲೇ ತನ್ನ ಪತಿಯ ಪ್ರೇಯಸಿಯ ಮೇಲೆ ಪತ್ನಿ ಯದ್ವಾ ತದ್ವಾ ಬ್ಯಾಟಿಂಗ್‌ ಮಾಡ್ತಿದ್ರೆ, ಪಾಪಾ ಆ ಹುಡುಗಿ, ʼʼನೀನ್ಯಾರು? ನಿನ್ನ ಪರಿಚಯವೇ ನಂಗಿಲ್ಲ!ʼʼ ಎಂದು ಪಂಡರಿಬಾಯಿ ರೇಂಜಿಗೆ ಪೋಸ್‌ ಕೊಟ್ಟಿದ್ದಾಳೆ! ಆಗ ಅಲ್ಲೇ ಇದ್ದ ಕೆಲವರು, ʼʼನಾವು ಯಾರೆಂದು ಪೊಲೀಸ್‌ ಸ್ಟೇಷನ್‌ನಲ್ಲಿ ಹೇಳ್ತೇವೆʼʼ ಎಂದು ಥೇಟ್‌ ರವಿಶಂಕರ್‌ ಸ್ಟೈಲಲ್ಲಿ ಆವಾಜ್‌ ಹಾಕಿದ್ದಾರೆ!

ಇನ್ನೊಂದು ಇಂಟರೆಸ್ಟಿಂಗ್‌ ವಿಚಾರವೆಂದ್ರೆ, 45 ವರ್ಷದ ಈ ಜಿತೇಂದ್ರ ಮಾಲಿಗೆ ಉಷಾ ಆರ್ಯ ಎರಡನೇ ಪತ್ನಿಯಂತೆ! ಈ ಜಿತೇಂದ್‌ ತನ್ನ ಪ್ರೇಯಸಿ ಜತೆ ಇಂದೋರ್‌ ರೋಡ್‌ನಲ್ಲಿರುವ ಲಾಲ್‌ ಗೇಟ್‌ ಹೊಟೇಲ್‌ನಲ್ಲಿ ಇರುವ ವಿಚಾರ ತಿಳಿದು ಅವರನ್ನು ಫಾಲೋ ಮಾಡ್ಕೊಂಡು ಬಂದಾಗ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.