Thursday, 24th October 2024

Viral Video: ಮೊಬೈಲ್ ಕಳ್ಳನನ್ನು ಹಿಡಿದು ತಕ್ಕ ಶಾಸ್ತಿ ಮಾಡಿದ ಮಹಿಳೆ; ವಿಡಿಯೊ ವೈರಲ್

Viral Video

ಉತ್ತರಪ್ರದೇಶ: ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್‍ನಲ್ಲಿ ಕಳ್ಳನೊಬ್ಬ ಮಹಿಳೆಯ ಮೊಬೈಲ್ ಅನ್ನು ಕದಿಯಲು ಯತ್ನಿಸಿದ್ದು ಕೊನೆಗೆ ಮಹಿಳೆಯ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video ) ಆಗಿದೆ. ಜನರು ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೊದಲ್ಲಿ  ಮೊಬೈಲ್ ಕಳ್ಳನನ್ನು ಮಹಿಳೆ ನಿರ್ಭೀತಿಯಿಂದ ಎದುರಿಸಿ ಆತನನ್ನು ಹಿಗ್ಗಾಮಗ್ಗಾ ಥಳಿಸಿದ್ದಾರೆ. ಈ ವಿಡಿಯೊದಲ್ಲಿ ಮಹಿಳೆಯ ಧೈರ್ಯ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಕಳ್ಳನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ವರದಿ ಪ್ರಕಾರ ಉತ್ತರ ಪ್ರದೇಶದ ಮೀರತ್‍ನ ಸದರ್ ಬಜಾರ್ ಪ್ರದೇಶದ ಸೋಟಿಗಂಜ್ ಜಗದೀಶ್ ಶರಣ್ ಶಾಲೆಯ ಬಳಿ ಈ ಘಟನೆ ನಡೆದಿತ್ತು ಎನ್ನಲಾಗಿದೆ.  ಮಹಿಳೆ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಳ್ಳ ಮಹಿಳೆಯ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಲು ಪ್ರಯತ್ನಿಸುತ್ತಿದ್ದಾನೆ.

ಇದನ್ನೂ ಓದಿ:ನಿತ್ಯ ರಾತ್ರಿ ಮೂರು ಬಾರಿ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಯ ಕಾಟ; ಪತಿ ಮಾಡಿದ್ದೇನು?

ಆಗ ಮಹಿಳೆಯು, ಅವನನ್ನು ಹಿಡಿದು ಹಿಗ್ಗಾಮಗ್ಗಾ ಥಳಿಸಿದ್ದಾರೆ. ಈ ಘಟನೆಯ ವಿಡಿಯೊವನ್ನು ಯಾರೋ ತಮ್ಮ ಮೊಬೈಲ್‍ನಲ್ಲಿ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್ ಆಗಿದೆ. ನೆಟ್ಟಿಗರು ಮಹಿಳೆಯ ಧೈರ್ಯ, ಸಾಹಸವನ್ನು ಕಂಡು ಹೊಗಳಿದ್ದಾರೆ.