ನವದೆಹಲಿ : ‘ಸ್ತ್ರೀ 2’ ಚಿತ್ರದ ‘ಆಜ್ ಕಿ ರಾತ್’ ಹಾಡಿಗೆ ಈಗಾಗಲೇ ಸಾಕಷ್ಟು ಜನರು ತಮ್ಮ ಶೈಲಿಯಲ್ಲೇ ಕುಣಿದ ವಿಡಿಯೊ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಮಹಿಳೆಯೊಬ್ಬರು ಮೆಟ್ರೋದಲ್ಲಿ ಕುಣಿಯುತ್ತಿರುವ ವಿಡಿಯೊ ಈ ವಾರ ವೈರಲ್ (Viral Video)ಆಗಿದೆ. ಈ ವಿಡಿಯೊಗೆ ಅನೇಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೆಲವರು ಮಹಿಳೆಯ “ಧೈರ್ಯ” ವನ್ನು ಹೊಗಳಿದರೆ, ಇನ್ನೂ ಕೆಲವರು ಅವಳ ಈ ಕೆಲಸವನ್ನು ಟೀಕಿಸಿ ಇದು ಸಾರ್ವಜನಿಕರಿಗೆ ಮಾಡುವ ಉಪದ್ರವ ಎಂದು ತಿಳಿಸಿದ್ದಾರೆ.
ಈ ವಿಡಿಯೊವನ್ನು _sahelirudra ಎಂಬುವವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊಗೆ “ಆನ್ ಪಬ್ಲಿಕ್ ಡಿಮ್ಯಾಂಡ್” ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೊವನ್ನು ಇತ್ತೀಚೆಗೆ ಪೋಸ್ಟ್ ಮಾಡಲಾಗಿದ್ದು, ಈಗಾಗಲೇ ಇನ್ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ ವೀಕ್ಷಣೆಗಳು ಮತ್ತು 28,000 ಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ.
ಮೆಟ್ರೋ ಬೋಗಿಯ ಮಧ್ಯದಲ್ಲಿ ಮಹಿಳೆ ‘ಆಜ್ ಕಿ ರಾತ್’ ಹಾಡಿಗೆ ಬಹಳ ಉತ್ಸಾಹದಿಂದ ಕುಣಿದಿದ್ದಾಳೆ. ಇದಕ್ಕೆ ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅವರಲ್ಲೊಬ್ಬರು ವಿಡಿಯೊಗೆ ಕಾಮೆಂಟ್ ಮಾಡಿ, “ಇದು ಸಾರ್ವಜನಿಕರಿಗೆ ಮಾಡುತ್ತಿರುವ ಉಪದ್ರವ ಎಂದು ಹೇಳಿದ್ದಾರೆ ಮತ್ತು ಈ ನಾಚಿಕೆಗೇಡಿನ ಕೃತ್ಯವನ್ನು ನಿಮಗೆ ಮಾಡಲು ಯಾರು ಹೇಳಿದರು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ವಿವಾಹಿತ ಮಹಿಳೆಯ ಮನೆಗೆ ಬಂದ ಪ್ರಿಯಕರನಿಗೆ ಕುಟುಂಬಸ್ಥರಿಂದ ಬಿತ್ತು ಗೂಸಾ!
“ಜನರು ತಮ್ಮ ಸ್ಥಳದ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾರೆ; ನೃತ್ಯ ಪ್ರದರ್ಶನಕ್ಕೆ ಇದು ಸರಿಯಾದ ಸ್ಥಳವಲ್ಲ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, “ಮೆಟ್ರೋದಲ್ಲಿ ಈ ರೀತಿಯ ಭಿಕ್ಷಾಟನೆಗೆ ಅನುಮತಿ ಇದೆಯೇ?” ಎಂದು ಪ್ರಶ್ನಿಸಿದ್ದಾರೆ. “ದೆಹಲಿ ಮೆಟ್ರೋದಲ್ಲಿ ವಿಡಿಯೋಗ್ರಫಿಯನ್ನು ನಿಷೇಧಿಸಲಾಗಿಲ್ಲವೇ?” ಎಂದು ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ. “ಈ ಜನರ ವಿರುದ್ಧ ಪ್ರಕರಣ ದಾಖಲಿಸಬೇಕು: ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಕೆಲವು ಜನರು ಮಹಿಳೆಯ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೊಗಳಿದ್ದಾರೆ.