ನವದೆಹಲಿ : ಹಬ್ಬ ಹರಿದಿನಗಳು ಬಂದರೆ ಮನೆ ಸ್ವಚ್ಛಮಾಡುವುದು ಸರ್ವೇ ಸಾಮಾನ್ಯ. ಮೂಲೆ ಸೇರಿದ್ದ ಅದೆಷ್ಟೋ ವಸ್ತುಗಳು ಈ ಸಮಯದಲ್ಲಿ ಕಣ್ಣಿಗೆ ಬೀಳುತ್ತವೆ. ಇಲ್ಲೊಬ್ಬ ದೀಪಾವಳಿ (Deepavali) ಹಬ್ಬದ ಪೂರ್ವ ಸಿದ್ಧತೆಗಾಗಿ ಮನೆ ಕ್ಲೀನ್ ಮಾಡುತ್ತಿದ್ದ ಮಹಿಳೆಗೂ ಹಾಗೇ ಆಗಿದೆ ತಾನು ಗಂಡನಿಂದ ಬಚ್ಚಿಟ್ಟಿದ್ದ ಹಳೆ ನೋಟುಗಳು ಮನೆ ಸ್ವಚ್ಛಮಾಡುವಾಗ ದೊರಕಿದೆ. ಆಕೆ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ (Viral Video) ಆಗುತ್ತಿದೆ.
ಇನ್‌ಸ್ಟಾಗ್ರಾಮ್ (Instagram Video) ಬಳಕೆದಾರ ದೀಪ್ತಿ ಗಾಬಾ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಮಹಿಳೆ ತನಗೆ ಹಳೆ ನೋಟುಗಳ (ಅಮಾನ್ಯವಾದ ನೋಟು) ಬಂಡಲ್ ಸಿಕ್ಕಿರುವ ಕುರಿತು ಮಾಹಿತಿ ನೀಡಿದ್ದಾರೆ. ನನಗೆ ಹಳೆಯ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳು ಸಿಕ್ಕಿದೆ ಎಂದು ಹೇಳಿದ್ದಾರೆ . ಆಶ್ಚರ್ಯಕರ ಸಂಗತಿ ಏನೆಂದರೆ ಆಕೆಯೇ ಹಣವನ್ನು ಪತಿಗೆ ಗೊತ್ತಾಗದ ಹಾಗೆ ಬಚ್ಚಿಟ್ಟಿದ್ದಳು ಈಗ ಆ ನೋಟುಗಳು ದೊರಕಿದ್ದು ಅವು ಅಮಾನ್ಯೀಕರಣಗೊಂಡ ನೋಟುಗಳಾಗಿವೆ. ಇನ್ನು ವೈರಲಾಗಿರುವ ಈ ವಿಡಿಯೋಕ್ಕೆ 22 ಮಿಲಿಯನ್ ವೀಕ್ಷಣೆಗಳು ದೊರೆತಿದೆ. 50 ಸಾವಿರ ಲೈಕ್ಸ್ ಪಡೆದುಕೊಂಡಿದೆ.
ನೆಟ್ಟಿಗರಿಂದ ಭಾರೀ ಕಮೆಂಟ್ಸ್
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಹಾಸ್ಯಾಸ್ಪದವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಹಣ ಬಚ್ಚಿಟ್ಟರೆ ಮುಂದೆ ಏನಾಗುತ್ತದೆ ಎಂದು ಗೊತ್ತಾಯಿತಾ? ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ. ಮತ್ತೊಬ್ಬ ಹೆಂಡತಿಯನ್ನು ನಂಬಬಾರದು ಎಂದು ಹೇಳೋದು ಇದಕ್ಕೆ ಎಂದು ಹೇಳಿದ್ದಾರೆ. ಒಂದಿಷ್ಟು ಜನ ಸಹಾನಭೂತಿಯನ್ನು ತೋರಿದ್ದಾರೆ.
ಇದನ್ನೂ ಓದಿ : Abhishek-Aishwarya: ಐಶ್ವರ್ಯ ಜತೆ ಡಿವೋರ್ಸ್ ವದಂತಿ ಬೆನ್ನಲ್ಲೇ ಮೌನ ಮುರಿದ ಅಭಿಷೇಕ್ ಬಚ್ಚನ್; ವಿಡಿಯೋ ಫುಲ್ ವೈರಲ್
5 ಕೋಟಿ ರೂ. ನಾಶಪಡಿಸಲು ಮುಂದಾದ ಬೆಂಗಳೂರು ಪೊಲೀಸ್
ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಹಲವು ಪ್ರಕರಣಗಳಲ್ಲಿ ನಡೆದ ದಾಳಿ ವೇಳೆ ಪೊಲೀಸರು 5 ಕೋಟಿ ರೂ. ಮೌಲ್ಯದ ಹಳೇ ನೋಟುಗಳನ್ನು ವಶಕ್ಕೆ ಪಡೆದಿದ್ದರು. ಈ ಹಳೇ ನೋಟುಗಳನ್ನು ಆರ್ಬಿಐಗೆ (Reserve Bank Of India) ನೀಡಿ ಬದಲಾವಣೆಗೆ ಮುಂದಾಗಿದ್ದು ಆರ್ಬಿಐ ಕೂಡ ಹಳೇ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಈ ಹಿನ್ನೆಲೆ ಇದೀಗ ಹಳೇ ನೋಟುಗಳಿಗೆ ಬೆಂಕಿ ಇಡಲು ಪೊಲೀಸರು ತೀರ್ಮಾನಿಸಿದ್ದು ಕೋರ್ಟ್ ಮೊರೆ ಹೋಗಿದ್ದಾರೆ. ಬೆಂಗಳೂರಿನ ಹಲವು ಪ್ರಕರಣದಲ್ಲಿ 5 ಕೋಟಿಗೂ ಅಧಿಕ ಹಳೆಯ ನೋಟುಗಳನ್ನ ಸೀಜ್ ಮಾಡಲಾಗಿದೆ. ಬೇರೆ ಬೇರೆ ಪ್ರಕರಣದಲ್ಲಿ ಹಳೇ ನೋಟುಗಳು ಪತ್ತೆಯಾಗಿವೆ. ನೋಟು ಅಮಾನ್ಯೀಕರಣ ಬಳಿಕ ಹಳೇ ನೋಟುಗಳು ಬೆಲೆ ಕಳೆದುಕೊಂಡಿವೆ. ನೋಟು ಅಮಾನ್ಯೀಕರಣ ಬಳಿಕ ಬದಲಾವಣೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಕೊಟ್ಟ ಕಾಲಾವಕಾಶ ಕೂಡ ಮುಗಿದು ಹೋಗಿದೆ. ಹೀಗಾಗಿ ಹಳೇ ನೋಟುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು RBI ತಿಳಿಸಿದೆ.
ಹಳೇ ನೋಟು ಹಿನ್ನೆಲೆ ಪೊಲೀಸರು ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡೋಕು ಆಗ್ತಿಲ್ಲ. ಅತ್ತ ಆರ್ಬಿಐ ಕೂಡ ಈ ಹಣವನ್ನ ಸ್ವೀಕಾರ ಮಾಡ್ತಿಲ್ಲ. ಹೀಗಾಗಿಯೇ ಹಳೇ ನೋಟುಗಳನ್ನ ಸುಟ್ಟು ಹಾಕಲು ಪೊಲೀಸರು ನಿರ್ಧರಿಸಿದ್ದಾರೆ. ಕೋರ್ಟ್ ಅನುಮತಿ ಪಡೆದ ಬಳಿಕ ಪೊಲೀಸರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೋರ್ಟ್ ಅನುಮತಿ ಕೊಟ್ಟರೆ ಪೊಲೀಸರು ಹಳೇ ನೋಟು ನಾಶಪಡಿಸಲಿದ್ದಾರೆ.