ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ನವದಂಪತಿಯ ಫಸ್ಟ್‌ನೈಟ್‌ ವಿಡಿಯೊ! ನೆಟ್ಟಿಗರು ಏನಂದ್ರು?

ನವವಿವಾಹಿತ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಸ್ಟ್‌ನೈಟ್‌ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದು ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ.ಈ ವಿಡಿಯೊ ಈಗಾಗಲೇ 279 ಮಿಲಿಯನ್ ವ್ಯೂವ್ಸ್ ಗಳಿಸಿದೆಯಂತೆ. ಈ ವಿಡಿಯೊದಲ್ಲಿ ವರ ವಧುವಿನ ಬಗ್ಗೆ ತೋರಿದ ಪ್ರೀತಿ, ಕಾಳಜಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ನವದಂಪತಿಯ ಫಸ್ಟ್‌ನೈಟ್‌ ವಿಡಿಯೊ ಫುಲ್‌ ವೈರಲ್‌!

Profile pavithra Jun 6, 2025 8:36 AM

ನವದೆಹಲಿ: ಈಗ ಸೋಶಿಯಲ್‌ ಮೀಡಿಯಾದ ಜಮಾನ! ಲೈಕ್ಸ್‌ ಹಾಗೂ ಫಾಲೋವರ್ಸ್‌ಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.ಅದರಲ್ಲೂ ತೀರ ಖಾಸಗಿ ಅನಿಸುವ ವಿಚಾರಗಳನ್ನು ಕೂಡ ರೀಲ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಮೊದಲ ರಾತ್ರಿಯಂದು ವರನು ವಧುವಿನ ಆಭರಣ ಬಿಚ್ಚಲು ಸಹಾಯ ಮಾಡಿದ ವಿಡಿಯೊವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದನ್ನು ನೋಡಿ ನೆಟ್ಟಿಗರು ದಂಪತಿಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಇದೀಗ ಅಂಥದ್ದೇ ವಿಡಿಯೊವೊಂದನ್ನು ನವವಿವಾಹಿತ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ.

ಪಿಯೂಷ್ ಮತ್ತು ನಿಕಿತಾ ದಂಪತಿ ತಮ್ಮ ಮೊದಲ ರಾತ್ರಿಗಾಗಿ ಅಲಂಕರಿಸಲ್ಪಟ್ಟ ಬೆಡ್‌ರೂಂ ಅನ್ನು ತೋರಿಸುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ನವದಂಪತಿ ತಮ್ಮ ಕೋಣೆಗೆ ಬಂದು ಬಾಗಿಲು ಮುಚ್ಚುತ್ತಾರೆ. ನಂತರ ವಧು ಒಳಗೆ ಬಂದು ತನ್ನ ಆಭರಣಗಳನ್ನು ತೆಗೆಯುತ್ತಾಳೆ.ಆಗ ವರನು ಅವಳಿಗೆ ಈ ಕೆಲಸದಲ್ಲಿ ಸಹಾಯ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ನವದಂಪತಿಗಳ ಹನಿಮೂನ್‍ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ನವದಂಪತಿಯ ಹನಿಮೂನ್‌ ವಿಡಿಯೊವೊಂದು ಇದೇ ರೀತಿ ವೈರಲ್‌ ಆಗಿತ್ತು. ವರನೊಬ್ಬ ತನ್ನ ಪತ್ನಿಗೆ ದುಬಾರಿ ಐಫೋನ್‍ ನೀಡಿದ್ದಾನೆ. ದಂಪತಿ ತಮ್ಮ ಹನಿಮೂನ್‍ನ ಈ ಮಧುರ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ನೆಟ್ಟಿಗರ ಗಮನ ಸೆಳೆದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಗಂಡನ ಈ ಸರ್‌ಪ್ರೈಸ್‌ ಗಿಫ್ಟ್‌ ನೋಡಿ ಹೆಂಡತಿ ಫುಲ್‌ ಖುಷಿಯಾಗಿದ್ದಾಳೆ.

ಈ ಸುದ್ದಿಯನ್ನೂ ಓದಿ:Viral Video: ಕನ್ನ ಹಾಕುವ ಮುನ್ನ ಕುಣಿದು ಕುಪ್ಪಳಿಸಿದ ಕಿಲಾಡಿ ಕಳ್ಳ; ವಿಡಿಯೊ ನೋಡಿ!

ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ಲಕ್ಷಾಂತರ ವ್ಯೂವ್ಸ್‌ ಮತ್ತು ಸಾವಿರಾರು ಲೈಕ್‌ಗಳನ್ನು ಗಳಿಸಿದೆ. ಹಲವರು ವರನ ರೊಮ್ಯಾಂಟಿಕ್ ನಡೆಯನ್ನು ಹೊಗಳಿ ವಧುವನ್ನು ಅದೃಷ್ಟಶಾಲಿ ಎಂದು ಕರೆದಿದ್ದಾರೆ.