ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಹರಿದಾಸ ಹಬ್ಬದಲ್ಲಿ ಶ್ರೋತೃಗಳ ಮನತಣಿಸಿದ ದಾಸರ ಪದಗಳು
ವಿಶ್ವವಾಣಿ ಕ್ಲಬ್‌ಹೌಸ್
ಬೆಂಗಳೂರು: ಪುರಂದರದಾಸರ ದಾಸನ ಮಾಡಿಕೊ ಎನ್ನಾ… ಸ್ವಾಮಿ ಸಾಸಿರ ನಾಮದ ವೆಂಕಟ ರಮಣ. ದಾಸನ ಮಾಡಿಕೊ ಎನ್ನಾ… ಅಥವಾ ವ್ಯಾಸರಾಯರ ಕೃಷ್ಣಾ ನೀ ಬೇಗನೇ ಬಾರೋ…ಕನಕದಾಸರ ತಲ್ಲಣಿಸದಿರು ಕಂಡ್ಯ ತಾಳು ಮನವೆ… ಎಲ್ಲರನು
ಸಲಹುವನು ಇದಕೆ ಸಂಶಯ ಬೇಡ… ಮುಂತಾದ ದಾಸರ ಪದಗಳನ್ನು ಯಾರು ತಾನೇ ಕೇಳಿಲ್ಲ. ನಮ್ಮ ಮನಸ್ಸನ್ನು ದೈವೀಕತೆ ಯತ್ತ, ಅವೀನಾಭಾ ವದತ್ತ ತಿರುಗಿಸುವಲ್ಲಿ ದಾಸರ ನಾಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿದುಷಿ ರೇಖಾ ಪ್ರಸಾದ್ ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಹರಿದಾಸ ಹಬ್ಬ ಕಾರ್ಯಕ್ರಮದಲ್ಲಿ ಅವರು, ಅಪ್ರಚಲಿತ, ನೇಪಥ್ಯದಲ್ಲಿರುವ ದಾಸರು ಮತ್ತು ಅವರ ಸಾಹಿತ್ಯವನ್ನು ಹಾಡಿ, ಅಂತಹ ದಾಸ ಶ್ರೇಷ್ಠರ ಕುರಿತು ಮಾಹಿತಿ ನೀಡಿದರು. ಭಾರತದಲ್ಲಿ ಭಕ್ತಿ ಪಂಥದ ಬೆಳವಣಿಗೆಗೆ ಕರ್ನಾಟಕದ ಕೊಡುಗೆ ಅಪಾರ. ಅನೇಕ ದಾಸ ಶ್ರೇಷ್ಠರು ಸಾಹಿತ್ಯ ಕೃತಿಗಳಿಂದ ಸಾಹಿತ್ಯ ಕ್ಷೇತ್ರವನ್ನು ಮೃದ್ಧಗೊಳಿಸಿದ್ದಾರೆ.
13 ಅಥವಾ 14ನೇ ಶತಮಾನದಲ್ಲಿ, ಅಂದರೆ ವಿಜಯ ನಗರ ಸಾಮ್ರಾಜ್ಯದ ಆಳ್ವಿಕೆ ಯಲ್ಲಿ ದಾಸ ಸಾಹಿತ್ಯವು ಉಪದೇಶಾಮೃತ ವಾಗಿದ್ದವು. ಆಧ್ಯಾತ್ಮಿಕವಾಗಿ ಮಾನವನ ಭಕ್ತಿ ಯನ್ನು ಪ್ರತಿ ಪಾದಿ ಸುವಲ್ಲಿ ದಾಸರ ಪದಗಳು ಅಪಾರ ವಾಗಿ ಕೆಲಸ ಮಾಡಿದೆ ಎಂದು ಹೇಳಿದರು.
ದಾಸ ಸಾಹಿತ್ಯದ ವಿಚಾರದಲ್ಲಿ ಗುರುಗಳಾದ ಚಾಮಿ ಎಂದೇ ಕರೆಸಿಕೊಳ್ಳುತ್ತಿದ್ದ ತಿರುಮಲೆ ಶ್ರೀನಿವಾಸರಾಯರನ್ನು ಸ್ಮರಿಸಬೇಕು. ಅಪ್ರಚಲಿತದಲ್ಲಿದ್ದ ದೇವರ ನಾಮಗಳನ್ನು ಮುಂಚೂಣಿಗೆ ತಂದು, ರಾಗ ಸಂಯೋಜನೆ ಮಾಡಿ ತಮ್ಮ ಶಿಷ್ಯರಿಗೆ ಹೇಳಿಕೊಟ್ಟು
ಜನಮನಗಳಿಗೆ ತಲುಪಿಸುವ ಕೆಲಸವನ್ನು ಚಾಮಿ ಅವರು ೪೦ ವರ್ಷದಿಂದ ಮಾಡಿದ್ದಾರೆ.
ದೇವರ ನಾಮಗಳಿಗೆ ಕನ್ನಡ ಶಾಸೀಯ ಸಂಗೀತದ ರಾಗಗಳನ್ನು ಅಳವಡಿಸಿ, ಅವುಗಳನ್ನು ಶಾಸ್ತ್ರೀಯ ಕೃತಿಯಾಗಿ ಪ್ರಸ್ತುತ ಪಡಿಸುವ ಕಾರ್ಯವನ್ನು ಬಹಳ ಕಾಲದಿಂದ ಮಾಡುತ್ತಿದ್ದಾರೆ. ಅಪರೂಪದ ಅಪರೂಪದ ಆರ್ಯ ವರ್ತಿ, ವಿಜಯಸಾ ರಥಿ ಮುಂತಾದ ರಾಗಗಳನ್ನು ದೇವರ ನಾಮಗಳಿಗೆ ಸಂಯೋಜನೆ ಮಾಡಿದ್ದಾರೆ. ಶಾಸ್ತ್ರೀಯ ಸಂಗೀತ ಕಚೇರಿಯನ್ನು ದಾಸ ಸಾಹಿತ್ಯ ದಲ್ಲಿ ನಡೆಸುವಷ್ಟು ಸಾಧನೆ ಒದಗಿಸಿದ್ದಾರೆ ಎಂಬುದನ್ನು ಸ್ಮರಿಸಿಕೊಂಡರು.
ಜಗನ್ನಾಥದಾಸರ ಕೃತಿ, ಅಂಬಾತನಯಾ.. ಹೇರಂಬ.. ಕರುಣಾಂಬುದೇ ತವ ಚರಣಾಂಭುಜಕೆರ ಗುವೇ… ಎಂಬ ಗಣೇಶನ ಈ ಕೃತಿ ಯೊಂದಿಗೆ ತಮ್ಮ ಹರಿದಾಸ ಹಬ್ಬವನ್ನು ಶ್ರೋತೃಗಳಿಗೆ ಉಣಬಡಿಸಿದ ರೇಖಾ ಪ್ರಸಾದ್, ಅವರ ಪೂರ್ವಾಶ್ರಮದ ಕುರಿತು ಮಾಹಿತಿ ನೀಡಿದರು. ಜಗನ್ನಾಥದಾಸರ ಪೂರ್ವಾಶ್ರಮದ ಹೆಸರು ತಿಮ್ಮಣ್ಣ ದಾಸ ಅಥವಾ ದಾಮೋದರ ದಾಸ. 1308ರಲ್ಲಿ ಮಾನ್ವಿ ತಾಲೂಕಿನಲ್ಲಿ ಜನಿಸಿದ ಅವರು, ದ್ವೈತ ಸಿದ್ಧಾಂತವನ್ನು ಕನ್ನಡದಲ್ಲಿ ನಿರೂಪಿಸಿರುವ ಹರಿಕಥಾಮೃತಸಾರ ಗ್ರಂಥ ರಚಿಸಿದರು.
ಹರಿಗುರು ಗಳನ್ನು ಕುರಿತು ನರ್ತನ, ಹರಿವಾಣ ಸೇವೆಗೆ ಒಳಪಡುವ ಕೃತಿಗಳನ್ನೂ ರಚಿಸಿದ್ದಾರೆ ಎಂದರು. ಅಲ್ಲದೆ, ಅವರೇ
ರಚಿಸಿದ ವರದೇ ಕಾರುಣ್ಯ ಶರಧೇ.. ಕರೆದೆನ್ನ ತವ ಸನ್ನಿಧಿಯೊಳಿಟ್ಟು ಪೊರೆದೇ… ಎಂಬ ಕೃತಿಯನ್ನು ಹಾಡಿದರು. ನಂತರ ಕಾಖಂಡಕಿ ಮಹಿಪತಿದಾಸರು ರಚಿಸಿದ ಸ್ವಾಮೀ.. ನೀನೇ ಸಾರ್ವಭೌಮಾ.. ಶ್ರೀ ರಘುರಾಮ.. ಸ್ವಾಮಿ ನೀನೇ ಸಾರ್ವಭೌಮ.. ಸೋಮಶೇಖರಪ್ರಿಯ ದಿವ್ಯ ನಿನ್ನ ನಾಮ.. ಮತ್ತು ನೀನೇ ಪರಮ ಪಾವನೀ.. ನೀನೇ.. ಪಾವನೀ.. ಪಾವನೀ.. ನೀರಂಜನೀ.. ನೀನೇ
ಪರಮ ಪಾವನೀ… ರಚನೆಗಳನ್ನು ಹಾಡಿದರಲ್ಲದೆ, ಅವರ ಕುರಿತು ಮಾಹಿತಿ ನೀಡಿದರು.
ಮಹಿಪತಿ ದಾಸರು ೧೬೪೦ನೇ ಇಸವಿಯಲ್ಲಿ ಜನಿಸಿದರು. ಆದಿಲ್‌ಶಾನ ಆಸ್ಥಾನದಲ್ಲಿದ್ದ ಅವರು ಬಳಿಕ ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಿ ಸನ್ಯಾಸ ಸ್ವೀಕರಿಸಿ ಹರಿದಾಸರಾದರು ಎಂದು ಮಾಹಿತಿ ನೀಡಿದರು. ಮಹಿಪತಿ ದಾಸರ ಪುತ್ರ ಕಾಖಂಡಕಿ ಕೃಷ್ಣ ದಾಸರು ರಚಿಸಿದ ಜಯ ಜಯ ಜಯ ದೇವ ಶಂಕರಾ.. ಜಯ ಜಯ ಜಯದೇವ ಶಂಕರಾ.. ಜಯ ಪಾರ್ವತೀ ಮನೋಹರಾ.. ಗೋಪಾಲದಾಸರು ರಚಿಸಿದ ಭಾರತೀ ನೀ ಪರಿಪಾಲಿಸೇ.. ಭಾರತೀ ನೀ ಪರಿಪಾಲಿಸೇ.. ವಾರಿಜಾಂಬಕಿ ಮಾತಾ ಲಾಲಿಸೇ… ಮತ್ತು ಆವ ರೋಗವು ಎನಗೆ ದೇವ ಧನ್ವಂತ್ರೀ.. ಸಾವಧಾನದಿ ಎನ್ನ.. ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯಾ…, ನರಸಿಂಹ ವಿಠಲದಾಸರು ರಚಿಸಿದ ಪಾಲಿಸೆ ಎಂಬೇ ಗುಣಗಣೇ ಗೌರೀ… ಪಾಲಿಸೇ ಅಂಬೇ.. ತುಳಸೀರಾಮ ದಾಸರು ರಚಿಸಿದ ಅಮ್ಮಾ ಎಮ್ಮಾ ಲಕ್ಷ್ಮೀ ನನಗೇ.. ಅಭಯವ ಕೊಡು ಸೀತಮ್ಮಾ.. ಹಾಡುಗಳ ಮೂಲಕ ಶ್ರೋತೃಗಳ ಕಿವಿಗೆ ತಂಪೆರೆರೆದರಲ್ಲದೆ, ಅವರ ಕುರಿತಾದ
ಮಾಹಿತಿ ನೀಡಿದರು.
ಪ್ರಸನ್ನ ವೆಂಕಟದಾಸರು ರಚಿಸಿದ ಪಾಲಿಸೋ ಮಾಧವಾ.. ಪಾಲಿಸೋ ಮಾಧವಾ.. ಈ ತೆರದಲೀ.. ಪಾಲಿಸೋ ಮಾಧವಾ… ಹಾಗೂ ಅನಿಮಿತ್ತ ಬಂಧೂ.. ಅತಿದಯಾ ಸಿಂಧೂ.. ಆನತನಾನೆಂದೂ.. ವಿದ್ಯಾಪ್ರಸನ್ನ ತೀರ್ಥರು ರಚಿಸಿದ ಕಾಮದಾಂ ಕಮದಾ ಸನಮುಖ ದಿವಿಜಾ ಸುನುತಾಂ ಪದಯುಗಳಾಂ. ವಿಮಲಾಮತಿ ಮನಿಷಂ.. ಯದಿವಾಂಚಸಿ ಜಗದೀಶೇ.. ಜಯೇಶ ವಿಠಲ ದಾಸರು ರಚಿಸಿದ ಮನನದಿಪ ಮಹದೇವ ಮೊರೆಯ ಕೇಳೋ.. ಘನತಿಮಿರ ಸ್ಥಿತಿಯಲ್ಲಿ ಎದೆಒಡೆದು ನಿಂದಿಹೆನು.. ಹಾಗೂ ಸಾಧನದ ಚಿಂತೆ ಎನಗ್ಯಾಕೊ ದೇವಾ.. ಮಾಧವನೆ ನಿನ್ನ ನಾಮ ಧರಿಸಿಕೊಂಡಿರು ವವಗೆ…, ವೇಣುಗೋಪಾಲದಾಸರು ರಚಿಸಿದ ಪಾರ್ವತಿ ಪಾಲಿಸೆನ್ನಾ.. ಪಾರ್ವತಿ ಭಕುತರ ಸಾರಥಿ ವಂದಿಪೆ.. ಸುರಪತಿ ಷಣ್ಮುಖ ಗಣಪರ ಮಾತೆ.. ಕೃತಿಗಳನ್ನು ಹಾಡಿದರು.
ಇದರ ಜತೆಗೆ ಬಾಗೇಪಲ್ಲಿ ಶೇಷದಾಸರು, ಶ್ಯಾಮಸುಂದರ ವಿಠಲ ದಾಸರು, ಶ್ರೀದ ವಿಠಲ ದಾಸರು ಮತ್ತಿತರ ಹಾಡಿನ ಸಾಲು ಗಳನ್ನು ಗುನುಗಿದ ಅವರು, ಹೇಳುತ್ತಾ ಹೋದರೆ, ದಾಸರ ಪಟ್ಟಿ ಅಂತ್ಯವೇ ಆಗುವುದಿಲ್ಲ ಎಂದರಲ್ಲದೆ, ವರವಣಿ ರಾಮರಾಯರ
ಕೃತಿಯೊಂದಿಗೆ ಕೃಷ್ಣಾ.. ಕೃಷ್ಣಾ… ಕೃಷ್ಣಾ… ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೇ.. ಎಂಬ ಹಾಡಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
ಮಹಿಳಾ ಹರಿದಾಸರ ಪಾತ್ರ ಮಹತ್ವದ್ದು ದಾಸ ಪರಂಪರೆಯಲ್ಲಿ, ಹರಿದಾಸ ಪಂಥದಲ್ಲಿ ಮಹಿಳಾ ಹರಿದಾಸರ ಪಾತ್ರ ಕಿರಿದೇನೂ ಅಲ್ಲ. ತಮ್ಮ ಸಾವಿರಾರು ಕೃತಿಗಳ ಮೂಲಕ ದಾಸ ಸಾಹಿತ್ಯ ಲೋಕಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಇದರಲ್ಲಿ ಮೊದಲಿಗರು ಹೆಳವನಕಟ್ಟೆ ಗಿರಿಯಮ್ಮ. ಸುಮಾರು 3000 ಕೃತಿಗಳನ್ನು ರಚಿಸಿದ ಇವರನ್ನು ಭಾರತದ ಮಹಿಳಾ ಸಂತರಾದ ಮೀರಾಭಾಯಿ, ಆಂಡಾಳ್ ಮುಂತಾದವರ ಸಾಲಿಗೆ ಸೇರಿಸಬಹುದು ಎಂದರು. ಅಲ್ಲದೆ, ಅವರು ರಚಿಸಿದ ನಂಬಿದೇ.. ನಂಬಿದೇ.. ಅಂಬುಜಾಕ್ಷನೇ… ನಿನ್ನ ಭಕ್ತರಿಗೆ ಬೆಂಬಲನಾಗಿ ಇರುವನೇ…. ಮತ್ತು ಈತಂರಗರಾಗ ಹರಿವು.. ಆತಲಿಂಗನಾದ ಹರನು.. ಕೃತಿಯನ್ನು ಹಾಡಿದರು.
ಅದೇ ರೀತಿ ನಂಜನಗೂಡು ತಿರುಮಲಾಂಬ, ಮೇಲು ಕೋಟೆ ಯದುಗಿರಿಯಮ್ಮ ಊರೇಬಾಯಿ ಲಕ್ಷ್ಮೀದೇವಮ್ಮ ಅವರ ಕೃತಿಗಳನ್ನು ಹಾಡಿದ ರೇಖಾ ಪ್ರಸಾದ್, ಮಹಿಳಾ ಹರಿದಾಸರ ಕುರಿತು ಮಾಹಿತಿ ನೀಡಿದರು.
ಮುಖ್ಯಾಂಶ
ಅಪ್ರಚಲಿತದಲ್ಲಿದ್ದ ದೇವರ ನಾಮಗಳನ್ನು ಮುಂಚೂಣಿಗೆ ತಂದ ಕಾರ್ಯಕ್ರಮ
ವಿಜಯನಗರ ಅರಸರ ಕಾಲದಲ್ಲಿ ಉಪ ದೇಶಾಮೃತವಾಗಿದ್ದ ದಾಸ ಸಾಹಿತ್ಯ
ದಾಸ ಸಾಹಿತ್ಯಕ್ಕೆ ಮಹಿಳಾ ಹರಿದಾಸರ ಕೊಡುಗೆ ಬಗ್ಗೆ ವಿಶೇಷ ಉಲ್ಲೇಖ.