Wednesday, 11th December 2024

ಪರೀಕ್ಷೆ ನಿಮ್ಮ ಜೀವನವನ್ನೇ ನಿರ್ಧರಿಸಲು ಸಾಧ್ಯವಿಲ್ಲ

ಕ್ಲಬ್‌ಹೌಸ್ ಸಂವಾದ – 251

ಮಕ್ಕಳೇ ಪರೀಕ್ಷೆಗೆ ಹೆದರಬೇಡಿ ಕಾರ್ಯಕ್ರಮದಲ್ಲಿ ಡಾ.ಅನಂತ ಪ್ರಭು ಅರಿವಿನ ಉಪನ್ಯಾಸ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ಒಂದು ಪರೀಕ್ಷೆ ಯಾರ ಜೀವನವನ್ನೂ ನಿರ್ಧಾರ ಮಾಡಲು ಸಾಧ್ಯವಿಲ್ಲ. ಪರೀಕ್ಷೆ ಎಂಬುದು ಕ್ರಿಕೆಟ್ ಪಂದ್ಯ ಇದ್ದ ಹಾಗೆ.
ಆದರೆ, ಇದೊಂದು ವಿಶೇಷ ಪಂದ್ಯ. ಲೈಫ್ ಬೌಲಿಂಗ್ ಮಾಡುತ್ತದೆ. ನಿಮ್ಮ ಕೈನಲ್ಲಿ ಬ್ಯಾಟ್ ಇರುತ್ತದೆ. ಯಾವುದೇ ವಿಕೆಟ್ ಇಲ್ಲ. ಫೀಲ್ಡರ್ಸ್ ಇರುವುದಿಲ್ಲ. ಔಟ್ ಎಂಬ ವಿಚಾರವೇ ಬರುವುದಿಲ್ಲ. ನಾವೇ ಬ್ಯಾಟ್ ಬಿಟ್ಟು ಓಡಿದಾಗ ಮಾತ್ರ ಔಟ್ ಆಗಲು ಸಾಧ್ಯ. ಇಲ್ಲದೇ ಇದ್ದರೆ ಬ್ಯಾಟಿಂಗ್ ಮುಂದುವರಿಸ ಬಹುದು. ಆದರೆ, ಯಾವ ರೀತಿ ಬ್ಯಾಟಿಂಗ್ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ನಿರ್ಧಾರವಾಗುತ್ತದೆ.

ಹೀಗಾಗಿ ಜೀವನದಲ್ಲಿ ಹೆಚ್ಚು ಒತ್ತಡಗಳಿಗೆ ಒಳಗಾಗಬೇಡಿ. ಸೂಕ್ತ ತಯಾರಿಯೊಂದಿಗೆ ಪರೀಕ್ಷೆಗಳನ್ನು ಹೆದರದೆ ಎದುರಿಸಿ. ಹೀಗೆಂದು ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಮಕ್ಕಳೇ ಪರೀಕ್ಷೆಗೆ ಹೆದರಬೇಡಿ’ ವಿಶೇಷ ಕಾರ್ಯಕ್ರಮದಲ್ಲಿ ಡಾ.ಅನಂತ ಪ್ರಭು ಗುರುಪುರ ಅರಿವಿನ ಉಪನ್ಯಾಸ ನೀಡಿದರು.

ಪಂದ್ಯದಲ್ಲಿ ಎಷ್ಟು ಬಾರಿ ಬಾಲ್ ಮಿಸ್ ಮಾಡಿಕೊಂಡರೂ ಪರವಾಗಿಲ್ಲ. ನಿಮ್ಮ ಪ್ರಯ ತ್ನಕ್ಕೆ ಅನೇಕ ಅವಕಾಶ ಇದೆ. ಆದರೆ, ಪರೀಕ್ಷೆ ಎಂಬ ಪಂದ್ಯದಲ್ಲಿ ಒತ್ತಡಕ್ಕೆ ಒಳಗಾಗಿ ಬ್ಯಾಟ್ ಬಿಟ್ಟು ಓಡಬೇಡಿ. ಅದನ್ನು ಎದುರಿಸಲು ನಿಮ್ಮನ್ನು ನೀವು ತಯಾರು ಮಾಡಿ ಕೊಳ್ಳಿ. ಯಾವುದೇ ಕೆಲಸವಾಗಲಿ, ಮೊದಲ ಬಾರಿ ಮಾಡುವಾಗ ಹೆದರಿಕೆ ಆಗುತ್ತದೆ. ನಂತರ ಅಭ್ಯಾಸವಾಗುತ್ತದೆ ಎಂದರು.

ಒತ್ತಡ ಎಂದರೇನು : ಸಾವಿರಾರು ವರ್ಷಗಳ ಹಿಂದೆ ಮಾನವರು ಕಾಡಿನಲ್ಲಿ ವಾಸ ಮಾಡುತ್ತಿದ್ದರು. ಆಗ ನಮ್ಮ ಮುಂದೆ ಇದ್ದುದು ಎರಡೇ ಪ್ರಾಣಿಗಳು. ಒಂದು ದೊಡ್ಡ ಪ್ರಾಣಿ, ಮತ್ತೊಂದು ಸಣ್ಣ ಪ್ರಾಣಿ. ಆಗ ನಮ್ಮ ಮುಂದೆ ಇದ್ದುದು ಎರಡೇ ಆಯ್ಕೆ. ಸಣ್ಣ ಪ್ರಾಣಿ ಆದರೆ ದಾಳಿ ಮಾಡಬೇಕು. ದೊಡ್ಡದಾದರೆ ಓಡಬೇಕು (ಫೈಟ್ ಅಥವ ಫ್ಲೈಟ್). ಇವೆರಡಕ್ಕೂ ನಾವು ಸ್ವಲ್ಪ ಸೂಪರ್ ಹ್ಯೂಮನ್ ಆಗಬೇಕು. ಇದನ್ನು ಪ್ರಯತ್ನ ಮಾಡಲು ದೇಹದ ಎಲ್ಲಾ ಇಂದ್ರಿಯಗಳು ಎಚ್ಚರದಿಂದ ಇರಬೇಕು. ಈ ಸಂದರ್ಭದಲ್ಲಿ
ನಮ್ಮ ದೇಹದಲ್ಲಿ ‘ಎಡ್ರಿನಲ್ ಇನ್ ರಿಲೀಸ್‘ ಆಗಬೇಕಾಗುತ್ತದೆ.

ನಮ್ಮ ದೇಹದಲ್ಲಿ ಒತ್ತಡ ಆದಾಗ ಇದು ರಿಲೀಸ್ ಆಗುತ್ತದೆ. ಈ ಒತ್ತಡ ಕಾಡಿನ ಪ್ರಾಣಿಗಳ ಜತೆ ಹೊಡೆದಾಡುವಾಗ ಮಾತ್ರ ಇತ್ತು. ಅದರೆ, ಈಗ ನಗರದಲಿದ್ದಾಗಲೂ ಆಗುತ್ತಿದೆ. ಇಂದು ಪರೀಕ್ಷೇ ಸಂದರ್ಭದಲ್ಲಿ ಈ ಒತ್ತಡ ಹೆಚ್ಚು ಅಗುತ್ತಿದೆ. ಆದರೆ ನಮಗೆ
ಫೈಟ್ ಆರ್ ಫ್ಲೈಟ್ ಆಯ್ಕೆ ಇಲ್ಲ . ಆಯ್ಕೆ ಮಾಡಲಾಗದ ಕಾರಣ ಮಕ್ಕಳಲ್ಲಿ ಒತ್ತಡ ಹೆಚ್ಚಾಗಿ ಹೆಚ್ಚಾಗಿ ಹೊರಗೆ ಹಾಕಲಾಗದೆ ಆರೋಗ್ಯ ಸಮಸ್ಯೆಗಳಾಗುತ್ತಿದೆ ಎಂದು ಹೇಳಿದರು.

ಜೀವನದಲ್ಲಿ ಯಾವದೇ ಪರೀಕ್ಷೆ ಎದುರಾಗಲಿ, ಸರಿಯಾದ ತಯಾರಿ ಇಲ್ಲದಿದ್ದರೆ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ಮಕ್ಕಳನ್ನು ಒತ್ತಾಯಪೂರ್ವಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಳ್ಳಬೇಡಿ. ಅವರ ಶಕ್ತಿ ಸಾಮರ್ಥ್ಯ ಅನುಗುಣವಾಗಿ ಪರೀಕ್ಷೆಗಳಲ್ಲಿ ತೊಡ ಗಿಸಿ. ಒಬ್ಬ ವಿದ್ಯಾರ್ಥಿಗೆ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ವಿದೇಶಕ್ಕೆ ತೆರಳುವ ಒತ್ತಡ ವಿದ್ದರೆ, ಪೋಷಕರಿಗೆ ವಿದ್ಯಾರ್ಥಿಯನ್ನು ಅಲ್ಲಿಗೆ ಕಳುಹಿಸುವ ಒತ್ತಡ. ಅದಕ್ಕೆ ಹಣ ನೀಡಲು ಬ್ಯಾಂಕ್‌ನವರಿಗೆ ಒತ್ತಡ. ಹೀಗೆ ಒಬ್ಬ ವಿದ್ಯಾರ್ಥಿಯಿಂದ ಎಷ್ಟು ಮಂದಿ ಒತ್ತಡ ಒಳಗಾಗುತ್ತಾರೆ ಎಂದು ನೋಡಬೇಕಿದೆ ಎಂದು ಹೇಳಿದರು.

ಪರೀಕ್ಷೆಗೆ ತಯಾರಾಗುವುದು: ಪರೀಕ್ಷೆಗೆ ಎಲ್ಲರೂ ತಯಾರಾಗುತ್ತಾರೆ. ಆದರೆ, ಬರೆಯಲು ಎಲ್ಲರೂ ತಯಾರಾಗುವುದಿಲ್ಲ. ಆದ್ದರಿಂದ ಈ ಬರವಣಿಗೆಗೆ ಮೊದಲು ಮನೆಯಲ್ಲಿಯೇ ತಯಾರಿ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಪರೀಕ್ಷೆಯಲ್ಲಿ ಯಾವುದೇ ಒತ್ತಡ ಇರುವುದಿಲ್ಲ.

ಪೊಮೊಡೋರೊ ಟೆಕ್ನಿಕ್: ನೀವು ಕಲಿಯಬೇಕಾದ್ದನ್ನು ನಿಮ್ಮ ಮುಂದೆ ಇಟ್ಟುಕೊಳ್ಳಿ. ೨೫ನಿಮಿಷ ಓದಿ, ೫ ನಿಮಿಷ ಬ್ರೇಕ್ ತೆಗೆದುಕೊಳ್ಳಿ. ಹೀಗೆ ಓದುವ ಸಮಯದಲ್ಲಿ ನಾಲ್ಕು ಬಾರಿ ಮಾಡಿ. ಇದಾದ ನಂತರ ೨೦-೩೦ ನಿಮಿಷ ಬ್ರೇಕ್ ನೀಡಿ ಮತ್ತೊಂದು
ಸಬ್ಜೆಕ್ಟ್ ಓದಲು ಕುಳಿತುಕೊಳ್ಳಿ. ಹೀಗೆ ಮಾಡಿದರೆ ಓದಿದ್ದನ್ನು ರೀಕಾಲ್ ಮಾಡಲು ಸಹಾಯವಾಗುತ್ತದೆ.

ಪರೀಕ್ಷೆಗೆ ಮುನ್ನ ತಯಾರಿ ಹೇಗೆ?
ಹಿಂದಿನ ವರ್ಷದ ಪರೀಕ್ಷೆಗಳ ಪತ್ರಿಕೆ ತಯಾರು ಮಾಡಿಕೊಳ್ಳಬೇಕು.
ಕೆಲವು ಸ್ಮಾಟ್ ವರ್ಕ್ ಮಾಡುವವರು ಮಾತ್ರ ಪರೀಕ್ಷೆಯಲಿ ಗೆಲ್ಲುತ್ತಾರೆ.
ವಿಎಆರ್‌ಕೆ ಟೆಸ್ಟ್ , ಲೆಪ್ಟ್-ರೈಟ್ ಟೆಸ್ಟ್ , ಆಪ್ಟಿಟ್ಯೂಡ್ ಟೆಸ್ಟ್ ಮಾಡಿಕೊಂಡಾಗ ಸಾಮರ್ಥ್ಯದ ಅರಿವಾಗುತ್ತದೆ
ಟೈಂ ಟೇಬಲ ಮಾಡಿಕೊಳ್ಳಬೇಕು. ಒಂದೇ ಸಬ್ಜೆಕ್ಟ್ ದಿನವಿಡೀ ಓದಬಾರದು.

ಓದಲು ಸರಿಯಾದ ಗಾಗವನ್ನು ಆಯ್ಕೆ ಮಾಡಿಕೊಂಡು ಓದಲು ಕುಳಿತುಕೊಳ್ಳಬೇಕು.
ಪರೀಕ್ಷೆ ಮತ್ತು ಓದಿನ ಸಂದರ್ಭದಲ್ಲೂ ದಿನದ ೬-೭ ಗಂಟೆ ನಿದ್ರಿಸಬೇಕು. ಇಲ್ಲವಾದರೇ ಎಷ್ಟೇ ಓದಿದರೂ ವೇಸ್ಟ್.
ಭಾನುವಾರದ ದಿನವನ್ನು ವಾರಪೂರ್ತಿ ಓದಿದ ರಿವಿಶನ್ ಗೆ ಮೀಸಲಿಡಬೇಕು.
ಪರೀಕ್ಷೆ ಹತ್ತಿರ ಬಂದಾಗ ಪಿಜಾ, ಬರ್ಗ್‌ರ್ ಮತ್ತಿತರ ಜಂಕ್ ಫುಡ್‌ಗಳಿಂದ ದೂರವಿದ್ದು, ಮೆದುಳಿಗೆ ಬೇಕಾದ ಆಹಾರ ಸೇವಿಸಬೇಕು.

ಕಾಫಿ, ಬ್ಲೂಬೆರಿ, ಬ್ರೊಕೋಲಿ, ಡಾರ್ಕ್ ಚಾಕಲೇಟ್, ಕಿತ್ತಳೆ ಹಣ್ಣು, ಗ್ರೀನ್ ಟೀ ಸೇವನೆ ಮಾಡಿ. ಮೆಡಿಟೇಶನ್ ಕೂಡ ಇರಲಿ.
ಬಲಗೈನಲ್ಲಿ ಬರೆಯುವವರು ನಿಮ್ಮ ಎಡಗೈನಲ್ಲಿ ಬರೆಯುವದುದನ್ನು ಅಭ್ಯಾಸ ಮಾಡಿಕೊಳ್ಳಿ.

ದಿನಕ್ಕೆ ೩-೪ ಲೀಟರ ನೀರು ಕುಡಿಯಿರಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ.
ಮೊದಲ ೩ ಪುಟಗಳನ್ನು ಚೆಂದವಾಗಿ ಬರೆಯಿರಿ.

ಏಕೆಂದರೆ, ಮೊದಲ ಪೇಪರ್ ನೋಡಿಯೇ ನಿಮ್ಮನ್ನು ಅಳೆಯುತ್ತಾರೆ.
ಪ್ರಶ್ನೆ ಸಂಖ್ಯೆಯನ್ನು ಪರೀಕ್ಷಿಸಿ. ಅದಕ್ಕೆ ತಕ್ಕಂತೆ ಮನಸ್ಸಿನಲ್ಲಿ ಉತ್ತರ ಸಿದ್ಧಪಡಿಸಿಕೊಂಡು ಬರೆಯಲು ಆರಂಭಿಸಿ.
ಪರೀಕ್ಷೆಗೆ ತೆರಳುವ ಮುನ್ನ ಏನೆಲ್ಲಾ ತೆಗೆದುಕೊಂಡು ಹೋಗಬೇಕು ಎಂಬುದನ್ನು ನೋಡಿಕೊಂಡು ತಯಾರಿ ಮಾಡಿಕೊಳ್ಳಿ.
ಪರೀಕ್ಷೆಯಲ್ಲಿ ಪ್ಯಾನಿಕ್ ಆಗದ ಹಾಗೆ ನೋಡಿಕೊಳ್ಳಬಹುದು.
ಪಾಸಿಟಿವ್ ಮೈಂಡ್‌ನಲ್ಲಿ ಪರೀಕ್ಷೆಗೆ ತೆರಳಿ ನಂತರ ಬರೆಯಲು ಆರಂಭಿಸಬೇಕು.

ಹೆಚ್ಚಿನ ಒತ್ತಡ ಅಪಾಯ. ಮಧ್ಯಮ ಪ್ರಮಾಣದ ಒತ್ತಡ ಪರವಾಗಿಲ್ಲ.
ಪರೀಕ್ಷೆಗೆ ಹೋಗುವ ವೇಳೆ ಯಾವಾಗಲೂ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಕು.
ಮಕ್ಕಳಿಗೆ ಹೋಲಿಸಿದರೆ ಪೋಷಕರೇ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ.

ದೇಶದಲ್ಲಿ ಒಳ್ಳೆ ವ್ಯಕ್ತಿಗಳ ಕೊರತೆ ಇದೆ. ಮಕ್ಕಳನ್ನು ಸಮಾಜದಲ್ಲಿ ಒಬ್ಬ ಒಳ್ಳೆ ಪ್ರಜೆಗಳನ್ನಾಗಿ ಮಾಡಿ.

***

ಪರೀಕ್ಷೆಗೆ ಓದುವಾಗ, ಪರೀಕ್ಷೆ ಬರೆಯುವಾಗ ಸೇರಿದಂತೆ ಸಿದ್ಧತೆಗಳನ್ನು ಮಾಡಿಕೊಳ್ಳುವಾಗ ಬೇರೆಯವರೊಂದಿಗೆ ನಿಮ್ಮನ್ನು
ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತೀ ಹಂತದಲ್ಲೂ ನಿಮ್ಮನ್ನು ನೀವೇ ಹೋಲಿಕೆ ಮಾಡಿಕೊಳ್ಳಿ. ನಿನ್ನೆಗಿಂತ ಇವತ್ತು ಪರವಾಗಿಲ್ಲ ಎಂಬಂತೆ ನೋಡಿಕೊಳ್ಳಿ.
– ಡಾ. ಅನಂತ ಪ್ರಭು ಗುರುಪುರ