ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸಾಹಿತಿ, ಪತ್ರಕರ್ತ ಡಾ.ಬಾಬು ಕೃಷ್ಣಮೂರ್ತಿ ಅವರಿಂದ ಉಪನ್ಯಾಸ
ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ಬ್ರಿಟೀಷರು ಭಾರತೀಯರಲ್ಲಿ ಕೀಳರಿಮೆ ಮೂಡಿಸುವಂತಹ ಇತಿಹಾಸ ಸೃಷ್ಟಿಸಿದರು. ಆದರೆ, ಸ್ವಾತಂತ್ರ್ಯ ಬಂದ ನಂತರ ಕೇಂದ್ರ ದಲ್ಲಿ ಆಡಳಿತಕ್ಕೆ ಬಂದ ಪಕ್ಷ ತೆಗೆದುಕೊಂಡ ಇತಿಹಾಸದ ವಿಚಾರದಲ್ಲಿ ತೆಗೆದು ಕೊಂಡ ನಿಲುವು ದೇಶದ ದೃಷ್ಟಿಯಿಂದ, ಪ್ರಾಚೀನವಾದ ರಾಷ್ಟ್ರದ ದೃಷ್ಟಿಯಿಂದ ಬಹಳ ಅಪಾಯಕಾರಿ, ಆಘಾತಕಕಾರಿ ಹಾಗೂ ದ್ರೋಹ ಬಗೆಯುವಂತೆ ಇತ್ತು ಎಂದು ಸಾಹಿತಿ, ಪತ್ರಕರ್ತ ಡಾ.ಬಾಬು ಕೃಷ್ಣಮೂರ್ತಿ ಹೇಳಿದ್ದಾರೆ.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಇತಿಹಾಸ ಪುನಾರಚನೆ ಆಗಬೇಕೇ? ವಿಚಾರದ ಕುರಿತು ಅರಿವಿನ ಉಪನ್ಯಾಸ ನೀಡಿ, ೧೯೨೫ರಲ್ಲೇ ಹಲವು ತಂಡ, ಸಂಸ್ಥೆಗಳು ನಿರ್ಮಾಣ ವಾದವು. ಕೆಲವು ಯುವಕರು ಕಮ್ಯುನಿಸಂ ಪ್ರಭಾವಕ್ಕೆ ಒಳಗಾದರು. ಕಮ್ಯುನಿಸಂ ತೊಂದರೆ ಅಲ್ಲ. ಆದರೆ ಒಬ್ಬ ಭಾರತೀಯನಾಗಿ, ಮಣ್ಣಿನ ಮಗನಾಗಿ, ಯಾವ ಮಣ್ಣಿ ನಲ್ಲಿ ಹುಟ್ಟಿದ್ದೇವೆಯೋ ಆ ಮಣ್ಣಿಗೆ ಪ್ರಾಮಾಣಿಕವಾಗಿ, ಸಮರ್ಪಣಾ ಭಾವನೆಯಿಂದ ಜೀವನ ನಡೆಸಬೇಕಾದ್ದು ಅತ್ಯಂತ ಅವಶ್ಯಕ. ಹಾಗೆ ನಡೆದು ಕೊಳ್ಳದಿದ್ದಲ್ಲಿ ಅವರು ದೇಶದ್ರೋಹಿ ಎಂದೇ ಕರೆಯಲ್ಪಡುತ್ತಾರೆ. ಈ ಅಂಶಗಳು ಯಾರಲ್ಲಿ ಇರುವುದಿಲ್ಲವೋ ಅವರು ದೇಶದ್ರೋಹಿ ಪಟ್ಟಿಗೆ ಸೇರುತ್ತಾರೆ.
ಇತಿಹಾಸ ತಿರುಚಿ ಬರೆದಿರುವ ಬಗ್ಗೆ ಹಲವಾರು ಉದಾಹರಣೆಗಳು ಸಿಗುತ್ತವೆ. ಬ್ರಿಟೀಷರ ಆಳ್ವಿಕೆ ಸಂದರ್ಭದಲ್ಲಿ ವಾಸುದೇವ ಬಲವಂತ್ ಫಡ್ಕೆ ಅವರು ಪುಸ್ತಕ ಬರೆಯಲು ದಾಖಲೆಗಳನ್ನು ಹುಡುಕಿದಾಗ ಅವರಿಗೆ ಕರಿ ನೀರಿನ ಶಿಕ್ಷೆ ಘೋಷಿಸಲಾಗುತ್ತದೆ.
ಅದಕ್ಕಾಗಿ ಅವರನ್ನು ಅಂಡಮಾನ್‌ಗೆ ಕಳುಹಿಸಬೇಕಾಗಿತ್ತು. ಈ ಬಗ್ಗೆ ನಾನು ಮಾಹಿತಿ ಕಲೆ ಹಾಕುವಾಗ ಸಿಕ್ಕಿದ ದಾಖಲೆಯಲ್ಲಿ ಅಂಡಮಾನ್‌ಗೆ ಕಳುಹಿಸಬೇಕು ಎಂದು ಇರುತ್ತದೆ.
ಆದರೆ, ಅದರ ಮೇಲೆ ಒಂದು ಟಿಪ್ಪಣಿಯಲ್ಲಿ ಏಡನ್‌ಗೆ ಕಳುಹಿಸಿ ಎಂದು ಬರೆಯಲಾಗಿತ್ತು. ನಾವು ಎಷ್ಟೇ ಬ್ರಿಟೀಷರನ್ನು
ವಿರೋಧಿಸಿದರೂ ಅವರು ಕೆಲವು ನೀತಿ-ನಿಯಮ ಪಾಲಿಸುತ್ತಿದ್ದರು. ಆದರೂ ಅವರ ಮೂಲ ಉದ್ದೇಶ ನಮ್ಮಲ್ಲಿ ಕೀಳರಿಮೆ ಮೂಡಿಸಬೇಕು ಎಂಬುದಾಗಿತ್ತು. ಈ ಉದ್ದೇಶವಿಟ್ಟುಕೊಂಡೇ ಅವರು ಇತಿಹಾಸ ಪರಿಚಯ ಮಾಡಿಕೊಟ್ಟರು ಎಂದು ಹೇಳಿದರು.
ಮೆಕಾಲೆ ಶಿಕ್ಷಣ ಪದ್ಧತಿ ಪ್ರಕಾರ, ಭಾರತೀಯರು ಅನಾಗರಿಕರಾಗಿದ್ದೆವು. ನಮಗೆ ಯಾವುದೇ ರೀತಿಯ ಸಂಸ್ಕಾರ, ಇತಿಹಾಸವಿಲ್ಲ ಎಂದು ಹೇಳಲಾಗಿತ್ತು.
ನಮ್ಮನ್ನು ಕಾಡು ಪ್ರಾಣಿಗಳಂತೆ ಬಿಂಬಿಸುತ್ತಿದ್ದರು. ಆದರೆ, ಅದೇ ಮೆಕಾಲೆ ಒಂದು ಕಡೆ, ಬೇರೆ ಬೇರೆ ಖಂಡಗಳಲ್ಲಿ ಜನರು ಕಾಡು ಪ್ರಾಣಿಗಳಂತೆ ವಾಸಿಸುತ್ತಿದ್ದಾಗ ಭಾರತದಲ್ಲಿ ರಾಮಾಯಣ ಎಂಬ ಶ್ರೇಷ್ಠ ಸಾಹಿತ್ಯ ನಿರ್ಮಾಣವಾಯಿತು. ಹೀಗಾಗಿ ಎಲ್ಲರಿಗೂ ಮೊದಲೇ ಭಾರತದಲ್ಲಿ ನಾಗರಿಕ ಪದ್ಧತಿ ಇತ್ತು ಎಂದು ಹೇಳಿದ್ದಾನೆ. ಆದರೆ, ೨೦ನೇ ಶತಮಾನದ ಅಂತಿಮ ದಿನಗಳಲ್ಲಿ ಆದಂತಹ ದೊಡ್ಡ ಬದಲಾವಣೆ ಎಂದರೆ, ನಮ್ಮಲ್ಲಿ ಚಿಂತನಶೀಲ ವ್ಯಕ್ತಿಗಳು ಸ್ವಾಭಿಮಾನ ಮೂಡುವಂತಹ ಕೆಲಸ ಮಾಡಿದರು.
ಯಾನಂದ ಸರಸ್ವತಿ, ವಿವೇಕಾನಂದ, ಲೋಕಮಾನ್ಯ ತಿಲಕ್, ಅರವಿಂದ ಘೋಷ್ ಸೇರಿದಂತೆ ಅನೇಕರು ನಮ್ಮಲ್ಲಿ, ನಮ್ಮ
ಇತಿಹಾಸದಲ್ಲಿ ರಾಷ್ಟ್ರೀಯ ದೃಷ್ಟಿಯನ್ನು ಮೂಡಿಸಿದರು. ಪುರಾತನ, ಪ್ರಪಂಚದಲ್ಲೇ ಪ್ರಾಚೀನ ಇತಿಹಾಸ ಉಳ್ಳಂತಹ, ಜ್ಞಾನದ ಉತ್ತುಂಗಕ್ಕೆ ಹೋಗಿ ಮುಟ್ಟಿದ್ದ, ಇಡೀ ಜಗತ್ತನ್ನು ಪ್ರೀತಿಸಬಲ್ಲಂತಹ ಸಂಸ್ಕೃತಿ ದೇಶದಲ್ಲಿದೆ ಎಂಬುದನ್ನು ಪ್ರಸ್ತುತಪಡಿಸಿದರು. ಇದರಿಂದ ಜನರಲ್ಲಿ ನಿಧಾನವಾಗಿ ಸ್ವಾಭಿಮಾನ ಮೂಡಲು ಪ್ರಾರಂಭವಾಯಿತು ಎಂದರು.
ನಮ್ಮಲ್ಲಿ ಕೀಳರಿಮೆ ಬೆಳೆಯುವಂತಹ ಇತಿಹಾಸ ನಡೆಯುತ್ತಿದ್ದಾಗಲೇ ಮತ್ತೊಂದು ಕಡೆ ಸ್ವಾಭಿಮಾನದ ಇತಿಹಾಸ ಬೇಳೆಯುತ್ತಾ ಬಂತು. ೧೮೫೭ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅದನ್ನು ಸಿಪಾಯಿ ಧಂಗೆ ಎಂದು ಕರೆಯಲಾಯಿತು. ಬ್ರಿಟೀಷ್ ದಾಖಲೆಯಲ್ಲಿ ಇದು ಧಂಗೆ ಅಲ್ಲ, ಇದೊಂದು ಸ್ವಾತಂತ್ರ್ಯ ಹೋರಾಟ ಎಂದು ಘೋಷಣೆ ಮಾಡಿದಾಗ ನಮ್ಮಲ್ಲಿ ಸತ್ಯನಿಷ್ಠೆ ಕಾಣಿಸಿಕೊಂಡಿತು. ಬ್ರಿಟೀಷರ ದೃಷ್ಟಿಗೆ ವಿರುದ್ಧವಾದ ಮತ್ತೊಂದು ಸತ್ಯದೃಷ್ಟಿ ನಮಗೆ ಸಿಕ್ಕಿತು.
ಇದರಿಂದಾಗಿ ಲಕ್ಷಾಂತರ ಮಂದಿಯಲ್ಲಿ ಸ್ವಾಭಿಮಾನ ತುಂಬಿತು. ಭಗತ್‌ಸಿಂಗ್, ಸುಭಾಷ್‌ಚಂದ್ರ ಬೋಸ್ ಸೇರಿದಂತೆ ಅನೇಕರಲ್ಲಿ ಸ್ವಾತಂತ್ರ್ಯಕ್ಕೆ ಹೋರಾಡುವ ಕೆಚ್ಚನ್ನು ತುಂಬಿತು. ಸತ್ಯನಿಷ್ಠೆಯ ಇತಿಹಾಸದಿಂದ ಸ್ವಾಭಿಮಾನ ಹೇಗೆ ಹುಟ್ಟುತ್ತದೆ ಎಂಬುದಕ್ಕೆ ೧೮೫೭ರ ಸಾವರ್ಕರ್ ಬರೆದಿರುವ ಪುಸ್ತಕ ಒಂದು ಟರ್ನಿಂಗ್ ಪಾಯಿಂಟ್ ಎಂದು ಹೇಳಿದರು.
ಮಾಧ್ಯಮ ಚರ್ಚೆಯಲ್ಲಿ ಇತಿಹಾಸದ ಸತ್ಯ ಹೇಳಬೇಕು: ಮಾಧ್ಯಮಗಳು, ಅದರಲ್ಲೂ ದೃಶ್ಯ ಮಾಧ್ಯಮಗಳು ಹೆಚ್ಚು ಪ್ರಭಾವಿ ಯಾಗಿದೆ. ಹೀಗಾಗಿ ವಿವೇಚನೆ ಇದ್ದೋ, ಇಲ್ಲದೆಯೋ ಅಬ್ಬರಿಸುವಂತಹ ವ್ಯಕ್ತಿಗಳನ್ನು ಕಾಣುತ್ತೇವೆ. ಚಪಲಕ್ಕಾಗಿ ಮಾತನಾಡು ವವರು, ರಾಜಕೀಯ ದುರುದ್ದೇಶಗಳಿಗಾಗಿ ಮಾತನಾಡುವವರು ತುಂಬಿಹೋಗಿದ್ದಾರೆ. ಇದರಿಂದ ಜನ ಒಂದು ರೀತಿಯ ಗೊಂದಲ ದಲ್ಲಿದ್ದಾರೆ. ಇವರ ಅಬ್ಬರದಲ್ಲಿ ಸತ್ಯ ಮುಚ್ಚಿಹೋಗುತ್ತದೆ. ಅಸತ್ಯಗಳು ವಿಜೃಂಭಿಸುತ್ತಿವೆ ಎಂಬ ಆರೋಪಗಳೂ ಇವೆ. ಹೀಗಾಗಿ ನಮ್ಮ ಇತಿಹಾಸ, ಪರಂಪರೆಯ ಮೇಲೆ ನಂಬಿಕೆ ಬೆಳೆಸುವಂತಹ ಚಿಂತನೆ ಮತ್ತು ವಿಚಾರ ವಿನಿಮಯ ದೃಶ್ಯ ಮಾಧ್ಯಮದಲ್ಲಿ ನಡೆಯಬೇಕು ಎಂದು ಡಾ.ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸದ ತಲೆ-ಬಾಲ ಗೊತ್ತಿಲ್ಲದವರು, ನಿಜವಾದ ಇತಿಹಾಸದ ಅಲ್ಪ ಪರಿಚಯವೂ ಇಲ್ಲದವರು, ಆಧುನಿಕವಾಗಿ ಹೊಸ ಹೊಸ ಸತ್ಯನಿಷ್ಠ ದೃಷ್ಟಿ ಹೇಗೆ ಅನಾವರಣಗೊಳ್ಳುತ್ತಿದೆ ಎಂದು ತಿಳಿಯದವರು, ತಾವು ಹಿಡಿದ ಮೊಲಕ್ಕೆ ಮೂರೆ ಕೊಂಬು
ಎಂದು ವಾದ ಮಾಡುತ್ತಿರುವವರು ಮಾಧ್ಯಮದಲ್ಲಿ ತುಂಬಿಕೊಂಡು, ಜಗಳ ಮಾಡಿಕೊಂಡು, ಕೆಟ್ಟ ಭಾಷೆ ಬಳಸಿ, ಪ್ರಾಮಾಣಿಕ ವಾಗಿ ಪರಿಶ್ರಮ ಪಡುತ್ತಿರುವ ಜಾಣರು, ಜ್ಞಾನಿಗಳನ್ನು ಕುಚೇಷ್ಟೆ ಮಾಡುವಂತ ದುರ್ದೈವವನ್ನು ಇಂದು ನೋಡುತ್ತಿದ್ದೇವೆ ಎಂದರು.
ಇಂಥವರು ಹೇಳುವುದೇ ನಿಜವಾದ ಇತಿಹಾಸ ಎಂದು ಅನೇಕರು ನಂಬಿದ್ದಾರೆ. ಆದರೆ, ಇಂದು ತಿಳಿಸುತ್ತಿರುವ ಇತಿಹಾಸ ತಿರುಚಲ್ಪಟ್ಟಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಬ್ರಿಟೀಷರು ಆಕ್ರಮಣಕಾರರಾಗಿ ನಮ್ಮ ದೇಶಕ್ಕೆ ಬಂದವರು. ಆದರೆ, ಒಂದು
ಹಂತದಲ್ಲಿ ವರ ದೃಷ್ಠಿಕೋನ ಒಪ್ಪದಿದ್ದರೂ, ಇತಿಹಾಸ ರಚನೆಗೆ ಒಂದು ರೂಪ ನೀಡಿದವರು ಎನ್ನುವುದನ್ನು ನಾವು ಅಲ್ಲಗೆಳೆಯಲು ಸಾಧ್ಯವಿಲ್ಲ.
ನಮ್ಮ ದೇಶಕ್ಕೆ ಬಂದ ನಂತರ ಅವರಲ್ಲಿ ಕೆಲವು ವಿದ್ವಾಂಸರು ಭಾರತದ ಇತಿಹಾಸ, ಪರಂಪರೆ ಬಗ್ಗೆ ಆಸಕ್ತಿ ಮೂಡಿ ಇತಿಹಾಸ ರಚನೆ ಮಾಡಿದ್ದಾರೆ. ಆದರೇ ಬ್ರಿಟೀಷರು ವಸಾಹಿತುಶಾಹಿಗಳಾಗಿದ್ದರಿಂದ, ತಮಗೆ ಅನುಕೂಲವಾಗುವ ವಿಚಾರವನ್ನು ತಮಗೆ
ಬೇಕಾದ ರೀತಿಯಲ್ಲಿ ಹೆಚ್ಚು ಬಿಂಬಿಸಿದರು. ಆದರೆ, ಇತಿಹಾಸ ತಿಳಿಸುವ ಅವರ ಪ್ರಯತ್ನವನ್ನು ಅಲ್ಲಗೆಳೆಯುವಂತಿಲ್ಲ ಎಂದು ಅಭಿಪ್ರಾಯಪಟ್ಟರು.
***
ಸತ್ಯನಿಷ್ಠವಾದ ಇತಿಹಾಸ ರಚನೆಯಾಗಬೇಕು
ಅಧ್ಯಯನಶೀಲ ಪ್ರತಿಭೆಗಳು ಮುಂದೆ ಬರಬೇಕು
ಮಾಧ್ಯಮಗಳು ಸತ್ಯದ ಪರಿಚಯ ಮಾಡಿಕೊಡಬೇಕು
ರಾಷ್ಟ್ರದ ಇತಿಹಾಸ ಬರೆಯಲು ಆಯಾ ರಾಷ್ಟ್ರದವರಿಂದ ಮಾತ್ರ ಸಾಧ್ಯ
ಬೌದ್ಧಿಕ ಪ್ರಾಮಾಣಿಕತೆ ಇತಿಹಾಸಕಾರರಲ್ಲಿ ಬಹಳ ಮುಖ್ಯ. ಬೌದ್ಧಿಕ ಪ್ರಾಮಾಣಿಕತೆ ಇರದಿದ್ದರೆ ದೇಶದ ಇತಿಹಾಸಕ್ಕೆ ಮತ್ತು ನಾವು ತೆಗೆದುಕೊಂಡಿರುವ ವಿಚಾರಕ್ಕೆ ಮಾಡುತ್ತಿರುವ ದ್ರೋಹ ವಿದೇಶಿಗಳಿಗೆ ಒಳ್ಳೆಯ ಜೀವನ ಪದ್ಧತಿ ಹೇಳಿಕೊಡಲು
ಹೋದವರು ನಮ್ಮ ರಾಷ್ಟ್ರದ ಜನ. ಹೊಯ್ಸಳ, ಚೋಳರ ಕಾಲದ ದೇವಸ್ಥಾನ ನೋಡಿದರೆ ನಮ್ಮ ಸಂಸ್ಕೃತಿ ಬಗ್ಗೆ ತಿಳಿಯುತ್ತದೆ.
***
ನಾವು ಬಾಲ್ಯದಲ್ಲಿರುವಾಗಲೇ ತಮ್ಮ ಅಜೇಯ ಕೃತಿಯ ಮೂಲಕ ದೇಶಭಕ್ತಿ ಮೂಡಿಸಿದಂತಹ ಒಬ್ಬ ಅಪರೂಪದ
ಲೇಖಕರು ಡಾ.ಬಾಬು ಕೃಷ್ಣ ಮೂರ್ತಿ. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳಾಗಿದ್ದಂತಹ ಚಂದ್ರಶೇಖರ ಆಜಾದ್, ಭಗತ್ ಸಿಂಗ್, ವೀರ ಸಾವರ್ಕರ್, ಜಾನ್ಸಿರಾಣಿ ಹೀಗೆ ಹಲವು ಸ್ವಾತಂತ್ರ್ಯ ಯೋಧರ ತ್ಯಾಗ, ಬಲಿದಾನಗಳ ಕಥನಗಳಿಗೆ ಜೀವಂತಿಕೆ
ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು,
ವಿಶ್ವವಾಣಿ