Thursday, 7th December 2023

ವಿದೇಶದಲ್ಲಿ ಭಾರತೀಯತೆ ಪಸರಿಸುವ ಕುಮಾರಸ್ವಾಮಿ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಹಿರಿಯ ಪತ್ರಕರ್ತ ಎಸ್.ಸೂರ್ಯಪ್ರಕಾಶ್ ಪಂಡಿತ್ ಅರಿವಿನ ಉಪನ್ಯಾಸ

ಬೆಂಗಳೂರು: ಕಲಾ ಮೀಮಾಂಸಕ ಆನಂದ ಕುಮಾರಸ್ವಾಮಿ ಅವರು ಶ್ರೇಷ್ಠ ದಾರ್ಶನಿಕರಾಗಿದ್ದು, ವಿದೇಶದಲ್ಲಿ ಭಾರತೀಯತೆ ನೆಲೆಗೆ ಕಾರಣಕರ್ತರು. ಜೀವನವೇ ಕಲೆಯಾಗಬೇಕು ಎಂಬುದು ಅವರ ಮುಖ್ಯ ಧ್ಯೇಯ ಎಂದು ಹಿರಿಯ ಪತ್ರಕರ್ತ
ಎಸ್.ಸೂರ್ಯಪ್ರಕಾಶ ಪಂಡಿತ್ ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಭಾರತೀಯತೆ ಎಂದರೆ ಏನು?’ ಎಂಬ ವಿಚಾರದ ಕುರಿತು ಅರಿವಿನ ಉಪನ್ಯಾಸ ನೀಡಿ, ಭಾರತೀಯತೆ ಎಂದರೇನು ಎಂಬ ಪ್ರಶ್ನೆಯನ್ನು ಮೊದಲು ನಮ್ಮಲ್ಲಿ ನಾವು ಹಾಕಿಕೊಳ್ಳಬೇಕು. ಹುಟ್ಟಿನಿಂದ ನಾವೆಲ್ಲರೂ ಭಾರತೀಯ ರಾಗಲು ಸಾಧ್ಯವೇ? ಹಾಗಾದರೆ ನಾವು ಭಾರತೀಯರು ಅನ್ನಿಸಿಕೊಳ್ಳಲು ಏನು ಮಾಡಬೇಕು? ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳುವ ಮೂಲಕ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಆದರೆ, ಎಲ್ಲರೂ ಗುರು ಸ್ಥಾನದಲ್ಲೇ ಯೋಚಿಸುವುದರಿಂದ, ಯಾರೂ ಪ್ರಶ್ನೆ ಹಾಕಿ ಕೊಳ್ಳುವುದಿಲ್ಲ. ಹಾಗೂ ಒಂದು ವೇಳೆ ಹಾಕಿ ಕೊಂಡರೆ ಅದಕ್ಕೆ ಉತ್ತರವಾಗಿ ಆನಂದ ಕುಮಾರಸ್ವಾಮಿ ಒದಗುತ್ತಾರೆ ಎಂದರು. ೧೦೦ ವರ್ಷದ ಹಿಂದೆಯೇ ಈ ಒಂದು ಪ್ರಶ್ನೆ ಹಾಕಿಕೊಂಡು, ಭಾರತೀಯತೆ ಎಂದರೆ ಇದು ಎಂದು ತೋರಿಸಿದವರು ಕುಮಾರಸ್ವಾಮಿ. ಹೀಗಾಗಿ ಅವರು ತುಂಬಾ ಅನಿವಾರ್ಯ.

ಭಾರತವು ಬ್ರಿಟೀಷರಿಂದ ಕೇವಲ ರಾಜಕೀಯ ಸ್ವಾತಂತ್ರ್ಯ ಮಾತ್ರ ಕಳೆದುಕೊಂಡಿರಲಿಲ್ಲ, ಎಲ್ಲಾ ರೀತಿಯ ಸ್ವಾತಂತ್ರ್ಯ ಕಳೆದು ಕೊಂಡಿದ್ದೆವು. ಭಾರತೀಯರಿಗೆ ನಾಗರೀಕತೆ ಇಲ್ಲ, ಬ್ರಿಟೀಷರು ಬಂದು ಇವರನ್ನು ಉದ್ಧಾರ ಮಾಡಿದ್ದಾರೆ ಎಂಬಂತಹ ಮಾಹಿತಿ ಗಳನ್ನು ಇತಿಹಾಸದಲ್ಲಿ ಓದಿದ್ದೇವೆ. ಇಂಥಹ ಸಂದರ್ಭದಲ್ಲಿ ವಿದೇಶದಲ್ಲೆ ನೆಲೆಸಿ ಕುಮಾರಸ್ವಾಮಿ ಅವರು ಭಾರತೀಯತೆ ಪಸರಿಸುವ ಕೆಲಸ ಮಾಡಿದ್ದಾರೆ. ಇಡೀ ಜಗತ್ತಿಗೆ ಗುರುವಾಗಿದ್ದ ದೇಶ ಎಂದು ಭಾವುಕರಾಗಿ ಹೇಳದೆ, ಸಾಕ್ಷಿ ಸಮೇತ ತಿಳಿಹೇಳಿದರು ಎಂದು ತಿಳಿಸಿದರು.

ಆನಂದ ಕುಮಾರಸ್ವಾಮಿ ಪರಿಚಯ: ದೇಶ-ವಿದೇ ಶಗಳಲ್ಲಿ ಆನಂದ ಕುಮಾರಸ್ವಾಮಿಯವರ ಚಿಂತನಾಧಾರೆ ಸಾಕಷ್ಟು ಪ್ರಸಿದ್ಧವಾಗಿದೆಯಾದರೂ ಕನ್ನಡಿಗರಿಗೆ ಅವರ ಪರಿಚಯ ಹೆಚ್ಚಿನ ಮಟ್ಟಿಗೆ ಆಗಿರಲಿಲ್ಲ. ಸೂರ್ಯಪ್ರಕಾಶ ಪಂಡಿತ್, ಸಾ.ಕೃ.
ರಾಮಚಂದ್ರರಾವ್, ಡಿ.ಆರ್.ನಾಗರಾಜ್ ಮುಂತಾದ ಕೆಲವೇ ಮಂದಿ ವಿದ್ವಾಂಸರು ಕುಮಾರಸ್ವಾಮಿಯವರ ಜೀವನ-ಸಾಧನೆಗಳ ಪರಿಚಯವನ್ನು ಅಪರೂಪವಾಗಿ ಆಗೀಗ ಮಾಡಿಕೊಟ್ಟಿದ್ದನ್ನು ಬಿಟ್ಟರೆ ಉಳಿದಂತೆ ಹೆಚ್ಚಿನ ಮಾಹಿತಿ ಇರಲಿಲ್ಲ.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಆನಂದ ಕುಮಾರಸ್ವಾಮಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಸೂರ್ಯ ಪ್ರಕಾಶ್ ಪಂಡಿತ್ ಅವರು ತಿಳಿಸಿಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ೧೮೭೭ರ ಆ. ೨೨ರಂದು ಸಿಲೋನ್ ಹುಟ್ಟಿದರು. ೧೯೪೭ರ ಸೆ .೯ರಂದು ನಿಧನ ರಾದರು. ಅವರ ತಂದೆ ತಮಿಳುನಾಡಿನಿಂದ ಸಿಲೋನ್‌ಗೆ ವಲಸೆ ಹೋಗಿದ್ದರು. ತಾಯಿ ಇಂಗ್ಲೆಂಡ್‌ನವರು. ಆದರೆ, ಆನಂದ ಕುಮಾರಸ್ವಾಮಿ ವಿಶ್ವದೆಲ್ಲೆಡೆ ಭಾರತೀಯತೆ ಯನ್ನು ಪಸರಿಸುವ ಕೆಲಸ ಮಾಡಿದರು.

ಆನಂದ ಕುಮಾರಸ್ವಾಮಿ ಕುರಿತು ಭಾರತೀಯತೆ ಎಂದರೆ ಒಂದು ಗುಣ, ಸ್ವಭಾವ ಎಂದು ಕರೆದವರು ಕುಮಾರಸ್ವಾಮಿ. ಅವರ ಒಂದೊಂದು ಬರಹ ನಮ್ಮನ್ನು ಧ್ಯಾನ ಸ್ಥಿತಿಗೆ ಕರೆದುಕೊಂಡು ಹೋಗುತ್ತದೆ. ಭಾರತೀಯತೆಯ ಬಗ್ಗೆ ವ್ಯಾಪಕವಾದ ವಿಶ್ಲೇಷಣೆ, ಕ್ರಮವನ್ನು ಬೇರೆ ಬೇರೆ ಆಯಾಮದಲ್ಲಿ ಕಟ್ಟಿಕೊಟ್ಟವರು.

ಬೌದ್ಧ ದರ್ಶನ ಮತ್ತು ವೈದಿಕ ದರ್ಶನದ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ. ಸ್ವದೇಶಿ ಎಂಬುದು ಒಂದು ರಾಜಕೀಯ ಅಸ್ತ್ರ ಅಲ್ಲ, ಧಾರ್ಮಿಕ ಕಲಾದರ್ಶ ಎಂದು ಹೇಳಿದ್ದಾರೆ. ನಾವು ಸ್ವಾತಂತ್ರ್ಯ ಪಡೆಯುವ ಮುನ್ನ ಭಾರತೀಯತೆ ಎಂದರೇನು ಎಂದು
ತಿಳಿಯಬೇಕು ಎಂದು ಹೇಳಿದ್ದರು.

ಆನಂದ ಕುಮಾರಸ್ವಾಮಿ ಒಂದು ವಿಶ್ವಾತ್ಮ ಭಾವ. ಭಾರತೀಯತೆ ಎಂದರೆ ಏನೆಂದು ತಿಳಿಯದೆ ತಪ್ಪು ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ಖಂಡಿಸಿ ಬರೆದಿದ್ದರು. ಭಾರತೀಯತೆ ನಿಂತಿರುವುದು ಸಂಕೇತ ಮತ್ತು ರೂಪಕದ ಮೇಲೆ. ಅದನ್ನು ಅರಿಯದಿದ್ದರೆ ರಾಮಾಯಣ ಮತ್ತು ಮಹಾಭಾರತ ಸರಿಯಾದ ವ್ಯಾಖ್ಯಾನ ನೀಡುವುದಿಲ್ಲ ಎಂದು ಆನಂದ ಕುಮಾರಸ್ವಾಮಿ ಹೇಳಿದ್ದರು.
– ಎಸ್. ಸೂರ್ಯಪ್ರಕಾಶ ಪಂಡಿತ್, ಹಿರಿಯ ಪತ್ರಕರ್ತ

ಆನಂದ ಕುಮಾರಸ್ವಾಮಿ ಅವರು ಕಾವಿ ಉಟ್ಟವರಲ್ಲ, ಗಡ್ಡಧಾರಿ ಸನ್ಯಾಸಿಯೂ ಅಲ್ಲ. ಸಾಮಾನ್ಯರಂತೆ ಲೌಕಿಕ ಸಮೃದ್ಧ
ಜೀವನ ನಡೆಸಿದ ದಾರ್ಶನಿಕರು. ಇಂಗ್ಲಿಷ್, ಹಿಂದಿ, ಸಂಸ್ಕೃತ ಸೇರಿದಂತೆ ಸುಮಾರು ೧೨ ಭಾಷೆಗಳಲ್ಲಿ ಪ್ರಾವೀಣ್ಯ ಪಡೆದ ವಿದ್ವಾಂಸರು. ಅಷ್ಟೇ ಅಲ್ಲದೆ, ಈ ಭಾರತೀಯ ಸಂಸ್ಕೃತಿಕೆ ಬಹುದೊಡ್ಡ ನೆಲೆಗಟ್ಟು ನೀಡಿದ ಮಹಾನ್ ಚಿಂತಕರು.
-ನಂಜನಗೂಡು ಮೋಹನ್ ಸಂಪಾದಕೀಯ
ಸಲಹೆಗಾರ, ವಿಶ್ವವಾಣಿ

error: Content is protected !!