Thursday, 12th December 2024

ಜನರ ಅನುಭವಗಳೇ ಜಾನಪದದ ಹೂರಣ

ವಿಶ್ವವಾಣಿ ಕ್ಲಬ್ ಹೌಸ್‌ ಸಂವಾದ – 210

ಬೆಂಗಳೂರು: ಜನ ಪದರ ಕಾಲದಲ್ಲಿ ಯಾವುದೇ ಮನರಂಜನೆ ಇರಲಿಲ್ಲ. ಆದ್ದರಿಂದ ಜನಪದರು ತಮ್ಮ ಅನುಭವಗಳನ್ನು ಕವನದ ಮೂಲಕ ಜಾನಪದದ ಮೂಲಕ ಕಟ್ಟಿಕೊಡುತಿದ್ದರು. ಕೇವಲ ಹಾಡು ಕಟ್ಟುವುದಲ್ಲದೆ ಅದಕ್ಕೆ ರಾಗ ಸಂಯೋಜನೆ ಕೂಡ ಮಾಡುತಿದ್ದರು.

ವಿಶ್ವವಾಣಿ ಕ್ಲಬ್ ಹೌಸ್‌ನ ಜಾನಪದ ಝೇಂಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ವಿಜಯಲಕ್ಷ್ಮಿ ಪುಟ್ಟಿ ಜಾನಪದ ಗೀತೆಗಳ ಬಗ್ಗೆ ಬೆಳಕು ಚೆಲ್ಲಿ ದರು. ಅಂದಿನ ಕಾಲದಲ್ಲಿ ತಮ್ಮ ಬೇಜಾರನ್ನು ಕಳೆಯಲು ಗ್ರಾಮೀಣ ಬದುಕಿನಲ್ಲಿ ಇದನ್ನು ಬಳಸುತಿದ್ದರು. ನೀರು ತರಕ್ಕೆ ಹೋಗುವಾಗ ಮನೆ ಮುಂದೆ ಹಿಟ್ಟು ಬೀಸುವಾಗ, ಗಂಡ ಹೆಂಡರ ಸಂಭಾಷಣೆ, ಹೆಣ್ಣು ತನ್ನ ತವರು ಮನೆಗೆ ಹೋಗುವ ಸನ್ನಿವೇಶ, ಸೊಸೆ ಬಂದ ಕೂಡಲೇ ಅತ್ತೆ ತನ್ನ ಮಗನ ಬಗ್ಗೆಯ ಅನಿಸಿಕೆ, ಹೀಗೆ ಮನಸ್ಸಿನ ಭಾವನೆ ಗಳನ್ನು ಜಾನಪದ ಕಾವ್ಯಗಳ ಹೊರಹಾಕಿದ್ದಾರೆ.

ಜಾನಪದ ಸಾಹಿತ್ಯ ಹಿಂದೆ ಬೀಳುತ್ತಿದೆ: ಇಂದಿನ ಮೊಬೈಲ್, ವಾಟ್ಸ್ ಆಪ್ ಹಾಗೂ ಡಿಜಿಟಲ್ ಯುಗದಲ್ಲಿ ಜಾನಪದ ಸಾಹಿತ್ಯ ಕಣ್ಮರೆಯಾಗುತ್ತಿದೆ. ಆದರೆ ಜಾನಪದ ಸಾಹಿತ್ಯದಲ್ಲಿರುವ ಜೀವನದ ಮೌಲ್ಯಗಳು ಇಂದಿನ ಡಿಜಿಟಲ್ ಯುಗದಲ್ಲಿ ಸಿಗುತ್ತಿಲ್ಲ. ಜಾನಪದ ಸಾಹಿತ್ಯದಲ್ಲಿರುವ ಭೂಮಿತಾಯಿಯ ಪೂಜೆ, ವಚನ ಸಾಹಿತ್ಯ ದಲ್ಲಿಯೂ ಕಾಣಬಹುದಾಗಿದೆ ಎಂದು ಹೇಳಿದರು.

ಹಿಂದಿನ ಪೂರ್ವಿಕರು, ನಿತ್ಯ ಮನೆಯ ಮುಂದಿನ ಅಂಗಳವನ್ನು ಗುಡಿಸಿ, ಸಗಣಿಯಿಂದ ಸಾರಿಸುವ ಪದ್ಧತಿಯನ್ನು ಹೊಂದಿದ್ದರು. ಇದರ ಹಿಂದೆ  ವೈಜ್ಞಾನಿಕ ಪದ್ಧತಿಯಿದೆ. ಇದರಿಂದ ಕೀಟಗಳು ಮನೆಯೊಳಗೆ ಬರುತ್ತಿರಲಿಲ್ಲ ಹಾಗೂ ಸ್ವಚ್ಛ ಗಾಳಿ ಸಿಗುತ್ತಿತ್ತು. ಆದರೆ ಇಂದಿನ ಯುವಕರು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಹಿಂದೆ ಇದ್ದ ಸಂಸ್ಕಾರವೂ ಇಂದು ಕಣ್ಮರೆಯಾಗುತ್ತಿದೆ ಎಂದರು.

***

ನಮ್ಮ ರಾಜ್ಯ ಎಲ್ಲ ಕಲೆಗಳ ಒಂದು ತವರೂರು. ಅದರಲ್ಲಿಯೂ ಕರ್ನಾಟಕಕ್ಕೆ ವೈವಿಧ್ಯಮಯ ಕಲಾ ಪ್ರಕಾರಗಳಿಂದ ಕರ್ನಾಟಕದ ಸಂಸ್ಕೃತಿ ಸಂಪ್ಪನ್ನ ಗೊಂಡಿದೆ. ಹಾ. ಮಾ. ನಾಯಕರು, ಎನ್.ಎಂ. ಕಲ್ಬುರ್ಗಿ ಸೇರಿದಂತೆ ಜಾನಪದ ಕಲೆಗಳ ಉಳಿವಿಗಾಗಿ ಅದರ ಬೆಳಕಿಗಾಗಿ ಅವರದೇ ಆದ ಕೊಡುಗೆ ನೀಡಿ ದ್ದಾರೆ. ಆದರೂ ಶಾಸ್ತ್ರೀಯ ಕಲೆಗಳಿಗೆ ದೊರೆತಂತ ಮನ್ನಣೆ ಜಾನಪದ ಕಲೆಗಳಿಗೂ ಸಿಗಬೇಕು ಎಂಬ ಕೂಗು ಇನ್ನೂ ಇದೆ. ದೇಶದ ಎಲ್ಲಾ ರಾಜ್ಯಗಳ ಜಾನಪದಕಲೆಗಳು ಅನರ್ಗ್ಯ ರತ್ನ. –

ನಂಜನಗೂಡು ಮೋಹನ್
ಸಂಪಾದಕೀಯ ಸಲಹೆಗಾರರು, ವಿಶ್ವವಾಣಿ ದಿನಪತ್ರಿಕೆ

ಜಾನಪದ ಕಲೆಗಳನ್ನು ಯಾರುಬೇಕಾದರು ಕೃಷಿ ಮಾಡಿ ಬೆಳೆಸಿ ಬಳಸಬಹುದಾಗಿದೆ. ಕನ್ನಡದಲ್ಲಿ ಪಂಡಿತರಂತೆ ಪಾಮರನು ಸಾಹಿತ್ಯ ನಿರ್ಮಿತಿಗೆ
ಸಹಾಯಕರಾಗಿzರೆ. ಹಳ್ಳಿಯ ಜನ ಮೊದಲಿನಿಂದಲೂ ಸಾಹಿತ್ಯದಲ್ಲಿ ಅಭಿರುಚಿಯನ್ನು ತೂರಿಸುತ್ತಾ ಬಂದಿದ್ದಾರೆ ಅದುಜಾನಪದ ಸಾಹಿತ್ಯದ ಹೆzರಿಯ
ಮೂಲಕ. ಅವರು ಕಟ್ಟಿದಂತಾ ಹಾಡಿನಲ್ಲಿ ಪಾಂಡಿತ್ಯಇಲ್ಲದಿರಬಹುದು ಕಾವ್ಯ ಶಕ್ತಿ ತುಂಬುಕೊಂಡಿದೆ. ಜಾನಪದ ವಿಶ್ವವಿದ್ಯಾನಿಲಯ ಇದ್ದ ಹಾಗೆ.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು,
ವಿಶ್ವವಾಣಿ ದಿನ ಪತ್ರಿಕೆ