ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – 217
ಬೆಂಗಳೂರು: ಗೂಬೆ…. ಬೈಗುಳಕ್ಕೆ ಅತಿ ಹೆಚ್ಚು ಬಳಕೆಯಾಗುವ ಪಕ್ಷಿ. ಗೂಬೆ ಕಾಣಿಸಿಕೊಂಡರೆ ಅದು ಸಾವಿನ ಗುರುತು, ಮನೆ ಮೇಲೆ ಕುಳಿತು ಕೂಗಿದರೆ ಅಪಶಕುನ. ಆ ಮನೆಯಲ್ಲಿ ಯಾರಾದರು ಸಾಯುತ್ತಾರೆ ಎಂದು ಅಪನಂಬಿಕೆ ಇದೆ. ಮನುಷ್ಯ ಸತ್ತ ಬಳಿಕ ಗೂಬೆಯಾಗುತ್ತಾನೆ ಎನ್ನುತ್ತಾರೆ. ಆದರೆ, ಗ್ರೀಕ್
ಮೈತಾಲಜಿಯಲ್ಲಿ ಯುದ್ಧ ನಡೆಯುವಾಗ ಗೂಬೆ ಹಾರಿ ಹೋದರೆ ಯುದ್ಧವನ್ನು ಗೆಲ್ಲುವ ಸಂದೇಶ ಎಂದು ನಂಬುತ್ತಾರೆ.
ಹೀಗೆಂದು ಗೂಬೆಗಳ ಬಗ್ಗೆ ವಿವರಿಸಿದವರು ನ್ಯೂಜಿಲ್ಯಾಂಡ್ ನಿವಾಸಿ, ಮೂಲತಃ ವೈಸೂರಿ ನವರಾದ ಪರಿಸರ ಪ್ರೇಮಿ, ವನ್ಯಜೀವಿ ಛಾಯಾಗ್ರಾಹಕ ಸಾಗರ್ ಸುರೇಶ್. ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ’ಗೂಬೆ ಗೂಬೆ ಎಂದು ಬೈದಾಡದಿರಿ’ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ಮೊದಲ ಬಾರಿಗೆ ಡಿಪಿ ವಿವರಣೆ ಮತ್ತು ಧ್ವನಿಯ ಮೂಲಕ ಕಾರ್ಯಕ್ರಮ ನಿರೂಪಣೆ ಮಾಡಿದ್ದು ಕ್ಲಬ್ ಹೌಸ್ ವಿಶೇಷವಾಗಿತ್ತು.
ಬೈಗುಳಕ್ಕೆ ಹೆಚ್ಚು ಬಳಕೆ ಮಾಡುವ ಒಂದು ಪಕ್ಷಿಯ ಹೆಸರೆಂದರೆ ಅದು ಗೂಬೆ. ಆದರೆ ಗೂಬೆಯನ್ನು ಕೇವಲ ಬೈಗುಳಕ್ಕೆ ಮಾತ್ರ ಸೀಮಿತವಲ್ಲ. ಅದನ್ನು ಹೊರತು ಪಡಿಸಿ ಗೂಬೆಯ ಜೀವನ ಶೈಲಿ ನೋಡಿದರೆ ಅಚ್ಚರಿ ಯಾಗುತ್ತದೆ. ಚಿಕ್ಕವಯಸ್ಸಿನಿಂದ ಮನೆಯಲ್ಲಿ ಕಾಡಿನ ಒಡನಾಟದಲ್ಲಿ ಬೆಳೆಯುವಾಗ ಗೂಬೆ ಗೂಬೆ ಪದವನ್ನು ಹೆಚ್ಚಾಗಿ ಬಳಸುತ್ತಿದ್ದರು. ಹೀಗಾಗಿ ಗೂಬೆಗಳ ಬಗ್ಗೆ ನನ್ನ ಆಸಕ್ತಿ ಹೆಚ್ಚಾಯಿತು. ಮೈಸೂರಿನ ಸುತ್ತ ಮುತ್ತ ಜಾಗಗಳು ಮತ್ತು ಕಾಡುಗಳಿಗೆ ಭೇಟಿ ನೀಡಿ ಅವುಗಳ ಛಾಯಾಚಿತ್ರ ತೆಗೆಯಲಾರಂಭಿಸಿದೆ. ಬಳಿಕ ಅದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ವಿಶ್ವವಾದ್ಯಂತ ಒಟ್ಟಾರೆ 250 ಕ್ಕೂ ಹೆಚ್ಚು ಗೂಬೆಗಳ ಪ್ರಭೇದಗಳಿವೆ. ಇದೊಂದು ರಾತ್ರಿ ಸಂಚಾರ ಮಾಡುವ ಪಕ್ಷಿ. ಆಕಾರದಲ್ಲಿ ಅಗಲವಾದ ಹಣೆ, ಬೈನ್ಯಾಕುಲರ್ ದೃಷ್ಟಿ ಹೊಂದಿರುವ ಕಣ್ಣುಗಳು ಇದರ ವಿಶೇಷತೆ. ಗೂಬೆಗಳ ಕವಿ ಕಣ್ಣಿಗೆ ಕಾಣಿಸದಿದ್ದರೂ ಸೂಕ್ಷ್ಮ ಶಬ್ಧವನ್ನು ಗ್ರಹಿಸುವ ಶಕ್ತಿ ಹೊಂದಿದೆ. ಹದ್ದಿನಂತಹ ಕೊಕ್ಕು, ಚಪ್ಪಟ್ಟೆ ಮುಖ, ಮುಖದಲ್ಲಿ ೬೦ ಭಾಗದಷ್ಟು ದೊಡ್ಡ ಕಣ್ಣು ಹೊಂದಿರುತ್ತದೆ. ಗೂಬೆಗಳು ಬೇರೆ ಪಕ್ಷಿಗಳನ್ನು ಬೇಟೆಯಾಡುತ್ತವೆ. ಚಿಕ್ಕ ಚಿಕ್ಕ ಪ್ರಾಣಿಗಳು ಹೆಚಾಗಿ ಇಲಿ ಇದರ ಆಹಾರ. ಕೆಲವು ಬಾರಿ ದೊಡ್ಡ ಗೂಬೆಗಳು ಚಿಕ್ಕ ಚೂಬೆಗಳನ್ನು ತಿನ್ನುತ್ತವೆ. ವಿಶೇಷ ಕಣ್ಣುಗಳಿರುವುದರಿಂದ ದೂರ ದಲ್ಲಿ ಇರುವುದು ತುಂಬಾ ಚೆನ್ನಾಗಿ ಅವುಗಳಿಗೆ ಕಾಣಿಸುತ್ತದೆ.
ಅದರ ಕತ್ತಿನ ಭಾಗ ೨೭೦ಡಿಗ್ರಿ ತಿರುಗುವ ಶಕ್ತಿ ಹೊಂದಿವೆ ಎಂದು ವಿವರಿಸಿದರು. ಬೆಂಗಳೂರಿನಲ್ಲಿ ಅವು ಹೆಚ್ಚಾಗಿ ಕ್ಯಾಕ್ಟಸ್ ಮರದಲ್ಲಿ, ಟೆಲಿಫೋನ್ ವೈರ್‌ಗಳು ಮತ್ತು ನೈಸ್ ರೋಡ್ ನಲ್ಲಿ ಕಾಣಸಿಗುತ್ತದೆ. ಮರದ ಕೊಂಬೆಯ ಬಣ್ಣಕ್ಕೆ ತನ್ನ ಮೈ ಬಣ್ಣವನ್ನು ಹೊಂದಿಸುವ ಶಕ್ತಿ ಗೂಬೆಗಳಿಗಿದೆ. ಇದರಿಂದ ಗಂಡು ಗೂಬೆಗಳಿಗೆ ರಾತ್ರಿಯ ಸಮಯದಲ್ಲಿ ಹೆಣ್ಣು ಗೂಬೆಯನ್ನು ಸಂಪರ್ಕ ಮಾಡುವುದಕ್ಕೆ ಸಹಾಯವಾಗುತ್ತದೆ. ಗೂಬೆಗಳಲ್ಲಿ ಹೆಣ್ಣು ಗೂಬೆ ಗಾತ್ರ ದಲ್ಲಿ ದೊಡ್ಡದು. ಇದರ ಗರ್ಭಾವದಿ ೩೦ರಿಂದ ೩೭ ದಿನ. ಮೊಟ್ಟೆ ಇಟ್ಟ ನಂತರ ಒಂದು ವಾರದಲ್ಲಿ ಒಂದು ಮೊಟ್ಟೆ ಒಡೆಯುತ್ತದೆ, ಮತ್ತೊಂದು ಮುಂದಿನ ವಾರ. ಆಹಾರ ಸಿಗದಿರುವ ಜಾಗದಲ್ಲಿ ಮೊದಲನೇ ಮರಿಗೆ ತಾಯಿ ಹೆಚ್ಚು ಆಹಾರ ನೀಡುತ್ತದೆ.
ಗೂಬೆಗೆ ಹಗಲೂ ಕಣ್ಣು ಕಾಣಿಸುತ್ತದೆ ಗೂಬೆಗಳಿಗೆ ಬೆಳಗ್ಗಿನ ಸಮಯದಲ್ಲಿ ಕಣ್ಣು ಕಾಣುವುದಿಲ್ಲ ಎಂಬ ಅಪಪ್ರಚಾರ ಮತ್ತು ಅಪನಂಬಿಕೆ ಇದೆ.
ಗೂಬೆಗೆ ದೂರದ ವಸ್ತು ಸ್ಪಷ್ಟವಾಗಿ ಕಾಣಿಸುತ್ತದೆ ಆದರೆ ಹತ್ತಿರದಲ್ಲಿರುವ ವಸ್ತು ಅಸ್ಪಷ್ಟವಾಗಿ ಕಾಣಿಸುತ್ತದೆ. ಇದನ್ನು ಅರಿಯದೆ ಅನೇಕರು ಗೂಬೆಗೆ
ಹಗಲು ಕಣ್ಣು ಕಾಣುವುದಿಲ್ಲ ಎಂದು ನಂಬಿದ್ದಾರೆ ಎಂದು ಸಾಗರ್ ಸುರೇಶ್ ಹೇಳಿದರು.
ಬ್ರೀಡಿಂಗ್
ಬೆಳಗಿನ ಹೊತ್ತು ಬೇರೆ ಪಕ್ಷಿಗಳಿಂದ ತೊಂದರೆ ಇರುವುದರಿಂದ ಅದರ ಸುತ್ತಲಿನ ವಾತಾವರಣಕ್ಕೆ ಅನುಗುಣವಾಗಿ ಮೈ ಬಣ್ಣವನ್ನು ಹೋಂದಿಸಿಕೊಳ್ಳು ತ್ತದೆ. ಇದರ ಮೊಟ್ಟೆ ವೃತ್ತಾಕಾರದಲ್ಲಿ ಇದ್ದು, ಒಂದು ಬಾರಿಗೆ ಒಂದರಿಂದ ಒಂದು ಡಜನ್ ತನಕ ಮೊಟ್ಟೆ ಇಡುತ್ತದೆ. ಒಮ್ಮೆ ಮೊಟ್ಟೆ ಇಟ್ಟ ಬಳಿಕ ಮತ್ತೆ ಅದೇ ಗಂಡಿನ ಜತೆ ಮಿಲನ ಮಾಡುವುದಿಲ್ಲ. ಗೂಬೆ ಮಿಲನದಿಂದ ಪ್ರಾರಂಭವಾಗಿ, ಮೊಟ್ಟೆ ಇಡಲು ಮೂರರಿಂದ ನಾಲ್ಕು ತಿಂಗಳಕಾಲ ತೆಗೆದು ಕೊಳ್ಳುತ್ತದೆ.
ಪುರಾಣ ಮತ್ತು ಸಂಸ್ಕೃತಿ
ಗೂಬೆಯನ್ನು ಲಕ್ಷ್ಮಿದೇವಿಯ ವಾಹನವಾಗಿ ಗುರುತಿಸಲಾಗಿದೆ. ಗೂಬೆ ಕಾಣಿಸಿಕೊಂಡರೆ ಲಕ್ ಮತ್ತು ದುಡ್ಡು ಸಿಗುತ್ತದೆ ಎಂದು ನಂಬುತ್ತಾರೆ. ಹೀಗಾಗಿ ಗೂಬೆಯನ್ನು ಸಾಯಿಸಿ ಮನೆಯಲ್ಲಿ ಹೂಳುವ ಪದ್ದತಿ ಹಿಂದೆ ಇತ್ತು ಎನ್ನಲಾಗಿದೆ.
ಗೂಬೆಗಳು ಮತ್ತು ಜೀವನ ಶೈಲಿ ?
ಚುಕ್ಕಿಯ ಗೂಬೆ (ಅಥೇನ) : ಸಂಜೇ ವಾಕಿಂಗ್ ಸಮಯ, ಕೆರೆಗಳ ಬಳಿ ಸೂರ್ಯಾಸ್ಥದ ಸಮಯದಲ್ಲಿ ಹೆಚ್ಚು ಸದ್ದು ಮಾಡುತ್ತದೆ. ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚು ವಾಸ. ಹೆಚ್ಚು ನಗರ ಪ್ರದೇಶಗಳಲ್ಲಿ ವಾಸಿಸುತ್ತದೆ.
? ಬಿಳಿ ಗೂಬೆ: ಹಿಂದಿನ ಕಾಲದಲ್ಲಿ ಹೆಚ್ಚು ಮಾಟ, ಮಂತ್ರಕ್ಕೆ ಬಳಸುತ್ತಿದ್ದರು ಎನ್ನಲಾಗಿದೆ. ಈ ಪ್ರಭೇದ ಪ್ರಪಂಚದಾದ್ಯಂತ ಕಾಣಸಿಗುತ್ತದೆ. ಆದರೆ ಗುರುತಿ ಸಲು ತುಂಬಾ ಕಷ್ಟ. ಹಾರುವ ಶಬ್ಧ ಕೇಳಿಸುವುದಿಲ್ಲ. ಹಿಂದಿನ ಕಾಲದಲ್ಲಿ ಚರ್ಚ್ ಮತ್ತು ದೇವಸ್ಥಾನದಲ್ಲಿ ವಾಸ ಮಾಡುತ್ತಿತ್ತು. ಈಗ ಪಾಳು ಬಿದ್ದಿರುವ ಮನೆ, ತೆಂಗಿನ ಮರದಲ್ಲಿ ಹೆಚ್ಚು ವಾಸ ಮಾಡುತ್ತವೆ.
? ಜಂಗಲ್ ಓಲೆಟ್: ಇದರ ಮೈ ಮೇಲೆ ಪಟ್ಟೆ ಗುರುತಿದ್ದು, ಕಾಡಿನಲ್ಲಿ ಚಳಿಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.
? ಚಿಕ್ಕ ಕೊಂಬಿನ ಗೂಬೆ : ಯೂರೋಪ್‌ನಿಂದ ಪ್ರತಿ ವರ್ಷ ಭಾರತಕ್ಕೆ ವಲಸೆ ಬರುತ್ತದೆ ಮತ್ತು ಅದೇ ಜಾಗಕ್ಕೆ ವಾಪಸಾಗುತ್ತದೆ. ಹೊಲ, ಗದ್ದೆ, ತೆರೆದ
ಪ್ರದೇಶದಲ್ಲಿ ಕಾಣಿಸುತ್ತದೆ. ಎತ್ತರದ ಮರದ ಮೇಲೆ ವಾಸಿಸುತ್ತದೆ.
? ಬ್ರೌನ್ ಹಾಕ್ ಓಲ್: ನಮ್ಮ ಭಾಗದಲ್ಲಿ ಕಾಣಿಸುವುದು ಸ್ವಲ್ಪ ಕಷ್ಟ. ಹದ್ದಿನ ರೀತಿ ಮೈಕಟ್ಟು ಹೊಂದಿರುತ್ತದೆ.
ಗೂಬೆ ಕೂಡ ರೈತ ಮಿತ್ರ
? ಬ್ರೌನ್ ಫಿಶ್ ಓಲ್ ಹೆಚ್ಚಾಗಿ ಮೀನು ತಿಂದು ಬದುಕುತ್ತದೆ. ಅತಿ ಹೆಚ್ಚು ಸಂಶೋಧನೆಗೊಳಗಾಗಿರುವ ಗೂಬೆ.
? ಗೂಬೆಗಳ ಗುಂಪಿಗೆ ’ಪಾರ್ಲಿಮೆಂಟ್’ ಎಂದು ಕರೆಯಲಾಗುತ್ತದೆ.
? ಎಲ್ -ಲ್ ಪ್ರಪಂಚದ ಅತೀ ಚಿಕ್ಕದಾದ ಗೂಬೆ. ಇದು ಮೆಕ್ಸಿಕೋದಲ್ಲಿ ಕಾಣಸಿಗುತ್ತದೆ.
? ವಿಶ್ವದಲ್ಲೇ ಇಂಡಿಯನ್ ಈಗಲ್ ಓಲ್ ಅತೀ ದೊಡ್ಡ ಗೂಬೆ.
? ಆಗಸ್ಟ್ ನಾಲ್ಕರಂದು ವಿಶ್ವಾದ್ಯಂತ ಗುಬೆಗಳ ದಿನವಾಗಿ ಆಚರಿಸಲಾಗುತ್ತದೆ.
? ಸಣ್ಣ ಗಾತ್ರದ ಗೂಬೆಗಳು: ಓರಿಯಂಟಲ್ ಬೇ ಓಲ್, ಶ್ರೀಲಂಕಾ ಬೇ ಓಲ್, ಇಂಡಿಯನ್ ಕಾಪ್ಸ್ ಓಲ್, ಓರಿಯಂಟಲ್ ಕಾಪ್ಸ್ ಓಲ್, ಬೌನ್ ಮಾ-.
? ದೊಡ್ಡ ಗಾತ್ರದ ಗೂಬೆಗಳು: ಮಾಟಲ್ ಉಡ್ ಓಲ್, ಬ್ರೌನ್ ಉಡ್ ಓಲ್, ಬ್ರೌನ್ ಫಿಶ್ ಓಲ್. ಇಂಡಿಯನ್ ಈಗಲ್ ಓಲ್, ಸ್ಪಾಟ್ ಬೆಲಿಡ್ ಈಗಲ್ ಓಲ್.
***
ಪಕ್ಷಿಗಳಲ್ಲೇ ಬುದ್ದಿವಂತ ಪ್ರಾಣಿ ಗೂಬೆ. ಬೈಯ್ಯಲು ಮತ್ತು ತೆಗಳಲಿಕ್ಕೆ ಆಹಾರವಾಗುವಂತಹ ಪಕ್ಷಿಯ ಹೆಸರು ಗೂಬೆ. ಅದನ್ನು ಕೇವಲ ಬಯ್ಯಲು
ಮಾತ್ರವಲ್ಲ, ಅದರ ವೈಶಿಷ್ಠ್ಯವನ್ನೂ ನಾವು ತಿಳಿದುಕೊಳ್ಳಬೇಕು. ಸಾಗರ್ ಸುರೇಶ್ ಮೈಸೂರು ಸೇರಿದಂತೆ ವಿಶ್ವದ ನಾನಾ ಕಡೆ ೧೪ ಹೆಚ್ಚು ಪ್ರಬೇದದ ಗೂಬೆಗಳ ಛಾಯಾಚಿತ್ರ ತೆಗೆದಿದ್ದಾರೆ. ಕೂತೂಹಲದ ಮಾಹಿತಿ ಕಲೆಹಾಕಿದ್ದಾರೆ.
-ವಿಶ್ವೇಶ್ವರ ಭಟ್, ಪ್ರದಾನ ಸಂಪಾದಕರು,
ವಿಶ್ವವಾಣಿ ದಿನಪತ್ರಿಕೆ