Thursday, 12th December 2024

ಗಂಡಸರಿಗಿಂತ ಹೆಣ್ಣು ಮಕ್ಕಳಿಗೆ ಅಧ್ಯಾತ್ಮ ಅತ್ಯಗತ್ಯ

Bhramarambha Maheshwari

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಹಿಳಾ ವೇದೋಪಾಸಕಿ ಭ್ರಮರಾಂಭ ಮಹೇಶ್ವರಿ ಅಭಿಮತ

ಬೆಂಗಳೂರು: ಸಾಮಾನ್ಯವಾಗಿ ವೇದಾಧ್ಯಯನ ಪುರುಷರಿಗಷ್ಟೆ ಸೀಮಿತವಾಗಿದೆ ಎಂದರೆ ತಪ್ಪಿಲ್ಲ. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು
ವೇದಾಧ್ಯಯನ ಮಾಡಿ ಗೌರವ ಸಂಪಾದಿಸುವುದರೊಂದಿಗೆ ತನ್ನ ರಕ್ಷ ಣೆ ಮಾಡಿಕೊಳ್ಳಬಹುದು ಎಂದು ಪ್ರಬಲವಾಗಿ ಪ್ರತಿಪಾದಿಸಿದವರು ಮಹಿಳಾ ವೇದೋಪಾಸಕಿ ಡಾ ಪಿ. ಭ್ರಮರಾಂಭ ಮಹೇಶ್ವರಿ.

ಭ್ರಮರಾಂಭ ಮಹೇಶ್ವರಿ ಅವರು ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಹಲವು ಸಂದೇಶಗಳನ್ನು ನೀಡಿದ್ದಾರೆ. ಮೂಲತಃ ಮೈಸೂರು ಜಿ ತಿ. ನರಸೀಪುರದ ಜಮೀನ್ದಾರ ಕುಟುಂಬದಲ್ಲಿ ಭ್ರಮರಾಂಭ ಜನಿಸಿದರು. ತಂದೆ ನಿಧನದ ಬಳಿಕ ಅವರಲ್ಲಿ ಎರಡು ಪ್ರಮುಖ ಪ್ರಶ್ನೆ ಗಳು ಮೂಡಿದವು. ಪೂಜೆ ಪುರಸ್ಕಾರ ಏಕೆ ಮಾಡ ಬೇಕು ಮತ್ತು ಇವುಗಳನ್ನು ಗಂಡಸರೇ ಯಾಕೆ ಮಾಡಿ ಸಬೇಕು ಎಂಬುದೇ ಆ ಪ್ರಶ್ನೆಗಳಾಗಿದ್ದವು.

1988ರಲ್ಲಿ ವೇದಗಳ ಬಗ್ಗೆ ಆಸಕ್ತಿ ಬೆಳೆಸಿ ಕೊಂಡು ತಮ್ಮಲ್ಲಿದ್ದ ಕುತೂಹಲಗಳಿಗೆ ಉತ್ತರ ಕಂಡು ಕೊಂಡರು. ವಿದ್ವಾಂಸರಾದ ದಿ. ವೆಂಕಟರಾಮ ಶರ್ಮ ಅವರ ಬಳಿ ಉಪನಿಷತ್‌ಗಳ ಬಗ್ಗೆ ಅಭ್ಯಾಸ ಮಾಡಿದ್ದೇನೆ. ವಿದ್ವಾನ್ ಘನಪಾಠಿ ಕೃಷ್ಣ ಭಟ್ ಅವರಿಂದ ಸಸ್ವರ ವೇದಪಾಠ ಮತ್ತು ವೇದೋಕ್ತ ಯಜ್ಞ, ವೇದೋಕ್ತ ಸಂಸ್ಕಾರಗಳ ಬಗ್ಗೆ ಮಾರ್ಗದರ್ಶನ ಪಡೆದಿದ್ದೇನೆ. ವೇದ ಕರ್ಮವನ್ನು ಪ್ರತಿಪಾದಿಸುತ್ತದೆ. ವೇದವನ್ನು ಒಂದು ವ್ರತವನ್ನಾಗಿ ಅಭ್ಯಸಿಸಿದಾಗ ಮಾತ್ರ ನಮಗೆ ಸಂಪೂರ್ಣ ಅರ್ಥ ಸಿಗಲು ಸಾಧ್ಯ.

ಮನುಷ್ಯನಾಗಿ ಹುಟ್ಟಿದ ಮೇಲೆ ೧೬ ಸಂಸ್ಕಾರ ಪೂರೈಸಲೇಬೇಕು. ಆತ್ಮಕ್ಕೆ ಗಂಡು-ಹೆಣ್ಣು ಎಂಬ ಬೇಧವಿಲ್ಲ. ಗಂಡಸರಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಅಧ್ಯಾತ್ಮ ಅತ್ಯಗತ್ಯ ಎಂದು ಹೇಳಿದರು.

ಸಾಧಕರು ಸಾಧನೆ ಮಾಡಲು ತೊಂದರೆ ಅಡ್ಡಿಯಾಗುವುದು ಸಹಜ. ವೇದಾಧ್ಯಯನ, ಪೌರೋಹಿತ್ಯ ಅಧ್ಯಯನ ಮಾಡಬೇಕಾದರೆ ದುರ್ಭೀನು
ಹಾಕಿ ಕೊಂಡು ನೋಡಿದವರೆ ಹೆಚ್ಚು. ವೇದಗಳು ಪರಮಾತ್ಮನ ಕೃಪೆ. ಜೀವನದಲ್ಲಿ ಏನು ಬೇಕು ಆ ವಿಚಾರ ಗಳನ್ನು ತಿಳಿದು ಕೊಳ್ಳುವುದು ವೇದಗಳಿಂದ. 1984ರಲ್ಲಿ ನಮ್ಮ ತಂದೆ ನಿಧನರಾದರು. ಸಾವು ಮತ್ತು ಕಷ್ಟ ಯಾವ ಮಾನದಂಡದ ಮೇಲೆ ಬರುತ್ತದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದೆ. ನನ್ನ ಗುರುಗಳನ್ನು ಪ್ರಶ್ನೆ ಕೇಳಿದೆ. ಎರಡು ಪ್ರಶ್ನೆಗೆ ಉತ್ತರ ಕೊಡುತ್ತೇನೆ ಮೂರನೇ ಪ್ರಶ್ನೆ ಬಂದರೆ ಏನು ಮಾಡುತ್ತೀಯಾ ಅಂದರು. ಜೀವನದಲ್ಲಿ ಪ್ರಶ್ನೆಗಳು ಬರುತ್ತಲೇ ಇದೆ ಎಂದು ತಿಳಿಸಿದರು.

ಸನಾತನ ಧರ್ಮದ ಆಧಾರದ ಮೇಲೆ ನಿಂತಿರುವ ಭಾರತದಲ್ಲಿ ವೇದಗಳ ಬಗ್ಗೆ ಮಹಿಳೆಯರಿಗೆ ತಿಳುವಳಿಕೆ ಇಲ್ಲ. ವೇದಗಳಲ್ಲಿ ಸೀಯರಿಗೆ ಉನ್ನತ ಸ್ಥಾನಮಾನ ನೀಡಿದೆ. ಉಪನಯನ ಎಂಬುದು ನಮಗೆ ಅವಕಾಶ ಇದ್ದಂತೆ. ಉಪನಯನ ನಂತರ ವೇದಾಧ್ಯಯನ ಶಾಸೋಕ್ತವಾಗಿ ನಡೆಸಿಕೊಂಡು ಬರುತ್ತಿದ್ದೇನೆ. ನಾಲ್ಕು ವೇದಗಳನ್ನು ಅಧ್ಯಯನ ಮಾಡಿದೆ.

ಬ್ರಹ್ಮಯಜ್ಞ , ಸಂಧ್ಯಾವಂದನೆ ಕುರಿತು ಅಧ್ಯಯನ ಮಾಡಿದ್ದೇನೆ. ಅಗ್ನಿಹೋತ್ರ ಮಾಡುವುದು ಕಲಿತೆ. 20-25 ಮಹಿಳೆಯರ ಜತೆಗೂಡಿ ಹಿಂದಿ ಭಜನೆಗಳನ್ನು ಮಾಡಿದ್ದೇನೆ. ಜೀವನದಲ್ಲಿ ಯಾರು ಯಜ್ಞಗಳನ್ನು ಮಾಡು ತ್ತಾರೋ ಅವರು ಚೆನ್ನಾಗಿ ಇರುತ್ತಾರೆ ಎಂಬ ಸಂದೇಶವನ್ನು ಅವರು ನೀಡಿದರು.

***

ಡಾ. ಭ್ರಮರಾಂಭ ಮಹೇಶ್ವರಿ ಅವರು ವೈದಿಕ ಪರಂಪರೆ ಮುಂದುವರಿಸಿ ಕೊಂಡು ಹೋಗುತ್ತಿದ್ದಾರೆ. 34 ವರ್ಷಗಳಿಂದ ವೇದ ಮತ್ತು ಪೌರೋಹಿತ್ಯ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರಥಮ ಮಹಿಳಾ ಪುರೋಹಿತರು ಇವರು. ಹೋಮ- ಹವನ, ಶುಭಕಾರ್ಯಗಳು, ಸಂಸ್ಕಾರಗಳನ್ನು
ಶಾಸೋಕ್ರವಾಗಿ ನೆರವೇರಿಸುವುವಲ್ಲಿ ಸಿದ್ಧಹಸ್ತರು. ಮಹಿಳೆಯರು ಮತ್ತು ಪುರುಷರರಿಗೆ ವೇದ- ಪೌರೋಹಿತ್ಯ ತರಬೇತಿ ನೀಡುತ್ತಿದ್ದಾರೆ. ಸಂಗೀತ
ತರಗತಿಗಳನ್ನು ನಡೆಸುತ್ತಿದ್ದಾರೆ. ವಿದೇಶಿ ವಿದ್ಯಾರ್ಥಿ ಗಳು ಇವರಿಂದ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

-ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕರು

ವಿಶ್ವವರ, ಕಾತ್ಯಾಯಿಸಿ, ಗಾರ್ಗಿ ವೇದ ಮಾತೆಯರು. ಭ್ರಮರಾಂಭ ತಾಯಿ ಮಾರ್ಗದರ್ಶನ ಪಡೆಯುವುದು ನಮ್ಮ ಪುಣ್ಯ. ತಾಯಿ ಸಾಂಗಮಂಗಲವಾಗಿ ವೇದಾಧ್ಯ ಯನ ಮಾಡಿದ್ದಾರೆ.
– ಶ್ರೀ ಶಿವರುದ್ರ ಸ್ವಾಮೀಜಿ, ಬೇಲಿಮಠ

ವೇದಗಳ ಬಗ್ಗೆ ಒಂದಿಷ್ಟು
…. ? ವೇದಗಳಲ್ಲಿ ಜಾತೀಯತೆ ಇಲ್ಲ.
? ಛಿದ್ರವಾಗಿರುವ ಸಮಾಜವನ್ನು ಒಂದುಗೂಡಿಸುವುದು ವೇದ.
? ಸಮಾಜವನ್ನು ಒಂದು ಮಾಡಲು ಸನಾನತ ಧರ್ಮದ ಬಗ್ಗೆ ತಿಳಿದುಕೊಳ್ಳಬೇಕು.
? ಉದಾತ್ತ ಚಿಂತನೆಗಳಿಂದ ನಾವು ಮಾಡುವ ಕಾರ್ಯದಲ್ಲಿ ಪ್ರೀತಿ ಹುಟ್ಟುತ್ತದೆ.
? ಹೆಣ್ಣುಮಕ್ಕಳು ಶ್ರಾದ್ಧ ಮಾಡುವುದರಲ್ಲಿ ತಪ್ಪೇನಿಲ್ಲ.
? ವೇದಗಳಿಂದ ಉತ್ತಮ ವ್ಯಕ್ತಿಗಳನ್ನಾಗಿ ಪರಿವರ್ತಿಸಲು ಸಾಧ್ಯ.
? ಮನುಷ್ಯನಾಗಿ ಹುಟ್ಟಿದ ಮೇಲೆ ೧೬ ಸಂಸ್ಕಾರ ಪೂರೈಸಲೇಬೇಕು.