Sunday, 15th December 2024

ಮಿತ ಸಕ್ಕರೆ ಬಳಕೆ; ಆರೋಗ್ಯಕ್ಕೆ ಪೂರಕ

ವಿಶ್ವವಾಣಿ ಕ್ಲಬ್‌ಹೌಸ್‌ – 251

ಡಾ.ಕೆ.ಸಿ ರಘು ಅರಿವಿನ ಉಪನ್ಯಾಸ

ಏಕದಳ ದಾನ್ಯ ಬಳಕೆ ಕಮ್ಮಿ ಮಾಡಿ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ಡಯಾಬಿಟಿಸಿಗೆ ಪ್ರತ್ಯೇಕ ಡಯೆಟ್ ಇದಿಯೇ? ಬೇರೆ ರೀತಿಯ ಆಹಾರ ಪದ್ಧತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೇ? ಎಂದು ಹಲವರು ಕೇಳುತ್ತಾರೆ. ಡಯಾಬಿಟಿಸ್‌ಗೆ ಯಾವುದೇ ಪ್ರತ್ಯೇಕ ಡಯೆಟ್ ಇಲ್ಲ. ಯಾವುದೇ ಬೇರೆ ಆಹಾರ ಪದ್ಧತಿ ಪಾಲಿಸುವುದೂ ಬೇಡ. ನಿಯಂತ್ರಣ ಮಾಡಲಿಕ್ಕೆ ಒಳ್ಳೆಯ ಆಹಾರ ಪದ್ಧತಿ ಇದ್ದರೆ ಸಾಕು. ಸಕ್ಕರೆ ಕಾಯಿಲೆ ಇರುವವರು ಮಾತ್ರ ಸಕ್ಕರೆ ಕಮ್ಮಿ ಬಳಸಬೇಕು ಎಂದು ಇಲ್ಲ. ಕಾಯಿಲೆ ಇಲ್ಲದವರು ಹೆಚ್ಚು ಬಳಸುವುದರಿಂದ ಮುಂದೊಂದು ದಿನ ಈ ಕಾಯಿಲೆಗೆ ಒಳಗಾಗಬಹುದು.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಡಯಾಬಿಟಿಸ್ : ಏನು ತಿನ್ನಬೇಕು? ಏನು ತಿನ್ನಬಾರದು?’ ವಿಶೇಷ ಕಾರ್ಯಕ್ರಮದಲ್ಲಿ ಆಹಾರ ತಜ್ಞ ಡಾ. ಕೆ.ಸಿ.ರಘು ಅರಿವಿನ ಉಪನ್ಯಾಸ ನೀಡಿದರು. ಆರೋಗ್ಯಕ್ಕೆ ಪೂರಕವಾದ ಯಾವುದೇ ಆಹಾರವಾದರೂ ಡಯಾಬಿಟಿಸ್‌ಗೆ ಒಳಗಾದವರು ಬಳಸಬಹುದಾಗಿದೆ. ನನಗೆ ಹೀಗೆ ಆಗಿದೆ, ನಾನು ಕಾಯಿಲೆಗೆ ತುತ್ತಾಗಿದ್ದೇನೆ, ನಾನು ಇದನ್ನು ತಿನ್ನಬಾರದು, ಅದನ್ನು ಮುಟ್ಟಬಾರದು ಎಂಬ ಪಾಪ ಪ್ರಜ್ಞೆ ಇದ್ದರೆ, ಅದನ್ನು ನಿಮ್ಮ ತಲೆಯಿಂದ ತೆಗೆದುಹಾಕಿ. ಅನೇಕ ವೈವಿದ್ಯಮಯವಾದ ರೀತಿಯ ಆಹಾರಗಳಿವೆ. ಆದರೆ ಅದರಲ್ಲಿ ಮೂರು ಗುಂಪುಗಳಿವೆ. ಆ  ಪುಗಳ ಸಮಾನ್ಯ ಜ್ಞಾನ ನಮಗೆ ಇರಬೇಕು ಎಂದರು.

ಏಕದಳ ದಾನ್ಯ ಬಳಕೆ ಕಮ್ಮಿ ಮಾಡಿ: ಕಾರ್ಬೋ ಹೈಡ್ರೇಟ್, ಪ್ರೋಟೀನ್, ಫ್ಯಾಟ್ ಎಂದು ಮೂರು ಗುಂಪಿನ ಆಹಾರಗಳಿವೆ. ಈ ಮೂರು ಪೌಷ್ಟಿಕಾಂಶದಿಂದಲೇ ನಮ್ಮ ದೇಹಕ್ಕೆ ಶಕ್ತಿ ಬರುವುದು. ಅದರಲ್ಲಿ ಕಾರ್ಬೋ ಹೈಡ್ರೇಟ್ ಆಹಾರ ಪದಾರ್ಥಗಳು ಸಕ್ಕರೆ ಕಾಯಿಲೆಗೆ ನೇರ ಸಂಬಂಧ ಹೊಂದಿದೆ. ಇದನ್ನು ಏಕದಳ ಧಾನ್ಯ ಗಳಾದ ಅಕಿ, ಅಲುಗೆಡ್ಡೆ, ಸಿರಿಧಾನ್ಯ, ಗೋಧಿ, ರಾಗಿ ಹೀಗೆ ಅನೇಕ ಆಹಾರ ಪದಾರ್ಥಗಳು ನಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ ಎಂದರು.

ಭಾರತದಲ್ಲಿ ಅತಿಹೆಚ್ಚು ಏಕದಳ ದಾನ್ಯಗಳೆ ಬೆಳೆಯಲಾಗುತ್ತದೆ. ಕಾಳುಗಳನ್ನು ಕಮ್ಮಿ ಬೆಳೆಯಲಾಗುತ್ತದೆ. ಭಾರತದಲ್ಲಿ ಸರಿಸುಮಾರು ೧೬೦ ಮಿಲಿಯನ್ ಟನ್ ಏಕದಳ ದಾನ್ಯವನ್ನು ಬೆಳೆಯಲಾಗುತ್ತದೆ. ಇದರಲ್ಲಿ ಅಕ್ಕಿ ಮತ್ತು ಗೋದಿ ಹಿಟ್ಟು ಹೆಚ್ಚು ಬಳಕೆಯಾಗುತ್ತದೆ. ಭಾರತದಲ್ಲಿ ಬಡ ಜನರು ಶೇ.೮೦ ಅಕ್ಕಿ ಮತ್ತು ಗೋಧಿಯನ್ನು ದೇಹದ ಶಕ್ತಿಗಾಗಿ ಬಳಸುತ್ತಾರೆ. ಬಳಕೆ ಮಾಡುವುದು ತಪ್ಪಲ್ಲ ಆದರೆ ಅದರ, ಕ್ವಾಲಿಟಿ ಮತ್ತು ಕ್ವಾಂಟಿಟಿ ತಪ್ಪಾಗಿದೆ. ಏಕದಳ ದಾನ್ಯ ಕ್ವಾಂಟಿಟಿ ಕಮ್ಮಿ ಮಾಡಿ, ಕ್ವಾಲಿಟಿ ಹೆಚ್ಚು ಮಾಡಬೇಕಿದೆ ಎಂದರು.

ನಾವು ತಿನ್ನುವ ಆಹಾರದಲ್ಲಿ ನಾರಿನ ಅಂಶವಿಲ್ಲ!: ಇಂದಿನ ಕಾಲ ದಲ್ಲಿ ನಾವು ಬಳಸುತ್ತಿರುವ ಆಹಾರಗಳಲ್ಲಿ ದೇಹಕ್ಕೆ ಶಕ್ತಿ ನೀಡುವ ನಾರಿನ ಅಂಶವೇ ಇಲ್ಲ. ಅಕ್ಕಿಯನ್ನು ಪಾಲಿಶ್ ಮಾಡುವ ಮೂಲಕ ಅದರಲ್ಲಿರುವ ಪೌಷ್ಟಿಕಾಂಶವನ್ನು ತೆಗೆಯಲಾಗುತ್ತಿದೆ. ಗೋದಿ ಹಿಟ್ಟಿನಲ್ಲಿ ನಾರಿನ ಅಂಶವನ್ನು ತೆಗೆದು ಕೇವಲ ಹಿಟ್ಟನ್ನು ನಮಗೆ ನೀಡಲಾಗುತ್ತಿದೆ. ನಾರಿನ ಅಂಶ ದನ-ಕರುಗಳು ತಿನ್ನುವ ಬೂಸದಲ್ಲಿದೆ. ನಾರಿನ ಅಂಶವಿರುವ ಆಹಾರ ವನ್ನು ಸೇವನೆ ಮಾಡುವುದರಿಂದ ಆಹಾರದ ಜೀರ್ಣ ಕ್ರಿಯೆ ನಿದಾನಗತಿಯಲ್ಲಿ ಆಗುತ್ತದೆ. ನಿದಾನವಾಗಿ ಜೀರ್ಣವಾಗುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಶೇಕರಣೆ ಆಗುವುದಿಲ್ಲ. ಹೀಗಾಗುವುದರಿಂದ ಸಕ್ಕರೆ ಕಾಯಿಲೆ ಬರುವುದಿಲ್ಲ.

ರಕ್ತಕ್ಕೆ ಶೇ.೫ ಮಾತ್ರ ಸಕ್ಕರೆ ಅಂಶವನ್ನು ಶೇಕರಣೆ ಮಡುವ ಶಕ್ತಿ ಇರುತ್ತದೆ. ರಕ್ತಕ್ಕೆ ಹೆಚ್ಚಿನ ಸಕ್ಕರೆ ಅಂಶವನ್ನು ಹಿಡಿದಿಡುವ ಶಕ್ತಿ ಇರುವುದಿಲ್ಲ. ಶೇ.೫ಕ್ಕೂ ಹೆಚ್ಚಿನ ಅಂಶ ದೇಹಕ್ಕೆ ಸೇರಿದರೆ ಕೊಬ್ಬಾಗಿ ದೇಹದಲ್ಲಿ ಉಳಿಯುತ್ತದೆ. ನಾರಿನ ಅಂಶವಿಲ್ಲದ ಆಹಾರ ಸೇವನೆ ಇಂದ ರಕ್ತಕ್ಕೆ ಸ್ಟಾರ್ಚ್ ಪ್ರವಾಹವಾಗಿ ಬಂದು ಸೇರುತ್ತದೆ ಎಂದರು.

ಆಹಾರದಲ್ಲಿ ಹೆಚ್ಚು ಹಣ್ಣು, ತರಕಾರಿ ಬಳಸಿ
ಮನುಷ್ಯ ಹಿಂದೆ ಹಣ್ಣು ಹಂಪಲು ತಿನ್ನುವುದರ ಮೂಲಕ ದೇಹಕ್ಕೆ ಬೇಕಾದ ಸಕ್ಕರೆ ಅಂಶವನ್ನು ಪಡೆಯುತ್ತಿದ್ದ. ಯಾವುದೇ ರೀತಿ ಶೇಕರಣೆ
ಮಾಡು ತ್ತಿರಲಿಲ್ಲ. ಸಕ್ಕರೆಯನ್ನು ಕಂಡುಹಿಡಿದ ಮೇಲೆ ಹಣ್ಣಿನಲ್ಲಿರುವ ಸಕ್ಕರೆ ಅಂಶ ದೇಹಕ್ಕೆ ಸೇರುವುದಲ್ಲದೇ, ಮನೆಯಲ್ಲಿ ಶೇಕರಣೆ ಮಾಡಿದ ಸಕ್ಕರೆ ಬಳಸುವುದರಿಂದ ಹೆಚ್ಚಿನ ಅಂಶ ದೇಹಕ್ಕೆ ಸೇರುತ್ತಿದೆ ಎಂದರು.

ಜೀವನದಲ್ಲಿ ಒಳ್ಳೆ ಆಹಾರ ಪದ್ಧತಿಯನ್ನು ಪಾಲಿಸುವುದರಿಂದ ಈ ಡಯಾಬಿಟಿಸ್ ನಿಂತ್ರಣ ಮಾಡಬಹುದಾಗಿದೆ. ಕಾಯಿಲೆಯನ್ನು ನಿಮ್ಮ ಕೈ ಹಿಡಿತಕ್ಕೆ ತೆಗೆದುಕೊಳ್ಳಬಹುದು. ಆದರೆ ಅದು ನಿಮ್ಮ ಕೈನಲ್ಲಿದೆ. ಶುಗರ್ ಇದ್ದವರೂ ಕೂಡ ನಮಗೆ ಇದೇನಾಗಿದೆ ಎಂದು ತಲೆ ಕೆಡೆಸಿಕೊಳ್ಳದೆ ಕುಶಿಯಾಗಿ ಜೀವನ ಮಾಡಿ ಎಂದರು.

ಏಕದಳ ದಾನ್ಯಗಳನ್ನು ಮನೆಗೆ ತರುವುದನ್ನೇ ಕಮ್ಮಿ ಮಾಡಿ.
ಆಹಾರದಲ್ಲಿ ತರಕಾರಿ,ಕಾಳು, ಹಣ್ಣು ತಿನ್ನಿ.
ನಿಮ್ಮ ಆಹಾರ ಬಳಕೆಯನ್ನು ಬದಲು ಮಾಡಿ.
ಒಂದು ವಾರದಲ್ಲಿ ಅದ್ರ ಪರಿತಾಂಶ ನಿಮಗೇ ಗೊತ್ತಾಗುತ್ತದೆ.
ನಿದಾನವಾಗಿ ಅಕ್ಕಿಯನ್ನು ಹೆಚ್ಚು ಬಳಸುವುದರಿಂದ ಹೊರಗೆ ಬನ್ನಿ.

‘ಬೈ’ಯಾಲಾಜಿ : ಮನೆಗೆ ನಾವು ಏನು ತರಬೇಕು(ಬೈ) ಎಂದು ಯೋಚಿಸಬೇಕು. ಎಲ್ಲಾ ಹಣ್ಣಿನಲ್ಲಿ ಶೇ.೮೫ರಷ್ಟು ನೀರಿನ ಅಂಶ ಹೊಂದಿರುತ್ತದೆ. ಸ್ವಲ್ಪ ಸಕ್ಕರೆ ಬೆರೆಸಿದರೆ ಸಂಪೂರ್ಣ ಸಕ್ಕರೆ ಅಂಶವೇ ಆಗುತ್ತದೆ. ಎಣ್ಣೆ ಕಾಳು-ಬೇಳೆ ಕಾಳು ಹೆಚ್ಚು ಮಾಡಿ ಏಕದಳ ಧಾನ್ಯ ಕಮ್ಮಿ ಮಾಡಿ.

ಆಲುಗೆಡ್ಡೆಯನ್ನು ನಾವು ತರಕಾರಿ ಎಂದು ಬಳಸುತ್ತೇವೆ. ಆದರೆ ವಿದೇಶದಲ್ಲಿ ಅದನ್ನು ಏಕದಳ ದಾನ್ಯವಾಗಿ ಬಳಸುತ್ತಾರೆ. ಸ್ಟಾಚ್ ರೂಟ್ ಆಗಿರುವ ಆಲುಗೆಡ್ಡೆಯನ್ನು ನಾವು ಆಹಾರವಾಗಿ ಬಳಸುತ್ತೇವೆ. ಅದು ಸಕ್ಕರೆ ಅಂಶವನ್ನು ದೇಹದಲ್ಲಿ ಹೆಚ್ಚು ಮಾಡುತ್ತದೆ. ಲೈಟ್ ಹಾಕಿ ಮಲಗಿದರೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚು ಮಡುತ್ತದೆ. ರಾತ್ರಿ ಮಲಗುವಾಗ ಲೈಟ್ ಆಫ್ ಮಾಡಿ ಮಲಗಿ.

ಹಣ ಹೆಚ್ಚಾದಂತೆ ಸ್ಟೇಟಸ್ ಫೂಡ್ ಬಳಸುತ್ತಾರೆ ಎಂಬ ಮಾತಿದೆ.
ಜೀವನವನ್ನು ಪರಿಪೂರ್ಣವಾಗಿ ಬದುಕಬೇಕು.
ಸಾಧ್ಯವಾದಷ್ಟು ಸಂಸ್ಕರಿಸಿದ ಆಹಾರವನ್ನು ಬಳಸಿ.
ಆಹಾರದಲ್ಲಿ ವೈವಿದ್ಯತೆಯನ್ನು ಇರಿಸಿ, ಸ್ವಲ್ಪ ಬ್ಯಾಲೆಂಸ್ ಮಾಡಿಕೊಂಡು ಹೋಗಬೇಕು.
ಬೊಜ್ಜಿಗೆ ಕೇವಲ ಎಣ್ಣೆ ಕಾರಣವಲ್ಲ. ಏಕದಳ ದಾನ್ಯವು ಕಾರಣವಾಗುತ್ತದೆ.
ಕಾಯಿಲೆಗಳಲ್ಲಿ ಶೇ.೯೦ ಕಾಯಿಲೆಗಳು ವಾಸಿ ಮಾಡಬಹುದಾಗಿದೆ