ಕ್ಲಬ್‌ಹೌಸ್ – ಭಾಗ ೨೫೨
ಪೋಷಕರೇ ನಿಮ್ಮ ಮಕ್ಕಳು ತಪ್ಪು ಮಾತನಾಡಿದರೆ ಬೈಯಬೇಡಿ, ತಿದ್ದಿಹೇಳಿ
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅರಿವಿನ ಉಪನ್ಯಾಸ
ಬೆಂಗಳೂರು: ಮಾತು ಮತ್ತು ಭಾಷೆ ಕ್ರಮಬದ್ಧವಾದ ಬೆಳವಣಿಗೆ. ಮಗುವಿನ ಮಾತು-ಭಾಷೆ ಕಲಿಕೆ ಎರಡೂ ನಿಮ್ಮ ಕೈಯಲ್ಲಿದೆ. ಅದರಲ್ಲಿ ವಿಳಂಬ ಕಂಡು ಬಂದರೆ ತಕ್ಷಣ ವಾಕ್-ಶ್ರವಣ ತಜ್ಞರ ಸಲಹೆ ಪಡೆಯಿರಿ. ಯಾಂತ್ರಿಕತೆಯಿಂದ ಮಗುವನ್ನು ದೂರವಿಡಿ. ಮಗುವನ್ನು ಮನೆಯ ಮಂದಿ ಹೆಚ್ಚು ಮಾತನಾಡಿಸಿ. ಪೋಷಕರಿಬ್ಬರೂ ಕೆಲಸ ಮಾಡುವಾಗ ಅವರ ಕಷ್ಟ ಅರ್ಥವಾಗುತ್ತದೆ. ಆದರೆ ನಿಮ್ಮ ಕೆಲಸದ ಒತ್ತಡದ ಮಧ್ಯೆ ಮಗುವಿಗೆ ಸಮಯ ನೀಡಿ ಎನ್ನುವ ಸಲಹೆಯನ್ನು ಡಾ. ಪುಷ್ಪವತಿ ಅವರು ನೀಡಿದರು.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಮಕ್ಕಳೊಂದಿಗೆ ಮಾತಾಡೋದು ಹೇಗೆ?’ ಕಾರ್ಯಕ್ರಮದಲ್ಲಿ ಮೈಸೂರು ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಪುಷ್ಪವತಿ ಅರಿವಿನ ಉಪನ್ಯಾಸ ನೀಡಿದರು. ಮಕ್ಕಳಲ್ಲಿ ಮಾತು-ಭಾಷೆ ಮತ್ತು ಕಿವಿ ತೊಂದರೆ ನೋಡುತ್ತೇವೆ. ಈ ಸಮಸ್ಯೆ ಹಸುಗೂಸಿನಿಂದ ಹಿರಿಯರ ತನಕ ಬರುತ್ತದೆ. ಉದಾಹರಣೆಗೆ ಒಂದು ಮಗುವಿಗೆ ನಾಲ್ಕು ವರ್ಷ. ಆ ಮಗುವಿಗೆ ಕೇವಲ ನಾಲ್ಕು ಪದ ಮಾತ್ರ ಮಾತನಾಡುತ್ತಿದೆ.
ಸಂಸಾರದಲ್ಲಿ ಗಂಡ-ಹೆಂಡತಿ ಇಬ್ಬರು ಕೆಲಸ ಮಾಡುತ್ತಿರುವಾಗ ಮಗುವನ್ನು ನೋಡಿಕೊಳ್ಳುವುದಕ್ಕೆ ಒಬ್ಬ ಸಹಾಯಕಿಯನ್ನು ಇಡಲಾಗಿದೆ. ಮನೆಯಲ್ಲಿ ಟಿವಿ, ಆಟದ ವಸ್ತುಗಳು ಸೇರಿದಂತೆ ಮಗುವಿಗೆ ಬೇಕಾದ ಎಲ್ಲಾ ಸಮಾಗ್ರಿಗಳೂ ತಂದು ಇಡಲಾಗಿದೆ. ಮನೆಯಲ್ಲಿ ಎಲ್ಲಾ ಸೌಲಭ್ಯವಿದ್ದರೂ ಏಕೆ ಹೀಗೆ ಆಗುತ್ತಿದೆ?. ಮಗುವಿಗೆ ಇದ್ಯಾವುದೂ ಬೇಕಾಗಿಲ್ಲ. ಮಗು ಮಾತನಾಡಲು ಅದಕ್ಕೆ ಬೇಕಾಗಿರುವುದು ಕೂಡ ಕೇವಲ ಮಾತು ಎಂದರು. ಅನೇಕ ಪೋಷಕರಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿರುವ ಅಂಶ ಎಂದರೇ, ಮಗು ಎಲ್ಲವನ್ನು ಅರ್ಥ ಮಾಡಿ ಕೊಳ್ಳುತ್ತಿದೆ ಆದರೆ ಮಾತನಾಡುತ್ತಿಲ್ಲ.
ಹಾಗಾದರೆ ಏಕೆ ಮಾತನಾಡುವುದಿಲ್ಲ? ಮಗು ಮಾತನಾಡಲು ಮೊದಲನೆಯದಾಗಿ ಅದಕ್ಕೆ ಕಿವಿ ಕೇಳಬೇಕು. ಕೇಳುವ ಶಬ್ದ ಮಿದುಳಿಗೆ ಹೋಗಿ ಅಲ್ಲಿಂದ ಏನು ಮಾತನಾಡಬೇಕು ಎಂಬ ಸಂದೇಶ ಅಂಗಳಿಗೆ ಬಂದಾಗ ಶ್ವಾಸಕೋಶದಿಂದ ಗಾಳಿ ಬರುತ್ತದೆ. ಆ ಗಾಳಿಯ ಮೂಲಕ ಶಬ್ಧ ಬರುತ್ತದೆ. ಸಾಮಾ
ನ್ಯವಾಗಿ ಮಾತನಾಡಲು ಈ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಕಿವಿ ಕೇಳಿಸದ ಸಮಸ್ಯೆ ಅಥವಾ ಕೇಳಿಸಿದರೂ ಮಿದುಳಿ ನಿಂದ ಸಂದೇಶ ಬರುವುದಿಲ್ಲ ಎಂದರೆ ಮಹಿಳೆಯರು ಗರ್ಭಾವಸ್ಥೆಯಲ್ಲಿದ್ದಾಗ ಏನಾದರು ಸಮಸ್ಯೆ ಆಗಿರಬಹುದು. ಎಲ್ಲರಿಗೂ ಮಾತನಾಡಲು ನಾಲಿಗೆ ಮುಖ್ಯ.
ನಾಲಿಗೆ ಗಾತ್ರ ಚಿಕ್ಕದಾಗಿದ್ದು ಅಥವ ದಪ್ಪ ಇದ್ದರೇ ಉಚ್ಛಾರಣೆ ತೊಂದರೆಯಾಗುತ್ತದೆ. ಇಲ್ಲವಾದರೆ ಶಬ್ಧ ಹೊರಬರಲು ಗಂಟಲಿನಲ್ಲಿ ಏನಾದರು
ಸಮಸ್ಯೆ ಇರುತ್ತದೆ. ಈ ಯಾವ ಸಮಸ್ಯೆಯೂ ಇಲ್ಲ. ಆದರೂ ಮಗು ಮಾತನಾಡುತ್ತಿಲ್ಲ ಎಂದರೆ ಕೂಡಲೆ ತಜ್ಞರನ್ನು ಸಂಪರ್ಕಿಸಿ ಎಂದರು. ಮಗು ಹುಟ್ಟಿದ ಕೂಡಲೇ ಮಾತನಾಡುತ್ತದಯೇ ಎಂದು ಕೇಳುವುದಾದರೆ, ಹೌದು ಮಗು ತಾಯಿ ಗರ್ಭದಿಂದ ಹೊರ ಬಂದ ಕೂಡಲೇ ಮೊದಲ ಅಳುವಿನ ಮೂಲಕ ನಾನು ಬಂದಿದ್ದೇನೆ ಎಂದು ಜೋರಾಗಿ ಅಳುವ ಮೂಲಕ ಸೂಚಿಸುತ್ತದೆ. ನಂತರ ಹಂತ ಹಂತವಾಗಿ ಮಾತನಾಡಲು ಪ್ರಾರಂಭ ಮಾಡುತ್ತದೆ.
ದೈಹಿಕ ಬೆಳವಣಿಗೆ ಗಮನಿಸಿ: ಈ ಎಲ್ಲಾ ಅಂಶವನ್ನು ಗಮಸಿಸುವುದರೊಂದಿಗೆ ಮಗುವಿನ ದೈಹಿಕ ಬೆಳವಣಿಗೆಯನ್ನು ಗಮನಿಸಬೇಕು.
೬ ತಿಂಗಳಿಗೆ ಮಗು ಏನಾದರು ಹಿಡಿದುಕೊಂಡು ಓಡಾಡುತ್ತದೆ. ಒಂದು ವರ್ಷಕ್ಕೆ ಸ್ವಂತವಾಗಿ ಹೊರಗೆ ಹೋಗುತ್ತದೆ. ಹಿಂದಿನ ಕಾಲದಲ್ಲಿ ಮನೆ ತುಂಬಾ ಜನ. ಹುಟ್ಟಿದ ಮಗುವಿನೊಂದಿಗೆ ಹೆಚ್ಚು ಮಾತನಾಡುತ್ತಿದ್ದರು. ಇಂದಿನ ಕಾಲದಲ್ಲಿ ಅವಿಭಕ್ತ ಕುಟುಂಬವೇ ಇಲ್ಲ. ಮಾತನಾಡುವ ವಾತಾವರಣ ಅಥವ ಆಟ ಆಡುವ ವಾತಾವರಣವೇ ಇಲ್ಲ. ಮಗು ಕೈನಲ್ಲಿ ಮೊಬೈಲ್, ಟಿವಿ ರಿಮೋಟ್ ನೀಡಿ ನಂತರ ಮಗು ಮಾತನಾಡುತ್ತಿಲ್ಲ ಎಂದು ಪೋಷಕರು ಕೊರಗುತ್ತಾರೆ ಎಂದರು.
ಮಕ್ಕಳಿಗೆ ಅಗತ್ಯವಿರುವುದು ಮಾತು. ಮಗುವಿನೊಂದಿಗೆ ಮಗುವಿನ ತರಹ ಮಾತನಾಡಿ. ಅದರೊಟ್ಟಿಗೆ ಆಟ ಆಡಿ. ಆದರೆ ಮನೆಯಲ್ಲಿ ಅಜ್ಜಿ-ತಾತ,
ಮಾಮ,ಅತ್ತೆ ಯಾರು ಇಲ್ಲದಿರುವುದು ಇಂದಿನ ಜ್ವಲಂತ ಸಮಸ್ಯೆಯಾಗಿದೆ. ಹಾಗಾದರೆ ಅಪ್ಪ-ಅಮ್ಮ! ಅವರೂ ಕೆಲಸದ ವತ್ತಡದಲ್ಲಿ ಮುಳುಗಿ ಮಗು ವಿನ ಕೈಗೆ ಮೊಬೈಲ್ ಕೊಟ್ಟು ಕೂರಿಸುತ್ತಾರೆ. ದಯವಿಟ್ಟು ಹಾಗೆ ಮಾಡಬೇಡಿ. ಮಗುವಿಗೆ ಮಾತನಾಡಲು ಬಿಟ್ಟೇ ಇಲ್ಲ. ಮಾತನಾಡುವಾಗ ತಪ್ಪು ಮಾತನಾಡಲು ಬಿಟ್ಟಿಲ್ಲ . ತಪ್ಪು ಮಾಡಲು ಬಿಡದಿದ್ದರೆ, ಅದನ್ನು ಸರಿ ಮಾಡುವ ಅವಕಾಶವಿಲ್ಲ. ಮಕ್ಕಳೊಂದಿಗೆ ಮಾತನಾಡಿ ಎಂದಾಕ್ಷಣ ಏನೇನೋ ಮಾತನಾಡುವುದಲ್ಲ. ಮನೆಯವರ ಪರಿಚಯ ಮಾಡುವ ಮೂಲಕ ಸಣ್ಣ ಸಣ್ಣ ಪದಗಳನ್ನುಮಾತನಾಡಿ. ಧಾವಂತದಲ್ಲಿ ಏನೇನೋ ಹೇಳಿ ಕೊಡು ವುದು ಬೇಡ ಎಂದರು.