ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – ೧೯೧
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅಮ್ಮನ ಅಡುಗೆ: ಸಂಪ್ರದಾಯದ ಅಡುಗೆ ಕುರಿತು ಅರಿವಿನ ಉಪನ್ಯಾಸ
ಬೆಂಗಳೂರು: ಹಳೆಯ ಕಾಲದಲ್ಲಿ ಶುದ್ಧ ತರಕಾರಿ, ಒಳ್ಳೆ ಕಡೆಲೆ ಕಾಯಿ ಎಣ್ಣೆ ಬಳಸಿ ಬಿಸಿ ಬಿಸಿ ಅಡುಗೆ ಮಾಡಲಾಗುತ್ತಿತ್ತು. ಆದ್ದರಿಂದ ಹಿಂದಿನ ಕಾಲದವರು ಆರೋಗ್ಯವಾಗಿರುತ್ತಿದ್ದರು. ನಮ್ಮ ಸಾಂಪ್ರದಾಯಿಕ ಅಡುಗೆಯಲ್ಲಿ ರುಚಿ ಮಾತ್ರವಲ್ಲ, ಆರೋಗ್ಯವೂ ಇರುತ್ತದೆ. ಆದರೆ, ಈಗಿನವರಿಗೆ ಆರೋಗ್ಯಕ್ಕಿಂತ ರುಚಿ ಮಾತ್ರ ಮುಖ್ಯ.
ಬುಧವಾರ ವಿಶ್ವವಾಣಿ ಕ್ಲಬ್‌ಹೌಸ್ ಆಯೋಜಿಸಿದ್ದ ಅಮ್ಮನ ಅಡುಗೆ: ಸಂಪ್ರದಾಯದ ಅಡುಗೆ ಕುರಿತು ಅರಿವಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರಿನ ಅವಧೂತ ಅರ್ಜುನ್ ಗುರೂಜಿ ಅವರ ತಾಯಿ, ರಂಗಲಕ್ಷ್ಮಿ ಅವರು ಹಿಂದಿನ ಕಾಲದ ಅಡುಗೆ ವ್ಯವಸ್ಥೆ, ಅಡುಗೆ ವಿಧಾನ, ವಿವಿಧ ರೀತಿಯ ಅಡುಗೆಗಳ ಬಗ್ಗೆ ಮಾಹಿತಿ ನೀಡಿದರು.
ಹಿಂದಿನ ಕಾಲದಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡಲಾಗುತ್ತಿತ್ತು. ಹಳೆ ಕಾಲದ ಆಹಾರದಲ್ಲಿ ರುಚಿಯ ಜತೆಗೆ ಒಳ್ಳೆಯ ಆರೋಗ್ಯ ಲಭಿಸುತ್ತಿತ್ತು. ಇಂದಿನ ಕಾಲದಲ್ಲಿ ಯಾರಿಗೂ ಆರೋಗ್ಯಕರ ಆಹಾರ ಬೇಡವಾಗಿದೆ. ಕೇವಲ ರುಚಿ ಮಾತ್ರ ಅಪೇಕ್ಷಿಸುತ್ತಾರೆ. ಈ ಕಾರಣಕ್ಕಾಗಿಯೇ ಜನ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಆನ್‌ಲೈನ್ ಮೂಲಕ ಆಹಾರಗಳನ್ನು ತರಿಸುವ ಪದ್ಧತಿ ಹೆಚ್ಚಾಗಿದೆ. ಮನೆಯಲ್ಲಿ ತಯಾರಿಸಿದ ಆಹಾರದಲ್ಲಿ ಸಿಗುವ ಆರೋಗ್ಯ, ಹೊರಗಿನ ಆಹಾರಗಳಲ್ಲಿ ಸಿಗುವುದಿಲ್ಲ.
ನಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿದ್ದುದನ್ನು ನೋಡಿಕೊಂಡು, ನಾನು ಸಾಂಪ್ರದಾಯಿಕ ಅಡುಗೆ ಮಾಡಲು ಕಲಿತೆ. ಅಂತಹ ಕೆಲವು ಆಹಾರಗಳಲ್ಲಿ ಕೂಟು, ಅಡೆದೋಸೆ, ಕಾಯಿ ಚಟ್ನಿ, ಸೆಟ್ ದೋಸೆ ಜತೆಗೆ ಟೊಮೇಟೊ ಮತ್ತು ದಪ್ಪು ಮೆಣಸಿನಕಾಯಿ ಹೆಚ್ಚು ರುಚಿ ನೀಡುತ್ತದೆ. ಇದಲ್ಲದೆ, ವಾಂಗಿಬಾತ್ ಜತೆಗೆ ರಾಯಿತ ಒಳ್ಳೆ ಕಾಂಬಿ ನೇಷನ್ . ಗರಂ ಗರಂ ತಿನಿಸುಗಳಲ್ಲಿ ಚಕ್ಕುಲಿ, ಸುಚ್ಚಿನ ಉಂಡೆ, ಮಾಟವಾಡಿ ಪಲ್ಯ ವಿಶೇಷ ಖಾದ್ಯಗಳಿವೆ ಎಂದು ವಿವರಿಸಿದರು. ಅಲ್ಲದೆ, ಕೆಲವು ಅಡುಗೆ ವಿಧಾನ ವನ್ನೂ ಹೇಳಿಕೊಟ್ಟರು.
ಕೂಟು ಮಾಡುವ ವಿಧಾನ
ಹುರುಳೀಕಾಯಿ, ಕ್ಯಾರೆಟ್, ಚಪ್ಪರದ ಅವರೇಕಾಯಿ, ಪಡುವಲಕಾಯಿ, ಅವರೇಕಾಳು ಹಾಕಿ ಮಾಡಿದ ಕೂಟು ತುಂಬಾ ರುಚಿಯಾಗಿರುತ್ತದೆ. ಈ ತರಕಾರಿಗಳನ್ನು
ಒಂದು ಕಡೆ ಮತ್ತು ಬೇಳೆ ಒಂದು ಕಡೆ ಬೇಯಿಸಿಟ್ಟು ಕೊಳ್ಳಬೇಕು. ಬಳಿಕ ಉದ್ದಿನಬೇಳೆ, ಕಡಲೇಬೇಳೆ, ಒಣ ಮೆಣಸಿನ ಕಾಯಿ ಮತ್ತು ಮೆಣಸು ಹುರಿದುಕೊಂಡು ಮಿಕ್ಸಿಯಲ್ಲಿ ತರಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಕಾಯಿತುರಿ, ಕೊಬ್ಬರಿ ತುರಿ ಹಾಕಿ ರುಬ್ಬಿದ ನಂತರ ಬೇಳೆ ಮತ್ತು ತರಕಾರಿಯನ್ನು ಬೆರೆಸಿ ಉಪ್ಪು, ಜೀರಿಗೆ,
ಒಣಮೆಣಸಿನಕಾಯಿ, ಕರಿಬೇವು ಒಗ್ಗರಣೆ ಸೇರಿಸಬೇಕು.
ಅಡೆದೋಸೆ ಮಾಡುವ ವಿಧಾನ
ಅಡೆದೋಸೆ ತಿನ್ನುವುದರಿಂದ ಎಲ್ಲಾ ರೀತಿಯ ಪೌಷ್ಟಿಕಾಂಶ ಸಿಗುತ್ತದೆ. ಒಂದು ಪಾವು ಅಕ್ಕಿ, ತಲಾ ಅರ್ಧ ಪಾವು ಕಡಲೆಬೇಳೆ, ಉದ್ದಿನ ಬೇಳೆ, ಹೆಸರುಬೇಳೆ ಒಟ್ಟಿಗೆ ನೆನೆಸಿಡಬೇಕು. ನಂತರ ತರಿ ತರಿಯಾಗಿ ರುಬ್ಬಿಕೊಂಡು ಕೊನೆಗೆ ಹಸಿಮೆಣಸಿನಕಾಯಿ, ಒಣಮೆಣಸಿನ ಕಾಯಿ ರುಬ್ಬಿ ಹಿಟ್ಟಿಗೆ ಬೆರೆಸಬೇಕು. ಅದಕ್ಕೆ
ಉಪ್ಪು ತೆಂಗಿನಕಾಯಿ, ಜೀರಿಗೆ, ಇಂಗು ಸೇರಿಸಿ ಹೆಂಚು ಅಥವಾ ಕಾವಲಿ ಮೇಲೆ ಮೇಲೆ ಮಂದವಾಗಿ ಹಾಕಿ, ಕಂದು ಬಣ್ಣದವರೆಗೆ ಬೇಯಿಸಬೇಕು. ಇಂಥ ಒಂದು
ದೋಸೆ ತಿಂದರೆ ಸಾಕು, ಹೆಚ್ಚು ಪೌಷ್ಠಿಕತೆ ಸಿಗುತ್ತದೆ.
ಸೆಟ್ ದೋಸೆ ಮಾಡುವ ವಿಧಾನ
ಒಂದು ಪಾವು ಅಕ್ಕಿಗೆ ಒಂದು ಹಿಡಿ ಉದ್ದಿನ ಬೇಳೆ ನೆನೆಸಿಡಬೇಕು. ಅಲ್ಲದೆ, ಒಂದು ಚಮಚ ಕಡಲೆಬೇಳೆ, ಒಂದು ಚಮಚ ಹೆಸರು ಬೇಳೆ, ಅರ್ಧ ಚಮಚ ಮೆಂತ್ಯ ಹಾಕಿ ನೆನೆಸಿಡಿ. ಸಣ್ಣ ಕಪ್‌ನಲ್ಲಿ ಅವಲಕ್ಕಿ ತೊಳೆದು ನೆನೆಸಿಡಿ. ನಾಲ್ಕು ಗಂಟೆ ನೆನೆದ ನಂತರ ಎಲ್ಲವನ್ನೂ ಬೆರೆಸಿ ರುಬ್ಬಿ ಉಪ್ಪು ಬೆರೆಸಬೇಕು. ನಂತರ ಕಾವಲಿ ಯಲ್ಲಿ ದೋಸೆ ಬೇಯಿಸಬೇಕು. ಈ ವೇಳೆ ರೆಟ್ ಮತ್ತು ಕೊತ್ತಂಬರಿ ಉದುರಿಸಿ. ಚಟ್ನಿ, ಸಾಗು ಯಾವ ದಾದರೊಂದಿಗೆ ಸಿನ್ನಲು ರುಚಿಯಾಗಿರುತ್ತದೆ.
ಮಣ್ಣಿನ ಒಲೆಯ ಅಡುಗೆ ರುಚಿಯೇ ಬೇರೆ
ಹಿಂದೆಲ್ಲಾ ಮಣ್ಣಿನಿಂದ ಮಾಡಿದ ಒಲೆಗಳಲ್ಲಿ ಡುಗೆ ಮಾಡಲಾಗುತ್ತಿತ್ತು. ಈಗೆಲ್ಲಾ ಹಳ್ಳಿಗಳಲ್ಲಿ ಮಣ್ಣಿನ ಒಲೆ ಇದ್ದರೂ ಡುಗೆ ಮಾಡುವುದು ಕಮ್ಮಿ. ಹಿಂದಿನ ಕಾಲದ ಅಡುಗೆ ಮನೆಗಳನ್ನು ಇಂದು ನೋಡಲು ಕೂಡ ಸಾಧ್ಯವಿಲ್ಲ. ಆದರೆ, ಆ ಅಡುಗೆ ಮನೆಗಳಲ್ಲಿ ತಯಾರಿಸುವ ಆಹಾರದ ರುಚಿಯೇ ಬೇರೆ. ಈಗ ಏನೇ ಮಾಡಿದರೂ
ಹಿಂದಿನಂತಹ ರುಚಿಕಟ್ಟಾದ, ಆರೋಗ್ಯಯುತ ಆಹಾರ ಸಿಗುವುದು ಕಷ್ಟ ಎನ್ನುತ್ತಾರೆ ಮೈಸೂರಿನ ರಂಗಲಕ್ಷ್ಮಿ.
ಒಳ್ಳೆಯ ಆಹಾರದ ಆಯ್ಕೆ, ಒಳ್ಳೆಯ ಸಂಪ್ರದಾಯದ ಗುರುತು. ಮೂರು ವರ್ಷದಿಂದ ರಂಗಲಕ್ಷ್ಮಿ ಅಮ್ಮನವರು ಪರಿಚಿತರು. ಅತ್ಯಂತ ಪ್ರೀತಿಯಿಂದ ಅಡುಗೆ ಮಾಡಿ ಉಣಬಡಿಸುತ್ತಾರೆ. ಅವರ ಅಡುಗೆಯಲ್ಲಿ ಎಂದೂ ಫಾಸ್ಟ್ ಫುಡ್ ಸಂಸ್ಕೃತಿಯನ್ನು ಬೆರೆಸಿಲ್ಲ, ಬೆರೆಸಲು ಭಯಸುವುದೂ ಇಲ್ಲ. ಮೈಸೂರಿಗೆ ಭೇಟಿ ನೀಡಿ ದವರು ಇವರ ಸಾಂಪ್ರದಾಯಿಕ ಅಡುಗೆ ಸಂತರ್ಪಣೆ ಅನುಭವ ಪಡೆಯಿರಿ.
-ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ ಪತ್ರಿಕೆ
ನಾನು ಯಾವುದೇ ಊರಿಗೆ ಕಾರ್ಯಕ್ರಮದ ನಿಮಿತ್ತ ಹೋದಾಗ, ಯಾವಾಗ ಮನೆಗೆ ಹಿದಿರುಗುತ್ತೇನೆ ಅನ್ನಿಸುತ್ತದೆ. ಅವರ ಊಟದಲ್ಲಿ ಪ್ರೀತಿ ತುಂಬಿರುತ್ತದೆ.
ತಾಯಿಯೇ ಮೊದಲ ಗುರು ಎಂಬಂತೆ ನನ್ನ ತಾಯಿಯ ರೂಪದಲ್ಲೇ ಎಲ್ಲವನ್ನೂ ಮಾಡಿಸುತ್ತಿದ್ದಾನೆ ಭಗವಂತ.
– ಅವಧೂತ ಅರ್ಜುನ್ ಗುರೂಜಿ ಮೈಸೂರು