Friday, 20th September 2024

ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬಾರ್ನ್ ರಾಜೀನಾಮೆ

ಪ್ಯಾರಿಸ್: ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬಾರ್ನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಯುರೋಪಿಯನ್ ಚುನಾವಣೆಗೆ ಮುಂಚಿತವಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ತಮ್ಮ ಉನ್ನತ ತಂಡವನ್ನು ಪುನಾರಚಿಸಲು ಸಜ್ಜಾಗಿದ್ದಾರೆ ಎಂಬ ವರದಿಗಳ ಮಧ್ಯೆ ಅವರ ರಾಜೀನಾಮೆ ಬಂದಿದೆ.

ಎಲಿಜಬೆತ್ ಬಾರ್ನ್ ಅವರು ಅಧಿಕಾರದಲ್ಲಿದ್ದ ಸಮಯದಲ್ಲಿ ಧೈರ್ಯ, ಬದ್ಧತೆ ಮತ್ತು ದೃಢನಿಶ್ಚಯವನ್ನು ತೋರಿಸಿದ್ದಾರೆ ಎಂದು ಅಧ್ಯಕ್ಷ ಮ್ಯಾಕ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಧಾನಿ ಎಲಿಜಬೆತ್ ಬಾರ್ನ್ ಅವರ ರಾಜೀನಾಮೆಯನ್ನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅಂಗೀಕರಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.

ಮ್ಯಾಕ್ರನ್ ಎರಡನೇ ಅವಧಿಗೆ ಮರು ಆಯ್ಕೆಯಾದ ನಂತರ ಎಲಿಜಬೆತ್ ಬಾರ್ನ್ ಅವರನ್ನು ಮೇ 2022 ರಲ್ಲಿ ನೇಮಿಸಲಾಯಿತು. ಅವರು ಫ್ರಾನ್ಸ್ ನ ಎರಡನೇ ಮಹಿಳಾ ಪ್ರಧಾನ ಮಂತ್ರಿಯಾಗಿದ್ದರು. ಹೊಸ ಸರ್ಕಾರವನ್ನು ನೇಮಿಸುವವರೆಗೂ ಬೋರ್ನ್ ದೈನಂದಿನ ದೇಶೀಯ ಸಮಸ್ಯೆಗಳನ್ನು ನಿರ್ವಹಿಸುವುದನ್ನು ಮುಂದುವರಿಸುತ್ತಾರೆ ಎಂದು ಮ್ಯಾಕ್ರನ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ.