ವಿಶ್ವವಾಣಿ ಪತ್ರಿಕೆ ವರದಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ
ಕಾರಟಗಿ: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಮ್ಮದ್ ಅಜರುದ್ದೀನ್ ಅವರನ್ನು ಸೇವೆಯಿಂದ ಅಮಾನತು ಮಾಡಿ ರಾಯಚೂರು ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
‘ಪಾಠದ ನೆಪದಲ್ಲಿ ಸರಕಾರಿ ಶಿಕ್ಷಕನ ಕಾಮಚೇಷ್ಟೆ’ ಎಂಬ ವರದಿಯನ್ನು ವಿಶ್ವವಾಣಿ ಶನಿವಾರ ಪ್ರಕಟಿಸಿತ್ತು. ಈ ವರದಿಗೆ ಎಚ್ಚೆತ್ತಿರುವ ರಾಯಚೂರು ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈಷಬೇಂದ್ರಯ್ಯ ಅವರು ಅಜರುದ್ದೀನ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಮೊದಲು ದಂಡ ತೆತ್ತಿದ್ದ: ಸಂಚಲನ ಮೂಡಿಸಿದ ಈ ಶಿಕ್ಷಕನ ರಾಸಲೀಲೆ ವಿಡಿಯೊ ಪ್ರಕರಣಕ್ಕೆ ಸಂಬಂಧ ಈಗಾಗಲೇ ಆರೋಪಿ ಇಲ್ಲಿನ ಯುವಕರ ತಂಡವೊಂ ದಕ್ಕೆ ದಂಡ ತೆತ್ತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಇಲ್ಲಿನ ರಾಜಕೀಯ ಮುಖಂಡನ ಹಿಂಬಾಲಕರ ತಂಡವೊಂದು ರಾಸಲೀಲೆ ವಿಡಿಯೊಗಳನ್ನು ಇಟ್ಟು ಕೊಂಡು ಸಂಧಾನ ನಡೆಸಿತ್ತು. ನಂತರ ೨-೩ ಲಕ್ಷ ರು. ವಸೂಲಿ ಮಾಡಿ ಮುಚ್ಚಿ ಹಾಕಿದ್ದರು. ಈಗ ವಿಡಿಯೊಗಳು ಬೆಳಕಿಗೆ ಬಂದು ವೈರಲ್ ಆಗಿವೆ.
ಅತ್ಯಾಚಾರ ಪ್ರಕರಣ ದಾಖಲು
ಮಹಿಳೆಯೊಂದಿಗೆ ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರಿ ಶಾಲೆಯ ಶಿಕ್ಷಕ ಮಹಮ್ಮದ್ ಅಜರುದ್ದೀನ್ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
***
ಶಿಕ್ಷಕ ಅಜರುದ್ದೀನ್ ವಿರುದ್ಧ ಈಗಾಗಲೇ ಡಿಡಿಪಿಐ ಮತ್ತು ಬಿಇಒ ತನಿಖೆ ನಡೆಸುತ್ತಿದ್ದು, ಆತನನ್ನು ಸೇವೆಯಿಂದ ವಜಾ ಗೊಳಿಸಲಾಗಿದೆ. ಮಹಿಳೆಯ ದೂರು ಆಧರಿಸಿ ಎಫ್ಐಆರ್ ದಾಖಲಿಸಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಜರು ದ್ದೀನ್ ಅನಾಚಾರ ಗಳ ವೀಡಿಯೋ ಬಹಿರಂಗವಾಗುವ ಮುನ್ನವೇ ಶಿಕ್ಷಣ ಇಲಾಖೆ ಆತನ ವಿರುದ್ಧ ಕ್ರಮ ಜರುಗಿಸಿದೆ.
– ಬಿ.ಸಿ.ನಾಗೇಶ್ ಶಿಕ್ಷಣ ಸಚಿವ