ಲೇಖನ ಮಾಲೆ – 02
ಡಾ.ಶಿವಕುಮಾರ್ ಉಪ್ಪಳ
ಅರ್ಬುದರೋಗ ತಜ್ಙ ಮತ್ತು ಶಸ್ತ್ರ ಚಿಕಿತ್ಸಕ
ಬೆಂಗಳೂರು
ಅರ್ಬುದರೋಗ ವೈದ್ಯರ ಜೊತೆಗೆ ಅರ್ಬುದ ರೋಗ ಕುರಿತು ಸಮಾಲೋಚನೆ – FAQ
ಅರ್ಬುದ ( ಕ್ಯಾನ್ಸರ್ ) ಬರದಂತೆ ತಡೆಯಲು ಸಾದ್ಯವೇ?
ಮೊದಲನೆಯದಾಗಿ, ಮಕ್ಕಳಿಗೆ 9ರಿಂದ 12ವರೆಗಿನ ಪ್ರಾಯ ನಡುವೆ ಲಸಿಕೆ ನೀಡಿದರೆ, ವಯಸ್ಕಾರಾದಾಗ ಜನನೇಂದ್ರೀಯ ಮೂಲದ ಅರ್ಬುದರೋಗ ಬಾರದಂತೆ 90%ರಷ್ಟು ತಡೆಯಬಹುದು. ಇದರಲ್ಲಿ ಮಹಿಳೆಯರ ಗರ್ಭಾಶಯದ ಅರ್ಬುದರೋಗ ತಡೆ ಅತಿ ಮುಖ್ಯ ವಾಗಿದೆ.
ಇದರ ಜೊತೆಗೆ, ಅಧುನಿಕ ನಗರ ಜೀವಿತದ ಚಿಂತನೆಯಿಂದಾಗುವ ಜೀವನಶೈಲಿಯ ಬದಲಾವಣೆಗಳು ಕಾರಣವಾಗಿವೆ. ಮುಖ್ಯವಾಗಿ ತಡವಾಗಿ ಅಂದರೆ 30+ ಅಧಿಕ ವರ್ಷ ಪ್ರಾಯವಾದ ನಂತರ ಮದುವೆಯಾಗುವುದು, ಮಕ್ಕಳನ್ನು ಹೆರದಿರುವುದು, ಕಡಿಮೆ ಮಕ್ಕಳು, ಮಕ್ಕಳಿಗೆ ಹಾಲು ಉಣಿಸದಿರುವುದು, ಮಹಿಳೆಯರ ಪಾಲಿಗೆ ಅರ್ಬುದ ರೋಗ ಸಾಧ್ಯತೆ ಹೆಚ್ಚಿಸುತ್ತವೆ. ಜನಸಾಮಾನ್ಯರು ಅಧುನಿಕತೆಗೆ ಮಾರುಹೋಗಿ ಉತ್ತಮ ಆಹಾರ(ಡಯಟ್)ಪದ್ಧತಿ, ವ್ಯಾಯಾಮ, ಜೀವನಶೈಲಿ, ಹವ್ಯಾಸಗಳನ್ನು ರೂಡಿಸಿಕೊಳ್ಳಲು ವಿಫಲಾಗುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಅರ್ಬುದರೋಗ ಹೆಚ್ಚಾಗಲು ಇನ್ನೊಂದು ಕಾರಣ ಎನ್ನಬಹುದು.
ಯುವಜನತೆ ಬೀಡಿ-ಸಿಗರೇಟು, ಗುಟ್ಕಾ ಸೇವನೆ ಹಾಗೂ ಇತರೇ ದುಶ್ಚಟಗಳನ್ನು ಬೆಳೆಸಿಕೊಳ್ಳುವುದು ರೋಗಬರಲು ಕಾರಣವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಜೀವನಮೂಲಕ ಅರ್ಬುದರೋಗ ಬಾರದಂತೆ, ತಡೆಯುವ ಸ್ವಪ್ರಯತ್ನ ರೂಪಿಸಿಕೊಳ್ಳಬೇಕು.
ಅರ್ಬುದ ರೋಗದಲ್ಲಿ ಎಷ್ಟು ವಿಧಗಳಿವೆ?
ಮನುಷ್ಯನ ಚರ್ಮ, ಕಣ್ಣು, ಮೂಗು, ಕಿವಿ, ಕರುಳು, ಬಾಯಿ, ವಸಡು, ನಾಲಿಗೆ, ಎಲುಬು, ಸ್ಥನ, ಗರ್ಭಾಶಯ ಹೀಗೆ ದೇಹದ ಬಹುತೇಕ ಎಲ್ಲಾ ಭಾಗಗಳಲ್ಲೂ ಅರ್ಬುದರೋಗವನ್ನು ಕಾಣಬಹುದು. 100ಕ್ಕೂ ಅಧಿಕ ವಿಧಗಳಾಗಿ ಗುರುತಿಸಲಾಗಿದ್ದರೂ, ಪ್ರಮುಖವಾಗಿ ಘನ(ಅವಯವಗಳ) ಮತ್ತು ರಕ್ತ ಸಂಬಂಧಿ ಅರ್ಬುದರೋಗ ಎಂದು ಎರಡು ಮುಖ್ಯ ವಿಭಾಗಮಾಡಿದ್ದಾರೆ.
ಅರ್ಬುದ ರೋಗ ಶಸ್ತ್ರ ಚಿಕಿತ್ಸೆಯಲ್ಲಿ ನಿಮಗಾದ ಅತ್ಯಂತ ಕ್ಲಿಷ್ಟಕರ ಅನುಭವ?
ಪಶ್ಚಮಬಂಗಾಳದ ರೋಗಿಯೊಬ್ಬರು ಬೆಂಗಳೂರಿನ ಬಹುತೇಕ ಪ್ರತಿಷ್ಠಿತ ಖಾಸಗಿ ಮತ್ತು ರಾಷ್ಟ್ರಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ. ದವಡೆಯ ಪಕ್ಕೆಲುಬಿನ ಅರ್ಬುದರೋಗ ಅವರನ್ನು ಕಾಡುತ್ತಿತ್ತು. ಬಹಳ ವಿಷಮಪರಿಸ್ಥತಿ ಅವರದ್ದಾಗಿತ್ತು. ನರಸಂಬಂಧಿತ ಸಮಸ್ಯೆ ಮತ್ತು ದೃಷ್ಟಿ ಸಮಸ್ಯೆಯಿತ್ತು. ಜೀವನದ ಆಸೆಯ ಜೊತೆಗೆ ಹಣ ಹಾಗೂ ಧೈರ್ಯ ಎರಡನ್ನೂ ಕಳಕೊಂಡು ಪುನಹ ಸ್ವರಾಜ್ಯಕ್ಕೆ ಹೋಗುವ ಮನಸ್ಸು ಮಾಡಿದ್ದರು.
ನನ್ನ 14 ವರ್ಷಗಳ ವೈದ್ಯಕೀಯ ಅನುಭವದಲ್ಲಿ ಇದು ಬಹಳ ಪ್ರತ್ಯೇಕವಾಗಿ ಕಂಡಿತು, NGOಗಳ ಹಣಕಾಸು ಸಹಾಯದಿಂದ ಅವರಿಗೆ ಚಿಕಿತ್ಸೆ ನೀಡಿದೆ. ಪ್ರಾರಂಭದಲ್ಲೇ ಗುರುತಿಸಬಹುದಾದ ಬದಲಾವಣೆ ಕಂಡವು, ಈಗ ಅವರು ಚೇತರಿಸುತ್ತಿದ್ದಾರೆ. ಇನ್ನೇನು ಎಲ್ಲಾ ಮುಗಿಯಿತು ಎನ್ನುವ ಹಂತದಲ್ಲಿದ್ದ ಅವರ ಬದುಕಲ್ಲಿ ಬಹಳಷ್ಟು ಸುಧಾರಣೆ ಕಂಡಿದೆ. ಇದು ಒಬ್ಬ ವೈದ್ಯನಾಗಿ, ವೃತ್ತಿಜೀವನದಲ್ಲಿ ನನಗೆ ಅವಿಸ್ಮರಣೀಯ ಸಂಗತಿಯಾಗಿದೆ.
ಶಸ್ತ್ರ ಚಿಕಿತ್ಸೆ ಬಹಳ ದುಬಾರಿ, ಹೀಗಾಗಿ ಬಡವರಿಗೆ ಅರ್ಬುದ ರೋಗ ಚಿಕಿತ್ಸೆ ಸಾದ್ಯವಿಲ್ಲ ಎನ್ನುತ್ತಾರೆ?
ಇಂದಿನ ಅತ್ಯಾದುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಅರ್ಬುದ ರೋಗ ಚಿಕಿತ್ಸೆ ಅಷ್ಟಾಗಿ ದುಬಾರಿಯಾಗಲಿಲ್ಲ. ಅತ್ಯಂತ ನಿಖರವಾಗಿ ಶುಶ್ರೂಷೆ ಸಾಧ್ಯಕವಾಗುವ ನಿಟ್ಟಿನಲ್ಲಿ ನೂತನ ಅಂತರರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಯಂತ್ರೋಪಕಣಗಳು ಈಗ ಲಭ್ಯವಾಗಿದೆ. ಬಹುತೇಕ ಮಂದಿ ವಿಮೆಯನ್ನು ಹೊಂದಿರುವ ಕಾರಣ , ಅವರ ವೈದ್ಯಕೀಯ ವೆಚ್ಚಗಳು ಸದಾ ಕೈಗೆಟಕುವ ಮಟ್ಟದಲ್ಲಿರುತ್ತವೆ. ಅತ್ಯಗತ್ಯದ ಅತಿಬಡವರಿಗಾಗಿ ಕಿದ್ವಾಯಿ ಸ್ಮಾರಕ ಆಸ್ಪತ್ರೆಯಲ್ಲಿ ಹಾಗೂ NGOಗಳ ಧನಸಹಾಯದ ಮೂಲಕ ನಾವು ಶಸ್ತ್ರಚಿಕಿತ್ಸೆ ಪೂರೈಸುತ್ತೇವೆ. ಯಾವುದೇ ರೋಗಿ ಚಿಕಿತ್ಸೆ ವಂಚಿತನಾಗಬಾರದು ಎಂಬ ನಿಟ್ಟಿನಲ್ಲಿ ಬಹಳಷ್ಟು ಶ್ರಮವಹಿಸುತ್ತೇವೆ.
ಯಶಸ್ವೀ ವೈದ್ಯರಾದ ನಿಮ್ಮ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳೇನು?
ರಾಯಚೂರಿನ ಸಿಂಧನೂರು ತಾಲೂಕಿನ ದುರ್ಗಾಕ್ಯಾಂಪ್ ಎಂಬ ಗ್ರಾಮದಲ್ಲಿ ಜನಿಸಿದ ನಾನು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ನನಗೆ ಗ್ರಾಮೀಣ ಜನತೆಯ ನೋವು ಬವಣೆ ಮನದಾಳದಲ್ಲಿದೆ. ಸಿಂಧನೂರಲ್ಲಿ ಗ್ರಾಮೀಣ ಜನತೆಗಾಗಿ ಅರ್ಬುದ ಚಿಕಿತ್ಸೆ ವ್ಯವಸ್ಥೆಯನ್ನು ಪೂರೈಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರತಿ ಎರಡು ವಾರಕ್ಕೊಮ್ಮೆ ವೈದ್ಯಕೀಯ ವ್ಯವಸ್ಥೆ ಏರ್ಪಡಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಹಲವಾರು ಸಂಘಸಂಸ್ಥೆಗಳ ಆರೋಗ್ಯ ಪರಿಶೀಲನೆ ಚಿಕಿತ್ಸಾಶಿಬಿರಗಳಲ್ಲಿ ಭಾಗವಹಿಸಿ ಲಕ್ಷಾಂತರ ಗ್ರಾಮೀಣ ಜನತೆಯಲ್ಲಿ ಅರ್ಬುದರೋಗ ಅರಿವು ಮೂಡಿಸಿ ಹೆಮ್ಮೆಯಿದೆ.
ಬಡವರಿಗಾಗಿ ಅರ್ಬುದರೋಗ ಚಿಕಿತ್ಸಾಶಿಬಿರ ಏರ್ಪಡಿಸಲು ಆಸಕ್ತರು ಡಾ. ಶಿವಕುಮಾರ್ ಉಪ್ಪಳ (9611997444) ಅವರನ್ನು ಸಂಪರ್ಕಿಸಬಹುದು.