Sunday, 8th September 2024

ನಾಯಕನಾಗಿಯೂ ಸಮರ್ಥ ನಿರ್ವಹಣೆ

ವಿಶ್ವವಾಣಿ ವಿಶೇಷ

ಮೊದಲ ಅಧಿವೇಶನದಲ್ಲಿಯೇ ಸೈ ಎನಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ

ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಸುಗಮ ಕಲಾಪಕ್ಕೆ ಅವಕಾ

ಬೆಂಗಳೂರು: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಅಧಿವೇಶನ ಆರಂಭವಾಗಿ ವಾರ
ಕಳೆದಿದ್ದು, ಯಾವುದೇ ಗದ್ದಲ ಗಲಾಟೆಯಿಲ್ಲದೇ ಸರಾಗ ನಡೆಯುವ ಮೂಲಕ, ಬೊಮ್ಮಾಯಿ ಅವರಿಗೆ ಫುಲ್ ಮಾರ್ಕ್ಸ್ ದೊರೆತಿದೆ.

ಬಿಜೆಪಿ ಸರಕಾರದಲ್ಲಿ ಮುಖ್ಯ ಸಂಧಾನಕಾರನಾಗಿ ಹಾಗೂ ಸದನ ದಲ್ಲಿ ಸರಕಾರವನ್ನು ಡಿಫೆಂಡ್ ಮಾಡಿಕೊಂಡು, ಸರಕಾರದ ವಿಷಯವನ್ನು ಕಲಾಪಕ್ಕೆ ಮುಟ್ಟಿಸುವಲ್ಲಿ ಈ ಹಿಂದೆ ಬೊಮ್ಮಾಯಿ ಪ್ರಮುಖ ಪಾತ್ರವಹಿಸಿದ್ದರು. ಆದರೀಗ ಸಭಾನಾಯಕನಾಗಿ ಬೊಮ್ಮಾಯಿ ಅವರು ಕಲಾಪವನ್ನು ಯಾವ ರೀತಿ ನಡೆಸುತ್ತಾರೆ ಎನ್ನುವ ಕುತೂಹಲವಿತ್ತು. ಆದರೆ ಪ್ರತಿ ಹಂತದಲ್ಲಿಯೂ ಪ್ರತಿಪಕ್ಷದವರನ್ನು ವಿಶ್ವಾಸಕ್ಕೆ ತಗೆದುಕೊಂಡು ಸುಗಮ ಕಲಾಪ ನಡೆಸುವಲ್ಲಿ ಯಶಸ್ವಿ ಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.

ಈ ಬಾರಿಯ ಅಧಿವೇಶನದಲ್ಲಿ ಬೆಲೆ ಏರಿಕೆ, ಮೈಸೂರು ಗ್ಯಾಂಗ್ ರೇಪ್, ಕರೋನಾ ವೈಫಲ್ಯ ಸೇರಿದಂತೆ ವಿವಿಧ ವಿಷಯದ ಬಗ್ಗೆ ಪ್ರತಿಪಕ್ಷಗಳು ಸರಕಾರವನ್ನು ಕಟ್ಟಿ ಹಾಕಲು ಸಿದ್ಧತೆ ನಡೆಸಿಕೊಂಡಿದ್ದವು. ಅದರಲ್ಲಿಯೂ ಬೆಲೆ ಏರಿಕೆ ವಿಷಯವಾಗಿ, ಸದನದಲ್ಲಿ ಕೋಲಾಹಲವೇ ಸೃಷ್ಠಿಯಾಗುತ್ತದೆ ಎಂದು ಅನೇಕರು ಭಾವಿಸಿದ್ದರು.

ಆದರೆ ಬೊಮ್ಮಾಯಿ ಅವರು ಪ್ರತಿ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ರೀತಿಯ ಯಾವುದೇ ಸಮಸ್ಯೆ ಯಾಗದ ರೀತಿಯಲ್ಲಿ ಎಚ್ಚರ ವಹಿಸಿದರು. ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗ ಅಲ್ಲಿನ ಹಲವು ಶಾಸಕರು ಬೊಮ್ಮಾಯಿ ಅವರೊಂದಿಗೆ ವೈಯಕ್ತಿಕ ಸ್ನೇಹವಿದೆ. ಇನ್ನು ಕಾಂಗ್ರೆಸ್‌ನಲ್ಲಿ ಪ್ರಮುಖ ನಾಯಕ ರೊಂದಿಗೂ ಉತ್ತಮ ಒಡನಾಟ ವಿದೆ. ಮೊದಲಿನಿಂದಲೂ ಎಲ್ಲರೊಂದಿಗೂ ಬೆರೆತು, ವಿಶ್ವಾಸಕ್ಕೆ ತಗೆದುಕೊಳ್ಳುವ ಚಾಕಚಕ್ಯತೆ ಈಗ ಉಪಯೋ ಗಕ್ಕೆ ಬರುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಸಮರ್ಥ ನಿರ್ವಹಣೆ
ಸಾಮಾನ್ಯವಾಗಿ ಅಽವೇಶನದಲ್ಲಿ ಪ್ರತಿಪಕ್ಷಗಳು ಮಾಡುವ ಆರೋಪಗಳಿಗೆ ಪ್ರತ್ಯುತ್ತರವನ್ನು ಮುಖ್ಯಮಂತ್ರಿಗಳು ನೀಡುವುದಿಲ್ಲ. ಸಿದ್ದರಾಮಯ್ಯ ಅವರ ಕಾಲದಲ್ಲಿ ಕೃಷ್ಣಬೈರೇಗೌಡ, ಡಿ.ಕೆ.ಶಿವಕುಮಾರ್, ಜಾರ್ಜ್ ಉತ್ತರಿಸಿದರೆ, ಯಡಿಯೂರಪ್ಪ ಅವರ ಸಮಯದಲ್ಲಿ ಈ ಜವಾಬ್ದಾರಿಯನ್ನು ಬಸವರಾಜ ಬೊಮ್ಮಾಯಿ ಹಾಗೂ ಮಾಧುಸ್ವಾಮಿ ಮಾಡುತ್ತಿದ್ದರು. ತೀರಾ ಅನಿವಾರ್ಯ ಅಥವಾ ಪರಿಸ್ಥಿತಿ ಕೈ ಮೀರುವ ಸ್ಥಿತಿ ಬಂದರೆ ಮಾತ್ರ ಮುಖ್ಯಮಂತ್ರಿಗಳು ಎದ್ದು ನಿಲ್ಲುತ್ತಿದ್ದರು.
ಆದರೆ ಬೊಮ್ಮಾಯಿ ಅವರು, ಇತರ ಸಚಿವರು ಡಿಫೆಂಡ್ ಮಾಡಲಿ ಎಂದು ಕಾಯದೇ, ಪ್ರತಿಪಕ್ಷಗಳ ಹಲವು ಆರೋಪಗಳಿಗೆ ಅವರೇ ಉತ್ತರಿಸುತ್ತಾರೆ. ಚಿಕ್ಕ ವಿಷಯವಾದರೂ, ಆ ಬಗ್ಗೆ ಸಭೆ ನಡೆಸುವುದಾಗಿಯೋ ಅಥವಾ ಸಮಸ್ಯೆ ಪರಿಹರಿಸುವುದಾಗಿಯೋ ಹೇಳುವ ಮೂಲಕ, ವಿವಾದ ಇತ್ಯರ್ಥ ಪಡಿಸಲು ಮುಂದಾಗು ತ್ತಿದ್ದಾರೆ. ಇದರಿಂದ ಸರಕಾರದ ವಿರುದ್ಧ ಸಭಾತ್ಯಾಗ, ಬಾವಿಗಿಳಿದು ಪ್ರತಿಭಟನೆ ಮಾಡುವ ಅವಕಾಶಗಳೇ ಪ್ರತಿಪಕ್ಷಗಳಿಗೆ ಸಿಗುತ್ತಿಲ್ಲ.

Leave a Reply

Your email address will not be published. Required fields are marked *

error: Content is protected !!