Sunday, 15th December 2024

ಗೃಹಮಂತ್ರಿ ಅಮಿತ್ ಶಾ ಕರ್ನಾಟಕ ಪ್ರವಾಸಗಳು, ರಾಜ್ಯದಲ್ಲಿ ಭಾಜಪದ ಐತಿಹಾಸಿಕ ಗೆಲುವಿಗೆ ಮುನ್ನುಡಿ ಬರೆಯಲಿವೆಯಾ?

224 ಮತಕ್ಷೇತ್ರಗಳ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಗಳಿಸುವ ನಿಟ್ಟಿನಲ್ಲಿ ಗೃಹಮಂತ್ರಿ ಅಮಿತ್ ಶಾ ಮಾರ್ಚ್ 24ರಂದು ಕರ್ನಾಟಕಕ್ಕೆ ಮತ್ತೊಮ್ಮೆ ಭೇಟಿ ನೀಡಲಿದ್ದಾರೆ. ಒಂದು ದಿನದ ಪ್ರವಾಸದಲ್ಲಿ ಅಮಿತ್ ಶಾರವರು ಕೆಲ ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸುವುದರ ಜೊತೆಗೆ ಪಕ್ಷದ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ, ಒಗ್ಗಟ್ಟಿನ ಮಂತ್ರದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್‌ನ್ನು ಸೋಲಿಸಿ, ಪಕ್ಷಕ್ಕೆ ಐತಿಹಾಸಿಕ ಗೆಲವು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಸಿಲಿದ್ದಾರೆ.

ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಭಾಜಪದ ಚಾಣಕ್ಯನ ಕರ್ನಾಟಕದ ಭೇಟಿಗಳು ಈಗಾಗಲೇ ವಿರೋಧ ಪಕ್ಷಗಳಲ್ಲಿ ನಡುಕ ಹುಟ್ಟಿಸಿದೆ. ಅಮಿತ್ ಶಾರ ಚುನಾವಣೆ ತಂತ್ರಗಳ ಬಗ್ಗೆ ಅರಿವಿರುವ ಪಕ್ಷದ ಕಾರ್ಯಕರ್ತರು ಗುಜರಾತ್ ಮತ್ತು ಈಶಾನ ರಾಜ್ಯಗಳಂತೆ ಕರ್ನಾಟಕದಲ್ಲೂ ಕೂಡ ಭಾಜಪ ಐತಿಹಾಸಿಕ ಕೆಲವು ದಾಖಲಿಸಿದೆ ಎಂದು ಭರವಸೆ ಹೊಂದಿದ್ದಾರೆ.

ತಮ್ಮ ಭಾಷಣಗಳಲ್ಲಿ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ರಾಜ್ಯಕ್ಕೆ ಯಾವುದೇ ಒಳಿತು ಮಾಡದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೇಲೆ ಅಮಿತ್ ಶಾ ತೀಕ್ಷ್ಣವಾಗಿ ಹರಿ ಹಾಯಲಿದ್ದಾರೆ.

ತಮ್ಮ ಹಿಂದಿನ ಭಾಷಣಗಳಲ್ಲಿ ಕರ್ನಾಟಕ ಕಾಂಗ್ರೆಸ್ ದೆಹಲಿ ಗಾಂಧಿ ಕುಟುಂಬದ ಏಟಿಎಂ ಆಗಿ ಕಾರ್ಯ ನಿರ್ವಹಿಸುತ್ತದೆ ಎಂದು ಟೀಕಿಸಿದ್ದರು.
ಅಮಿತ್ ಶಾರವರ ಸೂಚನೆಯ ಮೇರೆಗೆ ಭಾಜಪ ಕಾರ್ಯಕರ್ತರು ಪೂರ್ಣ ಬಹುಮತಕ್ಕಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ಭಾಜಪ 117 ಸೀಟುಗಳನ್ನು ಹೊಂದಿದ್ದರೆ, ಕಾಂಗ್ರೆಸ್ 69 ಮತ್ತು ಜೆಡಿಎಸ್ 32 ಸೀಟುಗಳನ್ನು ಹೊಂದಿದೆ. ಉಳಿದ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ, ಈ ಚುನಾವಣೆ ತುಂಬಾ ಪರಿಣಾಮ ಬೀರಲಿರುವುದು ಶಾರವರಿಗೆ ಚೆನ್ನಾಗಿಯೇ ತಿಳಿದಿದೆ. ಆದಕಾರಣ ಚುನಾವಣೆ ಆಯೋಗ ಎಲೆಕ್ಷನ್ ಘಂಟೆ ಬಾರಿಸುವ ಮುನ್ನವೇ ಅಮಿತ್ ಶಾ ಅಖಾಡಕ್ಕೆ ಇಳಿದಿದ್ದಾರೆ.

ರಾಜಕೀಯ ಚಾಣಕ್ಯನೆಂಬ ಹೆಸರಿಗೆ ಅನ್ವರ್ಥವೆಂಬಂತೆ, ಕಳೆದ ಡಿಸೆಂಬರ್‌ನಲ್ಲಿ ತಮ್ಮ ಮೊದಲ ಚುನಾವಣಾ ರ್ಯಾಲಿಗೆ ಒಕ್ಕಲಿಗರೇ ಹೆಚ್ಚಾಗಿ ರುವ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯ ಹೆಚ್ಚಾಗಿರುವ ಮೈಸೂರು ಭಾಗದ ಮಂಡ್ಯವನ್ನು ಆರಿಸಿದರು. 61 ಸೀಟುಗಳನ್ನು ಹೊಂದಿರುವ ಈ ಭಾಗ ಬಿಜೆಪಿಗೆ ಪೂರ್ಣಬಹುಮತ ನೀಡಲು ತುಂಬಾ ಅವಶ್ಯಕ. ಇದರ ಜೊತೆ ಜೊತೆಗೆ ಶಾ ಪೂರ್ಣ ಬಹುಮತದ ಸಂಕಲ್ಪಕ್ಕೆ ತುಂಬಾ ಅವಶ್ಯ ವಾಗಿರುವ ಬೆಂಗಳೂರು ಮತ್ತು ಬಳ್ಳಾರಿಯಲ್ಲಿಯೂ ರ್ಯಾಲಿ ನಡೆಸಿದ್ದಾರೆ