ಎಲ್ಲಾ ನವಜಾತಗಳಂತೆ, ಎಳೆಯ ಪ್ರಾಣಿಗಳೂ ಕೂಡ ಆನಂದಮಯವಾದ, ಪ್ರೇಮಭರಿತ, ಮತ್ತು ಆಟವಾಡುವ ಮೊದಲ ವರ್ಷವನ್ನು ಅನುಭವಿಸಬಹುದು. ಆದಾಗ್ಯೂ ಅವು ಜೀವಂತವಾಗಿ ಉಳಿಯಲು ಪ್ರತಿಸ್ಪರ್ಧಿಗಳಿಂದ, ಪರಿಸರದಿಂದ, ಮತ್ತು ಪರಭಕ್ಷಕಗಳಿಂದ ಅಡಚಣೆಗಳು ಮತ್ತು ತೊಂದರೆಗಳನು ಎದುರಿಸಬೇಕಾಗುತ್ತದೆ.
ಸುಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರು ಈ ಅಮೂಲ್ಯ ತಿಂಗಳುಗಳಲ್ಲಿ ಆರು ಪ್ರಸಿದ್ಧ ವಾದ ನವಜಾತ ಪ್ರಾಣಿಗಳ ಬೆಳವಣಿಗೆ ಯನ್ನು ಅರಿತುಕೊಳ್ಳಲು ಜಗತ್ತಿನಾದ್ಯಂತ ಸುತ್ತಿ ಅವುಗಳ ಕಥೆಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಹೀಗೆ ಕಾಡಿನಲ್ಲಿ ಇದನ್ನು ಚಿತ್ರೀಕರಿಸಿದ ಕಥೆ ಇಲ್ಲಿದೆ. ಈ ಲೇಖನದಲ್ಲಿ ಭೂಮಿಯ ಮೇಲೆ ತಮ್ಮ ಆರಂಭಿಕ ಜೀವನದ ಹೋರಾಟದಲ್ಲಿ ಸವಾಲುಗಳನ್ನು ಎದುರಿಸಿದ ಮೂರು ಮರಿಪ್ರಾಣಿಗಳ ಬಗ್ಗೆ, ಅವು ತಮ್ಮ ಹೊಸ ಕುಟುಂಬಕ್ಕೆ ಯಾವ ರೀತಿ ಬೇಗನೇ ಹೊಂದಿ ಕೊ0ಡು ಬಿಡುತ್ತವೆ ಮತ್ತು ಪರಿಸರ ಅಡೆತಡೆಗಳನ್ನು ಅವು ಹೇಗೆ ಎದುರಿಸುತ್ತವೆ ಎಂಬುದನ್ನು ನೋಡೋಣ.
ಮುದ್ದಾದ ಆನೆಮರಿಗಳು
ನವಜಾತ ಆನೆಮರಿಯನ್ನು ಕರು ಎಂದು ಕರೆಯುತ್ತಾರೆ. ಹುಟ್ಟುವಾಗ ಅದರ ತೂಕ ಸುಮಾರು ೧೦೦-೧೨೫ ಕಿಲೋ ಇರುತ್ತದೆ ಮತ್ತು ಹೆಚ್ಚುಕಡಿಮೆ ಮೂರು ಅಡಿಗಳಷ್ಟು ಉದ್ದ ಇರುತ್ತದೆ. ಮೊದಮೊದಲು ಕರುಗಳಿಗೆ ಕಣ್ಣು ಸರಿಯಾಗಿ ಕಾಣುವುದಿಲ್ಲ ವಾದರೂ ಸ್ಪರ್ಷ, ವಾಸನೆ ಮತ್ತು ಧ್ವನಿಯ ಮೂಲಕ ಅವು ತಮ್ಮ ತಾಯಿಯನ್ನು ಗುರುತಿಸಬಲ್ಲವು. ಮರಿಯು ತನ್ನ ಕಾಲುಗಳ ಮೇಲೆ ನಿಂತುಕೊಳ್ಳಲು ತಾಯಿ ಮತ್ತು ಇತರ ಹೆಣ್ಣಾನೆಗಳು ಸಹಾಯ ಮಾಡುತ್ತವೆ. ಮರಿಗಳ ಬಗ್ಗೆ ಇರುವ ಆಸಕ್ತಿಪೂರ್ಣ
ಅಂಶವೆ0ದರೆ, ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಅವು ಕಾಲ ಮೇಲೆ ನಿಲ್ಲಬಲ್ಲವು ಮತ್ತು ಕೇವಲ ಎರಡು ದಿನಗಳೊಳಗೆ ಹತ್ತಿರ ದಲ್ಲೇ ಕಾಯುತ್ತಿರುವ ಗುಂಪನ್ನು ಸೇರಿಕೊಳ್ಳುವಷ್ಟು ಸಮರ್ಥ(ಶಕ್ತಿಶಾಲಿ)ವಾಗುತ್ತವೆ. ಮೊದಲ ಹಲವಾರು ತಿಂಗಳವರೆಗೆ ಆನೆಮರಿಗಳು ತಮ್ಮ ತಾಯಿಗೆ ಹತ್ತಿರವಾಗೇ ಇರುತ್ತವೆ. ಮೊದಮೊದಲು ಆನೆಮರಿಗಳಿಗೆ ತಮ್ಮ ಸೊಂಡಿಲಿನಿ0ದ ಏನು ಮಾಡ ಬೇಕೆಂದು ಗೊತ್ತಿರುವುದಿಲ್ಲ. ಮೊದಲು ಅವು ತಮ್ಮ ಸೊಂಡಿಲನ್ನು ಹಿಂದೆ ಮುಂದೆ ಆಡಿಸಿ ಅಪರೂಪಕ್ಕೆ ಅವುಗಳ ಜೊತೆ ನಡೆಯುತ್ತವೆ. ಮನುಷ್ಯರ ಮಗು ಯಾವ ರೀತಿ ಹೆಬ್ಬೆರಳನ್ನು ಚೀಪುತ್ತದೆಯೋ ಅದೇ ರೀತಿ ಅವುಕೂಡ ತಮ್ಮ ಸೊಂಡಿಲನ್ನು ಚೀಪುತ್ತವೆ. ೬ರಿಂದ ೮ ತಿಂಗಳ ಹೊತ್ತಿಗೆ ಆನೆಮರಿಗಳು ತಮ್ಮ ಸೊಂಡಿಲಿನಿAದ ಆಹಾರ ತೆಗೆದುಕೊಂಡು ಕುಡಿಯುವುದನ್ನು ಕಲಿಯುತ್ತವೆ. ಒಂದು ವರ್ಷದ ಹೊತ್ತಿಗೆ ಅವುಗಳಿಗೆ ತಮ್ಮ ಸೊಂಡಿಲಿನ ಮೇಲೆ ಸಾಕಷ್ಟು ಹಿಡಿತವೇರ್ಪಟ್ಟು ಅವುಗಳನ್ನು ದೊಡ್ಡ ಆನೆಗಳಂತೆ ಹಿಡಿದುಕೊಳ್ಳಲು, ಕುಡಿಯಲು ಮತ್ತು ತೊಳೆಯಲು ಬಳಸಿಕೊಳ್ಳುತ್ತವೆ.
ತುಂಟಾಟದ ತೋಳದ ಮರಿಗಳು
ಮನುಷ್ಯರಿಗೆ ಹೋಲಿಸಿದರೆ ತೋಳಗಳು ಬೇಗನೇ ಪ್ರೌಢವಾಗುತ್ತವೆ. ಮನುಷ್ಯರಿಗೆ ಸ್ವಯಂ-ಉಳಿಯುವ ಸಾಮರ್ಥ್ಯಗಳನ್ನು ಪಡೆದುಕೊಳ್ಳಲು ಹಲವಾರು ವರ್ಷಗಳು ಬೇಕಾದರೆ, ತೋಳಗಳು ಅವುಗಳು ಉಳಿಯುವುದಕ್ಕೆ ಬೇಕಾದ ಸಾಮರ್ಥ್ಯವನ್ನು ಕೇವಲ ಒಂದು ವರ್ಷದಲ್ಲಿ ಕಲಿತುಬಿಡುತ್ತವೆ. ತೋಳದ ಮರಿಗಳನ್ನು ಕಬ್ಸ್ ಎಂದು ಕರೆಯುತ್ತಾರೆ ಮತ್ತು ಮೊದಲು ಹುಟ್ಟಿದಾಗ ತೀರಾ ಪುಟ್ಟದಾಗಿರುತ್ತವೆ. ನವಜಾತ ತೋಳದ ಮರಿಗಳು ಕುರುಡಾಗಿರುತ್ತವೆ, ಕಿವುಡಾಗಿರುತ್ತವೆ ಮತ್ತು ಗಾಢ ಬೂದು ಬಣ್ಣ ಹೊಂದಿರುತ್ತವೆ ಮತ್ತು ಕೇವಲ ೧೨೦ ಗ್ರಾಂ ತೂಕ ಇರುತ್ತವೆ.
ಅವು ಸಂಪೂರ್ಣವಾಗಿ ದೊಡ್ಡ ತೋಳಗಳ ಮೇಲೇ ಅವಲಂಬಿತ ವಾಗಿದ್ದು ತಮ್ಮ ಜೀವನದ ಮೊದಲ ನಾಲ್ಕು ವಾರಗಳವರೆಗೆ ಕೇವಲ ತಮ್ಮ ತಾಯಿಯ ಹಾಲು ಮಾತ್ರ ಕುಡಿಯುತ್ತವೆ. ಕೆಲವು ವಾರಗಳಾಗುವವರೆಗೆ ನವಜಾತ ತೋಳದ ಮರಿಗಳಿಗೆ ತಾಯಿಯ ಹಾಲೇ ಸಂಪೂರ್ಣ ಪೋಷಣೆ. ಮರಿಗಳು ಕಣ್ಣು ತೆರೆದಾಗ, ಅವು ಗುಹೆಯನ್ನು ಶೋಧಿಸಲಾರಂಭಿಸುತ್ತವೆ. ಮರಿಗಳಿಗೆ ೧೨ ವಾರ ಗಳಾದಾಗ ಅವುಗಳನ್ನು ಸ್ವಂತವಾಗಿ ಬಿಡಲಾಗುತ್ತದೆ. ಈ ಹಂತದಿ0ದ ಬೆಳವಣಿಗೆ ಪ್ರಮಾಣ ಕ್ಷಿಪ್ರವಾಗಿರುತ್ತದೆ. ಆರು ತಿಂಗಳಾ ಗುವ ಹೊತ್ತಿಗೆ ಮರಿಗೂ ದೊಡ್ಡ ತೋಳಕ್ಕೂ ವ್ಯತ್ಯಾಸ ಹೇಳುವುದು ಕಷ್ಟವಾಗುತ್ತದೆ. ಒಂದು ವರ್ಷದ ತರುವಾಯ, ಅವು ಮರಿ ಗಳಲ್ಲ, ಮತ್ತು ಈ ತೋಳಗಳು ತಮ್ಮ ತಾಯಿಯನ್ನು ತೊರೆದು ತಮ್ಮ ಸ್ವಂತ ಜೀವನ ನಡೆಸಲು ಸಿದ್ಧವಾಗಿರುತ್ತವೆ. ಆ ಮೊದಲ ವರ್ಷದ ಅಂತ್ಯದಲ್ಲೇ ಅವು ಪೂರ್ಣಪ್ರಮಾಣದ ವಯಸ್ಕ ತೋಳಗಳಾಗಿರುತ್ತವೆ ಮತ್ತು ತಮ್ಮದೇ ಸ್ವಂತ ಮರಿಗಳನ್ನು ಮಾಡಿ ಕೊಳ್ಳುವುದಕ್ಕೂ ಸಿದ್ಧವಾ ಗಿರುತ್ತವೆ.
ಗೊರಿಲ್ಲಾ ಮರಿಗಳು
ಗೊರಿಲ್ಲಾ ಮರಿಗಳು, ಮನುಷ್ಯರ ನವಜಾತ ಶಿಶುಗಳಿಗಿಂತ ವೇಗವಾಗಿ ಬೆಳೆದು ಅಭಿವೃದ್ಧಿ ಹೊಂದುತ್ತವೆ. ೮ ವಾರಗಳ ಅವಧಿ ಯಲ್ಲಿ ಅವು ಸಾಮಾನ್ಯವಾಗಿ ಆಟವಾಡುವುದು, ಮುಗುಳ್ನಗುವುದು ಮತ್ತು ಚಿಮ್ಮುವುದು ಮಾಡುತ್ತಿರುತ್ತವೆ. ಎಳೆಯ ಗೊರಿಲ್ಲಾ ಗಳಿಗೆ ತಮ್ಮ ಒಡಹುಟ್ಟಿದವರೊಂದಿಗೆ ಮತ್ತು ತಮ್ಮದೇ ವಯಸ್ಸಿನ ಇತರರೊಂದಿಗೆ ಆಟವಾಡುವುದೆಂದರೆ ಬಹಳ ಇಷ್ಟ. ಅವು ಜಗಳವಾಡುತ್ತವೆ. ಪಲ್ಟಿ ಹೊಡೆಯುತ್ತವೆ, ಮರ ಏರುತ್ತವೆ. ಮತ್ತು ಸರಪಳಿಯಂತ ಮಾಡಿಕೊಂಡು ಕಾಡಿನಲ್ಲಿ ಲಾಕ್‌ಸ್ಟೆಪ್‌ನಲ್ಲಿ ಪಯಣಿಸುತ್ತವೆ ಕೂಡ. ಸಂಶೋಧಕರ ಪ್ರಕಾರ, ಮರಿಗೊರಿಲ್ಲಾಗಳು ರುಚಿಯಾದ ಆಹಾರ ಸೇವಿಸಿದಾಗ, ತಮ್ಮ ಆನಂದವನ್ನು ತಿಳಿಸಲು ಅವು ಗುನುಗುನಿಸಿ ಹಾಡುತ್ತವೆ. ಮರಿ ಗೊರಿಲ್ಲಾಗಳು ತಾವು ಬೆಳೆಯುತ್ತಿರುವಾಗ ತಮ್ಮ ದಿನದ ಸುಮಾರು ಕಾಲುಭಾಗ ದಷ್ಟು ಸಮಯ ಎಲೆಗಳು ಮತ್ತು ಕಾಂಡಗಳನ್ನು ತಿನ್ನುತ್ತವೆಯಾದರೂ ಕೆಲವೊಮ್ಮೆ ಶಂಖುಹುಳು, ಕೀಟಗಳು ಮತ್ತು ತೊಗಟೆ (ಇದು ಸೋಡಿಯಮ್‌ನ ಸಮೃದ್ಧ ಮೂಲವಾಗಿದೆ) ಕೂಡ ತಿನ್ನುತ್ತವೆ.
ಪ್ರಾಣಿಗಳ ಮರಿಗಳ ಬಗ್ಗೆ ಇನ್ನು ಹೆಚ್ಚಿಗೆ ತಿಳಿದುಕೊಳ್ಳಲು, ಸೋನಿ ಬಿಬಿಸಿ ಅರ್ತ್ನಲ್ಲಿ ವಿಶೇಷವಾಗಿ ಪ್ರಸಾರವಾಗುವ ಅನಿಮಲ್ ಬೇಬೀಸ್-ಫರ್ಸ್್ಟ ಇಯರ್ ಆನ್ ಅರ್ತ್ ನೋಡುವುದನ್ನು ತಪ್ಪಿಸಿಕೊಳ್ಳಬೇಡಿ