Saturday, 14th December 2024

ಸತತ ಹಲ್ಲೆಗಳು

ಮಾರಣ ಹೋಮ – ಅನ್‌ಟೋಲ್ಡ್ ಸ್ಟೋರಿ ಆಫ್‌ ಕಾಶ್ಮೀರ

ಸಂತೋಷಕುಮಾರ ಮೆಹೆಂದಳೆ

ಜೆ.ಕೆ.ಎಲ್.ಎಫ್. ಮತ್ತು ಲಷ್ಕರ್ ಎರಡೂ ಸೇರಿ ದೊಡ್ಡ ಮಟ್ಟದಲ್ಲಿ ಇದರಲ್ಲಿ ಆರಂಭಿಕ ಯಶಸ್ಸು ಪಡೆದಿದ್ದು ಹೌದಾದರೂ, ಅವರಿಗೆ ಮುಖ್ಯವಾಗಿ ಪ್ರಮುಖ ಪ್ರದೇಶವಾದ ಶ್ರೀನಗರ ಮತ್ತು ಇತರ ಪಟ್ಟಣಗಳ ಮೇಲೆ ನಿಖರ ಹಿಡಿತ ಬೇಕಿತ್ತು. ಆದರೆ ನಗರಕ್ಕೆ ಕಾಲಿಟ್ಟಿದ್ದ ಜಗಮೋಹನ್ ದೊಡ್ಡ ಮಟ್ಟದಲ್ಲಿ ಮಿಲಿಟರಿ ಪಡೆಗಳನ್ನು ರಸ್ತೆಗೆ ಇಳಿಸಿದ್ದರು. ಗ್ವಾಕದಲ್ ಎಂಬಲ್ಲಿ ಒಂದೇ ದಿನ ಐವತ್ತು ಅರವತ್ತುಉಗ್ರರು ಸತ್ತು ಬಿದ್ದಿದ್ದರು.

ಹಾಗಾಗಿ ಒಳಗೊಳಗೆ ಉರಿ ಹತ್ತಿಕೊಳ್ಳುತ್ತಲೇ ಇತ್ತು. ದೊಡ್ಡ ಮಟ್ಟದ ಒಂದು ಮೆರವಣಿಗೆ ಯನ್ನು ಜನೇವರಿ ೨೬ಕ್ಕೆ ಆಯೋಜಿ ಸಲು ಕೂಡಾ ಈ ಸಂಘಟನೆಗಳು ಸಿದ್ಧವಾಗಿದ್ದವು. ಆದರೆ ಅದರ ಹಿಂದಿನ ದಿನವೇ ಅಂದರೆ ಜ.೨೫ ರಂದು ಏರ್ ಫೋರ್ಸಿನ ರವಿ ಖನ್ನಾ ಮತ್ತು ಇತರ ಸಂಗಡಿಗರು ರವಾಲ್ಪುರ೩೯ ಎಂಬಲ್ಲಿ ರಸ್ತೆ ಪಕ್ಕದಲ್ಲಿ ಕಾಯುತ್ತಿದ್ದಾಗ, ಮಾರುತಿ ಜಿಪ್ಸಿ ಮತ್ತು ಬೈಕುಗಳಲ್ಲಿ ಬಂದ ನಾಲ್ವರು ಉಗ್ರರು ಎ.ಕೆ.೪೭ ನಿಂದ ಮನಸೋ ಇಚ್ಛೆ ಗುಂಡು ಹಾರಿಸಿದ್ದರು. ವಾಯು ಸೇನೆಯ ೧೩ ಜನ ಸಿಬ್ಬಂದಿ ನೆಲಕ್ಕುರುಳಿದ್ದರು. ಅದರಲ್ಲಿ ಮೂವರು ಅಲ್ಲಿಯೇ ಸತ್ತು ಹೋಗಿದ್ದರು.

ಉಳಿದವರು ಗಾಯಗೊಂಡಿದ್ದರೆ ನಾಯಕತ್ವ ವಹಿಸಿದ್ದ ಯಾಸಿನ್ ಮಲಿಕ್ ಇದಕ್ಕೆ ತಾನೇ ಹೊಣೆ ಎಂದು ನಂತರದಲ್ಲಿ, ಟೀಮ್ ಸೆಬಾಸ್ಟಿನ್ ಎಂಬಾತ ಮಾಡಿದ್ದ ಸಂದರ್ಶನದಲ್ಲಿ ತಾನು ಒಪ್ಪಿಕೊಂಡಿದ್ದ. ಈ ಯಾಸಿನ್‌ಗೆ ಕಮಾಂಡರ್ ಆಗಿ ಕೆಲಸ ಮಾಡು ತ್ತಿದ್ದವನು ಇಸಾಕ್ ವಾನಿ. ಈ ಘಟನೆಯ ಬೆನಲ್ಲೆ ಸಂಪೂರ್ಣ ಕಣಿವೆಯನ್ನು ಇನ್ನಿಷ್ಟು ಕಾನೂನಿನ ಚೌಕಟ್ಟಿಗೆ ಒಳಪಡಿಸಿದ ಗೌರ್ನರ್ ಕ್ರಮದಿಂದ ಜನೇವರಿ ೨೬ ನಡೆಯಬೇಕಿದ್ದ ಮೆರವಣಿಗೆಗೆ ಅವಕಾಶವೇ ಸಿಗಲಿಲ್ಲ. ಆ ಮಟ್ಟಿಗೆ ಒಂದು ಹಂತಕ್ಕೆ ನಿಯಂತ್ರಣ ಮೊದಲ ಬಾರಿಗೆ ಸಾಧ್ಯವಾಗಿತ್ತು.

ವರ್ಷದ ಮೊದಲ ತಿಂಗಳು ಭೀಕರ ಹತ್ಯಾಕಾಂಡಗಳನ್ನು ಕಂಡು ಸರಿದು ಹೋಗುತ್ತಿದ್ದರೆ, ಫೆಬ್ರುವರಿ ಮೊದಲನೇ ದಿನವೇ ಕೇಂದ್ರ ಸರಕಾರಿ ಮತ್ತು ರಾಜ್ಯ ಸರಕಾರದ ನೌಕರರಾದ ಕೃಷ್ಣ ಗೋಪಾಲ್ ಬೆರ್ವ೩೯ ಮತ್ತು ರಮೇಶ ಕುಮಾರ್ ಥಸ್ಸು೩೯ ಕುಪ್ವಾರದ ತೇರ್ಗಾಮ್ ಎಂಬಲ್ಲಿ ನೇರ ಗುಂಡಿಗೆ ಸಿಕ್ಕಿ ಹತರಾಗಿದ್ದರು. ಕೇಸು ಫೈಲ್ ಆಗಿತ್ತೆ? ಎಫ್.ಐ.ಆರ್. ಆಗಿತ್ತೆ? ಉತ್ತರಿಸುವರಾರು? ನಂತರ ಸುದ್ದಿಗೆ ಕೊಂಚ ಚಾಲನೆ ಸಿಕ್ಕಿದ್ದು ೧೯೯೦-. ೧೩ ದೂರದರ್ಶನ ಕೇಂದ್ರ ನಿರ್ದೇಶಕ ಲಸ್ಸಾ ಕೌಲ್‌ನ ಮೇಲೆ ಮಾರಣಾಂತಿಕ ದಾಳಿ ಆದಾಗ.

ಹಾಗೆ ನೋಡಿದರೆ ಈ ಕೌಲ ನಿರ್ದೇಶಕನ ಹುದ್ದೆಯಲ್ಲಿದ್ದವ ಸುಲಭದ ಈಡಿಗೆ ಸಿಗುವವನೇ ಅಲ್ಲವಾಗಿದ್ದ. ಆದರೆ ಅವನ ಅಸು ಪಾಸಿನವರೇ ಮಾಹಿತಿ ಕೊಟ್ಟು ಹೊಡೆಸಿದರು ಎಂದು ಸುದ್ದಿಯಾಯಿತಾದರೂ ಕೌಲ್ ಮರ್ಡರ್ ಕೇಸು ಒಂದು ಸಾಲಿನ ಸುದ್ದಿಯಾಗಿ ಸತ್ತು ಹೋಯಿತು. ಎಲ್ಲೂ ದೊಡ್ಡ ಚರ್ಚೆಗೆ ಆಗಿ ಮಾಧ್ಯಮಗಳು ಕೈ ಹಾಕಲೇ ಇಲ್ಲ. ಅದೇ ದಿನ ರಾವಲ್ಪೋರಾದ ರತನ್‌ಲಾಲ್ ಎಂಬಾತ ಕೂಡಾ ಗುಂಡಿಗೆ ಬಲಿಯಾದ. ಈತನೂ ಸಹಿತ ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್‌ನಲ್ಲಿ ಸರಕಾರಿ ನೌಕರನಾಗಿದ್ದ. ಒಂದೇ ದಿನ ನಡೆದ ಈ ಮಾರಣ ಹೋಮ ಜನಗಳು ಸತ್ತಂತೆ ಸುದ್ದಿಯಾಯಿತೆ ವಿನ: ಅದರ ಹುನ್ನಾರಗಳ ಬಗ್ಗೆ ಇದಕಿಂತ ಹೆಚ್ಚಿನ ಮಾಹಿತಿಗಳು ಇವತ್ತಿಗೂ ಲಭ್ಯವೇ ಇಲ್ಲ.

ಅಲ್ಲೊಂದು ಇಲ್ಲೊಂದು ಪಂಡಿತರ ಹಿಂದೂಗಳ ಹತ್ಯೆ ನಡೆಯುತ್ತಲೇ ಇದ್ದರೂ ಆಗಾಗ ಮಂಚೂಣಿಗೆ ಬಂದು ಕಗ್ಗೊಲೆ ಮಾಡಿ ಮರೆಯಾಗುತ್ತಿದ್ದ ಬಿಟ್ಟಾ ಕರಾಟೆ ಈ ಕೌಲ್‌ನ ಕೊಲೆಯಾದ ಮೂರೇ ದಿನಕ್ಕೆ ಮತ್ತೆ ರಂಗಕ್ಕಿಳಿದಿದ್ದ. ಫೆ. ೧೬ ರಂದು ಅನೀಲ್ ಭಾನ್೩೯ ಎಂಬಾತನನ್ನು ಹೊಡೆದು ಕೊಂದಿದ್ದ. ಇದಕ್ಕೆ ಸಂಬಂಧಿಸಿದಂತೆ ಇವತ್ತಿಗೂ ಬದುಕುಳಿದಿರುವ ರಾಜೀವ್ ಪಂಡಿತ್ ಈ ಬಿಟ್ಟಾ ಕರಾಟೆ ಆ ಹೊತ್ತಿಗಾಗಲೇ ಸೈಕೋಪಾತ್ ಆಗಿ ಬದಲಾಗಿದ್ದ ಎಂದು ಟ್ವೀಟ್ ಮಾಡಿದ್ದಾರೆ.

ಬಿಟ್ಟಾ ಪಾಕಿಸ್ತಾನಕ್ಕೆ ತರಬೇತಿಗೆ ಹೋಗುವ ಮೊದಲು ಇದೇ ಭಾನ್ ಕುಟುಂಬದೊಂದಿಗೆ ಕ್ರಿಕೇಟ್ ಆಡುತ್ತಿದ್ದ. ರಾಜೀವ್ ಪಂಡಿತ್‌ನ ಚಿಕ್ಕಪ್ಪನ ಹತ್ತಿರ ಪಾಕೆಟ್ ಮನಿ ಕೂಡಾ ಪಡೆಯುತ್ತಿದ್ದ. ಇಲ್ಲಿ ಅನೀಲ್ ಭಾನ್ ಈ ಬಿಟ್ಟಾಗೆ ಬಲಿಯಾದ ಕತೆ ನಿಮಗೆ ಗೊತ್ತಾಗಬೇಕು. ಅಸಲಿಗೆ ಬಿಟ್ಟಾಗೆ ಈ ಪಂಡಿತ್ ಕುಟುಂಬವನ್ನು ಮುಗಿಸುವ ಟಾರ್ಗೆಟ್ ಕೊಡಲಾಗಿತ್ತಲ್ಲ. ಅದಕ್ಕೆ ಸರಿಯಾಗಿ ಫೆ.
೧೬ ಬೆಳಿಗ್ಗೆ ೯-೯೩೦ ರ ಸುಮಾರಿಗೆ ಪಂಡಿತ್ ಮನೆಯಿಂದ ಹೊರಗೆ ಬಿದ್ದಿದ್ದಾರೆ.

ಅವರು ಧರಿಸಿದ ಕೋಟ್ ಸಹಿತ ಅವರ ಗುರುತಿನ ಮಾಹಿತಿ ಬಿಟ್ಟಾಗೆ ರವಾನೆಯಾಗಿದೆ. ಅದರ ಆಧಾರದ ಮೇಲೆ ಅತ್ತ ಬಿಟ್ಟಾ ಪಂಡಿತ್‌ಜೀಯನ್ನು ಎತ್ತಿ ಬಿಡಲು ರೆಡಿ ಆಗಿದ್ದಾನೆ. ಅದೃಷ್ಟವಶಾತ್ ಪಂಡಿತ್‌ಜಿಗೆ ಕೊನೆಯ ಕ್ಷಣದಲ್ಲಿ ಸಹೋದರನ ಹುಟ್ಟು ಹಬ್ಬದ ನೆನಪಾಗಿ ಮತ್ತೆ ಮರಳಿದ್ದಾರೆ. ಅದನ್ನು ಮಾಹಿತಿ ಕಳಿಸಲು ಕೂತಿದ್ದ ಬಿಟ್ಟಾ ಕರಾಟೆಯ ಖಬರಿ ಮಾತ್ರ ಗಮನಿಸುವ ಮೊದಲೇ ಅಂಥದ್ದೇ ಜಾಕೆಟ್ ತೊಟ್ಟ ಅನೀಲ್ ಭಾನ್ ಹೊರಗೆ ಬಿದ್ದು ದಾರಿಯ ಮೇಲೆ ಸರಿದು ಹೋಗಿದ್ದಾನೆ.

ಹಬ್ಲಾ ಕದಲ್ ಪ್ರದೇಶ ಪ್ರವೇಶಿಸುತ್ತಿದ್ದಂತೆ ಹಿಂದಿನಿಂದ ಬಂದ ಬಿಟ್ಟಾ ನೇರವಾಗಿ ಗುಂಡಿಟ್ಟು ಕೊಂದು ಬಿಟ್ಟಿದ್ದಾನೆ. ಪಂಡಿತ್ ಜೀ ಫಿನಿಷ್ ಆಗೋಗಿದ್ದಾರೆ ಎಂದು ಜಯಘೋಷ ಹಾಕುತ್ತಾ ಸರಿದುಹೋಗಿದ್ದಾನೆ. ಆದರೆ ರಕ್ತದ ಮಡುವಿನಲ್ಲಿ ಸ್ಪಾಟ್ ಡೆಥ್ ಆದ ಅನೀಲ್ ಭಾನ್ ರಾಂಗ್ ಐಡೆಂಟಿಟಿ ಎನ್ನುವುದು ಗೊತ್ತಾದರೂ ಅದು ಪಂಡಿತ್ ಕುಟುಂಬಕ್ಕೆ ಎಚ್ಚರಿಕೆ ಸಂದೇಶವಾಗಿ ಬಿಟ್ಟಿತ್ತು. ಮುಂದಿನ ಟಾರ್ಗೆಟ್ ತಾವೇ ಎಂದು. ಅವತ್ತೆ ರಾತ್ರಿ ಕೆಲವೇ ಕೆಲವು ಸಾಮಾನುಗಳೊಂದಿಗೆ ಪಂಡಿತ್‌ಜೀ ಕಣಿವೆ ಬಿಟ್ಟಿದ್ದರು. ಅದಾದ ಕೆಲವೇ ದಿನಗಳಲ್ಲಿ ಅವರ ಮನೆಯನ್ನು ಲೂಟಿ ಮಾಡಿ ನಂತರ ಸುಟ್ಟು ಹಾಕಲಾದ ಸುದ್ದಿ ಬಂತಂತೆ.

ಇದೀಗಲೂ ಕತೆ ಹೇಳಲು ಲಭ್ಯ ಇರುವ ‘ರಾಜೀವ್ ಪಂಡಿತ್೩೯; ಇದನ್ನೆಲ್ಲ ವಿವರಿಸಿದ್ದು ಅಲ್ಲದೆ ಟ್ವೀಟ್ ಕೂಡಾ ಮಾಡಿದ್ದರು. ಆವತ್ತು ತಪ್ಪು ಗ್ರಹಿಕೆಯಿಂದಾಗಿ ಉಳಿದು ಹೋದನಲ್ಲ ಅವನು ಅಶೋಕ್ ಟೀಕೂ ರಾಜೀವ್‌ನ ಅಂಕಲ್ ಕೂಡಾ ಆಗಿದ್ದ. ಕಣಿವೆಯಲ್ಲಿ ಪಟ್ಟಿ ಬೆಳೆಯುತ್ತಲೇ ಇತ್ತು. ಆದರೆ ಸುದ್ದಿಗಳು ಮಾತ್ರ ಅಗಲೇ ಇಲ್ಲ. ಕೊನೆಕೊನೆಗೆ ಇದರಲ್ಲಿ ಯಾರಾದರೂ ನಮ್ಮವರು ಬದುಕಿದ್ದಾರಾ ಎಂದು ಕಶ್ಮೀರ್ ಪಂಡಿತರ ಕಡೆಯವರು ಅವರವರ ಹೆಸರನ್ನು ಪೊಸ್ಟರ್ ಮಾಡಿ ಅಂಟಿಸುವಷ್ಟು ಇದು ಬೆಳೆಯಿತು.

ಕಾರಣ ಮಿಸ್ಟೇಕನ್ ಐಡೆಂಟಿಟಿಯಾಗಿ ಅನೀಲ್ ಭಾನ್ ಹೋಗಿ ಅಶೋಕ್ ಟೀಕೂ ಉಳಿದುಕೊಂಡಿದ್ದೇ ಬಿಟ್ಟಾಗೆ ಒಂದು ರೀತಿಯ ಸೆಟ್‌ಬ್ಯಾಕ್ ಆಗಿದ್ದು ಸುಳ್ಳಲ್ಲ. ಇಂಥಾ ಮಿಸ್ಟೇಕ್‌ಗಳನ್ನು ಪಾತಕ ಪ್ರಪಂಚ ಸಾಮಾನ್ಯವಾಗಿ ಒಪ್ಪಿಕೊಳ್ಳುವುದೂ ಇಲ್ಲ. ಬಹುಶ ಹೀಗಾಗೇ ಕಂಡ ಕಂಡವರನ್ನೆಲ್ಲ ಕೊಂದ ಬಿಟ್ಟಾ ಕರಾಟೆಯ ಮೇಲೆ ಅಧಿಕೃತವಾಗೇ ೩೬ ಕ್ಕೂ ಹೆಚ್ಚು ಕಗ್ಗೊಲೆಯ ಗುರುತರವಾದ ಅಪಾದನೆಗಳಿದ್ದವು. ಇನ್ನು ಲೆಕ್ಕಕ್ಕೆ ಸಿಗದೇ ಹೋಗಿರುವವೆಷ್ಟೊ. -. ೨೩. ೧೯೯೦ ಅಶೋಕ್ ಖಾಜಿ ಎಂಬಾತ ನಡೆದು ಹೋಗು ತ್ತಿದ್ದರೆ, ಅವನ ಮಂಡಿಗಳ ಮೇಲೆ ಕಾಲೂರಿ -ರ್ ಮಾಡಿಬಿಟ್ಟಿದ್ದರು.

ಮೊಣಕಾಲ ಚಿಪ್ಪು ಒಡೆದರೆ ಆಗುವ ಮಾರಣಾಂತಿಕ ನೋವಿನ ಅನುಭವ ಸಾವಿಗಿಂತಲೂ ಭೀಕರ. ಬೇಕಿದ್ದರೆ ಸುಮ್ಮನೆ ಸಣ್ಣ ಆಘಾತವೊಂದಕ್ಕೆ ಮಂಡಿ ಸಿಕ್ಕಿದಾಗ ಆಗುವ ನೋವು ನೆನೆಸಿಕೊಳ್ಳಿ. ಅಂಥದರಲ್ಲಿ ಕೇವಲ ಕಾಲಿನ ಮಂಡಿ ಚಿಪ್ಪಿಗೆ ಗುಂಡು ಹೊಡೆದು ಕೆಡುವಿದರೆ? ಅದರಲ್ಲೂ ಹಾಗೆ ಬಿದ್ದವನ ಸುತ್ತಲೂ ನಿಂತು, ಹಿಂಸಿಸುತ್ತಾ ಉಗ್ರರು ಅವನನ್ನು ಪಕ್ಕದ ಗಟಾರಕ್ಕೆ ತಳ್ಳಿ, ಅವನ ಮೇಲೆ ಉಚ್ಚೆ ಹೊಯ್ದಿದಾರೆ. ಪ್ರಾಣಾಂತಿಕ ನೋವಿಗೆ ಒದ್ದಾಡುತ್ತಾ ಸಾವಿಗೆ ಮೊರೆ ಇಡುತ್ತಿದ್ದವನ ಮೇಲೆ ಮತ್ತೊಮ್ಮೆ ಗುಂಡು ಹಾರಿಸಿ ಕೊಂದು ಹಾಕಿದ್ದಾರೆ.

ಇದಾದ ನಾಲ್ಕೇ ದಿನಕ್ಕೆ ಫೆ.೨೭ ರಂದು ನವೀನ್ ಸಪ್ರುವನ್ನು ಅದೇ ಸ್ಥಳದಲ್ಲಿ ಗುಂಡು ಹೊಡೆದು ಅವನ ಸುತ್ತಾ ಕುಣಿದಾಡುತ್ತಾ,
ಬದುಕಿರುವಾಗಲೇ ಅವನ ಮೇಲೆ ಶವದ ಬಟ್ಟೆಯಿಂದ ಮುಚ್ಚಿ ಹಿಂಸೆ ಮೆರೆದಿದ್ದಾರೆ. ಕೊನೆಗೆ ಸಾವಿನ ಕೊನೆಯ ಕ್ಷಣದಲ್ಲಿದ್ದ ಸ-ವನ್ನು ಮತ್ತೊಮ್ಮೆ ಗುಂಡಿಟ್ಟು ಕೊಂದು ಹಾಕಿದ್ದಾರೆ. ಸತತವಾದ ಹಲ್ಲೆಗಳು ನಿರಂತರವಾಗಿ ನಡೆಯುತ್ತಲೇ ಹೋದವು. ದಿನಕ್ಕೆ ಒಂದೆರಡು ಕಗ್ಗೊಲೆಗಳು ಲೆಕ್ಕಕ್ಕೆ ಸಿಗುತ್ತಿದ್ದರೆ ಅದರ ನಾಲ್ಕರಷ್ಟು ರಾಮನ ಲೆಕ್ಕವಾಗುತ್ತಿತ್ತು.

ಮಾರ್ಚ್.೧ ೧೯೯೦ ಮತ್ತೊಮ್ಮೆ ಭೀಕರ ದಾಳಿಗೆ ಸಿಕ್ಕಿದ್ದು ಕಣಿವೆ ಸಾಲುಸಾಲಾಗಿ ಹೆಣಗಳನ್ನು ನೋಡಿತು. ಪಿ.ಎನ್.ಹಂಡೂ ಎನ್ನುವ ಮಾಹಿತಿ ಇಲಾಖೆ ನೌಕರ ಕೊಲ್ಲಲ್ಪಟ್ಟರೆ, ತೇಜ್ ಕಿಶನ್ ಎಂಬಾತ ಹಿಂಸೆಗೆ ಸಿಕ್ಕು, ಕೊಲ್ಲಲ್ಪಟ್ಟು ಬಹಿರಂಗ ನೇಣಿಗೆ ಹಾಕಲಾಗಿತ್ತು. ಅದಕ್ಕೂ ಮೊದಲೇ ಅವನನ್ನು ಕೊಲ್ಲಲಾಗಿತ್ತಾ..? ಯಾವ ರೀತಿ ಹಿಂಸೆ ಅನುಭವಿಸಿದ್ದನೋ ಹೇಳಲು ಒಬ್ಬೇ ಒಬ್ಬನು ಜತೆಗಿರಲಿಲ್ಲ. ಪೋಸ್ಟ್ ಮಾರ್ಟಂ ಮಾಡುವವರು ಮೊದಲೇ ಇರಲಿಲ್ಲ. ಕಣಿವೆಯಲ್ಲಿ ಹಸಿರಿಗಿಂತ ಜಾಸ್ತಿ ಕೆಂಪು ಚೆಲ್ಲ ತೊಡಗಿತ್ತು.

(….ಮುಂದುವರೆಯುವುದು)