ಜಿಲ್ಲೆಗೆ ಎಗ್ಗಿಲ್ಲದೇ ಬರುತ್ತಿರುವ ಬಾಂಗ್ಲಾ ವಾಸಿಗಳು
ಕಳೆದ ವರ್ಷ 200-8000ಕ್ಕೆ ಏರಿದ ವಲಸಿಗರ ಸಂಖ್ಯೆ
ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ದೇಶದ ಭದ್ರತೆಗೆ ಸವಾಲಾಗಿರುವ ಅಕ್ರಮ ವಲಸಿಗರ ದಂಡು ಇದೀಗ ಕರ್ನಾಟಕದ ಹಾಸನ, ಚಿಕ್ಕಮಗಳೂರು ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರು ವುದು ಆತಂಕಕ್ಕೆ ಕಾರಣವಾಗಿದೆ.
ಇಷ್ಟು ದಿನ ಕೇವಲ ಮಲೆನಾಡಿನ ಕಾಫಿ ಎಸ್ಟೇಟ್ ಅಥವಾ ತೋಟದ ಮನೆಯಲ್ಲಿ ವಾಸವಿರುತ್ತಿದ್ದ ಇವರು, ಇದೀಗ ಹಾಸನದ ಬಯಲು ಸೀಮೆ ತಾಲೂಕಾಗಿರುವ ಅರಕಲಗೂಡು ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ವಾಸ್ತವ್ಯ ಶುರು ಮಾಡಿದ್ದಾರೆ. ಅದರಲ್ಲಿಯೂ ಕಳೆದೊಂದು ವರ್ಷದಲ್ಲಿ ಈ ಸಂಖ್ಯೆ 8 ಸಾವಿರ ಗಡಿ ದಾಟಿರು ವುದು ಸ್ಥಳೀಯರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.
‘ವಿಶ್ವವಾಣಿ’ಗೆ ಲಭಿಸಿರುವ ಖಚಿತ ಮಾಹಿತಿಯ ಪ್ರಕಾರ, ಅರಕಲಗೂಡು ತಾಲೂಕು ಒಂದರಲ್ಲಿಯೇ ಸುಮಾರು 8-10 ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು ವಾಸಿಸುತ್ತಿದ್ದು, ವಿವಿಧ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಯಾವುದೇ ಅಕ್ರಮ ಕಾರ್ಯದಲ್ಲಿ ತೊಡಗದಿದ್ದರೂ, ಸ್ಥಳೀಯರೊಂದಿಗೆ ಗಲಾಟೆ, ಮದ್ಯಪಾನ ಮಾಡಿ ಪರಸ್ಪರ ಕಿತ್ತಾಡುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ವಲಸಿಗರ ಕೈಯಲ್ಲಿ ರೇಷನ್ ಕಾರ್ಡ್: ಅಕ್ರಮ ವಲಸಿಗರು ಬಂದಿರುವುದಕ್ಕಿಂತ ಹೆಚ್ಚಿನ ಆತಂಕದ ವಿಷಯ ಎಂದರೆ, ಈ ರೀತಿ ಬಂದಿರುವವರ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇದೆ. ಆರಂಭದಲ್ಲಿ ಈ ರೀತಿ ಬರುವ ಅಕ್ರಮ ವಲಸಿಗರ ಸಂಖ್ಯೆ ಬೆರಳೆಣಿಕೆಯಷ್ಟು ಇತ್ತು. ಆದರೀಗ ಈ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೇ ರೀತಿ ಮುಂದುವರಿದರೆ, ಮುಂದೊಂದು ದಿನ ಸ್ಥಳೀಯರಿಗಿಂತ ಇವರ ಸಂಖ್ಯೆಯೇ ಹೆಚ್ಚಾಗುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಈ ರೀತಿ ಬರುವ ಅಕ್ರಮ ವಲಸಿಗರು ಆರಂಭದಲ್ಲಿ ಬೆಂಗಳೂರು ಅಥವಾ ಮುಂಬೈಗೆ ಏಜೆಂಟರ ಮೂಲಕ ಬಾಂಗ್ಲಾದ ಗಡಿಯಿಂದ ತಪ್ಪಿಸಿಕೊಂಡು ಬರುತ್ತಾರೆ.
ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಹೆಸರಲ್ಲಿ ಆಧಾರ್ ಕಾರ್ಡ್ ಅಥವಾ ಸರಕಾರಿ ದಾಖಲೆಗಳು ಸಿದ್ಧವಾಗುತ್ತವೆ. ಬಳಿಕ ಅವರನ್ನು ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮಡಿಕೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ರವಾನಿಸಲಾಗುತ್ತದೆ. ಈ ರೀತಿ ಬರುವ ಅಕ್ರಮ ವಲಸಿಗರು ಒಂದೇ ಮನೆ ಅಥವಾ ಶೆಡ್‌ನಲ್ಲಿ 10 ರಿಂದ 15 ಜನ ವಾಸಿಸುತ್ತಾರೆ. ಮುಸ್ಲಿಂಮರು ಎನ್ನುವ ಕಾರಣಕ್ಕೆ ಪೊಲೀಸರು ಅವರ ವಿರುದ್ಧ ಮಾತನಾಡುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.
ಕೂಲಿ ಕಡಿಮೆಯೆಂದು ಕರೆತರುವ ಮಾಲೀಕರು
ಮಲೆನಾಡ ಭಾಗದಲ್ಲಿ ಈಗಾಗಲೇ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಳ ಕೊರತೆಯಿದೆ. ಸ್ಥಳೀಯ ಕೂಲಿಗಳನ್ನು ಕರೆಸಿದರೂ ದಿನಕ್ಕೆ
500- 6000 ರು. ನೀಡಬೇಕು. ಆದರೆ ಬಾಂಗ್ಲಾ ವಲಸಿಗರನ್ನು ಕರೆಸಿಕೊಂಡರೆ ೨೫೦ ರು. ಕೂಲಿ ಹಾಗೂ ಸ್ಥಳೀಯ ಪ್ರಭಾವ ಬಳಸಿ ರೇಷನ್ ಕಾರ್ಡ್ ಮಾಡಿಸಿದರೆ ಆಗುತ್ತದೆ. ಇದರೊಂದಿಗೆ ಈ ರೀತಿ ವಲಸೆ ಬರುವವರು ವರ್ಷಗಟ್ಟಲೇ ಊರಿಗೆ ಹೋಗದೇ ಇರುವುದರಿಂದ, ರಜೆಯ ಸಮಸ್ಯೆಯೂ ಇರುವುದಿಲ್ಲ. ಆದ್ದರಿಂದ ಏಜೆಂಟರ ಮೂಲಕ ತೋಟದ ಮಾಲೀಕರು ಇಂತವರನ್ನು ಕರೆಸಿಕೊಂಡು ಆಶ್ರಯ ನೀಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಸಮಸ್ಯೆಗಳೇನು? ?
ಅಕ್ರಮವಾಗಿ ಬಂದವರ ಬಗ್ಗೆ ಗೃಹ ಇಲಾಖೆಯಲ್ಲಿ ಮಾಹಿತಿ ಇರುವುದಿಲ್ಲ
? ಇದರಿಂದ ಅವರು ಅಕ್ರಮ ಚಟುವಟಿಕೆ ನಡೆಸಿದರೂ ಹಿಡಿಯುವುದು ಕಷ್ಟ.
? ರಾಷ್ಟ್ರೀಯ ಭದ್ರತೆಗೆ ಕೆಲವೊಮ್ಮೆ ಆತಂಕ ತರುವ ಸಾಧ್ಯತೆ ಹೆಚ್ಚಿರುತ್ತದೆ
? ಇದೇ ರೀತಿ ಅಕ್ರಮವಾಗಿ ನುಸುಳಿಕೊಂಡು ಉಗ್ರರು ಬಂದರೂ ಅಚ್ಚರಿಯಿಲ್ಲ
***
ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ, ಸ್ಥಳೀಯರನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಕರೋನಾ
ಆರಂಭಕ್ಕೂ ಮೊದಲು 200ರಿಂದ 3o0 ಜನರಿದ್ದ ಅಕ್ರಮ ವಲಸಿಗರು, ಈಗ ೮-೧೦ ಸಾವಿರದಷ್ಟಿದೆ.
– ಸ್ಥಳೀಯರು
ಅರಕಲಗೂಡು