Thursday, 19th September 2024

ನ್ಯಾಯ ವ್ಯವಸ್ಥೆಗೆ ಸವಾಲು

ಮಾರಣಹೋಮ- ಅನ್‌ಟೋಲ್ಡ್ ಸ್ಟೋರಿ ಆಫ್‌ ಕಾಶ್ಮೀರ

ಸಂತೋಷಕುಮಾರ ಮೆಹೆಂದಳೆ

ಕೂಡಲೇ ಮುಂದಿನ ನಡೆಗೆ ಅವಕಾಶವೇ ಇಲ್ಲದಂತೆ ರಾಜಿನಾಮೆ ನೀಡಿಬಿಟ್ಟ ಫಾರೂಕ್ ಅಬ್ದುಲ್ಲ. ಅಲ್ಲಿಗೆ ಸಂಪೂರ್ಣ ಕಣಿವೆ ಯನ್ನು ಉಗ್ರರ ಕೈಗೊಪ್ಪಿಸಿದಂತಾಗಿತ್ತು. ಕಾರಣ ಏನೆಂದರೂ ಅಽಕಾರ ಇದ್ದಾಗಲೇ ಏನೂ ಮಾಡದವ ಈಗೇನು ಮಾಡಬಲ್ಲ. ಹಾಗೆ ಪಾತಕಿಗಳಿಗೆ ಅವಕಾಶವನ್ನು ಅತ್ಯಂತ ಸ್ಪಷ್ಟವಾಗಿ ಒದಗಿಸಿದ್ದ. ಹಿಜ್ಬುಲ್ ಮತ್ತು ಇನ್ನಿತರ ಐ.ಎಸ್.ಐ. ಪ್ರೇರಿತ ನೇರ ರಂಗಕ್ಕಿಳಿ ದಿದ್ದ ಪಾತಕಿಗಳು ಆವತ್ತಿಗಾಗಲೇ ಪ್ರತಿ ರಸ್ತೆ ಮೊಹಲ್ಲಾಗಳನ್ನು ತಮ್ಮ ವಶಕ್ಕೆ ಪಡೆಯ ಲಾರಂಭಿಸಿದ್ದರಲ್ಲ.

ಪ್ರಾಕೃತಿಕವಾಗಿ ಪರಿಸ್ಥಿತಿ ಬೇರೆ ಸ್ವಲ್ಪ ಹದಗೆಟ್ಟಿದ್ದನ್ನೆ ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಲು, ಐನ್ ಟೈಮಿನಲ್ಲಿ ತಾನೂ ರಾಜೀನಾಮೆ ನೀಡಿ ಕೈ ತೊಳೆದುಕೊಂಡು ಕೂತುಬಿಟ್ಟಿದ್ದ ಆಗಿನ ಮು.ಮ. ಹೇಯತನದಿಂದಾಗಿ ಸಂಪೂರ್ಣ ಕಣಿವೆ ಅತ್ಯಂತ ವ್ಯವಸ್ಥಿತವಾಗಿ ಎರಡು ದಿನ ಹೇಳುವ ಕೇಳುವವರಿಲ್ಲದೆ ಅನಾಥವಾದ ಪರಿಸ್ಥಿತಿ ಸೃಷ್ಟಿ ಯಾಗಿ ಹೋಗಿತ್ತು.

ಕರೆಕ್ಟ್ ಆಗಿ ಜಗಮೋಹನ್‌ರನ್ನು ಶ್ರೀನಗರದಲ್ಲಿ ಉದ್ದೇಶ ಪೂರ್ವಕವಾಗಿ ತಡೆದು ಬಿಡಲಾಯಿತೇ ಎನ್ನುವುದಕ್ಕೆ ನಾನು ಉತ್ತರ ಕೋಡಬೇಕಾಗಿಲ್ಲ. ಕಾರಣ ಶ್ರೀನಗರದಲ್ಲಿ ಇಳಿಸುವ ಬದಲಾಗಿ ಜಮ್ಮುವಿನಲ್ಲಿ ಇಳಿಸಲಾಯಿತು..? ಅಷ್ಟಕ್ಕೂ ಎಂಥಾ ಪ್ರತಿಕೂಲ ಸನ್ನಿವೇಶದಲ್ಲೂ ಎಲ್ಲಿ ಬೇಕಾದರೂ ಇಳಿದು ಏರಬಲ್ಲ ನಮ್ಮ ಆರ್ಮಿ ಇದ್ದಾಗ ಒಂದು ಚಾಪರ್ ಮೂಲಕ ಅವರನ್ನು ಶ್ರೀನಗರಕ್ಕೆ ಎರಡು ದಿನಕಾಲ ಯಾಕೆ ತಲುಪಿಸಲಾಗಲಿಲ್ಲ..? ಹೋಗಲಿ ಅಲ್ಲಿಂದಲೇ ಟ್ರಂಕ್‌ಕಾಲ್ ಅಥವಾ ಇನ್ನಾವುದೇ ಮಾರ್ಗವಾಗಿ ಸಂದೇಶ ಸ್ವೀಕರಿಸಿ ಶ್ರೀನಗರ ದಲ್ಲಿ ಲಾ ಆಂಡ್ ಆರ್ಡರ್ ಜಾರಿ ಇಡುವ ಪ್ರಯತ್ನಕ್ಕೆ ಯಾಕೆ ಶ್ರೀನಗರ ಸ್ಥಳೀಯ ಅಧಿಕಾರ ಕೈ ಸೇರಿಸಲಿಲ್ಲ..? ಎಲ್ಲಿಂದಲೇ ಮೌಖಿಕವಾಗಿ ಆರ್ಡರ್ ಹೊರಟರೂ ಅದನ್ನು ಜಾರಿ ಮಾಡಬೇಕೆನ್ನುವ ಸರಕಾರದ ಲಿಖಿತ ಆದೇಶ ಇದ್ದರೂ ಶ್ರೀನಗರದಲ್ಲಿ ಯಾವ ಸೂಚನೆಗಳೂ ತಲುಪದಂತೆ ವಾರಗಟ್ಟಲೇ ನಿರ್ಭಂಧಿಸಲಾಗಿತ್ತಲ್ಲ. ಅದನ್ನೆಲ್ಲ ಯಾಕೆ ತಹಬಂದಿಗೆ ತರಲಿಲ್ಲ..?

ಇಂಥ ಹಲವಾರು ವಿಷಯಗಳು ಸ್ಥಳೀಯವಾಗಿ ಕಾಶ್ಮೀರ ಪಂಡಿತ್‌ರನ್ನು ಹೊರದಬ್ಬುವ ಭಾಗವಾಗಿ ಶಾಮೀಲಾಗಿ ಕೆಲಸ ಮಾಡಿದವೇ..? ಎನ್ನುವ ತರಹೇವಾರಿ ಕಾಂಬಿನೇಶನ್‌ಗಳು ಮಂಡಿಸಲ್ಪಟ್ಟವಾದರೂ ಯಾರೂ ಬೆಕ್ಕಿಗೆ ಗಂಟೆ ಕಟ್ಟುವ ಕೆಲಸಕ್ಕೆ
ಮುಂದಾಗಲಿಲ್ಲ. ಅದರಲ್ಲೂ ಹಿಂದೂ ಓಟುಗಳ ಮೇಲೆ ಡಿಪೆಂಡ್ ಆಗದೆ, ತುಷ್ಠೀಕರಣದ ರಾಜಕೀಯಳಿದಿದ್ದ ಪಕ್ಷಗಳಿಗೆ ಹಿಂದೂಗಳೆಂದರೆ ಅದರಲ್ಲೂ ಕಾಶ್ಮೀರಿ ಹಿಂದೂಗಳೆಂದರೆ ಹೋದರೆಷ್ಟು ಬಿಟ್ಟರೆಷ್ಟು ಎನ್ನಿಸಿದ್ದಿರಬೇಕು. ಅಷ್ಟಕ್ಕೂ ಟೀಕಾ ಲಾಲ್ ಟಪ್ಲೂವನ್ನು ಭೀಕರವಾಗಿ ಸಾಯಿಸುವ ಮುನ್ನ ಕೂಡಾ ಹಲವು ಇಂಥದ್ದೇ ನೇರ ದಾಳಿ ಮತ್ತು ಅತ್ಯಾಚಾರದ ಘಟನೆ ಗಳಾಗಿದ್ದವಲ್ಲ ಅದ್ಯಾವುದೂ ಟಪ್ಲೂ ಮರ್ಡರ್‌ಗೂ ಮೊದಲಿಗೆ ಸುದ್ದಿಗೇ ಬರಲಿಲ್ಲ. ದಾಖಲೆನೂ ಆಗಲಿಲ್ಲ. ಆಗಲೇ ಎಚ್ಚೆತ್ತು ಕೊಳ್ಳಬೇಕಿದ್ದರೆ ಸ್ಥಳೀಯ ಮತ್ತು ಕೇಂದ್ರ ಅಽಕಾರ ಕೇಂದ್ರಗಳು ಅತ್ಯಂತ ಜಾಣ ಮೌನ ನಡೆ ನುಡಿ ಅನುಸರಿಸಿಬಿಟ್ಟವು.

ನಿಮಗೆ ಗೊತ್ತಿರಲಿ. ಮಾರ್ಚ್ ೧೪. ೧೯೮೯. ಪ್ರಭಾವತಿ ಎನ್ನುವ ಹೆಣ್ಣು ಮಗಳನ್ನು ತೀರ ನಡುರಸ್ತೆಯಲ್ಲಿ ಗುಂಡಿಟ್ಟು ಕೊಂದು ಹಾಕಲಾಗಿತ್ತು. ಆವತ್ತು ಪ್ರಭಾವತಿಯ ಮೇಲಾದ ದಾಳಿಗೆ ಕಾರಣಗಳೇ ಇರಲಿಲ್ಲ ಮತ್ತು ಆಕೆಯೇನೂ ಟಪ್ಲೂ ತರಹ ಮಾಸ್
ಲೀಡರ್ ಆಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ quoಣ;ನಾವ್ಗಾರಿquoಣ; ಗ್ರಾಮದ ಚಾದ್ದೊರ್ ಪ್ರದೇಶದ ಹೆಣ್ಣು ಮಗಳ ಮೇಲೆ ಉಗ್ರರು ದಾಳಿ ಮಾಡಿ ಕೊಂದುಹಾಕಿದ್ದರು. ತೀರ ಅದೃಷ್ಟ ಎಂದರೆ ಪ್ರಭಾವತಿ ಆವತ್ತಿಗಿನ ಮಟ್ಟಿಗೆ ರೇಪ್‌ಗೆ ಒಳಗಾಗದೆ ಸತ್ತಿದ್ದಳು. ಇದು ಹಾಡಹಗಲೇ ಬಗ್ದಾಮ್ ಜಿಲ್ಲೆಯಲ್ಲಿ ನಡೆದ ಘಟನೆಯಾಗಿತ್ತು.

ಅದೂ ಹೆಚ್ಚಿನ ಜನ ಸಾಮಾನ್ಯರ ಓಡಾಟದ ರಸ್ತೆ ಹರಿಸಿಂಗ್ ಸ್ಟ್ರೀಟ್‌ನ ನಡುರಸ್ತೆಯಲ್ಲಿ ಗುಂಡಿನ ಹೊಡೆತಕ್ಕೆ ಉಸಿರೆಳೆದುಕೊಳ್ಳ ಲಾಗದೆ ಅಂದು ಪ್ರಭಾವತಿ ಮಕಾಡೆ ಮಲಗಿದ್ದರೆ, ಇವತ್ತಿಗೂ ಆ ಕೇಸು ಪತ್ತೆಯಾಗದ ಫೈಲ್ ಆಗಿ ಮುಚ್ಚಿಹೋಗಿದೆ. ಜನೇವರಿ ೧೯-೨೦ ರ ಹತ್ಯಾಕಾಂಡಕ್ಕೂ ಮೊದಲೇ ಅತ್ಯಂತ ಸ್ಪಷ್ಟವಾಗಿ ಕಣಿವೆಯ ಭೀಕರತೆಯ ಚಿತ್ರಣ ಎಲ್ಲ ಅಧಿಕಾರ ಕೇಂದ್ರಗಳಿಗೂ ಸಿಕ್ಕು ಹೋಗಿತ್ತು. ಕಾರಣ ಟಪ್ಲೂ ನಂತರ ಅತ್ಯಂತ ಗಮನ ಸೆಳೆದ ಹತ್ಯೆ ಪ್ರಕರಣ ಎಂದರೆ ಅಕ್ಟೋಬರ್ ೩೧. ೧೯೮೯ರಂದು ಹಾಡುಹಗಲೇ ಹತ್ಯೆಯಾದ ಶೀಲಾಕೌಲ್ ಟೀಕೂವಿನದ್ದು. ಈ ಹೊತ್ತಿಗೇನೂ ಕಣಿವೆಯಲ್ಲಿ ಇನ್ನೂ ಗವರ್ನರ್ ಅಧಿಕಾರ ಘೋಷಿಸಿರಲಿಲ್ಲ.

ಸ್ಥಳೀಯವಾಗಿ ಪ್ರಮುಖ ಆಡಳಿತ ಪಕ್ಷವಾಗಿ ಫಾರೂಕ್ ಅಬ್ದುಲ್ ಸರಕಾರವೇ ಇತ್ತು. ಮತ್ಯಾಕೆ ಶೀಲ ಕೌಲ ಟೀಕೂ ಹತ್ಯೆ ತನಿಖೆ ಸಾಯಲಿ ಕನಿಷ್ಟ ಫಾರ್ಮಾಲೀಟೀಸ್‌ಗಾದರೂ ಕೇಸ್ ತತಕ್ಷಣಕ್ಕೆ ರಿಜಿಸ್ಟರ್ ಆಗಲಿಲ್ಲ..? ಈಕೆ ಕೂಡಾ ನೇರವಾಗಿ ಹಾಡ ಹಗಲಲ್ಲೆ ಎದೆಗೆ ಮತ್ತು ಹಣೆಗೆ ಗುಂಡಿಟ್ಟು ಕೊಲ್ಲಲಾಗಿತ್ತು. ಆ ಮಟ್ಟಿಗೆ ಇವರಿಬ್ಬರೂ ಹೆಂಗಸರು ಮತ್ತು ಕುಟುಂಬದವರು ಅದೃಷ್ಟ ವಂತರು.

ಕಾರಣ ಹಿಂಸೆ, ರೇಪು, ಜನಾಂಗೀಯ ದ್ವೇಷ ಅಥವಾ ದಿನಗಟ್ಟಲೇ ಪೀಡನೆ ಇದಾವುದಕ್ಕೂ ಇವರ ಮೇಲೆ ಆಗಲಿಲ್ಲ. ಆದರೆ
ಈ ಮೊದಲೇ ಪ್ರಸ್ತಾಪಿಸಿದ್ದ ಒಂದು ಹೆಸರು ನಿಮಗೆ ಇಲ್ಲಿ ಜ್ಞಾಪಿಸಲೇಬೇಕು. ಅದು ನಿವೃತ್ತ ನ್ಯಾಯಾಧೀಶ ನೀಲಕಾಂತ ಗುಂಜು. ನೋಡಿ ಕಣಿವೆಯ ರಾಜಕೀಯ ಹೇಗೆಲ್ಲ ಎಲ್ಲಿಂದ ಎಲ್ಲೆಲ್ಲ ದಾಳಿಯ ಹಂತಗಳನ್ನು ನಿರ್ದೇಶಿಸಿತ್ತು ಎಂದು. ಎಲ್ಲಿಂದ ಎಲ್ಲಿಗೆ ಈ ಲಿಂಕುಗಳು ಕನೆಕ್ಟ್ ಆಗುತ್ತವೆಂದರೆ, ಇದೇ ನೀಲಕಾಂತ ಗುಂಜು ಕಣಿವೆ ರಾಜ್ಯದ ಸೆಷನ್ ಕೋರ್ಟ್  ಯಮೂರ್ತಿಗಳಾಗಿದ್ದರಲ್ಲ. ಆಗ ‘ಮಕ್ಬೂಲ್ ಭಟ್; ಎಂಬ ಉಗ್ರನಿಗೆ ಗಲ್ಲು ಶಿಕ್ಷೆ ವಿಧಿಸಿದ್ದರು. ಈ ಮಕ್ಬೂಲ್ ಭಟ್ ಜೆ.ಕೆ.ಎಲ್.ಎಫ್. -ಂಡರ್ ಕೂಡಾ.

ಆತ ೧೯೬೬ ರಲ್ಲಿ ಪೋಲಿಸ್ ಅಧಿಕಾರಿ ‘ಅಮರ್ ಚಾಂದ್’ ನನ್ನು ಕೊಂದು ಹಾಕಿದ್ದನಲ್ಲ. ಅದರ ಕಾರಣ ೧೯೬೮ ರಲ್ಲಿ
ಮೊದಲ ಗಲ್ಲಿನ ಶಿಕ್ಷೆ ಹೊರಬಿದ್ದಿತ್ತಾದರೂ, ಇದು ಸುಪ್ರಿಂಕೋರ್ಟ್‌ವರೆಗೂ ಹೋಗಿ ಅಲ್ಲೂ ೧೯೮೨ ಅಂತಿಮವಾಗಿ ಅವನಿಗೆ ನೇಣು ಖಾಯಂ ಆಗಿತ್ತಲ್ಲ. ಅದಾದ ಮೇಲೂ ಜೈಲಿನಲ್ಲಿದ್ದೇ ಈ ಭಟ್, ವಿದೇಶ ರಾಯಭಾರಿ ‘ರವೀಂದ್ರ ಮಾತ್ರೆ’ ಕೊಲೆ ಪ್ರಕರಣದಲ್ಲೂ ಹೆಸರು ಕೇಳಿಸಿಕೊಂಡಿದ್ದ. ಹಾಗಾಗಿ ೧೯೮೪ ರಲ್ಲಿ ಗಲ್ಲು ಜಾರಿ ಆಗಿ ದೇಹವನ್ನು ತಿಹಾರ್ ಜೈಲ್ ಆವರಣದಲ್ಲೆ ಮಣ್ಣು ಮಾಡಲಾಗಿತ್ತು.

ಈ ಶಿಕ್ಷೆ ಕಾರಣ ೧೯೮೪-೮೫ ರಲ್ಲೂ ಒಮ್ಮೆ ಕಣಿವೆಯ ನೆಮ್ಮದಿ ಕದಡಿ ಎಲ್ಲ ಎಕ್ಕುಟ್ಟಿಸಲು ನೋಡಲಾಗಿತ್ತಾದರೂ ಅಲ್ಲಲ್ಲೆ ತಣ್ಣಗಾಗಿತ್ತು. ಆದರೆ ಯಾವಾಗ ಈ ಇಬ್ಬರು ಹೆಂಗಸರ ಹತ್ಯೆಯಾದರೂ, ಬಿ.ಜೆ.ಪಿ ಪ್ರಮುಖ ಟಪ್ಲೂ ಹತ್ಯೆಯಾದರೂ ಯಾವ ಪ್ರಚೋದನೆ ಅಥವಾ ಬದಲಾವಣೆ ಇಲ್ಲದೆ ಕಣಿವೆ ತಣ್ಣಗೇ ಮಲಗೇ ಇತ್ತೋ, ಹಳೆಯ ಕೇಸಿನ ಮತ್ತು ಸೇಡಿನ ನೆಪ ಹಾಗು ಮೌನ ಕದಡುವ ದಾವಾನಲದ ಸಮಿತ್ತುವಾಗಿಸಿ ಈ ಜಸ್ಟಿಸ್ ಗುಂಜು ಹತ್ಯೆಗೆ ಯೋಜನೆ ರೂಪಿಸಿ ಬಿಟ್ಟಿದ್ದರು ಉಗ್ರರು.

ಇದಕ್ಕೆ ಬೆಂಬಲವಾಗಿ ಹಿಜ್ಬುಲ್ ಮತ್ತು ಲಷ್ಕರ್‌ನ ತೀವ್ರವಾದಿ ಪಾತಕಿಗಳು ಹುಡುಗರ ತಂಡವನ್ನು ಸಿದ್ಧ ಮಾಡಿದ್ದರೆ ಮತ್ತು ಆಗಷ್ಟೆ ಪಾಕಿಸ್ತಾನದಿಂದ ದೀರ್ಘಾವಽ ತರಬೇತಿ ಮುಗಿಸಿಕೊಂಡು ಬಂದಿದ್ದ ಫಾರೂಕ್ ಅಲಿಯಾಸ್ ಬಿಟ್ಟಾ ಕೂಡಾ ಈ ತಂಡಕ್ಕೆ ಬೆಂಬಲವಾಗಿ ನಿಂತ ಎನ್ನಲಾಗಿದೆ. ಆಗಷ್ಟೆ ನಿವೃತ್ತರಾಗಿದ್ದು ಅಲ್ಲೆ ಉಳಿದಿದ್ದ ನ್ಯಾಯಾಧೀಶ ಗಂಜು ಶ್ರೀನಗರದ ಮುಖ್ಯ ರಸ್ತೆಯಲ್ಲಿ ಕಾರಿನಿಂದಿಳಿದು ಆಚೆಗೆ ಬರುತ್ತಿದ್ದರೆ ಬೈಕ್‌ನಲ್ಲಿ ಬಂದ ಮೂರು ಜನ ನೇರವಾಗಿ ಗುಂಡಿಟ್ಟು ಕೊಂದು ಬಿಡುತ್ತಾರೆ. ಇದಕ್ಕೂ ಮೊದಲೊಮ್ಮೆ ಗಂಜು ಮನೆಯ ಬಾಂಬ್ ದಾಳಿ ಕೂಡಾ ಎಸಗಲಾಗಿತ್ತು. ಅದರಲ್ಲಿ ಯಾವ ಅಪಾಯವೂ ಆಗಿರಲಿಲ್ಲ. ಅಂತಿಮವಾಗಿ ಮೂರು ಜನ ಬ್ಯಾಂಕ್ ಹತ್ತಿರ ನೇರವಾಗಿ ಹಲವು ಸುತ್ತಿನ ಗುಂಡು ಹಾರಿಸಿ ಎರಡನೆ ಅತಿ ದೊಡ್ಡ ಪ್ರೈಜ್ ಕ್ಯಾಚ್ ಮಾಡಿಕೊಂಡಿದ್ದರು ಉಗ್ರರು. ಆದರೆ ಕನಿಷ್ಠ ಇದರ ವಿರುದ್ಧವಾದರೂ ಕೇಸ್ ದಾಖಲಿಸಿ ಏನಾದರೂ ಕ್ರಮ ಕೈಗೊಂಡು ಕಣಿವೆ ಹಿಂದೂಗಳನ್ನು ರಕ್ಷಿಸುವ ಅಥವಾ ಜವಾಬ್ದಾರಿಯುತ ಸರಕಾರವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಆಡಳಿತ ಗಂಜು ಕೇಸನ್ನೂ ಕೂಡಾ ಹಳ್ಳ ಹಿಡಿಸಿತ್ತು.

ಹೆಸರಿಗೊಂದು ಎಫ್.ಐ.ಆರ್. ದಾಖಲಿಸಿದರೂ, ಕೇಸು ಸಿ.ಬಿ.ಐ.ಗೆ ವಹಿಸಲಾಯಿತಾದರೂ ಅದಾಗುವ ಹೊತ್ತಿಗೆ ತುಂಬ ತಡವಾಗಿತ್ತು. ಇವತ್ತಿಗೂ ಅದರ ಪರಿಸ್ಥಿತಿ ದೇವರಿಗೇ ಪ್ರೀತಿ. ಹೀಗಾದರೂ ಕಣಿವೆ ಹಿಂದೂಗಳಿಗೆ ಸುರಕ್ಷಿತವಲ್ಲ ಎಂದು ಮನವರಿಕೆ ಆಗಲಿ ಎಂಬುವುದು ಟೂಲ್‌ಕಿಟ್ ಭಾಗವಾಗಿ ಗುಂಜು ಹತ್ಯೆಯಾಗಿತ್ತು ಜತೆಗೆ ಮಕ್ಬೂಲ್ ಭಟ್‌ಗೆ ಗಲ್ಲಿಗೇರಿಸುವ ಶಿಕ್ಷೆ ನೀಡಿದ್ದಕ್ಕೆ ಸೇಡೂ ಮುಗಿದಿತ್ತು. ಹಾಗೆ ಮಾಡುವ ಮೂಲಕ ದೇಶದ ಆಂತರಿಕ ನ್ಯಾಯ ವ್ಯವಸ್ಥೆಗೆ ಸವಾಲು ಹಾಕುವ ಅನಾಹುತಕಾರಿ
ಕೆಲಸಕ್ಕೆ ಕೈಯಿಟ್ಟಿತ್ತು ಹಿಜ್ಬುಲ್ ಮುಜಾಹಿದ್ದಿನ್.

(ಮುಂದುವರೆಯುವುದು)