Sunday, 15th December 2024

ಬದಲಾಗಿದ್ದು ಇಲ್ಲೇ

ಮಾರಣ ಹೋಮ – ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ

ಸಂತೋಷಕುಮಾರ ಮೆಹೆಂದಳೆ

ಮೊದಲ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕಣಿವೆ ಪರಿಸ್ಥಿತಿ ಕೈ ಮೀರಿತ್ತು. ಜನೇವರಿಯ ಮೊದಲ ಭಾಗ ವಿಪರೀತ ಮಂಜು ಮತ್ತು ಹಿಮ ಬೀಳುವ ಕಾಲಾವಧಿ ಅದು. ಎರಡೆರಡು ದಿನ ಕಾಲ ಹೊತ್ತೊಯ್ದ ಹೆಣ್ಣುಮಕ್ಕಳನ್ನು ಬಿಸಿ ಮಾಡಿ ಮಾಡಿ ಭೋಗಿ ಸಿದ ನೀಚತನವೇನಾದರೂ ಇದ್ದರೆ ಅದು ಈ ಉಗ್ರ ಜೆಹಾದಿಗಳಿಂದ ಮಾತ್ರ ಎಂದಾಗಿತ್ತು. ಚಳಿಗೆ ಮರಗಟ್ಟುವ ದೇಹ ಗಳನ್ನು ಬೆತ್ತಲೆ ಕೆಡುವಿಕೊಂಡು ನೋವಿದ್ದರೆ, ಕಿರುಚುತ್ತಿದ್ದರೆ ದೇಹ ಎಚ್ಚರವಾಗಿರಲಿ, ಇರಬೇಕು ಎಂಬ ಕಾರಣಕ್ಕೆ ಸೊಂಟ, ಎದೆ, ಕತ್ತು, ಕಿವಿ ಮತ್ತು ಕೆನ್ನೆಗಳನ್ನು, ಅದರಲ್ಲೂ ನಿತಂಬ ಹೊಡೆತಕ್ಕೆ ಈಡಾದಷ್ಟು ಇನ್ಯಾವ ಭಾಗವೂ ಆಗಿರ ಲಿಕ್ಕಿಲ್ಲ.

ವಿಪರೀತವಾಗಿ ಹಿಂಡಿ ಹಿಂಡಿ ಹಸಿರುಗಟ್ಟಿಸಿ, ಅದಕ್ಕೂ ಬಗ್ಗದಿದ್ದರೆ, ಅಲ್ಲಲ್ಲಿ ಸಣ್ಣದಾಗಿ ಕೊಯ್ದು ಹರಿದು ಕೆಡುವಿರುತ್ತಿದ್ದರಂತೆ. ಯಾವಾಗಲೋ ಒಮ್ಮೆ ನೋವಿಗೂ ಹಸಿವಿಗೂ ಚಳಿಗೂ ತುತ್ತಾಗಿ ಕಣ್ಬಿಟ್ಟ ಕೆಂಪಗಿನ ಕಾಶ್ಮೀರಿ ಹೆಂಗಸು, ಬೆತ್ತಲೆ ಎದೆಯ ಮೇಲೆ ಯಾವತ್ತೂ ಇಲ್ಲದ ಹಸಿರು ಸ್ತನ ತನ್ನದೇನಾ ಎಂದು ಹಿಂಡಿ ಹಿಪ್ಪೆಯಾಗಿ ಹಸಿರುಗಟ್ಟಿದ್ದ ಎದೆ ನೋಡಿ ಕೊಂಡು ಅಪೂಟು ಎದೆಯೊಡೆದು ಸತ್ತು ಹೋಗಿದ್ದರಲ್ಲಿ ಸುಳ್ಳಿರಲಿಕ್ಕಿಲ್ಲ. ಅತೀಶಯೋಕ್ತಿ ಯಂತೂ ಖಂಡಿತ ಆಗಲಿಕ್ಕಿಲ್ಲ.

ಪ್ರತಿಯೊಬ್ಬ ಹಿಂದೂ ಕಾಶ್ಮೀರಿ ಗಂಡಸನ್ನೂ ಆದಷ್ಟೂ ಕೊಂದು ಬಿಡಬೇಕು, ಅದಕ್ಕೂ ಮುನ್ನ ಅವರನ್ನು ಕತ್ತರಿಸಿ ಸಾಯಲು ಬಿಟ್ಟು ಬಿಡಿ ಎನ್ನುವ ಅತಾರ್ಕಿಕ ವಾದವೂ ಚಾಲ್ತಿಯಲ್ಲಿದ್ದುದಕ್ಕೆ, ಮುಖಕ್ಕೆ ದನ ಬಡಿ ದಂತೆ ಬಡಿದು ದೇಹವನ್ನೆಲ್ಲ ತರಿದು ಮರ್ಮಾಂಗಕ್ಕೆ ಕೋವಿಯ ಹಿಂಭಾಗದಿಂದ ಜಜ್ಜಿ, ಕೈ ಕಾಲುಗಳನ್ನು ತಿರುಪಿ, ಮೊಳಕಾಲು ಗಂಟುಗಳ ಮೇಲೆ ಸುತ್ತಿಗೆಯಿಂದ ಬಡಿದು ಮುರಿದಿದ್ದರೆ, ಸತ್ತವರಲ್ಲಿ ಹೆಚ್ಚಿನವರ ಬಾಯಲ್ಲಿ ಹಲ್ಲೇ ಇಲ್ಲದ, ಕಿವಿಗಳೇ ಇಲ್ಲದ ಕತ್ತರಿಸಲ್ಪಟ ಕೈಗಳ, ಮೊಂಡು ಕಾಲಿನ ಹೀಗೆ ಹಿಂಸೆ ಎಂದರೆ ಇದೇ ಎನ್ನುವಂತೆ ದೇಹಗಳು ಎರಡೇ ದಿನದಲ್ಲಿ ಶ್ರೀನರದ ಆಸು ಪಾಸಿನ ಇಕ್ಕೆಲೆಗಳಲ್ಲೆಲ್ಲ ಚೆಲ್ಲಾ ಡಿದ್ದುವಲ್ಲ ಅದು ಯಾವತ್ತಿಗೂ ಭಾರತ ಮಾತ್ರವಲ್ಲ ಯಾವ ಪತ್ರಿಕೆಯ ಪುಟವನ್ನೂ ಅಲಂಕ ರಿಸಲಿಲ್ಲ.

ನೆನಪಿರಲಿ ನೂರಾರು ಶವಗಳು ಸುಮ್ಮನೆ ಬಿದ್ದಲ್ಲೆ ಕೊಳೆತು ಹೋದವೆ ವಿನಃ ಇದು ಇಂಥವರದ್ದೇ ಎಂದು ಗೊತ್ತಾದರೂ ಏನೂ ಮಾಡಲೇ ಆಗದ ಪರಿಸ್ಥಿತಿಯಲ್ಲಿ ನಗರ ಪ್ರಕ್ಷುಬ್ಧಗೊಳಿಸಲಾಗಿತ್ತು. ಕಾರಣ ಅತ್ಯಂತ ಜರೂರಾಗಿ ಇರಬೇಕಾಗಿದ್ದ ಸರಕಾರವೇ ಇರಲಿಲ್ಲ. ಇವತ್ತು ಇಲ್ಲೆಲ್ಲೋ ಸಣ್ಣ ಘಟನೆಗೂ ಪುಟಗಟ್ಟಲೇ ಬರೆದುಕೊಂಡು, ಅದರ ಮೇಲೆ ಇನ್ನೆರೆಡು ಥಾನು ಪೇಜು ಚರ್ಚೆ ಮಾಡುವ ಅಪೂಟ ಬುದ್ಧಿ ಜೀವಿ ಶೈಲಿಯ ಹೆಂಗಸರು ಮತ್ತು ಕಿತ್ತೋದ ಎಬುಜಿ ಗಂಡಸರ ಪೈಕಿ ಆಗ ಇದ್ದವರೂ ಇಂಥದ್ದೇ ಭಾನಗಡಿ ಮಾಡಿದ ಕಾರಣ ಒಂದು ತಲೆಮಾರಿನ ಜನಾಂಗ ಪೂರ್ತಿ ಈ ಭೂಮಿಯ ಮುಖದಿಂದಲೇ ಒರೆಸಿ ಹೋಗುವುದರಲ್ಲಿತ್ತು. ಒಬ್ಬೇ ಒಬ್ಬ ಹೀಗೆ ಬಡಿಸಿಕೊಂಡು ಬಿದ್ದ ಕಶ್ಮೀರ ಗಂಡಸರ ನೇರ ಚಿತ್ರ ಇವತ್ತು ನಿಮಗೆ ಲಭ್ಯ ಇಲ್ಲ, ಏನಿದ್ದರೂ ನಂತರದಲ್ಲಿ ಪೋಲಿಸರು ಅಟೆಂಡ್ ಮಾಡಿದಾಗ ತೆಗೆದ ಕೇವಲ ಮುಖ, ಎದೆಯವರೆಗಿನ ಚಿತ್ರಗಳು ಪೀಳಿಗೆಗೆ ಲಭ್ಯ ಬಿಟ್ಟರೆ ಸಾಲು ಸಾಲು ಬಟ್ಟೆ ಮುಚ್ಚಿದ ಶವಗಳ ಸಂತೆ ಮಾತ್ರ ಗೂಗಲ್‌ನಲ್ಲಿ ಕಾಣಸಿಗುತ್ತದೆ.

ಇದ್ದದ್ದನ್ನೂ ನಂತರದ ದಿನಗಳಲ್ಲಿ ದಾಖಲೆಯ ಎಲ್ಲ ಪುಟಗಳಿಂದ ತೆಗೆಸಿ ಹಾಕಲಾಗಿದೆಯಂತೆ. ಇನ್ನು ಖಾಸಗಿ ಅಲ್ಬಂಗಳಲ್ಲಿ ಉಳಿದಿದ್ದರೆ ಇದ್ದೀತು ಅದರ ಹೊರತಾಗಿ ಇಂಥಾ ಹಿಂಸೆಯ ಒಂದೇ ಒಂದು ಕುರುಹು, ಆವತ್ತು ಹೆಣದ ಹೊರತಾಗಿ ಹೊರಗಿನ ಜಗತ್ತಿಗೆ ತೆರೆದುಕೊಳ್ಳಲೇ ಇಲ್ಲ. (ಇವತ್ತೂ ಫೇಸ್‌ಬುಕ್ಕುಗಳಲ್ಲಿ ಉದ್ದೇಶಪೂರ್ವಕವಾಗಿ ಹಿಂದೂಗಳನ್ನು, ಸ್ವತಃ ಹಿಂದೂ ಆಗಿದ್ದು ಕೇವಲ ಮೈಲೇಜ್ ಗೋಸ್ಕರ ಮತ್ತು ನೂರಿನ್ನೂರು ಲೈಕು ಕಮೆಂಟ್‌ಗೋಸ್ಕರ. ನಿಮ್ಮ ಕೈಲಿ ಏನಾಗುತ್ತೆ ಎನ್ನುವಂತೆ ಕೆಣಕುವ ಹಡಬೆ ಸ್ಟೇಟಸ್ ಹಾಕುವ ಹೆಂಗಸರಿಂದಲೇ ಆವತ್ತು ಇವತ್ತೂ ಹಿಂದುತ್ವ ಮತ್ತು ನಮ್ಮ ಸಮಾಜ ಅಪಾಯದಲ್ಲಿದೆ ಇದು ಗೊತ್ತಿರಲಿ.

ಕಾರಣ ಆಗಲೂ ಈಗಲೂ ಅರುಧಂತಿ ರಾಯ್ ನಿಂದ, ಬರ್ಖಾದತ್ತ ಸೇರಿದಂತೆ ಸಂಪೂರ್ಣ ಹಿಂದೂ ಕಶ್ಮೀರ್ ಪಂಡಿತರ ಶವ ಯಾತ್ರೆಗೆ ಮೊಳೆ ಹೊಡೆದವ? ಮೂಲ ಇಂಥಾ ಬುದ್ಧಿಜೀವಿ ಗೆಟ್‌ಅಪ್‌ನ ನೆತ್ತಿ ಮಾಸು ಹಾರದ ಸ್ವಂತಕ್ಕೊಂದು ಸರಿಯಾದ ನೆಲೆ ಇಲ್ಲದ ಹೆಂಗಸರು. ಕರ್ನಾಟಕದಲ್ಲೂ ಸ್ವಂತದ ಮನೆ ಮಾರು ಕಾಯ್ದುಕೊಳ್ಳದ ಹಲವು ಹೆಂಗಸರೇ ಸಾ.ಜಾ.ತಾ. ದಲ್ಲಿ ಹಿಂದೂ ಗಳನ್ನು ಕೆಣುಕುತ್ತಿರುವ ಇವರಿಗೆ ಗ್ಲಾಮರ್ ಮತ್ತು ಇಂಥ ಅಡ್ಡಕಸಬಿ ಸ್ಟೇಟಸ್ ಬಿಟ್ಟರೆ ಬೇರೆನೂ ಬರುವುದಿಲ್ಲ. ಬರೆಯಲು ಸಾಹಿತ್ಯದ ಗಂಧಗಾಳಿ ಇರುವುದಿಲ್ಲ.

ಎದೆ ಸೀಳಿದರೆ ಪ್ರೌಢಿಮೆ ಎನ್ನುವುದು ಮೊದಲೇ ಇರುವುದಿಲ್ಲ. ಏನಿದ್ದರೂ ಎಲ್ಲೆಲ್ಲೂ ಪೋಸು ಮತ್ತು ಗ್ಲಾಮರ್ ಇವರ ಬಂಡವಾಳ. ಏನೂ ಸಿಗದಿದ್ದಾಗ ಹಿಂದೂಗಳನ್ನು, ಬ್ರಾಹ್ಮಣರನ್ನು, ಮೋದಿಯನ್ನು ಹೀಯಾಳಿಸಿ ಅದರ ಜತೆಗೆ ತಮ್ಮದೊಂದು ಫೋಟೊ ಸೇರಿಸಿ ಎಷ್ಟು ನೂರು ಲೈಕ್, ಕಮೆಂಟ್ ಬಿದ್ದಿದೆ ಎಂದು ಲೆಕ್ಕಿಸುತ್ತಾ ಕೂರುವ ದರವೇಸಿತನ ಹೊರತಾಗಿ ಬೇರೇನು?) ಟ್ರಂಕ್‌ಕಾಲ್ ಇದ್ದ ಕಾಲಾವಧಿಯಲ್ಲವೇ ಜನವರಿ ೧೫. ಆವಾಗ ಸಂಜೆಯಿಂದಲೇ ನಿರಂತರವಾಗಿ ನೂರಾರು ಬುಕಿಂಗ್ ಕಾಲ್‌ಗಳು ದಿಲ್ಲಿಯ ಪಡಸಾಲೆಯಲ್ಲಿ ಮೊರೆಯುತ್ತಿದ್ದರೆ ಒಂದೇ ಒಂದಕ್ಕೂ ಸೂಕ್ತ ಉತ್ತರ ಸಾಯಲಿ ಅದನ್ನು ಎತ್ತಿ ಮಾತಾಡುವವರೇ ಇರಲಿಲ್ಲ. ಲೆಕ್ಕ ತಪ್ಪಿದ ಕರೆಗಳ ಮಧ್ಯದಲ್ಲೂ ಆಗೀಗೊಂದು ಅಟೆಂಡ್ ಮಾಡಿದ ದಿಲ್ಲಿಯ ಪಡಸಾಲೆಯ ಅಧಿಕಾರಿಗಳು ಮೈ ನಡುಗಿ ಮತ್ತೊಮ್ಮೆ ಕರೆಯನ್ನೇ ಸ್ವೀಕರಿಸಲಿಲ್ಲವಂತೆ.

ಕಣಿವೆಯ ಕತ್ತಲು ಮತ್ತು ಹಿಮದ ಮಧ್ಯೆ ನಡೆಯಲಾಗದೆ, ತಪ್ಪಿಸಿಕೊಳ್ಳಲಾಗದೆ ಹೋದ ಗಂಡಸರೊಂದೆಡೆಯಾದರೆ ಕದ್ದು ಪಾರಾಗುವ ತವಕದಲ್ಲಿ ಹೆಂಗಸರು ಸಿಗೇ ಬೀಳುತ್ತಿದ್ದಂತೆ ಅಲ್ಲೆ ಅವರ ಮನೆಯ ಗಂಡ, ಅಣ್ಣ, ತಮ್ಮ ಅಪ್ಪ ಇತ್ಯಾದಿಗಳನ್ನು ಅರೆ ಜೀವವಾಗುವಂತೆ ಗುಂಡು ಹೊಡೆದು ಕೆಡುವಿ, ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಕೂರಿಸಿ ಪೈಶಾಚಿಕತೆ ಮೆರೆಯುತ್ತ ಎದೆ ಹಿಂಡು ತ್ತಿದ್ದರೆ ದೇವರನ್ನು ಹೆಣ್ಣುಮಕ್ಕಳು ಶಪಿಸದೇ ಇನ್ನೇನು ಮಾಡಿಯಾರು. ಸಾವು ಹಿಂಸೆ ಖಾತರಿ ಎನ್ನುವುದು ನಿಕ್ಕಿಯಾಗಿ ಬಿಟ್ಟಿದ್ದರಿಂದ ತಿರುಗಿ ಬಿದ್ದರೆ ಮತ್ತಿಷ್ಟು ಮಾರಣಾಂತಿಕ ಅಂತ್ಯ ಕಾಯ್ದಿರುತ್ತಿತ್ತು.

ಹೆಚ್ಚಿನ ಜನರನ್ನು ಅರೆಬರೆ ಬಡಿದ ಸ್ಥಿತಿಯಲ್ಲೇ ಬಿಡಲಾಗಿತ್ತಂತೆ. ಅಂಥ ಚಳಿಯಲ್ಲಿ ಯಾವ ಬೆಂಬಲವೂ ಸಿಗದೆ ಬಿದ್ದಲ್ಲೆ ಸತ್ತು ಹೋದವರ ಲೆಕ್ಕವೇ ಇಲ್ಲ ಇವತ್ತಿಗೂ. ಸುಮ್ಮನೆ ಸಾವಿರಗಟ್ಟಲೇ ಜನ ಕಾಣೆಯಾಗಿಲ್ಲ. ಅದರಲ್ಲೂ ದೇಹ ತೃಷೆ ಮುಗಿಯು ತ್ತಿದ್ದಂತೆ, ಇಳಿತ ಕಂಡ ದೇಹ ಇನ್ನು ಸ್ಪಂದಿಸ ಲಾರದು ಎನ್ನುವುದರ ಜತೆಗೆ, ಎದುರಿಗೆ ಯೌವ್ವನ ತುಂಬಿದ ದೇಹ ಸೀರಿ ಕಣ್ಣು ಕುಕ್ಕುತ್ತಿದ್ದರೆ ಕೈಯ್ಯಲ್ಲಿದ್ದ ಬಯೋನೆಟ್‌ನಿಂದ ನೇರ ಹೊಟ್ಟೆಯ ಕೆಳಗೆ ಹೊಡೆದು ಕೆಡುವುತ್ತಿದ್ದ ನೀಚರು ಹೆಚ್ಚಿನ ಎಲ್ಲ ಹೆಂಗಸರನ್ನು ದಿನಗಟ್ಟಲೇ ಕಟ್ಟಿ ಹಾಕಿ ಭೋಗಿಸಿದ ಮೇಲೂ ಸಾಯಿಸುವ ಮೊದಲು ಭೂಮಿಯ ಮೇಲೆ ಇಲ್ಲದ ಹಿಂಸೆಯ ವಿಧಾನವನ್ನೆಲ್ಲ ಪ್ರಯೋಗಿಸಿ ಸಾಯಲು ಬಿಟ್ಟು ಹೋಗುತ್ತಿದ್ದ ಹರಾಮಿತನಕ್ಕೆ, ಕೊನೆಕೊನೆಗೆ ಮನೆಯ ಹೆಣ್ಣುಮಕ್ಕಳಿಗೆ, ಯಾವ ಕ್ಷಣದಲ್ಲಿ ಯಾರು ಬಂದು ಬಾಗಿಲು ಬಡಿಯುತ್ತಾರೊ ಆಗ ಕೂಡಲೆ ಬಾವಿಗೆ ಹಾರಿಕೊಳ್ಳುವಂತೆಯೂ, ಇಲ್ಲವೇ ವಿಷ ಕುಡಿದು ಬಿಡುವಂತೆಯೂ, ಅದಾವುದೂ ಆಗದಿದ್ದರೆ ಬೆಂಕಿ ಹಚ್ಚಿಕೊಂಡು ಸಾಯಲು ಬೇಕಾದ ತಯಾರಿ ಮಾಡಿಕೊಂಡೆ ಕಾಯುವ ಪರಿಸ್ಥಿತಿ ಬಂದುಬಿಟ್ಟಿತ್ತು.

ಆದರೆ ಇದು ಅದೊಂದೇ ದಿನ ಮುಗಿಯಲಿಲ್ಲ. ಜನೇವರಿ ೨೦ ರಾತ್ರಿ ಕೂಡಾ ಇನ್ನು ಭಯಾನಕವಾಗಿ ಬದಲಾಗಲಿತ್ತು. ಕಾರಣ ಸ್ಥಳೀಯ ಸರಕಾರ ಸಂಪೂರ್ಣ ಕೈ ಚೆಲ್ಲಿತ್ತು. ಕೇಂದ್ರದಿಂದ ಗವರ್ನರ್ ಆಡಳಿತ ಜಾರಿಗೊಳಿಸಿ ಪುನಃ ಜಗಮೋಹನ್ ರನ್ನು ಕೇಂದ್ರ ಸರಕಾರ ಕಳಿಸಿಕೊಟ್ಟಿದ್ದರೂ ವಿಪರೀತ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಜಮ್ಮುವಿನಲ್ಲಿ ಇಳಿಯಿತೆ ವಿನಃ ಶ್ರೀನಗರ ತಲುಪಲೇ ಇಲ್ಲ. ಏನಾದರೂ ಮಾಡಬಹುದಾಗಿದ್ದ ಇದನ್ನೆಲ್ಲ ತಹಬಂದಿಗೆ ತರಬಹುದಾಗಿದ್ದ ಏಕೈಕ ಅವಕಾಶವನ್ನು ಜಗಮೋಹನ್ ಕೈಯಿಂದ ತಪ್ಪಿಸಲಾಗಿತ್ತೇ..? ಯಾಕೆ ನೇರವಾಗಿ ಜಮ್ಮುವಿನಿಂದ ಶ್ರೀನಗರ ಮಿಲಿಟರಿ ಹೆಲಿಕಾಪ್ಟರ್ ಅಥವಾ ಇನ್ನಾವುದೇ ಮಾರ್ಗವಾಗಿ ಶ್ರೀನಗರ ತಲುಪಿಸುವ ಕಾರ್ಯ ಕೈಗೊಡಲೇ ಇಲ್ಲ.

ಇಲ್ಲಿ ಇನ್ನೂ ಒಂದು ಗಮನೀಯ ಅಂಶ ಎಂದರೆ ಗವರ್ನರ್ ಜಗಮೋಹನ್ ಖಂಡಿತವಾಗಿಯೂ ಇದನ್ನೆಲ್ಲ ಹತ್ತಿಕ್ಕಬಲ್ಲ ಸಮರ್ಥ ಎಂಬುವುದು ಹುರಿಯತ್, ಲಷ್ಕರ್, ಹಿಜುಬುಲ್, ಜೈಶ್ ಮೊಹಮ್ಮದ್ ಸೇರಿದಂತೆ ಎಲ್ಲ ಮತಾಂಧರ ಜೊತೆಗೆ ಆವತ್ತಿಗಿನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಗೂ ಅತ್ಯಂತ ನಿಖರವಾಗೇ ಗೊತ್ತಿತ್ತು. ಅವರಿಗಿಂತಲೂ ಅತ್ಯಂತ ಚೆನ್ನಾಗಿ ಪಾಕಿಸ್ತಾನಕ್ಕೆ ಗೊತ್ತಿತ್ತು. ಕಾರಣ ಇದೆಲ್ಲದರ ಹಿಂದೆ ನಿಂತು ನಿಯಂತ್ರಿಸಲು ಮತ್ತು ಆಯುಧ ಸೇರಿದಂತೆ ಪ್ರತಿಯೊಂದರ ಸರಬರಾಜು ಅವರದೇ ಆಗಿತ್ತಲ್ಲ. ಹಾಗಾಗಿ ಮೊದಲು ಸ್ಥಳೀಯ ಆಡಳಿತಕ್ಕೆ ಗವರ್ನರ್ ಆಗಿ ಬೇರಾರನ್ನಾದರೂ ಕಳಿಸುವಂತೆ ಕೇಳಿಕೊಂಡ ಫಾರೂಕ್ ಅಬ್ದುಲ್ ಅದಕ್ಕೆ ಸಮ್ಮತಿ ಸಿಗದೆ ಕೇಂದ್ರ ಜಗಮೋಹನ್‌ರನ್ನೆ ಕಳಿಸುವುದಾಗಿ ನಿರ್ಧಾರ ಮಾಡಿತಲ್ಲ. ಆಗಲೇ ನೋಡಿ ಗೇಮ್ ಚೇಂಜ್ ಆಗಿದ್ದು.

(ಮುಂದುವರೆಯುವುದು)