15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕೋರ್ಸ್ ಬಂದ್
ಪತ್ರಿಕೋದ್ಯಮ, ಅಪರಾಧ ಶಾಸ್ತ್ರ, ಸಂಗೀತಕ್ಕೆ ವಿನಾಯಿ
ಬೆಂಗಳೂರು: ವಿದ್ಯಾರ್ಥಿಗಳ ಕೊರತೆಯಿದ್ದರೂ ಕಾಲೇಜುಗಳಲ್ಲಿ ಕೋರ್ಸ್ಗಳನ್ನು ನಡೆಸುವ ಆಡಳಿತ ಮಂಡಳಿಯ ಕ್ರಮಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸರಕಾರ, ಕೋರ್ ವಿಷಯದಲ್ಲಿ ೧೫ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿಗೆ ಕೋರ್ಸ್ ಬಂದ್
ಮಾಡಲು ಆದೇಶ ಹೊರಡಿಸಿದೆ.
ರಾಜ್ಯದ ಹಲವು ಸರಕಾರಿ ಹಾಗೂ ಅನುದಾನಿತ ಕಾಲೇಜು ಗಳಲ್ಲಿನ ಕೆಲವು ಕೋರ್ಸ್ ಗಳಲ್ಲಿ ಒಂದಕ್ಕಿಯ ವಿದ್ಯಾರ್ಥಿಗಳ ಸಂಖ್ಯೆಯಿದ್ದರೂ, ಕೋರ್ಸ್ ಗಳನ್ನು ನಡೆಸ ಲಾಗುತ್ತಿದೆ. ಇದರಿಂದ ಸರಕಾರಕ್ಕೆ ಹಾಗೂ ಆಡಳಿತ ಮಂಡಳಿಗೆ ಹೊರೆಯಾಗುತ್ತಿತ್ತು. ಇದನ್ನು ತಪ್ಪಿಸಲು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಕೋರ್ ವಿಷಯಗಳನ್ನು ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ೧೫ಕ್ಕಿಂತ ಕಡಿಮೆಯಿದ್ದರೆ ಪ್ರವೇಶ ನೀಡದಂತೆ ಆದೇಶ ಹೊರಡಿಸಿದೆ.
ಹೊಸ ಕೋರ್ಸ್ ಆರಂಭಿಸಬೇಡಿ: ಒಂದು ವೇಳೆ ಈಗಾಗಲೇ ೧೫ಕ್ಕಿಂತ ಕಡಿಮೆ ಯಿರುವ ವಿಷಯಗಳನ್ನು ವಿದ್ಯಾರ್ಥಿಗಳು ತೆಗೆದುಕೊಂಡಿದ್ದರೆ ಅಂತಹ ಕಾಲೇಜುಗಳಲ್ಲಿ ಹೊಸ ಕೋಸ್ ಗಳನ್ನು ಆರಂಭಿಸದೇ, ಹಾಲಿ ಚಾಲ್ತಿಯಲ್ಲಿರುವ ಕೋರ್ಸ್ ಅಥವಾ ವಿಷಯಗಳಿಗೆ ಮಾತ್ರ ಪ್ರವೇಶ ನೀಡಬೇಕು. ಆದರೆ ಈ ಆದೇಶದಲ್ಲಿ ಕೆಲವು ವಿಷಯಗಳಿಗೆ ವಿನಾಯಿತಿ ನೀಡಲಾಗಿದೆ.
ಗೃಹ ವಿಜ್ಞಾನ, ಸಂಗೀತ, ಭೂ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಸಂಖ್ಯಾಶಾಸ್ತ್ರ, ಮಹಿಳಾ ಅಧ್ಯಯನ, ಅಪರಾಧ ಶಾಸ್ತ್ರ ಹಾಗೂ ಪತ್ರಿಕೋದ್ಯಮದ ವಿಷಯಗಳಿಗೆ ಕನಿಷ್ಠ ೧೦ ವಿದ್ಯಾರ್ಥಿಗಳಿದ್ದರೂ, ಕೋರ್ಸ್ ಅನ್ನು ಮುಂದುವರಿಸಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಇನ್ನು ಬಿಎಸ್ಸಿ, ಬಿಸಿಎ ಹಾಗೂ ಭಾಷಾ ಐಚ್ಛಿಕ ವಿಷ ಯಗಳಲ್ಲಿ ಕನಿಷ್ಠ ೧೦ ವಿದ್ಯಾರ್ಥಿಗಳಿದ್ದರೂ, ಪ್ರವೇಶ ನೀಡುವ ಜತೆಗೆ,
ವಿಷಯಗಳನ್ನು ಮುಂದುವರಿಸಲು ಅವಕಾಶ ನೀಡಿದೆ. ಆದರೆ ಐಚ್ಛಿಕ ಕನ್ನಡ ವಿಷಯದಲ್ಲಿ ಈ ಸಂಖ್ಯೆಯನ್ನು ೫ ವಿದ್ಯಾರ್ಥಿ ಗಳಿಗೂ ಅವಕಾಶ ನೀಡಲಾಗಿದೆ.
ಎರಡು ವರ್ಷ ನೋಡಿ: ಇನ್ನು ಈ ಆದೇಶದಲ್ಲಿ ಯಾವುದಾದರೂ ವಿಷಯ ಅಥವಾ ಕೋರ್ಸ್ನಲ್ಲಿ ನಿಗದಿತ ಸಂಖ್ಯೆಗಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಸತತ ಎರಡು ವರ್ಷ ದಾಖಲಾದರೆ ಅಂತಹ ಕೋರ್ಸ್ಗಳನ್ನು ಕಾಲೇಜಿನಲ್ಲಿ ಮುಚ್ಚಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದರೆ ಈ ರೀತಿ ಕೋರ್ಸ್ ರದ್ದುಗೊಳಿಸುವಾಗ ಯಾವುದಾದರೂ ವಿದ್ಯಾರ್ಥಿಗಳು, ತನ್ನ ವಿಷಯವನ್ನು ಬದಲಿಸಲು ಸಿದ್ಧರಿಲ್ಲದಿದ್ದರೆ, ಅಂತಹ ವಿದ್ಯಾರ್ಥಿಯನ್ನು ಹತ್ತಿರ ಇನ್ನೊಂದು ಕಾಲೇಜಿಗೆ ವರ್ಗಾವಣೆ ಮಾಡಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಕಳ್ಳಾಟ ತಡೆಯಲು ಕ್ರಮ
ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರೂ, ಕೋರ್ಸ್ಗಳನ್ನು ಮುಚ್ಚದೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದ್ದರು. ಆದರೆ ಕಾಲೇಜು ಆರಂಭಗೊಂಡ ಬಳಿಕ, ಇತರ ವಿಷಯಗಳ ಕೋರ್ಸ್ಗಳೊಂದಿಗೆ ಕಂಬೈನ್ ಮಾಡಿ ತರಗತಿ ಗಳನ್ನು ನಡೆಸುತ್ತಿದ್ದರು. ಇದರೊಂದಿಗೆ, ಆಯಾ ಕೋರ್ಸ್ಗಳಿಗೆ ಅಗತ್ಯವಿರುವ ತಜ್ಞ ಉಪನ್ಯಾಸಕರನ್ನು ನೇಮಿಸಿಕೊಳ್ಳದೇ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆ ತಪ್ಪಿಸಲು ಈ ಕ್ರಮವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿನಾಯ್ತಿ ಯಾವುದಕ್ಕೆ?
ಕೋರ್ ವಿಷಯವನ್ನು ೧೫ ವಿದ್ಯಾರ್ಥಿಗಳಿಗಿಂತ ಕಡಿಮೆಯಿದ್ದರೆ ಕೋರ್ಸ್ ಆರಂಭಿಸಬೇಡಿ ಎಂದಿರುವ ಇಲಾಖೆ, ಗೃಹ ವಿಜ್ಞಾನ, ಸಂಗೀತ, ಭೂ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಸಂಖ್ಯಾಶಾಸ್ತ್ರ, ಮಹಿಳಾ ಅಧ್ಯಯನ, ಅಪರಾಧ ಶಾಸ್ತ್ರ ಹಾಗೂ ಪತ್ರಿಕೋದ್ಯಮದಲ್ಲಿ ಕನಿಷ್ಠ ೧೦ಕ್ಕೆ ಅವಕಾಶ ಕಲ್ಪಿಸಿದೆ. ಐಚ್ಛಿಕ ಕನ್ನಡಕ್ಕೆ ಐದು ವಿದ್ಯಾರ್ಥಿಗಳಿದ್ದರೂ ಕೋರ್ಸ್ ಆರಂಭಿಸಲು ಅನುಮತಿ ನೀಡಲಾಗಿದೆ.