Tuesday, 22nd October 2024

C P Yogeshwar: ಶಿಸ್ತಿನ ಪಕ್ಷಕ್ಕೆ ಸಿಪಾಯಿ ಕಾಟ, ತೆನೆ ಹೊತ್ತವರಿಗೆ ತೊಳಲಾಟ

ಬಿಜೆಪಿಗೆ ನುಂಗಲಾರದ ತುತ್ತಾದ ಸಿ.ಪಿ.ಯೋಗೇಶ್ವರ್

ತಾವಿರುವ ಪಕ್ಷಕ್ಕೇ ತಿರುಗೇಟು ನೀಡುವ ಸೈನಿಕ

ಬೆಂಗಳೂರು: ಚನ್ನಪಟ್ಟಣದ ಉಪಚುನಾವಣೆ ರಾಜ್ಯದಲ್ಲೀಗ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದು, ಕೇಂದ್ರ
ಹಾಗೂ ರಾಜ್ಯ ಸಚಿವರ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗಿದೆ. ಇದೇ ವೇಳೆ ಸಿ.ಪಿ.ಯೋಗೇಶ್ವರ್ ಶಿಸ್ತಿನ ಪಕ್ಷಕ್ಕೆ
ಪಾಠ ಕಲಿಸಲು ಮುಂದಾಗಿದ್ದಾರೆ. ಅಲ್ಲದೆ ಮೈತ್ರಿ ವಿಚಾರ ವಾಗಿ ಬಿಜೆಪಿ ನಾಯಕರಿಗೆ ಮಾತನಾಡಲಾಗದೆ ಸೈನಿಕನ ನಡೆ ತಡೆಯಲೂ ಆಗದೆ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

ನೂರಕ್ಕೆ ನೂರು ಭಾಗ ನನಗೇ ಟಿಕೆಟ್ ದೊರೆಯುತ್ತದೆ ಎಂದು ಬುಧವಾರ ಹೇಳಿಕೊಂಡಿರುವ ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಬೆಂಬಲಿಗರ ಸಭೆ ಕರೆದು ನಾಯಕರಿಗೆ ಸಡ್ಡು ಹೊಡೆದಿದ್ದಾರೆ. ಲೋಕಸಭೆ ಚುನಾವಣೆಯಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇದ್ದು, ಈ ಕ್ಷೇತ್ರದ ಶಾಸಕರಾಗಿದ್ದ ಕುಮಾರ ಸ್ವಾಮಿ ಕೇವಲ ಮೂರು ಸ್ಥಾನ ಇಟ್ಟುಕೊಂಡು ಕೇಂದ್ರ ಸಚಿವರಾಗಿ ದ್ದಾರೆ. ಎರಡು ಸಲ ಸೋತಿರುವ ತಮ್ಮ ಮಗನಿ ಗಾಗಿ ಮತ್ತೊಮ್ಮೆ ಇಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಬೇಕು. ಅಲ್ಲದೆ ತಮ್ಮ ಮಗ ನಿಖಿಲ್ ನಿಲ್ಲಿಸುವಂತೆ ಕಾರ್ಯ ಕರ್ತರ ಒತ್ತಾಯವಿದೆ ಎಂದು ಹಳೇ ರಾಗ ಹೊರಡಿಸಿದೆ.

ಬಿಜೆಪಿಯಲ್ಲಿ ಒಮ್ಮತವಿಲ್ಲ: ಚನ್ನಪಟ್ಟಣ ಟಿಕೆಟ್ ಸಂಬಂಧ ರಾಜ್ಯ ಬಿಜೆಪಿಯಲ್ಲಿ ಒಮ್ಮತವಿಲ್ಲದಂತಾಗಿದೆ. ಪ್ರತಿಪಕ್ಷ ನಾಯಕ ಆರ್.ಅಶೋಕ, ಜೆಡಿಎಸ್‌ಗೆ ಶರಣಾದಂತೆ ಕಾಣುತ್ತಿದೆ. ಚನ್ನಪಟ್ಟಣ ಟಿಕೆಟ್ ಬಗ್ಗೆ ಕುಮಾರ ಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ಬಳಿ ಚರ್ಚೆ ಮಾಡುತ್ತೇವೆ. ಯೋಗೇಶ್ವರ್ ಅವರೇ ಅಭ್ಯರ್ಥಿಯಾದರೆ ಒಳ್ಳೆಯದು ಎಂದು ದೆಹಲಿಯ ವರಿಷ್ಠರಿಗೆ ಹೇಳಿದ್ದೇವೆ. ಆದರೆ, ಕುಮಾರಸ್ವಾಮಿ ಅವರೂ ಒಪ್ಪಬೇಕು. ಈ ವಿಚಾರದಲ್ಲಿ ಅವರಿಗೆ ಹೆಚ್ಚಿನ ಅಧಿಕಾರವಿದೆ. ಅವರ ತೀರ್ಮಾನದಂತೆ ಮಾಡುತ್ತೇವೆ.

ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದಿರುವುದು ಕಿಡಿ ಹತ್ತಿದೆ. ಇತ್ತ, ಟಿಕೆಟ್ ವಿಚಾರ ಕೇಂದ್ರದ ವರಿಷ್ಠರಿಗೆ ಬಿಟ್ಟದ್ದು ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿರು ವುದು ಕೂಡ ಜೆಡಿಎಸ್ ಗೆ ಟಿಕೆಟ್ ಮೀಸಲಿಟ್ಟಿರುವುದು ಯೋಗೇಶ್ವರ್‌ರನ್ನು ಕೆರಳಿದಂತಾಗಿದೆ.

ಸೈನಿಕನಿಗೆ ವರಿಷ್ಠರ ಬೆಂಬಲ ಸಿಕ್ಕಿಲ್ಲ: ಟಿಕೆಟ್ ವಿಚಾರ ವಾಗಿ ಹಲವು ಬಾರಿ ಯೋಗೇಶ್ವರ್ ದೆಹಲಿಗೆ ದಂಡ
ಯಾತ್ರೆ ಕೈಗೊಂಡಿದ್ದರೂ, ಅಲ್ಲಿಯೂ ಕೂಡ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಹೀಗಾಗಿ ತಾವಿರುವ ಪಕ್ಷಕ್ಕೇ ತಿರುಗೇಟು ನೀಡುವಲ್ಲಿ ಪರಿಣಿತರಾದ ಯೋಗೇಶ್ವರ್, ಬಿಜೆಪಿ ಬೆಂಬಲಿಗರ ಸಭೆ ಕರೆದು ಈ ಸಲ ಮೈತ್ರಿ ಅಭ್ಯರ್ಥಿ ನಾನೇ ಎಂದು ಬಹಿರಂಗವಾಗಿ ಹೇಳಿರು ವುದು ಕೂಡ ರಾಜ್ಯ ಬಿಜೆಪಿ ನಾಯಕರನ್ನು ಕೆರಳಿಸಿದೆ.

ಬಿಜೆಪಿ ಜೆಡಿಎಸ್ ಪಕ್ಷ ಮೈತ್ರಿ ಇದ್ದರೂ, ಸ್ಥಳೀಯ ನಾಯಕ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ತಪ್ಪಿಸಲು ಬಿಜೆಪಿ ಯಲ್ಲೇ ಒಂದು ತಂಡ ಸಿದ್ದವಾಗಿದೆ. ಇದರ ಲಾಭ ಪಡೆಯಲು ನಿಖಿಲ್ ಟಿಕೆಟ್ ನೀಡುವ ಉತ್ಸಾಹದಲ್ಲಿ ಕುಮಾರ ಸ್ವಾಮಿ ಇದ್ದಾರೆ. ಈ ಜಗಳದ ಲಾಭ ಪಡೆಯಲು ಸಜ್ಜಾಗಿರುವ ಕಾಂಗ್ರೆಸ್ ಕಳೆದ ಮೂರು ತಿಂಗಳಿಂದ ಹೊಂಚು ಹಾಕಿ ಕೊಂಡು ಕಾಯುತ್ತಿದೆ.

ಕಾರ್ಯಕರ್ತರಿಗೆ ಮಾನಸಿಕ ಹುಳ: ಕಳೆದ ದಶಕದಿಂದಲೂ ಕಾರ್ಯಕರ್ತರ ಒತ್ತಾಯವಿದೆ ಎಂದು ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುತ್ತಾ ಬಂದಿರುವ ಜೆಡಿಎಸ್, ಈ ಬಾರಿಯ ಉಪ ಚುನಾವಣೆಯಲ್ಲಿ ಮತ್ತದೇ ವರಸೆ ತೆಗೆದಿದೆ. ಜ್ಯೋತಿಷ್ಯ ನಂಬುವ ಜೆಡಿಎಸ್‌ನಲ್ಲಿ ಕೆಲ ವರ್ಷ ಗುರುಬಲವಿಲ್ಲದಿದ್ದರೂ ಎರಡು ಬಾರಿ ಸೋತಿರುವ ನಿಖಿಲ್ ಕುಮಾರಸ್ವಾಮಿ ನಿಲ್ಲಲೂ ಕಾರ್ಯಕರ್ತರ ಒತ್ತಡವಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಅಲ್ಲಿಗೆ ಚನ್ನಪಟ್ಟಣದಲ್ಲಿ ತಮ್ಮ ಮಗ ನಿಲ್ಲಲೇ ಬೇಕು ಎಂದು ಕಾರ್ಯಕರ್ತರ ಮೇಲೆಯೇ ಮಾನಸಿಕ ಹುಳ
ಬಿಡಲಾಗಿದೆ. ಅಲ್ಲಿ ಪರ್ಯಾಯ ನಾಯಕತ್ವವಿದ್ದರೂ ಕುಟುಂಬಕ್ಕಷ್ಟೇ ಟಿಕೆಟ್ ಸೀಮಿತ ಎಂಬ ಸಿದ್ಧಾಂತ
ಮುಂದುವರಿದಿದೆ.

ಡಿಕೆಸು ಸ್ಪರ್ಧೆ ಅಲ್ಲಗಳೆಯಲಾಗದು
ಕಾಂಗ್ರೆಸ್ ಕಳೆದ ಮೂರು ತಿಂಗಳಿಂದಲೂ ಚನ್ನ ಪಟ್ಟಣದಲ್ಲಿಯೇ ಬೀಡುಬಿಟ್ಟಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅನುದಾನದ ಹೊಳೆ ಹರಿಸಿದೆ. ಕೇವಲ ಮೂರೇ ತಿಂಗಳಲ್ಲಿ ಕ್ಷೇತ್ರಕ್ಕಾಗಿ 500 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಹಲವು ಭಾರಿ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಜಲಸಂಪನ್ಮೂಲ ಇಲಾಖೆಯಿಂದ ೧೦೦ ಕೋಟಿ ರು.ಗೂ ಹೆಚ್ಚು ಅನುದಾನ ಒದಗಿಸಲಾಗಿದೆ. ಇಲ್ಲಿ ನಾನೇ ಅಭ್ಯರ್ಥಿ ಎಂದು ಡಿಸಿಎಂ ಹೇಳಿಕೊಂಡಿದ್ದರೂ, ಅವರ ಸಹೋದರ ಡಿ.ಕೆ.ಸುರೇಶ್ ಸ್ಪರ್ಧೆ ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ: Tirupati Laddoo: ತಿರುಪತಿ ಲಡ್ಡುವಿನಲ್ಲಿ ಬೀಫ್‌ ಕೊಬ್ಬು ಬಳಕೆ ಆರೋಪ- ಹೈಕೋರ್ಟ್‌ ಮೆಟ್ಟಿಲೇರಿದ YSRCP