Saturday, 23rd November 2024

ಗೋವಾ ಚುನಾವಣೆಗೆ ಕನ್ನಡಿಗರ ಪಾರುಪತ್ಯ

ಬೆಂಗಳೂರು: ದಕ್ಷಿಣ ಭಾರತ ಪುಟ್ಟ ರಾಜ್ಯವಾಗಿರುವ ಗೋವಾದಲ್ಲಿ ಅಧಿಕಾರದ ಗದ್ದುಗೆ ಏರಲೇಬೇಕು ಎಂದು ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್, ಶೇ.50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಕನ್ನಡಿಗರನ್ನೇ ಉಸ್ತುವಾರಿಯನ್ನಾಗಿ ನೇಮಿಸಿದೆ.

ಗೋವಾ ಉಸ್ತುವಾರಿಯಾಗಿ ರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬುಧವಾರ ಕ್ಷೇತ್ರವಾರು ಉಸ್ತುವಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, 40 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಕರ್ನಾಟಕದ ಕಾಂಗ್ರೆಸ್ ನಾಯಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಪ್ರಮುಖವಾಗಿ ಶಾಸಕರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ಯು.ಟಿ.ಖಾದರ್, ಸಂತೋಷ್ ಲಾಡ್, ಡಾ. ಅಜಯ್ ಸಿಂಗ್, ರಿಜ್ವಾನ್ ಅರ್ಷದ್ ಸೇರಿದಂತೆ 20 ಜನರನ್ನು ನೇಮಿಸಲಾಗಿದೆ. ಈ ಮೂಲಕ ನೆರೆರಾಜ್ಯದಲ್ಲಿ ಕನ್ನಡಿಗರ ಮತಗಳನ್ನು ಬಳಸಿ ಕೊಂಡು ಅಧಿಕಾರದ ಗದ್ದುಗೆ ಏರುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ.

ಗುಂಡೂರಾವ್ ಸಾರಥ್ಯ: ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ದಿನೇಶ್ ಗುಂಡೂರಾವ್, ಗೋವಾದ ಜತೆಗೆ ತಮಿಳುನಾಡು ಹಾಗೂ ಪುದಿಚೇರಿಯ ಉಸ್ತುವಾರಿಗಳಾಗಿದ್ದಾರೆ. ಗೋವಾ ರಾಜ್ಯದಲ್ಲಿರುವ ಕನ್ನಡಿಗರ ಮತಗಳನ್ನು ಕಾಂಗ್ರೆಸ್‌ನತ್ತ ವಾಲಿಸುವ ಮೂಲಕ, ಅಧಿಕಾರ ಹಿಡಿಯುವ ಜವಾಬ್ದಾರಿ ದಿನೇಶ್ ಗುಂಡೂರಾವ್ ಮೇಲಿದೆ. ಈ ಹಿನ್ನಲೆಯಲ್ಲಿ ಕನ್ನಡಿಗರಿಗೆ ಹೆಚ್ಚು ಅವಕಾಶ ಸಿಕ್ಕಿದೆ.

ಶ್ರೀನಿವಾಸ್ ಉತ್ತರಾಖಾಂಡ್ ಸ್ಟಾರ್ ಕ್ಯಾಂಪೇನರ್
ಇನ್ನು ಉತ್ತರಾಖಾಂಡ್ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬುಧವಾರ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಕರ್ನಾಟಕದ ಬಿ.ವಿ.ಶ್ರೀನಿವಾಸ್ ಅವರಿಗೆ ಸ್ಥಾನ ನೀಡಲಾಗಿದೆ. ಶ್ರೀನಿವಾಸ್ ಅವರು ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿದ್ದು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕದವರು ಯಾರಿದ್ದಾರೆ?
ಶ್ರೀನಿವಾಸ್ ಮಾನೆ
ಚಂದ್ರಶೇಖರ್ ರಾಥೋಡ್ ರಿಜ್ವಾನ್
ಅರ್ಷದ್ ಐವಾನ್ ಡಿಸೋಜಾ
ಸುನೀಲ್‌ಗೌಡ ಪಾಟೀಲ್
ಡಾ. ಅಂಜಲಿ ನಿಂಬಾಳ್ಕರ್
ಪಿಯ್ರಾಂಕ್ ಖರ್ಗೆ ವಿಶ್ವಾಸ್
ವೈದ್ಯ ಸದಾನಂದ ಡಂಗಣ್ಣನವರ್
ಸತೀಶ್ ಸೈಲ್ ಕೃಷ್ಣಬೈರೇಗೌಡ
ಲಕ್ಷ್ಮೀ ಹೆಬ್ಬಾಳ್ಕರ್ ದಯಾನಂದ
ಪಾಟೀಲ್ ಡಾ. ಅಜಯ್ ಸಿಂಗ್
ಯು.ಟಿ ಖಾದರ್ ಸುನೀಲ್
ಹನುಮಣ್ಣನವರ್ ವಿಜಯ್ ಸಿಂಗ್
ಸಂತೋಷ್ ಲಾಡ್ ವಿಜಯಾ
ನಂದ ಕಾಶಪ್ಪನವರ್ ನಟರಾಜ್
ಗೌಡ ರವಿ ಬೋಸರಾಜ್