Thursday, 19th September 2024

Ganesha Festival 2024: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಬಂತು ವೈವಿಧ್ಯಮಯ ಮಿಕ್ಸ್ ಮ್ಯಾಚ್‌ ಎಥ್ನಿಕ್‌ ವೇರ್ಸ್

Ganesha Festival 2024

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸಾಲಿನ ಗೌರಿ-ಗಣೇಶ ಹಬ್ಬದ (Ganesha Festival 2024) ಆಚರಣೆಯನ್ನು ಸಂಭ್ರಮಿಸಲು ಈಗಾಗಲೇ ಮಾರುಕಟ್ಟೆಗೆ ನಾನಾ ಬಗೆಯ ವೈವಿಧ್ಯಮಯ ಮಿಕ್ಸ್ ಮ್ಯಾಚ್‌ ಡಿಸೈನ್‌ನ ಎಥ್ನಿಕ್‌ವೇರ್‌ಗಳು ಎಂಟ್ರಿ ನೀಡಿವೆ. ಹೌದು, ಹಬ್ಬದ ಸಂಭ್ರಮಕ್ಕೆ ಸಾಥ್‌ ನೀಡಲು ಪ್ರತಿ ಬಾರಿಯಂತೆ ಈ ಬಾರಿಯೂ ಲೆಕ್ಕವಿಲ್ಲದಷ್ಟು ಬಗೆಯ ವೆರೈಟಿ ಎಥ್ನಿಕ್‌ವೇರ್‌ಗಳು ಮಾರುಕಟ್ಟೆ ಹಾಗೂ ಮಾಲ್‌ಗಳ ಶಾಪಿಂಗ್‌ ಸೆಂಟರ್‌ಗಳಿಗೆ ಲಗ್ಗೆ ಇಟ್ಟಿವೆ. ಹಬ್ಬ ಆಚರಿಸುವ ಗ್ರಾಹಕರನ್ನು ಮನ ಸೆಳೆಯುತ್ತಿವೆ.

ಹಬ್ಬಕ್ಕೆ ಎಲ್ಲೆಡೆ ರಾರಾಜಿಸುತ್ತಿರುವ ಎಥ್ನಿಕ್‌ವೇರ್ಸ್
ಹಬ್ಬದ ಸೀಸನ್‌ನಲ್ಲಿ ಎಂದಿನಂತೆ ವೆಸ್ಟರ್ನ್‌ವೇರ್‌ಗಳು ಸೈಡಿಗೆ ಸರಿಯುತ್ತವೆ. ವಿನೂತನ ವಿನ್ಯಾಸದವು ಸೇರಿದಂತೆ ಎವರ್‌ ಗ್ರೀನ್‌ ಡಿಸೈನ್‌ ಎಥ್ನಿಕ್‌ವೇರ್‌ ಹಾಗೂ ಟ್ರೆಡಿಷನಲ್‌ವೇರ್‌ಗಳು ಎಂಟ್ರಿ ನೀಡುತ್ತವೆ. ಚಿಕ್ಕ ಮಕ್ಕಳವೇರ್‌ನಿಂದಿಡಿದು, ಮಹಿಳೆಯರ, ಪುರುಷರ ಹಾಗೂ ಹಿರಿಯರ ಉಡುಗೆ-ತೊಡುಗೆಗಳು ಈ ಬಾರಿ ಮಿಕ್ಸ್ ಮ್ಯಾಚ್‌ ಡಿಸೈನ್‌ನಲ್ಲಿ ಫೆಸ್ಟಿವ್‌ ಸೀಸನ್‌ನಲ್ಲಿ ಆಗಮಿಸಿವೆ.

ಮಿಕ್ಸ್ ಮ್ಯಾಚ್‌ ಎಥ್ನಿಕ್‌ವೇರ್ಸ್ 
ಪುಟ್ಟ ಮಕ್ಕಳ ಉದ್ದ ಲಂಗ ಇದೀಗ ಕ್ರಾಪ್‌ ಆಗಿವೆ. ನಾನಾ ರೂಪ ತಳೆದಿವೆ. ಅದೇ ರೀತಿ ಎಥ್ನಿಕ್‌ ಫ್ರಾಕ್‌ಗಳು ಕೂಡ ಹೊಸ ರೂಪದಲ್ಲಿ ಬಂದಿವೆ. ಇನ್ನು ಹುಡುಗಿಯರಿಗೆ ಹೊಸ ಬಗೆಯ ಎಥ್ನಿಕ್‌ ಗೌನ್‌ ಮಿಕ್ಸ್ ಮ್ಯಾಚ್‌ ಇಂಡೋ-ವೆಸ್ಟರ್ನ್‌ ಶೈಲಿಯಲ್ಲಿ ಬಂದಿವೆ. ಟೀನೇಜ್‌ ಹುಡುಗಿಯರಿಗೆ ಅವರ ಮನೋಭಿಲಾಷೆಗೆ ಹೊಂದುವಂತಹ ಡಿಸೈನ್‌ನಲ್ಲಿ ಬಂದಿವೆ. ಮಹಿಳೆಯರಿಗೆ ಅವರ ವಯಸ್ಸಿಗನುಸಾರವಾಗಿ ಮಾತ್ರವಲ್ಲ, ಯಂಗ್‌ ಲುಕ್‌ ನೀಡುವಂತಹ ಟ್ರೆಡಿಷನಲ್‌ ವೇರ್‌ಗಳು ಕೂಡ ಲಗ್ಗೆ ಇಟ್ಟಿವೆ. ಇನ್ನು, ನಾರ್ತ್‌ ಇಂಡಿಯನ್‌ ಪ್ಲಸ್‌ ಸೌತ್‌ ಇಂಡಿಯನ್‌ ಲುಕ್‌ ಎರಡೂ ಮರ್ಜ್‌ ಆಗಿರುವಂತಹ ಲೆಹೆಂಗಾ ಕಮ್‌ ದಾವಣಿ ಲಂಗ ಮಿಕ್ಸ್ ಮ್ಯಾಚ್‌ ಡಿಸೈನ್‌ನಲ್ಲಿ ರೂಪುಗೊಂಡಿವೆ ಎನ್ನುತ್ತಾರೆ ಡಿಸೈನರ್‌ ಹರ್ಷ್.

ಬದಲಾದ ಪುರುಷರ ಎಥ್ನಿಕ್‌ವೇರ್ಸ್ 
ಇನ್ನು, ಗೌರಿ-ಗಣೇಶನ ಹಬ್ಬದ ಪುರುಷರ ಎಥ್ನಿಕ್‌ವೇರ್‌ಗಳಲ್ಲೂ ಕೊಂಚ ಬದಲಾವಣೆಯಾಗಿದೆ. ಈ ಬಾರಿ ಉತ್ತರ ಭಾರತ ಭಾಗದ ಕೆಲವು ಡಿಸೈನರ್‌ವೇರ್‌ಗಳು ಇಲ್ಲಿನ ಸ್ಥಳೀಯ ಮೆನ್ಸ್ ಎಥ್ನಿಕ್‌ವೇರ್ಸ್ ಜೊತೆ ಮಿಕ್ಸ್ ಆಗಿ ವಿನೂತನ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಅವುಗಳಲ್ಲಿ ರೆಡಿ ಧೋತಿ ಹಾಗೂ ಕುರ್ತಾ-ಪ್ಯಾಂಟ್‌ ಸೇರಿವೆ.

  • ಟ್ರೆಂಡಿಯಾಗಿರುವ ಎಥ್ನಿಕ್‌ವೇರ್ಸ್ ಆಯ್ಕೆ ಮಾಡಿ
  • ಮಿಕ್ಸ್ ಮ್ಯಾಚ್‌ ಡಿಸೈನ್‌ನವು ಟ್ರೆಂಡ್‌ನಲ್ಲಿವೆ
  • ಝರಿ ಇರುವಂತವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ
    ( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Leave a Reply

Your email address will not be published. Required fields are marked *